ಕನ್ನಡ ಸುದ್ದಿ  /  ಕರ್ನಾಟಕ  /  Sslc Result: ಈ ಬಾರಿಯ ಕರ್ನಾಟಕದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಂಡ 10 ಆಸಕ್ತಿದಾಯಕ ಅಂಕಿಅಂಶಗಳು

SSLC Result: ಈ ಬಾರಿಯ ಕರ್ನಾಟಕದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಂಡ 10 ಆಸಕ್ತಿದಾಯಕ ಅಂಕಿಅಂಶಗಳು

Top 10 interesting Facts SSLC Exam: ಕನ್ನಡ ಭಾಷೆಯಲ್ಲಿ ಓದಿ ಪರೀಕ್ಷೆ ಬರೆದ 443517 ವಿದ್ಯಾರ್ಥಿಗಳಲ್ಲಿ 379596 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 314347 ವಿದ್ಯಾರ್ಥಿಗಳಲ್ಲಿ 288126 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಫಲಿತಾಂಶದಲ್ಲಿ ನಾಲ್ವರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಈ ಬಾರಿ ಶೇಕಡ 83.88 ಫಲಿತಾಂಶ ದಾಖಲಾಗಿದ್ದು, ಚಿತ್ರದುರ್ಗ, ಮಂಡ್ಯ, ಹಾಸನ ಜಿಲ್ಲೆಗಳು ಅಗ್ರ ಮೂರರ ಸ್ಥಾನ ಪಡೆದಿವೆ. ಈ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗಮನ ಸೆಳೆಯುವ ಪ್ರಮುಖ ಹತ್ತು ಅಂಶಗಳನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಇಲ್ಲಿ ಪಟ್ಟಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

1. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕರ್ನಾಟಕದ ನಾಲ್ವರು ವಿದ್ಯಾರ್ಥಿಗಳು ಶೇಕಡ 100 ಪ್ರತಿಶತ ಅಂಕ ಪಡೆದಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು 145 ವಿದ್ಯಾರ್ಥಿಗಳು ಶೇಕಡ 100 ಅಂಕ ಪಡೆದಿದ್ದರು. ಅಂದರೆ, ಈ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.

2. ಪ್ರಥಮ ಭಾಷೆಯಲ್ಲಿ 14,983 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದಿದ್ದಾರೆ. ದ್ವಿತೀಯ ಭಾಷೆಯಲ್ಲಿ 9754 ವಿದ್ಯಾರ್ಥಿಗಳು, ತೃತೀಯ ಭಾಷೆಯಲ್ಲಿ 16,170 ವಿದ್ಯಾರ್ಥಿಗಳು 100ಕ್ಕೇ ನೂರು ಅಂಕ ಪಡೆದಿದ್ದಾರೆ. ಗಣಿತದಲ್ಲಿ 2132 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 983 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 8311 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕ ಪಡೆದಿದ್ದಾರೆ.

3. ಕನ್ನಡ ಭಾಷೆಯಲ್ಲಿ ಓದಿ ಪರೀಕ್ಷೆ ಬರೆದ 443517 ವಿದ್ಯಾರ್ಥಿಗಳಲ್ಲಿ 379596 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 314347 ವಿದ್ಯಾರ್ಥಿಗಳಲ್ಲಿ 288126 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

4. ಶ್ರೇಣಿವಾರು ಫಲಿತಾಂಶದಲ್ಲಿ 61003 ವಿದ್ಯಾರ್ಥಿಗಳು ಎ ಪ್ಲಸ್‌ (ಶೇಕಡ 90-100), 147634 ವಿದ್ಯಾರ್ಥಿಗಳು ಎ ಶ್ರೇಣಿ (ಶೇಕಡ 80-89) ಪಡೆದಿದ್ದಾರೆ. ಶೇಕಡ 175489 ವಿದ್ಯಾರ್ಥಿಗಳು ಬಿ ಪ್ಲಸ್‌ (ಶೇಕಡ 70-79̧), 170296 ವಿದ್ಯಾರ್ಥಿಗಳು ಬಿ (ಶೇಕಡ 60-69) ಶ್ರೇಣಿ ಪಡೆದಿದ್ದಾರೆ. 116819 ವಿದ್ಯಾರ್ಥಿಗಳು ಸಿ ಪ್ಲಸ್‌ (ಶೇಕಡ 50-59) ಮತ್ತು 19301 ವಿದ್ಯಾರ್ಥಿಗಳು ಸಿ (ಶೇಕಡ 35-49) ಶ್ರೇಣಿ ಪಡೆದಿದ್ದಾರೆ. ಸಿ ಶ್ರೇಣಿಯಲ್ಲಿ ಕಡಿಮೆ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಆಶ್ಚರ್ಯವೆಂದೇ ಹೇಳಬಹುದು. ಬಹುತೇಖ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ.

5. ಈ ಬಾರಿಯ ಫಲಿತಾಂಶದಲ್ಲಿ ಸರಕಾರಿ ಶಾಲೆಯಲ್ಲಿ ಓದಿದ 1517 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕ ಪಡೆದಿದ್ದಾರೆ. ಅನುದಾನಿತ ಶಾಲೆಗಳಲ್ಲಿ ಓದಿರುವ 482 ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಓದಿರುವ 1824 ವಿದ್ಯಾರ್ಥಿಗಳು ಶೇಕಡ 100 ಫಲಿತಾಂಶ ಪಡೆದಿದ್ದಾರೆ.

6. ಈ ಬಾರಿ ಸರಕಾರಿ ಶಾಲೆಯಲ್ಲಿ ಓದಿರುವ ಯಾವುದೇ ವಿದ್ಯಾರ್ಥಿಯು ಫೇಲ್‌ ಆಗಿಲ್ಲ. ಯಾವುದೇ ಸರಕಾರಿ ಶಾಲೆಗೆ ಶೂನ್ಯ ಫಲಿತಾಂಶ ಬಂದಿಲ್ಲ. ಕಳೆದ ವರ್ಷ ಎರಡು ಶಾಲೆಗೆ ಶೂನ್ಯ ಫಲಿತಾಂಶ ಬಂದಿತ್ತು. ಅನುದಾನಿತ 23, ಅನುದಾನರಹಿತ 23 ಶಾಲೆಗಳಿಗೆ ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ.

7. ವಿಶೇಷ ಚೇತನ ಅಭ್ಯರ್ಥಿಗಳಲ್ಲಿ ಈ ಬಾರಿ 4649 ವಿದ್ಯಾರ್ಥಿಗಳಲ್ಲಿ 3723 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

8. ಗುಣಾತ್ಮಕ ಫಲಿತಾಂಶ ವಿಶ್ಲೇಷಣೆಯಲ್ಲಿ 23 ಜಿಲ್ಲೆಗಳಿಗೆ ಎ ಶ್ರೇಣಿ ಫಲಿತಾಂಶ ಬಂದಿದೆ. ರಾಮನಗರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಕೋಲಾರ, ಮಧುಗಿರಿ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆತೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಹಾವೇರಿ, ಚಿಕ್ಕೋಡಿ, ವಿಜಯಪುರ, ಶಿರಸಿ, ಉತ್ತರ ಕನ್ನಡ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ ಎ ಶ್ರೇಣಿ ಫಲಿತಾಂಶ ದೊರಕಿದೆ.

9. ಶೇಕಡ 60ಕ್ಕಿಂತ ಹೆಚ್ಚು, ಶೇಕಡ 75ಕ್ಕಿಂತ ಕಡಿಮೆ ಫಲಿತಾಂಶದ ಆಧಾರದಲ್ಲಿ 12 ಜಿಲ್ಲೆಗಳು ಬಿ ಶ್ರೇಣಿ ಪಡೆದಿವೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಶಿವಮೊಗ್ಗ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್‌, ಬಳ್ಳಾರಿ ಬಿ ಶ್ರೇಣಿ ಪಡೆದಿವೆ.

10. ಯಾವುದೇ ಜಿಲ್ಲೆಗಳು ಸಿ ಶ್ರೇಣಿ ಪಡೆಯದೆ ಇರುವುದು ಈ ಬಾರಿಯ ಇನ್ನೊಂದು ಅಚ್ಚರಿ ಮತ್ತು ಖುಷಿಯ ಸಂಗತಿ.

 

IPL_Entry_Point