ಕನ್ನಡ ಸುದ್ದಿ  /  Karnataka  /  Thirthahalli Engineer Caught In Illegal Recruitment Network Minister Gyanendra Tries To Bring Kiran Shetty From Cambodia

Thirthahalli Engineer: ಏಜೆನ್ಸಿ ಮೋಸದಾಟದಲ್ಲಿ ತೀರ್ಥಹಳ್ಳಿ ಟೆಕ್ಕಿ ಲಾಕ್!; ಕಾಂಬೋಡಿಯಾದಿಂದ ಕಿರಣ್ ಶೆಟ್ಟಿ ಕರೆತರಲು ಸಚಿವರ ಪ್ರಯತ್ನ

ಕಾಂಬೋಡಿಯಾದಲ್ಲಿ ಅಕ್ರಮವಾಗಿ ವಶದಲ್ಲಿರುವ ತೀರ್ಥಹಳ್ಳಿ ಸಾಫ್ಟ್ ವೇರ್ ಇಂಜಿನಿಯರ್ ಕಿರಿಣ್ ಶೆಟ್ಟಿ ಬಿಡುಗಡೆ ಮಾಡಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರ ಸರ್ಕಾರದ ಮೂಲಕ ಪ್ರಯತ್ನ ನಡೆಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಕಾಂಬೋಡಿಯಾದಲ್ಲಿ ಸಿಲುಕಿರುವ ತೀರ್ಥಹಳ್ಳಿಯ ಟೆಕ್ಕಿಯನ್ನು ಭಾರತಕ್ಕೆ ಕರೆತರಲು ಸಚಿವ ಆರಗ ಜ್ಞಾನೇಂದ್ರ ಅವರು ಪ್ರಯತ್ನ ನಡೆಸಿದ್ದಾರೆ.

ವಿದೇಶಿ ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ, ಅಪಾಯದಲ್ಲಿರುವ, ತೀರ್ಥಹಳ್ಳಿ ಪಟ್ಟಣದ ಸಾಫ್ಟ್ ವೇರ್ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರದ ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜತೆ ಸತತ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಥೈಲ್ಯಾಂಡ್ ದೇಶದಲ್ಲಿ ಹೆಚ್ಚಿನ ಸಂಬಳ ಕೊಡಿಸುವ ಆಮಿಷ ಒಡ್ಡಿದ ನೇಮಕಾತಿ ಏಜೆನ್ಸಿಯಿಂದ ಮೊಸಹೋಗಿರುವ ಕಿರಣ್ ಶೆಟ್ಟಿ ಸದ್ಯ ಕಾಂಬೋಡಿಯಾದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿದ್ದಾರೆ ಎಂದು ಹೇಳಲಾಗಿದೆ. ತೀರ್ಥಹಳ್ಳಿ ನಿವಾಸಿ ಕಿರಣ್ ಅವರ ಬಿಡುಗಡೆ ಬಗ್ಗೆ ಸತತ ಪ್ರಯತ್ನ ನಡೆಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ವಿದೇಶಾಂಗ ರಾಜ್ಯ ಸಚಿವ ವಿ ಮುರಳೀಧರ್ ಅವರ ಕಚೇರಿ ಜತೆ ಸಂಪರ್ಕಿಸಿ, ಬಿಡುಗಡೆ ಕುರಿತು ಮನವಿ ಮಾಡಿದ್ದಾರೆ.

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂ ಟೆಕ್ಕಿಯ ಸುರಕ್ಷತೆ ಬಗ್ಗೆ, ಸಚಿವರು ಚರ್ಚಿಸಿದ್ದು, ತಮ್ಮ ಎಲ್ಲಾ ಕೈಲಾದ ಪ್ರಯತ್ನ ಮಾಡಲಾಗುತ್ತಿದ್ದು, ಪೋಷಕರು ಧೈರ್ಯಗುಂದಬಾರದು ಎಂದು ಸಾಂತ್ವನ ಹೇಳಿದ್ದಾರೆ.

ಟೆಕ್ಕಿ ಕಿರಣ್ ಶೆಟ್ಟಿಯವರನ್ನು ದುಷ್ಕರ್ಮಿಗಳಿಂದ ಬಿಡಿಸಿ ಕೊಡುವಂತೆ, ಅವರ ಸಹೋದರ ಪವನ್ ಶೆಟ್ಟಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ, ಮನವಿ ಮಾಡಿದ್ದರು.

ಕಿರಣ್ ಶೆಟ್ಟಿ ಅವರಿಗೆ ನಾಲ್ಕು ತಿಂಗಳ ಮಗು ಹಾಗೂ ಪತ್ನಿಯಿದ್ದು ತೀರ್ಥಹಳ್ಳಿ ಯಲ್ಲಿ ಆತಂಕದಿಂದ ಆತನ ಮರಳುವಿಕೆ ಬಗ್ಗೆ ಚಿಂತಿತರಾಗಿದ್ದಾರೆ.

IPL_Entry_Point