ಕನ್ನಡ ಸುದ್ದಿ  /  Karnataka  /  Tumkur News Fire At Mangalore Based Car In A Lake 3 People Burnt Murder Suspect By Tumkur District Police Esp

Tumkur News: ತುಮಕೂರು ಕೆರೆಯ ಅಂಗಳದಲ್ಲಿ ಕಾರು ಭಸ್ಮ, ಸುಟ್ಟ ಸ್ಥಿತಿಯಲ್ಲಿ ಮೂವರ ಶವ ಪತ್ತೆ

ತುಮಕೂರು ಬಳಿ ಕಾರಿಗೆ ಬೆಂಕಿ ಬಿದ್ದು ಮೂವರು ಮೃತಪಟ್ಟಿದ್ದಾರೆ. ಕೊಲೆ ಶಂಕೆಯನ್ನು ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆವರದಿ: ಈಶ್ವರ್‌ ತುಮಕೂರು

ಸುಟ್ಟ ಕಾರಿನ ಪರಿಶೀಲನೆ ನಡೆಸುತ್ತಿರುವ ತುಮಕೂರು ಪೊಲೀಸರು.
ಸುಟ್ಟ ಕಾರಿನ ಪರಿಶೀಲನೆ ನಡೆಸುತ್ತಿರುವ ತುಮಕೂರು ಪೊಲೀಸರು.

ತುಮಕೂರು: ಕೆರೆಯ ಅಂಗಳದಲ್ಲಿ ಕಾರೊಂದು ಸುಟ್ಟು ಭಸ್ಮವಾಗಿದ್ದು, ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಮೃತ ದೇಹ ಪತ್ತೆಯಾಗಿವೆ, ಈ ಘಟನೆ ತುಮಕೂರು ತಾಲ್ಲೂಕು ಕೋರಾ ಠಾಣಾ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ನಡೆದಿದೆ, ಮೃತ ದೇಹಗಳ ಗುರುತು ಪತ್ತೆಯಾಗಿಲ್ಲ. ಮೂವರನ್ನು ಕೊಲೆ ಮಾಡಿ ಕಾರಿಗೆ ಹಾಕಿ ನಂತರ ಕಾರಿಗೆ ಬೆಂಕಿ ಹಚ್ಚಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ತುಮಕೂರು ಜಿಲ್ಲಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕಾರಿನಲ್ಲಿದ್ದವರ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕಾರಿನ ಮಾಲೀಕನನ್ನು ಸಂಪರ್ಕಿಸಿ ವಿವರ ಸಂಗ್ರಹಿಸುತ್ತಿದ್ದಾರೆ.

ಕಾರಿನ ನಂಬರ್‌ ಆಧರಿಸಿ ತನಿಖಗೆ ನಡೆಸಿದಾಗ ಕಾರು ದಕ್ಷಿಣ ಕನ್ನಡದ ಬೆಳ್ತಂಗಡಿಯ ರಫಿಕ್ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ, ಕಳೆದ ರಾತ್ರಿ ಕಾರಿಗೆ ಬೆಂಕಿ ಹಚ್ಚಿರಬಹುದು ಎನ್ನಲಾಗಿದೆ.

ಘಟನೆ ನಿಗೂಡವಾಗಿದ್ದು, ದಕ್ಷಿಣ ಕನ್ನಡದ ಕಾರು ಇಲ್ಲಿಗೆ ಏಕೆ ಬಂತು, ಕಾರಲ್ಲಿ ಇದ್ದವರು ಯಾರು, ಸುಟ್ಟು ಹೋಗಿರುವವರ ಯಾರು ಎಂಬ ಪ್ರಶ್ನೆ ಎದುರಾಗಿದ್ದು, ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಕೈಗೊಂಡಿದ್ದಾರೆ, ಮೃತ ದೇಹಗಳ ಮತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ಸಂಪೂರ್ಣ ತನಿಖೆಯಿಂದಷ್ಟೆ ಈ ಘಟನೆಯ ಹಿಂದಿನ ಸತ್ಯಾಂಶ ಹೊರ ಬೀಳಲಿದೆ ಎನ್ನುವುದು ಪೊಲೀಸ್‌ ಅಧಿಕಾರಿಯೊಬ್ಬರ ವಿವರಣೆ.

ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್‌ಪಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ವರದಿ: ಈಶ್ವರ್‌ ತುಮಕೂರು)

IPL_Entry_Point