ಕನ್ನಡ ಸುದ್ದಿ  /  ಕರ್ನಾಟಕ  /  Uttara Kannada News: ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ರಾಮಾಯಣ ಉತ್ಸವದಲ್ಲಿ ಕೆರೆಮನೆಯ ಇಡಗುಂಜಿ ಮೇಳಕ್ಕೆ ಪ್ರಥಮ ಬಹುಮಾನ

Uttara Kannada News: ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ರಾಮಾಯಣ ಉತ್ಸವದಲ್ಲಿ ಕೆರೆಮನೆಯ ಇಡಗುಂಜಿ ಮೇಳಕ್ಕೆ ಪ್ರಥಮ ಬಹುಮಾನ

Uttara Kannada News: ಛತ್ತೀಸ್‌ಗಢ ಸರ್ಕಾರ ಜೂನ್ 1 ರಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ರಾಮಾಯಣ ಉತ್ಸವ ಆಯೋಜಿಸಿದ್ದು, ಇದರಲ್ಲಿ ಕರ್ನಾಟಕದ ಕೆರೆಮನೆ ಇಡಗುಂಜಿ ಯಕ್ಷಗಾನದ ತಂಡ ಮೊದಲ ಬಹುಮಾನ ಗಳಿಸಿದೆ.

ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ರಾಮಾಯಣ ಉತ್ಸವದಲ್ಲಿ ಕರ್ನಾಟಕದ ಕೆರೆಮನೆ ಇಡಗುಂಜಿ ಯಕ್ಷಗಾನದ ತಂಡ ಮೊದಲ ಬಹುಮಾನ ಗಳಿಸಿದೆ.
ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ರಾಮಾಯಣ ಉತ್ಸವದಲ್ಲಿ ಕರ್ನಾಟಕದ ಕೆರೆಮನೆ ಇಡಗುಂಜಿ ಯಕ್ಷಗಾನದ ತಂಡ ಮೊದಲ ಬಹುಮಾನ ಗಳಿಸಿದೆ. (Harish MG)

ಕಾರವಾರ: ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ರಾಮಾಯಣ ಉತ್ಸವದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ’ ತಂಡ ಪ್ರದರ್ಶಿಸಿದ ಪಾರ್ತಿಸುಬ್ಬ ವಿರಚಿತ ಸೀತಾಪಹಾರ ಯಕ್ಷಗಾನ ಪ್ರಸಂಗದ ಭಾಗಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಪ್ರಶಸ್ತಿ ಮೊತ್ತ 5 ಲಕ್ಷ ರೂಪಾಯಿ.

ಛತ್ತೀಸ್‌ಗಢದಲ್ಲಿ ಜೂನ್ 1ರಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ರಾಮಾಯಣ ಉತ್ಸವ ನಡೆಯಿತು. ಇದರಲ್ಲಿ ಭಾಗವಹಿಸಿದ್ದ ರಾಷ್ಟ್ರದ ವಿವಿಧ ಕಲಾಪ್ರಕಾರಗಳ ತಂಡಗಳು ಹಾಗೂ ಕಾಂಬೋಡಿಯಾ, ಇಂಡೋನೇಶಿಯಾದ ಕಲಾತಂಡಗಳ ನಡುವೆ ರಾಮಾಯಣದ ಅರಣ್ಯಕಾಂಡದ ಭಾಗದ ಪ್ರದರ್ಶನ ನೀಡಿದವು.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ‘ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ’ ತಂಡ ಪಾರ್ತಿಸುಬ್ಬ ವಿರಚಿತ ಸೀತಾಪಹಾರ ಯಕ್ಷಗಾನ ಪ್ರಸಂಗ ಭಾಗವನ್ನು ಪ್ರದರ್ಶಿಸಿತು.

ಕರ್ನಾಟಕದ ಗಂಡುಕಲೆ ಎನಿಸಿದ ಯಕ್ಷಗಾನದ ಮೂಲಕ ರಾಮಾಯಣದ ಅರಣ್ಯಕಾಂಡ ನಡೆದ ಜಾಗ ಎಂದೇ ಹೇಳಲಾಗುವ ಛತ್ತೀಸ್‌ಗಢದಲ್ಲಿ ಅದೇ ಭಾಗದ ಸೀತಾಪಹಾರ ಎಂಬ ಭಾವನಾತ್ಮಕ ಸನ್ನಿವೇಶ ಇರುವ ಕಥಾಭಾಗವನ್ನು ಪ್ರದರ್ಶಿಸಿದ್ದು, ಗಮನಾರ್ಹ.

ಯಕ್ಷಗಾನಕ್ಕೆ, ಕನ್ನಡನಾಡಿಗೆ, ಕನ್ನಡಿಗರಿಗೆ ಸಂದ ಗೌರವ; ಭಾಗವತ ಅನಂತ ಹೆಗಡೆ ದಂತಳಿಗೆ ಅಭಿಮತ

ಇದು ನಮ್ಮ ಮಂಡಳಿಗೆ, ಮಂಡಳಿಯ ಅಭಿಮಾನಿಗಳಿಗೆ ಮಾತ್ರ ಬಂದ ಪ್ರಶಸ್ತಿ ಅಲ್ಲ.ಇಡೀ ನಮ್ಮ ಯಕ್ಷಗಾನಕ್ಕೆ, ಕನ್ನಡನಾಡಿಗೆ ಮತ್ತು ನಿಮಗೆಲ್ಲರಿಗೂ ಸಂದ ಗೌರವವಾಗಿದೆ ಎಂದು ಭಾವಿಸಿ ತಮ್ಮೆಲ್ಲರ ಪರವಾಗಿ ಸ್ವೀಕರಿಸಿದ್ದೇನೆ ಎಂದು ಈ ಸಂದರ್ಭ ಶಿವಾನಂದ ಹೆಗಡೆ ಕೆರೆಮನೆ ತಿಳಿಸಿದ್ದಾರೆ.

ಮೊದಲ ದಿನವೇ ಯಕ್ಷಗಾನ ತಂಡ ಪ್ರದರ್ಶನ ನೀಡಿತ್ತು. ಈ ಕುರಿತು HTಕನ್ನಡ ಪ್ರತಿನಿಧಿ ಜತೆ ಭಾಗವತ ಅನಂತ ಹೆಗಡೆ ದಂತಳಿಗೆ ಮಾತನಾಡಿ, ಇದೊಂದು ಅಪೂರ್ವ ಕ್ಷಣವಾಗಿದ್ದು, ರಾಜ್ಯವನ್ನು ಪ್ರತಿನಿಧಿಸಿ ಶ್ರೀರಾಮ ಓಡಾಡಿದ ನೆಲದಲ್ಲಿ ಪ್ರದರ್ಶನ ನೀಡಿರುವುದು ವಿಶೇಷ ಎಂದಿದ್ದಾರೆ.

ಕಲಾವಿದರ ತಂಡದಲ್ಲಿದ್ದವರು

ಹಿರಿಯ ಕಲಾವಿದರಾದ ಕೆರೆಮನೆ ಶಿವಾನಂದ ಹೆಗಡೆ ಅವರ ಕೊರಿಯೋಗ್ರಫಿ, ನಿರ್ದೇಶನದೊಂದಿಗೆ ನಡೆದ ಪ್ರದರ್ಶನದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿಯೂ ಶಿವಾನಂದ ಹೆಗಡೆಯವರು ಉತ್ತಮ ಭಾವಾಭಿವ್ಯಕ್ತಿಯನ್ನು ಪ್ರದರ್ಶಿಸುವ ಮೂಲಕ ಸಭಿಕರ ಮನಗೆದ್ದಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಳೆಯಲ್ಲಿ ನರಸಿಂಹ ಹೆಗಡೆ ಮೂರೂರು, ಚಂಡೆಯಲ್ಲಿ ಶರತ್ ಭಂಡಾರಿ ಸಹಕರಿಸಿದರು.

ಮಾರೀಚನಾಗಿ ತಿಮ್ಮಪ್ಪ ಹೆಗಡೆ ಶಿರಳಗಿ, ಲಕ್ಷ್ಮಣನಾಗಿ ವಿಘ್ನೇಶ್ವರ ಹಾವಗೋಡಿ ಗೋಕರ್ಣ, ರಾವಣನಾಗಿ ಈಶ್ವರ ಭಟ್ ಅಂಸಳ್ಳಿ, ಸೀತೆಯಾಗಿ ಸದಾಶಿವ ಭಟ್ಟ ಮಲವಳ್ಳಿ ಮತ್ತು ಘೋರ ಶೂರ್ಪನಖಿ ಮತ್ತು ಘೋರ ರಾವಣನಾಗಿ ವಿನಾಯಕ ನಾಯ್ಕ್, ಮಾಯಾ ಜಿಂಕೆಯಾಗಿ ಚಂದ್ರಶೇಖರ ಎನ್, ಜಟಾಯುವಾಗಿ ಕೃಷ್ಣ ಮರಾಠಿ ಭಾಗವಹಿಸಿದ್ದರು. ಪೂರ್ವರಂಗದಲ್ಲಿ ಗಣಪತಿ ಕುಣಬಿ ಮತ್ತು ಮಂಜುನಾಥ ಮರಾಠಿ ಸಹಕರಿಸಿದರು.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

IPL_Entry_Point