January 30 Kannada News Updates: ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ; ಕನಿಷ್ಠ 47 ಮಂದಿ ಸಾವು, 147ಕ್ಕೂ ಹೆಚ್ಚು ಮಂದಿಗೆ ಗಾಯ
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Mon, 30 Jan 202316:05 IST
ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ರಷ್ಯಾ
ಮೋದಿ ಕುರಿತು ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ವಕ್ತಾರರು, ಯುಕೆ ಸುದ್ದಿಸಂಸ್ಥೆ ಬಿಬಿಸಿಯು ರಷ್ಯಾ ವಿರುದ್ಧ ಮಾತ್ರವಲ್ಲದೆ ಇತರ ದೇಶಗಳ ವಿರುದ್ಧ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
“ಬಿಬಿಸಿಯು ವಿವಿಧ ರಂಗಗಳಲ್ಲಿ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಸ್ಪಷ್ಟ ನಿದರ್ಶನ. ಇದು ರಷ್ಯಾ ವಿರುದ್ಧ ಮಾತ್ರವಲ್ಲ. ಸ್ವತಂತ್ರ ನೀತಿಯನ್ನು ಅನುಸರಿಸುವ ಎಲ್ಲಾ ಜಾಗತಿಕ ಶಕ್ತಿ ಕೇಂದ್ರಗಳ ವಿರುದ್ಧವೂ ಬಿಬಿಸಿ ಇಂತಹ ಪ್ರಯತ್ನ ಮಾಡುತ್ತಿದೆ,” ಎಂದು ರಷ್ಯಾ ವಕ್ತಾರರು ಹೇಳಿದ್ದಾರೆ.
Mon, 30 Jan 202315:07 IST
ಸಾವಿನ ಸಂಖ್ಯೆ 47ಕ್ಕೆ ಏರಿಕೆ
ಪಾಕಿಸ್ತಾನ ಸ್ಫೋಟದ
ಪೇಶಾವರ ಸ್ಫೋಟದಲ್ಲಿ ಸಾವಿನ ಸಂಖ್ಯೆ 47ಕ್ಕೆ ಏರಿಕೆ
153ಕ್ಕೂ ಹೆಚ್ಚು ಮಂದಿಗೆ ಗಾಯ
Mon, 30 Jan 202313:17 IST
ಪಾಕಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಳ
ಪಾಕಿಸ್ತಾನದಲ್ಲಿ 2022ರಲ್ಲಿ 22 ಶೇಕಡದಷ್ಟು ಉಗ್ರಗಾಮಿ ಹಿಂಸಾಚಾರ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಇಸ್ಲಾಮಾಬಾದ್ ಮೂಲದ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್ಫ್ಲಿಕ್ಟ್ ಅಂಡ್ ಸೆಕ್ಯುರಿಟಿ ಸ್ಟಡೀಸ್ ಪ್ರಕಾರ, 2021ಕ್ಕೆ ಹೋಲಿಸಿದರೆ 2022ರಲ್ಲಿ ಉಗ್ರಗಾಮಿ ಹಿಂಸಾಚಾರವು 22 ಶೇ.ದಷ್ಟು ಹೆಚ್ಚಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
Mon, 30 Jan 202313:17 IST
ದಾಳಿಯ ಹೊಣೆ ಹೊತ್ತ ತಾಲಿಬಾನ್
ಬಾಂಬ್ ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ. ಪಾಕಿಸ್ತಾನಿ ತಾಲಿಬಾನ್‌ನ ಕಮಾಂಡರ್ ಆಗಿರುವ ಸರ್ಬಕಾಫ್ ಮೊಹಮಂಡ್ ಸುಮಾರು 50 ಮಂದಿಯನ್ನು ಕೊಂದ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ಸುದ್ದಿಸಂಸ್ಥೆ ಎಪಿ ವರದಿ ಮಾಡಿದೆ.
Mon, 30 Jan 202310:42 IST
28 ಮಂದಿ ಸಾವು
ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ ಪ್ರಕರಣ
ಕನಿಷ್ಠ 28 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ
ಲೀಸ್ ಅಧಿಕಾರಿಗಳು ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಮಸೀದಿಯು ಪೊಲೀಸ್ ವಸತಿ ಗೃಹದ ಸಮೀಪವಿದ್ದು, ಸ್ಫೋಟ ಸಂಭವಿಸಿದಾಗ ಒಳಗೆ ಸುಮಾರು 260 ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Mon, 30 Jan 202310:09 IST
ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ; ಕನಿಷ್ಠ 19 ಮಂದಿ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ
ಪಾಕಿಸ್ತಾನದ ಪೇಶಾವರದಲ್ಲಿರುವ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಸ್ಫೋಟದಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಲಿಯಾದವರಲ್ಲಿ ಹೆಚ್ಚಿನವರು ದೈನಂದಿನ ಪ್ರಾರ್ಥನೆಗಾಗಿ ಒಟ್ಟುಗೂಡಿದ್ದ ಪೊಲೀಸ್ ಅಧಿಕಾರಿಗಳು ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಮಸೀದಿಯು ಪೊಲೀಸ್ ವಸತಿ ಗೃಹದ ಸಮೀಪವಿದ್ದು, ಸ್ಫೋಟ ಸಂಭವಿಸಿದಾಗ ಒಳಗೆ ಸುಮಾರು 260 ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಕನಿಷ್ಠ 90 ಜನರು ಗಾಯಗೊಂಡಿದ್ದಾರೆ ಎಂದು ಆರಂಭಿಕ ಮಾಹಿತಿ ಲಭ್ಯವಾಗಿದೆ.
Mon, 30 Jan 20239:18 IST
ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ, 90 ಮಂದಿಗೆ ಗಾಯ
ಪಾಕಿಸ್ತಾನದ ಪೇಶಾವರದಲ್ಲಿರುವ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಘಟನೆಯಿಂದ ಕನಿಷ್ಠ 90 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಮತ್ತೊಂದೆಡೆ ಸ್ಫೋಟದಲ್ಲಿ ಸುಮಾರು 70 ಜನರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
Pakistan | At least 50 people were injured when a “suicide attacker” blew himself up in a mosque located in Peshawar's Police Lines area during prayers: Geo News
— ANI (@ANI) January 30, 2023
Mon, 30 Jan 20238:12 IST
ನನ್ನ ಸಹೋದರ ದೇಶಕ್ಕೆಲ್ಲಾ ಪ್ರೀತಿ ಹಂಚಿ ಬಂದ ಧೀರ: ಪ್ರಿಯಾಂಕಾ ಗಾಂಧಿ ಭಾವುಕ ನುಡಿ
ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿರುವ ನನ್ನ ಸಹೋದರ ರಾಹುಲ್ ಗಾಂಧಿ, ದೇಶಕ್ಕೆಲ್ಲಾ ಪ್ರೀತಿಯನ್ನು ಹಂಚಿ ಬಂದ ಧೀರ ಎಂದು ಸಹೋದರಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಶ್ರೀನಗರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಕುರಿತು ಭಾವನಾತ್ಮಕವಾಗಿ ಮಾತನಾಡಿದರು.
Mon, 30 Jan 20238:12 IST
ಗೋಡ್ಸೆ ಸಿದ್ಧಾಂತ ಕಸಿದುಕೊಂಡಿರುವ ಕಣಿವೆ ಜನರ ಹಕ್ಕನ್ನು ಮರಳಿಸಿ: ರಾಹುಲ್‌ಗೆ ಮೆಹಬೂಬಾ ಮುಫ್ತಿ ಮನವಿ
ಶ್ರೀನಗರದಲ್ಲಿ ಭಾತರತ್ ಜೋಡೋ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಗೋಡ್ಸೆ ಸಿದ್ಧಾಂತವು ಜಮ್ಮು ಮತ್ತು ಕಾಶ್ಮೀರದ ಜನತೆಯ ಹಕ್ಕನ್ನು ಕಸಿದುಕೊಂಡಿದ್ದು, ಈ ಹಕ್ಕನ್ನು ಮರಳಿ ಕೊಡಿಸುವಲ್ಲಿ ರಾಹುಲ್ ಗಾಂಧಿ ಪ್ರಾಮಾನಿಕ ಪ್ರಯತ್ನ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ರಾಷ್ಟ್ರವು ರಾಹುಲ್ ಗಾಂಧಿಯಲ್ಲಿ ಭರವಸೆಯ ಕಿರಣವನ್ನು ನೋಡಬಹುದು ಎಂದು ಮೆಹಬೂಬಾ ಮುಫ್ತಿ ಇದೇ ವೇಳೆ ಅಭಿಪ್ರಾಯಪಟ್ಟರು.
Mon, 30 Jan 20237:12 IST
ಶ್ರೀನಗರದ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ: ಸಮಾರೋಪ ಸಮಾರಂಭಕ್ಕೆ ಸಿದ್ಧತೆ
ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ, ಶ್ರೀನಗರದ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಈ ವೇಳೆ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Mon, 30 Jan 20236:08 IST
ಬಾಪೂ ಪುಣ್ಯತಿಥಿ: ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ
ಮಹಾತ್ಮಾ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ, ಬಾಪೂ ಅವರನ್ನು ಸ್ಮರಿಸಿರುವ ಪ್ರಧಾನಿ ಮೋದಿ, ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. "ಬಾಪು ಅವರ ಪುಣ್ಯ ತಿಥಿಯಂದು ನಾನು ಬಾಪು ಅವರಿಗೆ ನಮಸ್ಕರಿಸುತ್ತೇನೆ ಮತ್ತು ಅವರ ಆಳವಾದ ಆಲೋಚನೆಗಳನ್ನು ನೆನಪಿಸಿಕೊಳ್ಳುತ್ತೇನೆ. ನಮ್ಮ ರಾಷ್ಟ್ರದ ಸೇವೆಯಲ್ಲಿ ಹುತಾತ್ಮರಾದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ. ಹುತಾತ್ಮರ ತ್ಯಾಗ ಮತ್ತು ಬಲಿದಾನಗಳು ಅಭಿವೃದ್ಧಿಗಾಗಿ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ.." ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Mon, 30 Jan 20234:52 IST
ಬಜೆಟ್ ಅಧಿವೇಶನಕ್ಕೆ ಮುನ್ನಾದಿನವಾದ ಇಂದು ಸರ್ವಪಕ್ಷ ಸಭೆ: ಪ್ರತಿಪಕ್ಷಗಳ ಸಹಕಾರ ಕೋರಲಿರುವ ಕೇಂದ್ರ
ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುನ್ನ, ಸರ್ವಪಕ್ಷ ಸಭೆ ಇಂದು (ಜ.30-ಸೋಮವಾರ) ನಡೆಯಲಿದೆ. ಬಜೆಟ್ ಅಧಿವೇಶನ ಸರಾಗವಾಗಿ ನಡೆಯಲು, ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಸಹಕಾರವನ್ನು ಕೋರಲಿದೆ.
Mon, 30 Jan 20233:17 IST
ಹುತಾತ್ಮ ದಿನ: ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆದ ಭಾರತದ ಸಂತನಿಗೆ ನಮಿಸೋಣ
ಇಂದು(ಜ.30-ಸೋಮವಾರ) ಮಹಾತ್ಮಾ ಗಾಂಧಿಜೀ ಅವರು ಹುತಾತ್ಮರಾದ ದಿನ. ಈ ದಿನವನ್ನು ದೇಶವು ಹುತಾತ್ಮ ದಿನವನ್ನಾಗಿ ಆಚರಿಸುತ್ತಿದ್ದು, ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕನನ್ನು ಸ್ಮರಿಸುತ್ತಿದೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಭಾರತದ ಸಂತನಿಗೆ ಇದೋ ನಮ್ಮ ನಮನ...
Mon, 30 Jan 20231:30 IST
ಭಾರತ್ ಜೋಡೋ ಸಮಾರೋಪ ಸಮಾರಂಭಕ್ಕೆ ಕಾಂಗ್ರೆಸ್ ಭರದ ಸಿದ್ಧತೆ
ದೇಶದ ಕೋಮು ಸೌಹಾರ್ದತೆಗಾಗಿ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆಯು ಮುಕ್ತಾಯ ಕಂಡಿದ್ದು, ಇಂದು (ಜ.30-ಸೋಮವಾರ) ಜಮ್ಮು ಮುತ್ತು ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕಾಗಿ ಕಾಂಗ್ರೆಸ್ ಭರದ ಸಿದ್ಧತೆ ನಡೆಸಿದೆ.
Mon, 30 Jan 20231:28 IST
ಪ್ರತ್ಯೇಕವಾಗಿ ಪ್ರಜಾಧ್ವನಿ ಯಾತ್ರೆ ಕೈಗೊಳ್ಳಲಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿ
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಫೆ. 3ರಿಂದ ಪ್ರತ್ಯೇಕವಾಗಿ ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಳ್ಳಲಿದ್ದಾರೆ. ಇದುವರೆಗೂ ಇಬ್ಬರೂ ನಾಯಕರು ಸುಮಾರು 20 ಜಿಲ್ಲೆಗಳಲ್ಲಿ ಜಂಟಿ ಪ್ರವಾಸ ನಡೆಸಿದ್ದು, ಈಗ ಪ್ರತ್ಯೇಕವಾಗಿ ಪ್ರಜಾಧ್ವನಿ ಯಾತ್ರೆಯನ್ನು ಮುನ್ನಡೆಸಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಸ್ಪಷ್ಟಪಡಿಸಿದೆ.
Mon, 30 Jan 20231:26 IST
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಖಲಿಸ್ತಾನ್ ಬೆಂಬಲಿಗರಿಂದ ಹಲ್ಲೆ!
ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಹೊರಟಿದ್ದ ಭಾರತೀಯರ ಮೇಲೆ, ಖಲಿಸ್ತಾನಿ ಬೆಂಬಲಿಗರ ಗುಂಪೊಂದು ಹಲ್ಲೆ ನಡೆಸಿದೆ. ತ್ರಿವರ್ಣ ಧ್ವಜ ಹಿಡಿದು ಭಾರತೀಯರ ಮೇಲೆ ಖಲಿಸ್ತಾನ್ ಬೆಂಬಲಿಗರ ಗುಂಪು ಲಾಠಿಗಳಿಂದ ಹೊಡೆಯುತ್ತಿದ್ದ ವಿಡಿಯೋವೊಂದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.
Mon, 30 Jan 20231:25 IST
ಚೀನಾದೊಂದಿಗೆ ಮಿಲಿಟರಿ ಸಮರದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ: ರಿಪಬ್ಲಿಕನ್ ಪಕ್ಷದ ನಾಯಕನ ಅಭಿಮತ!
ತೈವಾನ್ ವಿಷಯದಲ್ಲಿ ಚೀನಾ ಮತ್ತು ಅಮೆರಿಕದ ನಡುವೆ ಮಿಲಿಟರಿ ಸಮರ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ರಿಪಬ್ಲಿಕನ್ ಪಕ್ಷದ ನಾಯಕ ಮೈಕಲ್ ಮೆಕಾಲ್ ಅಭಿಪ್ರಾಯಪಟ್ಟಿದ್ದಾರೆ. ಯುಎಸ್ ಕಾಂಗ್ರೆಸ್‌ನ ಸದಸ್ಯರಾಗಿರುವ ಮಕಲ್ ಮೆಕಾಲ್, 2025ರಲ್ಲಿ ಅಮೆರಿಕ-ಚೀನಾ ನಡುವೆ ಯುದ್ಧ ನಡೆಯಲಿದೆ ಎಂಬ ಅಮೆರಿಕದ ವಾಯುಸೇನೆ ಹಿರಿಯ ಅಧಿಕಾರಿ ಜನರಲ್ ಮೈಕ್ ಮಿನಿಹಾನ್ ಅವರ ಪತ್ರವನ್ನು ಉಲ್ಲೇಖಿಸಿ ಮೇಲಿನಂತೆ ಹೇಳಿದ್ದಾರೆ.