Sleeping with wet Hair: ಒದ್ದೆ ಕೂದಲಿನೊಂದಿಗೆ ಮಲಗುವ ಅಭ್ಯಾಸವಿದ್ದರೆ ಇಂದೇ ತಪ್ಪಿಸಿ, ಇಲ್ಲವಾದರೆ ಈ ಸಮಸ್ಯೆಗಳು ಖಚಿತ!
ಕನ್ನಡ ಸುದ್ದಿ  /  ಜೀವನಶೈಲಿ  /   Sleeping With Wet Hair: ಒದ್ದೆ ಕೂದಲಿನೊಂದಿಗೆ ಮಲಗುವ ಅಭ್ಯಾಸವಿದ್ದರೆ ಇಂದೇ ತಪ್ಪಿಸಿ, ಇಲ್ಲವಾದರೆ ಈ ಸಮಸ್ಯೆಗಳು ಖಚಿತ!

Sleeping with wet Hair: ಒದ್ದೆ ಕೂದಲಿನೊಂದಿಗೆ ಮಲಗುವ ಅಭ್ಯಾಸವಿದ್ದರೆ ಇಂದೇ ತಪ್ಪಿಸಿ, ಇಲ್ಲವಾದರೆ ಈ ಸಮಸ್ಯೆಗಳು ಖಚಿತ!

ಕೂದಲನ್ನು ಒಣಗಿಸದೆ ಒದ್ದೆ ಕೂದಲಿನೊಂದಿಗೆ ಮಲಗುವುದರಿಂದ ಚರ್ಮದ ಸಮಸ್ಯೆಗಳು ಕೂಡಾ ಉತ್ಪತ್ತಿಯಾಗುತ್ತದೆ. ತಲೆ ದಿಂಬಿನ ಮೇಲೆ ತಲೆಹೊಟ್ಟು ಹಾಗೂ ಕೂದಲಿನ ಎಣ್ಣೆ ಅಂಶ ದಿಂಬಿಗೆ ತಗುಲುತ್ತದೆ. ಇದರಿಂದ ಅಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ.

ಒದ್ದೆ ಕೂದಲೊಂದಿಗೆ ಮಲಗುವುದು ಕೂದಲು, ಚರ್ಮಕ್ಕೆ ಅಪಾಯಕಾರಿ
ಒದ್ದೆ ಕೂದಲೊಂದಿಗೆ ಮಲಗುವುದು ಕೂದಲು, ಚರ್ಮಕ್ಕೆ ಅಪಾಯಕಾರಿ (PC: Freepik)

ಉತ್ತಮ ಆರೋಗ್ಯಕ್ಕೆ ಅಷ್ಟೇ ಉತ್ತಮ ನಿದ್ರೆ ಕೂಡಾ ಅವಶ್ಯಕ. ಕೆಲಸದ ಒತ್ತಡ, ಸುಸ್ತು ಕಾಡುವಾಗ ಒಮ್ಮೆ ಸ್ನಾನ ಮಾಡಿ ಮಲಗಿದರೆ ಒಳ್ಳೆ ನಿದ್ರೆ ಬರುತ್ತದೆ. ಆದರೆ ಕೆಲವರು ತಲೆಗೆ ಸ್ನಾನ ಮಾಡಿದ ನಂತರ ಕೂದಲನ್ನು ಒಣಗಿಸದೆ ಹಾಗೇ ಮಲಗುತ್ತಾರೆ. ನೀವು ಈ ರೀತಿಯ ತಪ್ಪುಗಳನ್ನು ಮಾಡಿದರೆ ಶೀತದ ಜೊತೆಗೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮಲಗುವ ಮುನ್ನ ಸ್ನಾನ ಮಾಡುವುದರಿಂದ ತ್ವರಿತವಾಗಿ ನಿದ್ರಿಸಲು ಸಹಾಯವಾಗುತ್ತದೆ. ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಎಂದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಆದರೆ ಯಾವುದೇ ಕಾರಣಕ್ಕೂ ಒದ್ದೆ ಕೂದಲಿನೊಂದಿಗೆ ಮಲಗಬೇಡಿ. ಒದ್ದೆ ಕೂದಲಿನೊಂದಿಗೆ ಮಲಗುವುದರಿಂದ ಶಿಲೀಂಧ್ರಗಳ ಸೋಂಕು ಹೆಚ್ಚಾಗುವ ಮತ್ತು ಕೂದಲು ಒಡೆಯುವ ಅಪಾಯ ಹೆಚ್ಚು. ಒದ್ದೆಯಾದಾಗ ಕೂದಲು ತುಂಬಾ ದುರ್ಬಲವಾಗಿರುತ್ತದೆ. ನಿದ್ರೆ ಮಾಡುವಾಗ ಬಹಳ ಮಂದಿ ಪದೇ ಪದೇ ಮಗ್ಗುಲು ಬದಲಿಸುತ್ತಾರೆ. ಹೀಗೆ ಮಾಡುವಾಗ ಕೂದಲಿಗೆ ಹೆಚ್ಚಿನ ಒತ್ತಡ ಬಿದ್ದು ಕೂದಲು ಉದುರುವುದು, ಒಡೆಯುವ ಸಮಸ್ಯೆ ಹೆಚ್ಚಾಗುತ್ತದೆ. ಹಾಗೇ ಒದ್ದೆ ಕೂದಲಿನೊಂದಿಗೆ ಮಲಗಿದಾಗ ತಲೆಹೊಟ್ಟು ಅಥವಾ ಡರ್ಮಟೈಟಿಸ್ ಬರುವ ಸಾಧ್ಯತೆ ಹೆಚ್ಚು. ಮಲಾಸೆಜಿಯಾದಂತಹ ಶಿಲೀಂಧ್ರಗಳು ಈ ಪರಿಸ್ಥಿತಿಗಳಿಗೆ ಕಾರಣವಾಗಬಹುದು.

ಅಷ್ಟೇ ಅಲ್ಲ, ನೀವು ಕೂದಲನ್ನು ಒಣಗಿಸದೆ ಒದ್ದೆ ಕೂದಲಿನೊಂದಿಗೆ ಮಲಗುವುದರಿಂದ ಚರ್ಮದ ಸಮಸ್ಯೆಗಳು ಕೂಡಾ ಉತ್ಪತ್ತಿಯಾಗುತ್ತದೆ. ತಲೆ ದಿಂಬಿನ ಮೇಲೆ ತಲೆಹೊಟ್ಟು ಹಾಗೂ ಕೂದಲಿನ ಎಣ್ಣೆ ಅಂಶ ದಿಂಬಿಗೆ ತಗುಲುತ್ತದೆ. ಇದರಿಂದ ಅಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಈ ಬ್ಯಾಕ್ಟೀರಿಯಾಗಳು ಚರ್ಮಕ್ಕೆ ತಗುಲಿದಾಗ ಮೊಡವೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳು ಕಾಡುತ್ತದೆ.

ಈ ಸಮಸ್ಯೆಗಳನ್ನು ತಪ್ಪಿಸಲು, ಒಂದು ವೇಳೆ ಮಲಗುವ ಮುನ್ನ ಸ್ನಾನ ಮಾಡಬೇಕಾಗಿ ಬಂದರೆ ತಪ್ಪದೆ ಕಂಡೀಷನರ್ ಬಳಸಿ. ತಲೆ ಸ್ನಾನ ಮಾಡುವ ಮೊದಲು ನಿಮ್ಮ ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ. ಮೆತ್ತಗಿನ ತಲೆ ದಿಂಬು ಬಳಸಿ. ಎಲ್ಲಕ್ಕಿಂತ ಮುಖ್ಯವಾಗಿ ಕೂದಲನ್ನು ಒಣಗಿಸುವುದು ಬಹಳ ಅಗತ್ಯ.

ಮತ್ತಷ್ಟು ಲೈಫ್‌ಸ್ಟೈಲ್‌ ಕುರಿತ ಸುದ್ದಿಗಳು ಇಲ್ಲಿವೆ

ಸ್ನಾಯು ಬಲಗೊಳ್ಳುವುದರಿಂದ ಹಿಡಿದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಈ ವಾಲ್‌ ಸಿಟ್‌ ವ್ಯಾಯಾಮ!

ಸ್ಕೂಲ್‌ನಲ್ಲಿದ್ದಾಗ ನಾವು ಏನಾದರೂ ತಪ್ಪು ಮಾಡಿದರೆ, ಟೀಚರ್‌ಗಳು ನಮಗೆ ವಾಲ್‌ ಸಿಟ್‌ ಶಿಕ್ಷೆ ನೀಡುತ್ತಿದ್ದರು. ಬಹಳ ಹೊತ್ತು ಹಾಗೆ ವಾಲ್‌ ಸಿಟ್‌ ಮಾಡಿದಾಗ ಕೈ ಕಾಲುಗಳು ಬಹಳಷ್ಟು ನೋವು ಬರುತ್ತಿತ್ತು. ಆಗ ಇನ್ಮುಂದೆ ನಾನು ಇಂತಹ ತಪ್ಪು ಮಾಡಬಾರದು ಎಂದುಕೊಳ್ಳುತ್ತಿದ್ದವರೇ ಹೆಚ್ಚು. ಆದರೆ ಈ ರೀತಿ ವಾಲ್‌ ಸಿಟ್‌ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಇದೆ ನಿಮಗೆ ಗೊತ್ತಾ? ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

ಉಸ್ಸಪ್ಪಾ, ಸೆಕೆ ಶುರು ಆಯ್ತಲ್ವಾ.. ಆರೋಗ್ಯ ತಜ್ಞರು ನಿಮಗಾಗಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ ನೋಡಿ

ಇಷ್ಟು ದಿನಗಳ ಕಾಲ ಚಳಿಯಿಂದ ಬೆಚ್ಚಗಿದ್ದ ಜನರು ಈಗ ಸೆಕೆಯಿಂದ ಪರದಾಡುವ ಸಮಯ ಬಂದಿದೆ. ಹೌದು, ಈಗಾಗಲೇ ಸೆಕೆ ಆರಂಭವಾಗಿದೆ. ಮಾರ್ಚ್‌ ಆರಂಭದಲ್ಲೇ ಇಷ್ಟರ ಮಟ್ಟಿಗೆ ಇರುವ ಬಿಸಿಲು ಇನ್ನು ಏಪ್ರಿಲ್‌, ಮೇ ತಿಂಗಳಲ್ಲಿ ಹೇಗೆ ಇರಲಿದೆಯೋ ಎಂಬ ಭಯ ಕಾಡುತ್ತಿದೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ಜನರಿಗೆ ಕೆಲವೊಂದು ಮುನ್ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್‌ ಒತ್ತಿ.

Whats_app_banner