ಕನ್ನಡ ಸುದ್ದಿ  /  Lifestyle  /  Brown Sugar For Beautiful Skin

Brown Sugar for Skin: ಬ್ಯೂಟಿ ಕ್ವೀನ್‌ ಅಂತ ನಿಮ್ಮನ್ನು ಎಲ್ರೂ ಹೊಗಳಬೇಕಾ... ಹಾಗಿದ್ರೆ ಚರ್ಮಕ್ಕೆ ಬ್ರೌನ್‌ ಶುಗರ್‌ ಬಳಸಿ ನೋಡಿ!

2 ದಿನಗಳಿಗೊಮ್ಮೆ ನೀವು ತ್ವಚೆಗೆ ಬ್ರೌನ್‌ ಶುಗರ್‌ ಬಳಸುವುದರಿಂದ ನಿಮ್ಮ ಬಹುತೇಕ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತದೆ. ಮುಖ, ಕುತ್ತಿಗೆಗೆ ಮಾತ್ರವಲ್ಲ, ಮೊಣಕೈ, ಮೊಣಕಾಲು, ಕೈಗಳು, ಪಾದಗಳಿಗೆ ಕೂಡಾ ನೀವು ಬ್ರೌನ್‌ ಶುಗರ್‌ ಬಳಸಬಹುದು.

ತ್ವಚೆಯ ಅಂದಕ್ಕೆ ಬ್ರೌನ್‌ ಶುಗರ್‌
ತ್ವಚೆಯ ಅಂದಕ್ಕೆ ಬ್ರೌನ್‌ ಶುಗರ್‌ (PC: Freepik)

ಪುರುಷರಾಗಲೀ, ಮಹಿಳೆಯರಾಗಲೀ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಎಲ್ಲರಿಗೂ ತಿಳಿದಿರುವ ಹಾಗೆ ಸುಂದರವಾಗಿ ಕಾಣಲು ನೈಸರ್ಗಿಕವಾಗಿ ಅನೇಕ ಸಾಮಗ್ರಿಗಳು ಲಭ್ಯವಿದೆ. ಅದರಲ್ಲಿ ಅಡುಗೆ ಮನೆಯಲ್ಲಿ ದೊರೆಯುವ ಹಣ್ಣು ತರಕಾರಿ, ಮೊಸರು, ಸಕ್ಕರೆ ಕೂಡಾ ಇವೆ. ಬಿಳಿ ಸಕ್ಕರೆ ಮಾತ್ರವಲ್ಲದೆ ಬ್ರೌನ್‌ ಶುಗರ್‌ ಕೂಡಾ ಚರ್ಮಕ್ಕೆ ಬಹಳ ಉಪಯುಕ್ತವಾಗಿದೆ.

ಸೌಂದರ್ಯವನ್ನು ಕಾಪಾಡುವಲ್ಲಿ ಬ್ರೌನ್ ಶುಗರ್ ಹೇಗೆ ಸಹಾಯ ಮಾಡುತ್ತದೆ, ಅದನ್ನು ಬಳಸುವುದು ಹೇಗೆ ಅನ್ನೋದನ್ನು ನೋಡೋಣ.

ಎಕ್ಸ್‌ಫೋಲಿಯೇಟ್‌

ಬ್ರೌನ್ ಶುಗರ್ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಗ್ಲೈಕೋಲಿಕ್ ಆಮ್ಲ, ಆಲ್ಫಾ-ಹೈಡ್ರಾಕ್ಸಿ ಆಸಿಡ್ ಚರ್ಮದ ಆಳಕ್ಕೆ ಸೇರಿ ಸತ್ತ ಜೀವಕೋಶಗಳನ್ನು ತೆರವುಗೊಳಿಸುತ್ತದೆ. ಹೊಸ ಕೋಶಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಬ್ರೌನ್ ಶುಗರ್ ಸತ್ತ ಜೀವಕೋಶಗಳನ್ನು ಎಫ್ಫೋಲಿಯೇಟ್ ಮಾಡುತ್ತದೆ. ಜೇನುತುಪ್ಪ ಮತ್ತು ಬ್ರೌನ್ ಶುಗರನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ. ಅದರಲ್ಲಿ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮತ್ತು ಸಕ್ಕರೆ ಕರಗುವವರೆಗೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ 10-15 ನಿಮಿಷಗಳ ಕಾಲ ಒಣಗಲು ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮ ಫ್ರೆಶ್ ಆಗುತ್ತದೆ.

ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ

ಬ್ರೌನ್ ಶುಗರ್ ನೈಸರ್ಗಿಕವಾಗಿ ಆರ್ದ್ರಕವಾಗಿದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಚರ್ಮವನ್ನು ಮೃದುವಾಗಿ ಮತ್ತು ತೇವಾಂಶದಿಂದ ಇಡುತ್ತದೆ. ಬ್ರೌನ್ ಶುಗರ್ , ಸಾಮಾನ್ಯ ಸಕ್ಕರೆಗಿಂತ ಸೂಕ್ಷ್ಮ, ಮೃದುವಾಗಿರುತ್ತದೆ. ತೆಂಗಿನ ಎಣ್ಣೆಯೊಂದಿಗೆ ಸ್ವಲ್ಪ ಬ್ರೌನ್‌ ಶುಗರ್‌ ಮಿಶ್ರಣ ಮಾಡಿ. ಲ್ಯಾವೆಂಡರ್ ಎಣ್ಣೆ ಸೇರಿಸಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಿ ನಂತರ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮ ಮೃದುವಾಗುತ್ತದೆ.

ಚರ್ಮಕ್ಕೆ ಹೊಳಪು ನೀಡುತ್ತದೆ

ಬ್ರೌನ್ ಶುಗರ್ ಸತ್ತ ಚರ್ಮ ಕೋಶಗಳನ್ನು ಎಫ್ಫೋಲಿಯೇಟ್ ಮಾಡುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಚರ್ಮಕ್ಕೆ ಕಾಂತಿಯುತ ಹೊಳಪನ್ನು ನೀಡುತ್ತದೆ. ತ್ವಚೆಯ ಮೇಲಿನ ಟ್ಯಾನ್ ಹೋಗಲಾಡಿಸಿ ಹೊಳೆಯುವಂತೆ ಮಾಡುತ್ತದೆ. ಟೊಮೆಟೊ ಸ್ಲೈಸ್‌ಗೆ ಬ್ರೌನ್‌ ಶುಗರ್‌ ಸೇರಿಸಿ ಅದನ್ನು ಮುಖ ಹಾಗೂ ಕುತ್ತಿಗೆ ಮೇಲೆ ಆಂಟಿ ಕ್ಲಾಕ್‌ ವೈಸ್‌ ನಿಧಾನವಾಗಿ ಮಸಾಜ್‌ ಮಾಡಿ. 5 ನಿಮಿಷಗಳ ಕಾಲ ಮಸಾಜ್‌ ಮಾಡಿ ಸ್ವಲ್ಪ ಸಮಯ ಹಾಗೇ ಬಿಡಿ. 10 ನಿಮಿಷಗಳ ನಂತರ ಒಂದೆರಡು ನಿಮಿಷ ಮತ್ತೆ ಮಸಾಜ್‌ ಮಾಡಿ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕಲೆಗಳು ಮಾಯವಾಗುತ್ತವೆ

ಚರ್ಮಕ್ಕೆ ಬ್ರೌನ್ ಶುಗರ್ ಬಳಸುವುದರಿಂದ ಚರ್ಮ ಕಾಂತಿಯುತವಾಗುತ್ತದೆ ಮತ್ತು ಕಲೆಗಳು ಕಡಿಮೆ ಆಗುತ್ತದೆ. ಬ್ರೌನ್ ಶುಗರ್‌ನಲ್ಲಿರುವ ಗ್ಲೈಕೋಲಿಕ್ ಆಸಿಡ್ ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಇದು ಮೆಲನಿನ್ ರಚನೆಯನ್ನು ಕೂಡಾ ನಿಯಂತ್ರಿಸುತ್ತದೆ. ಎಳ್ಳಿನ ಎಣ್ಣೆಗೆ ಒಂದು ಚಮಚ ಬ್ರೌನ್‌ ಶುಗರ್‌ ಸೇರಿಸಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿ ಸುಮಾರು 10 ನಿಮಿಷಗಳ ಕಾಲ ಮಸಾಜ್‌ ಮಾಡಿ. ಹೀಗೆ 15 ದಿನಗಳ ಕಾಲ ನಿಯಮಿತವಾಗಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಮೊಡವೆಗಳು ಕಡಿಮೆಯಾಗುತ್ತದೆ

ಬ್ರೌನ್ ಶುಗರ್ ತ್ವಚೆಯನ್ನು ತೇವಾಂಶದಿಂದ ಇಡುತ್ತದೆ. ಬ್ರೌನ್ ಶುಗರ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಚರ್ಮಕ್ಕೆ ಬಳಸುವುದರಿಂದ ಮೊಡವೆಗಳು ಬರದಂತೆ ತಡೆಯುತ್ತದೆ.

2 ದಿನಗಳಿಗೊಮ್ಮೆ ನೀವು ತ್ವಚೆಗೆ ಬ್ರೌನ್‌ ಶುಗರ್‌ ಬಳಸುವುದರಿಂದ ನಿಮ್ಮ ಬಹುತೇಕ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತದೆ. ಮುಖ, ಕುತ್ತಿಗೆಗೆ ಮಾತ್ರವಲ್ಲ, ಮೊಣಕೈ, ಮೊಣಕಾಲು, ಕೈಗಳು, ಪಾದಗಳಿಗೆ ಕೂಡಾ ನೀವು ಬ್ರೌನ್‌ ಶುಗರ್‌ ಬಳಸಬಹುದು. ಸೆನ್ಸಿಟಿವ್‌ ಚರ್ಮ ಇರುವವರು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಿದರೆ ಸಾಕು. ಹಾಗೇ ಚರ್ಮಕ್ಕೆ ಬ್ರೌನ್‌ ಶುಗರ್‌ ಬಳಸುವಾಗ ಮೃದುವಾಗಿ ಮಸಾಜ್‌ ಮಾಡಿ, ಇಲ್ಲದಿದ್ದರೆ ರಾಶಸ್‌ ಉಂಟಾಗಬಹುದು. ಪುರುಷರು ಕೂಡಾ ಬ್ರೌನ್‌ ಶುಗರ್‌ ಬಳಸಬಹುದು.

ವಿಭಾಗ