ಕನ್ನಡ ಸುದ್ದಿ  /  Lifestyle  /  Do Not Apply Hair Oil If You Have These Problems

Hair Care Tips: ನಿಮಗೆ ಈ ಸಮಸ್ಯೆ ಇದ್ದರೆ ಕೂದಲಿಗೆ ಎಣ್ಣೆ ಹಚ್ಚಬೇಡಿ...ಇದರಿಂದ ಪರಿಹಾರಕ್ಕಿಂತ ತೊಂದರೆಯೇ ಹೆಚ್ಚು

ಕೆಲವು ಸಂದರ್ಭಗಳಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದು ಸೂಕ್ತವಲ್ಲ. ಯಾವಾಗ ಬೇಕು ಆಗ ಕೂದಲಿಗೆ ಎಣ್ಣೆ ಹಚ್ಚಿದರೆ ಪರಿಹಾರಕ್ಕಿಂತ ಸಮಸ್ಯೆಯೇ ಹೆಚ್ಚು. ಯಾವ ಸಂದರ್ಭಗಳಲ್ಲಿ ಕೂದಲಿಗೆ ಎಣ್ಣೆ ಹಚ್ಚಬಾರದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಕೂದಲಿನ ಪೋಷಣೆ
ಕೂದಲಿನ ಪೋಷಣೆ (Pc: Unsplash̤com)

ಪ್ರತಿಯೊಬ್ಬರೂ ಕೂಡಾ ತಮಗೆ ಸೊಂಪಾಗಿ, ಕಪ್ಪಾಗಿ ಉದ್ದ ಕೂದಲು ಇರಬೇಕೆಂದು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಈ ಸಮಸ್ಯೆ ಕಾಡುತ್ತದೆ.

ಹೆಚ್ಚಿನ ಜನರು ಆಹಾರ, ಒತ್ತಡ ಮತ್ತು ಪರಿಸರ ಬದಲಾವಣೆಯಿಂದ ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂದಲ ರಕ್ಷಣೆಗಾಗಿ ಜನರು ವಿವಿಧ ಎಣ್ಣೆಗಳನ್ನು ಬಳಸುತ್ತಾರೆ. ತಲೆಗೆ ಎಣ್ಣೆ ಹಚ್ಚುವುದರಿಂದ ಕೂದಲು ಬಲವಾಗುತ್ತದೆ, ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡಿದಾಗ, ಬೇರುಗಳು ಪೋಷಣೆಯಾಗುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದು ಸೂಕ್ತವಲ್ಲ. ಯಾವಾಗ ಬೇಕು ಆಗ ಕೂದಲಿಗೆ ಎಣ್ಣೆ ಹಚ್ಚಿದರೆ ಪರಿಹಾರಕ್ಕಿಂತ ಸಮಸ್ಯೆಯೇ ಹೆಚ್ಚು. ಯಾವ ಸಂದರ್ಭಗಳಲ್ಲಿ ಕೂದಲಿಗೆ ಎಣ್ಣೆ ಹಚ್ಚಬಾರದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಎಣ್ಣೆಯುಕ್ತ ಚರ್ಮ ಇರುವವರು ಹೆಚ್ಚು ಎಣ್ಣೆ ಉಪಯೋಗಿಸಬೇಡಿ

ನಿಮ್ಮ ನೆತ್ತಿ ಎಣ್ಣೆಯುಕ್ತವಾಗಿದ್ದರೆ ಕೂದಲಿಗೆ ಹೆಚ್ಚು ಎಣ್ಣೆಯನ್ನು ಹಚ್ಚಬೇಡಿ. ಎಣ್ಣೆಯುಕ್ತ ಚರ್ಮಕ್ಕೆ ಎಣ್ಣೆಯನ್ನು ಹಚ್ಚಿದರೆ, ಸ್ಕಾಲ್ಪ್‌ನಲ್ಲಿ ಹೆಚ್ಚು ಕೊಳೆ ಸಂಗ್ರಹವಾಗುತ್ತದೆ. ಈ ಕಾರಣದಿಂದಾಗಿ, ಕೂದಲು ಮೊದಲಿಗಿಂತ ಹೆಚ್ಚು ಉದುರುತ್ತದೆ. ಆದ್ದರಿಂದ ಎಣ್ಣೆ ಚರ್ಮ ಇರುವವರು ಹೆಚ್ಚಾಗಿ ಎಣ್ಣೆ ಬಳಸಬೇಡಿ. ಮಿತವಾಗಿ ಬಳಸಿದರೆ ಉತ್ತಮ.

ಡ್ಯಾಂಡ್ರಫ್ ಇರುವಾಗ ಎಣ್ಣೆ ಹಚ್ಚಬೇಡಿ

ನೀವು ತಲೆ ಹೊಟ್ಟಿನ ಸಮಸ್ಯೆ ಎದುರಿಸುತ್ತಿದ್ದರೆ ತಲೆಗೆ ಎಣ್ಣೆ ಅನ್ವಯಿಸಬೇಡಿ. ಇಂತಹ ಸ್ಥಿತಿಯಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ.

ಗುಳ್ಳೆಗಳು ಇದ್ದಾಗ ಎಣ್ಣೆ ಹಚ್ಚುವುದು ಅಪಾಯ

ಕೆಲವೊಮ್ಮೆ ಸ್ಕಾಲ್ಪ್‌ನಲ್ಲಿ ಗುಳ್ಳೆ ಅಥವಾ ಗಾಯಗಳಿದ್ದಾಗ ಕೂದಲಿಗೆ ಎಣ್ಣೆ ಹಚ್ಚಬೇಡಿ. ಹೀಗೆ ಮಾಡುವುದರಿಂದ ಗುಳ್ಳೆಗಳು ಮತ್ತಷ್ಟು ಹರಡುತ್ತವೆ. ಬೇಗ ಗುಣವಾಗುವುದೂ ಕಷ್ಟ.

ತಲೆ ಸ್ನಾನ ಮಾಡುವಾಗ ಕೂದಲಿಗೆ ಎಣ್ಣೆ ಹಚ್ಚಬಾರದು

ಸ್ನಾನ ಮಾಡುವ ಮೊದಲು ಯಾವಾಗಲೂ ನಿಮ್ಮ ಕೂದಲಿಗೆ ಎಣ್ಣೆ ಹಚ್ಚಬೇಡಿ. ತಲೆ ಸ್ನಾನ ಮಾಡುವ ಕನಿಷ್ಠ ಒಂದು ಗಂಟೆ ಮೊದಲು ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲಿಗೆ ಪ್ರಯೋಜನವಾಗುತ್ತದೆ. ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಬೆಳಗ್ಗೆ ಸ್ನಾನ ಮಾಡುವುದು ಉತ್ತಮ.

ಮಳೆಗಾಲದಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆ. ವಾತಾವರಣದಲ್ಲಿನ ತೇವಾಂಶದ ಕಾರಣದಿಂದಾಗಿ ಕೂದಲು ಉದುರುವುದು, ಒರಟಾಗುವುದ ಸೇರಿದಂತೆ ನಾನಾ ಸಮಸ್ಯೆ ತಂದೊಡ್ಡುತ್ತದೆ. ಆದ್ದರಿಂದ ಈ ಋತುವಿನಲ್ಲಿ ಕೂದಲಿನ ಆರೈಕೆಯು ಬಹಳ ಮುಖ್ಯವಾಗಿದೆ. ಮಳೆಗಾಲದಲ್ಲಿ ಆಗಾಗ್ಗೆ ತಲೆ ಸ್ನಾನ ಮಾಡುವುದನ್ನು ತಪ್ಪಿಸಿ, ಹಾಗೆ ಮಾಡುವುದರಿಂದ ನೆತ್ತಿ ತೇವ ಮತ್ತು ನಿರ್ಜೀವವಾಗುತ್ತದೆ. ಇದರಿಂದ ಕೂದಲು ಹೆಚ್ಚು ಉದುರುತ್ತದೆ.

ವಿಭಾಗ