ಕನ್ನಡ ಸುದ್ದಿ  /  Lifestyle  /  Follow These Natural Tips To Get Thick And Black Hair

Tips for Thick Black Hair: ಕಪ್ಪಾದ, ದಟ್ಟವಾದ ಕೂದಲಿಗಾಗಿ ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ

ಮೊದಲೆಲ್ಲಾ ಜನರು ಕೂದಲನ್ನು ತೊಳೆಯಲು ಸೀಗೆಕಾಯಿ ಬಳಸುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಸಮಸ್ಯೆ ಹೆಚ್ಚಾಗುವುದೇ ಹೊರತು ಬಗೆಹರಿಯುವುದಿಲ್ಲ. ಆದ್ದರಿಂದ ಹಳೆಯದನ್ನೇ ಮರುಬಳಕೆ ಮಾಡುವುದು ಉತ್ತಮ.

ಕೂದಲಿನ ಆರೈಕೆ
ಕೂದಲಿನ ಆರೈಕೆ (PC: Freepik)

ಕೂದಲು ತೆಳ್ಳಗೆ ಮತ್ತು ದುರ್ಬಲವಾಗಿದ್ದಾಗ ಚಿಂತೆ ಕಾಡುವುದು ಸಹಜ. ಹೀಗೆ ಚಿಂತೆ ಮಾಡುವುದರಿಂದ ಮತ್ತಷ್ಟು ಕೂದಲು ಉದುರುತ್ತದೆ. ಕವಲೊಡೆದ ಕೂದಲು ಕೂಡಾ ನಾನಾ ಸಮಸ್ಯೆ ತಂದೊಡ್ಡುತ್ತದೆ. ಈ ಸ್ಥಿತಿಯನ್ನು ನಿವಾರಿಸಲು ಅನೇಕ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುತ್ತಾರೆ, ಹಾಗೇ ಕಪ್ಪು ಕೂದಲನ್ನು ಪಡೆಯಲು ಏನೆಲ್ಲಾ ದುಬಾರಿ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಅದರೆ ಇವೆಲ್ಲಾ ತಾತ್ಕಾಲಿಕ ಪರಿಹಾರವಷ್ಟೇ.

ನಿಮ್ಮ ಕೂದಲು ತೆಳ್ಳಗಾಗುತ್ತಿದೆ ಎಂದು ಯೋಚಿಸುವ ಬದಲಿಗೆ ನೈಸರ್ಗಿಕ ವಿಧಾನದ ಮೂಲಕ ನಿಮ್ಮ ಕೂದಲನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಯೋಚಿಸಿ. ದಪ್ಪ ಕಪ್ಪು ಕೂದಲನ್ನು ಪಡೆಯಲು ನಿಮಗಾಗಿ ಇಲ್ಲಿ ಕೆಲವು ನೈಸರ್ಗಿಕ ಸಲಹೆಗಳನ್ನು ನೀಡಲಾಗಿದೆ. ಸ್ವಲ್ಪ ದಿನಗಳವರೆಗೆ ಇವನ್ನು ನಿಮ್ಮ ಕೂದಲಿಗೆ ಅನ್ವಯಿಸಿ ನೋಡಿ, ಖಂಡಿತ ನೀವು ಬಯಸಿದ ಫಲಿತಾಂಶ ನಿಮಗೆ ದೊರೆಯುತ್ತದೆ.

ಸೀಗೆ ಕಾಯಿ

ಮೊದಲೆಲ್ಲಾ ಜನರು ಕೂದಲನ್ನು ತೊಳೆಯಲು ಸೀಗೆಕಾಯಿ ಬಳಸುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಸಮಸ್ಯೆ ಹೆಚ್ಚಾಗುವುದೇ ಹೊರತು ಬಗೆಹರಿಯುವುದಿಲ್ಲ. ಆದ್ದರಿಂದ ಹಳೆಯದನ್ನೇ ಮರುಬಳಕೆ ಮಾಡುವುದು ಉತ್ತಮ. ಆಮ್ಲಾ, ರೀಟಾ ಮತ್ತು ಶಿಕಾಕಾಯಿಯಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಹೊಳೆಯುತ್ತದೆ ಮತ್ತು ಮೃದುವಾಗಿರುತ್ತದೆ. ಆಮ್ಲಾ, ರೀಟಾ ಮತ್ತು ಶಿಕಾಕಾಯಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನಂತರ ಅದನ್ನು ಗ್ರೈಂಡ್‌ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಈ ಹರ್ಬಲ್ ಪೇಸ್ಟ್ ಕೂದಲಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ. ಆಗಾಗ್ಗೆ ಬಳಸುವುದರಿಂದ ಕೂದಲು ದಪ್ಪವಾಗಿರುತ್ತದೆ ಮತ್ತು ಬಲವಾಗಿರುತ್ತದೆ.

ಬ್ರಾಹ್ಮಿ

ಬ್ರಾಹ್ಮಿ ಒಂದು ಆಯುರ್ವೇದ ಮೂಲಿಕೆಯಾಗಿದ್ದು ಇದನ್ನು ವಿವಿಧ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಈ ಮೂಲಿಕೆಯ ಗುಣಲಕ್ಷಣಗಳು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ, ಅತಿಯಾದ ಒತ್ತಡದಿಂದ ಕೂದಲು ಉದುರಿದರೆ, ಬ್ರಾಹ್ಮಿಯನ್ನು ಕೂದಲಿಗೆ ಹಚ್ಚಿ. ಇದು ತಲೆಹೊಟ್ಟು, ತುರಿಕೆ ಮತ್ತು ಕವಲು ಒಡೆಯುವಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಬ್ರಾಹ್ಮಿ ಎಲೆಗಳು, ಬೇವಿನ ಎಲೆ ಹಾಗೂ ಆಮ್ಲಾವನ್ನು ಜೊತೆ ಶೇರಿಸಿ ಗ್ರೈಂಡ್‌ ಮಾಡಿ. ಅಥವಾ ಇದನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಶೇಖರಿಸಿ ಇಟ್ಟು ಬಳಸಬಹುದು. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಸುಮಾರು ಒಂದು ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಗಮನಿಸಬಹುದು.

ಲೋಳೆಸರ

ಅಲೋವೆರಾ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ವಿಶೇಷವಾಗಿ ಇದರ ಗುಣಲಕ್ಷಣಗಳು ಚರ್ಮದ ಸೌಂದರ್ಯ ಮತ್ತು ಕೂದಲಿನ ಆರೈಕೆಗೆ ಹೆಸರುವಾಸಿಯಾಗಿದೆ. ಅಲೋವೆರಾ ಕೂದಲಿಗೆ ಮಾಯಿಶ್ಚರೈಸ್ ಮಾಡಿ ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ. ನೀವು ಒಣ, ತೆಳು ಕೂದಲು ಹೊಂದಿದ್ದರೆ ಕೂದಲಿನ ಬೇರುಗಳಿಗೆ ಅಲೋವೆರಾ ಜೆಲ್ ಹಚ್ಚಿ ಒಂದು ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಕೂದಲನ್ನು ಬಲವಾಗಿ ಮತ್ತು ದಪ್ಪವಾಗಿಸುತ್ತದೆ.

ಆಮ್ಲಾ ಕರಿಬೇವಿನ ಪ್ಯಾಕ್‌

ಮಾರುಕಟ್ಟೆಯಲ್ಲಿ ನೆಲ್ಲಿಕಾಯಿ ಪುಡಿ ಹಾಗೂ ಕರಿಬೇವಿನ ಪುಡಿ ದೊರೆಯುತ್ತದೆ. ಉತ್ತಮ ಬ್ರಾಂಡ್‌ ಖರೀದಿಸಿ, ಎರಡನ್ನೂ ಸಮ ಪ್ರಮಾಣದಲ್ಲಿ ಸ್ವಲ್ಪ ನೀರಿನಲ್ಲಿ ಮಿಕ್ಸ್‌ ಮಾಡಿ ಬುಡಕ್ಕೆ ಹಚ್ಚಿ, 1 ಗಂಟೆ ನಂತರ ತೊಳೆಯಿರಿ, ಆಮ್ಲಾ ಹಾಗೂ ಕರಿಬೇವಿನಲ್ಲಿ ಕೂದಲನ್ನು ಕಪ್ಪುಗೊಳಿಸುವ ನೈಸರ್ಗಿಕ ಗುಣಗಳಿವೆ. ಹೀಗೆ ವಾರಕ್ಕೆ 2 ಬಾರಿ ಪುನರಾವರ್ತಿಸಿದರೆ ಕೆಲವೇ ದಿನಗಳಲ್ಲಿ ನಿಮ್ಮ ಕೂದಲಿನ ಆರೋಗ್ಯದಲ್ಲಿ ಬದಲಾವಣೆಯನ್ನು ನೋಡಬಹುದು.

ಮೆಂತ್ಯ ದಾಸವಾಳ ಭೃಂಗರಾಜ ಪ್ಯಾಕ್‌

ಮೆಂತ್ಯ ಕಾಳನ್ನು ಪುಡಿ ಮಾಡಿಟ್ಟುಕೊಳ್ಳಿ, ಮಾರುಕಟ್ಟೆಯಲ್ಲಿ ಉತ್ತಮ ಬ್ರಾಂಡ್‌ನ ಹೈಬಿಸ್‌ಕಸ್‌ ( ದಾಸವಾಳ) ಪುಡಿ ದೊರೆಯುತ್ತದೆ. ಅಥವಾ ಸಮಯ ಇದ್ದರೆ ನೀವೇ ಹೂಗಳನ್ನು ಒಣಗಿಸಿ ಪುಡಿ ಮಾಡಬಹುದು. ಜೊತೆಗೆ ಬೃಂಗರಾಜ ಪುಡಿಯನ್ನು ಖರೀದಿಸಿ, ಈ ಮೂರೂ ಪುಡಿಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಪೇಸ್ಟ್‌ ತಯಾರಿಸಿಕೊಳ್ಳಿ, (ಪೇಸ್ಟ್‌ ಬಹಳ ಗಟ್ಟಿ ಅಥವಾ ತೆಳುವಾಗಿ ಇರಬಾರದು). ಈ ಪೇಸ್ಟನ್ನು ಬುಡ ಹಾಗೂ ಕೂದಲಿನ ಸುತ್ತಲೂ ಹಚ್ಚಿ, ಒಂದು ಗಂಟೆ ನಂತರ ಶ್ಯಾಂಪೂ ಬಳಸದೆ ತೊಳೆಯಿರಿ. ಒಂದು ವೇಳೆ ಶ್ಯಾಂಪೂ ಬಳಸಬೇಕಾದರೆ ಯಾವುದಾದರೂ ಹರ್ಬಲ್‌ ಶ್ಯಾಂಪೂ ಬಳಸಿ, ಅದಕ್ಕಿಂತ ಸೀಗೆಕಾಯಿ ಬಳಸಿದರೆ ಉತ್ತಮ.

ಇಲ್ಲಿ ತಿಳಿಸಿದ ಟಿಪ್ಸ್‌ಗಳಲ್ಲಿ ಕೆಲವು ದಿನಗಳ ಕಾಲ ನಿಯಮಿತವಾಗಿ ಯಾವುದಾದರೊಂದನ್ನು ತಪ್ಪದೆ ಫಾಲೋ ಮಾಡಿ, ಖಂಡಿತ ನಿಮಗೆ ಫಲಿತಾಂಶ ದೊರೆಯುತ್ತದೆ. ಇದರೊಂದಿಗೆ ಕೂದಲಿಗೆ ಹರ್ಬಲ್‌ ಎಣ್ಣೆಗಳು ಅಥವಾ ಮನೆಯಲ್ಲಿ ನೀವೇ ತಯಾರಿಸಿದ ಎಣ್ಣೆ ಬಳಸುವುದು ಉತ್ತಮ. ಹಾಗೇ ಕೂದಲಿನ ಆರೋಗ್ಯ ಹೆಚ್ಚಿಸುವ ಆಹಾರಗಳನ್ನು ಸೇವಿಸಿ.

ವಿಭಾಗ