ಕನ್ನಡ ಸುದ್ದಿ  /  Lifestyle  /  Food News Capsicum Gravy Recipe In Kannada How To Make Capsicum Gravy Capsicum Masala Recipe Mgb

Capsicum Gravy: ಚಪಾತಿ, ರೊಟ್ಟಿ, ಪೂರಿಗೆ ಬೆಸ್ಟ್​ ಕಾಂಬಿನೇಷನ್​ ಕ್ಯಾಪ್ಸಿಕಂ ಗ್ರೇವಿ: ಇಲ್ಲಿದೆ ರೆಸಿಪಿ

Capsicum Gravy Recipe in Kannada: ಚಪಾತಿ, ರೊಟ್ಟಿ ಅಥವಾ ಪೂರಿಯನ್ನು ಮಾಡಿದಾಗ ಕ್ಯಾಪ್ಸಿಕಂ ಗ್ರೇವಿ ಮಾಡಿ ಅದರ ಜೊತೆ ಸವಿಯಿರಿ. ಆಹಾ! ಎಂಥಾ ರುಚಿ ಅಂತ ಚಪ್ಪರಿಸಿಕೊಂಡು ತಿಂತೀರ. ಇಲ್ಲಿದೆ ಕ್ಯಾಪ್ಸಿಕಂ ಗ್ರೇವಿ ರೆಸಿಪಿ..

 ಕ್ಯಾಪ್ಸಿಕಂ ಗ್ರೇವಿ
ಕ್ಯಾಪ್ಸಿಕಂ ಗ್ರೇವಿ

ನಿಮ್ಮನೆಲಿ ಚಪಾತಿ, ರೊಟ್ಟಿ ಮತ್ತು ಪೂರಿಯನ್ನು ಹೆಚ್ಚಾಗಿ ಮಾಡ್ತೀರಾ? ಅದಕ್ಕೆ ನೆಂಚಿಕೊಳ್ಳಲು ಚಟ್ನಿ, ಸಾಗು ಅಥವಾ ತರಕಾರಿಗಳ ಪಲ್ಯ ಮಾಡ್ತಾರಾ? ಇವುಗಳ ಕಾಂಬಿನೇಷನ್​ ತಿಂದು ಬೋರ್​ ಆಗಿದ್ರೆ ನೀವೊಮ್ಮೆ ಕ್ಯಾಪ್ಸಿಕಂ ಗ್ರೇವಿ ಟ್ರೈ ಮಾಡಿ. ದೊಣ್ಣೆ ಮೆಣಸಿನಕಾಯಿ ಖಾರ ಕಡಿಮೆ ಇರುತ್ತೆ, ಆದ್ರೆ ಇದನ್ನ ಅಡುಗೆಗೆ ಬಳಸಿದ್ರೆ ರುಚಿ ಜಾಸ್ತಿ ಇರುತ್ತೆ. ನಿಮ್ಮನೆಲಿ ಚಪಾತಿ, ರೊಟ್ಟಿ ಅಥವಾ ಪೂರಿಯನ್ನು ಮಾಡಿದಾಗ ಕ್ಯಾಪ್ಸಿಕಂ ಗ್ರೇವಿ ಮಾಡಿ ಅದರ ಜೊತೆ ಸವಿಯಿರಿ. ಆಹಾ! ಎಂಥಾ ರುಚಿ ಅಂತ ಚಪ್ಪರಿಸಿಕೊಂಡು ತಿಂತೀರ. ನಾವಿಲ್ಲಿ ನಿಮಗೆ ಕ್ಯಾಪ್ಸಿಕಂ ಗ್ರೇವಿ ಮಾಡುವ ವಿಧಾನವನ್ನು ಹೇಳಿಕೊಡ್ತೀವಿ.

ಕ್ಯಾಪ್ಸಿಕಂ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು

ದೊಣ್ಣೆ ಮೆಣಸಿನಕಾಯಿ

ಅಡುಗೆ ಎಣ್ಣೆ

ಕಸ್ತೂರಿ ಮೇತಿ

ಸೋಂಪಿನ ಕಾಳು

ಈರುಳ್ಳಿ

ಶುಂಠಿ

ಬೆಳ್ಳುಳ್ಳಿ

ಉಪ್ಪು

ಖಾರದ ಪುಡಿ

ದನಿಯಾ ಪುಡಿ

ಗರಂ ಮಸಾಲಾ

ಅರಿಶಿನ ಪುಡಿ

ಟೊಮೆಟೊ ಹಣ್ಣು

ಕ್ಯಾಪ್ಸಿಕಂ ಗ್ರೇವಿ ಮಾಡುವ ವಿಧಾನ

ಒಂದು ಪಾತ್ರೆಯನ್ನು ಗ್ಯಾಸ್​ ಮೇಲೆ ಇಟ್ಟು ಅದಕ್ಕೆ 4 ಟೇಬಲ್​ ಸ್ಪೂನ್​ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆಯೇ ಸ್ವಲ್ಪ ಕಸ್ತೂರಿ ಮೇತಿ, ಸ್ವಲ್ಪ ಸೋಂಪಿನ ಕಾಳು, ಚಿಕ್ಕದಾಗಿ ಕತ್ತರಿಸಿದ ಎರಡು ಈರುಳ್ಳಿ ಹಾಕಿ. ಎರಡು ನಿಮಿಷಗಳ ಕಾಲ ಮೀಡಿಯಂ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.

ನಂತರ ಅದಕ್ಕೆ ಒಂದು ಚಮಚ ಚೆನ್ನಾಗಿ ಜಜ್ಜಿದ ಶುಂಠಿ ಹಾಗೂ ಬೆಳ್ಳುಳ್ಳಿ ಸೇರಿಸಿ 30 ಸೆಕೆಂಡ್​​ಗಳ ಕಾಲ ಅದನ್ನು ಕಲಕುತ್ತಿರಿ. ಅದರ ಹಸಿ ವಾಸನೆ ಹೋಗಬೇಕು. ಬೇಕಾದರೆ ನೀವು ಶುಂಠಿ-ಬೆಳ್ಳುಳ್ಳಿ ಪೇಸ್ಟ್​ ಬಳಸಬಹುದು. ನಂತರ ಕತ್ತರಿಸಿದ 4 ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. 3 ನಿಮಿಷಗಳ ಕಾಲ ಮೀಡಿಯಂ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಒಂದು ಟೇಬಲ್​ ಸ್ಪೂನ್​ ಖಾರದ ಪುಡಿ, ಒಂದು ಟೇಬಲ್​ ದನಿಯಾ ಪುಡಿ, ಒಂದು ಟೀ ಸ್ಪೂನ್​ ಗರಂ ಮಸಾಲಾ, ಚಿಟಿಕೆ ಅರಿಶಿನ ಪುಡಿ ಹಾಕಿ. ಈ ಎಲ್ಲಾ ಮಸಾಲಾ ಪದಾರ್ಥಗಳೂ ಕ್ಯಾಪ್ಸಿಕಂಗೆ ಚೆನ್ನಾಗಿ ಹಿಡಿಯುವಂತೆ ಕಲಸಿ. ಈಗ ನೀರು ಬೆರೆಸದೆ ರುಬ್ಬಿದ 3-4 ಟೊಮೆಟೊ ಹಣ್ಣಿನ ಪೇಸ್ಟ್​ ಅನ್ನು ಸೇರಿಸಿ. ಸಾಧ್ಯವಾದಷ್ಟು ಹುಳಿ ಕಡಿಮೆ ಇರುವ ಆ್ಯಪಲ್​ ಟೊಮೆಟೊ ಬಳಸಿ. ಇವೆಲ್ಲವನ್ನೂ ಚೆನ್ನಾಗಿ ಕಲಸಿ 10-15 ನಿಮಿಷಗಳ ಕಾಲ ಬೇಯಿಸಿದರೆ ಕ್ಯಾಪ್ಸಿಕಂ ಗ್ರೇವಿ ರೆಡಿ. ಕುಕ್ಕರ್​ನಲ್ಲಿ ಮಾಡುವವರು ಒಂದು ವಿಸಿಲ್​ ಹೊಡೆಸಿದರೆ ಸಾಕು.