ಕನ್ನಡ ಸುದ್ದಿ  /  ಜೀವನಶೈಲಿ  /  Breakfast: ಈ ಕಾರಣಗಳಿಂದಾಗಿ ನೀವು ಬೆಳಗ್ಗಿನ ಉಪಾಹಾರ ತಿನ್ನಲೇಬೇಕು; ನಾಳೆಯಿಂದ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡಲೇಬೇಡಿ

Breakfast: ಈ ಕಾರಣಗಳಿಂದಾಗಿ ನೀವು ಬೆಳಗ್ಗಿನ ಉಪಾಹಾರ ತಿನ್ನಲೇಬೇಕು; ನಾಳೆಯಿಂದ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡಲೇಬೇಡಿ

ಅನೇಕ ಜನರು ಬೆಳಗ್ಗಿನ ಉಪಾಹಾರವನ್ನು ಸ್ಕಿಪ್‌ ಮಾಡುತ್ತಾರೆ. ತೂಕ ಇಳಿಸುವ ಉದ್ದೇಶದಿಂದಲೂ ಅನೇಕ ಜನರು ಹೀಗೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಕಡಿಮೆ ಕ್ಯಾಲರಿಗಳು ದೇಹಕ್ಕೆ ಹೋಗುತ್ತವೆ ಎಂದು ಅವರು ಭಾವಿಸುತ್ತಾರೆ. ಆದರೆ, ಹೀಗೆ ಮಾಡುವುದು ತಪ್ಪು. ಇದು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Unsplash)

ಈಗಿನ ಜೀವನಶೈಲಿಯೇ ಹಾಗೆ. ಯಾವುದಕ್ಕೂ ನಮ್ಮಲ್ಲಿ ಸಮಯವಿಲ್ಲ. ವಿಪರೀತ ಮತ್ತು ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ, ಹೆಚ್ಚಿನವರು ದಿನನಿತ್ಯ ಮಾಡಬೇಕಾದ ಕೆಲ ಪ್ರಮುಖ ದಿನಚರಿಗಳನ್ನೇ ಮರೆಯುತ್ತಾರೆ. ನಾವು ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಸಂಪಾದಿಸುವುದೇ ಹೊಟ್ಟೆ ಪಾಡಿಗಾಗಿ. ಆದರೆ, ಅದೇ ಕೆಲಸ ಅಥವಾ ಇನ್ನಿತರ ಯೋಜಿತ ಕಾರ್ಯಗಳಿಂದಾಗಿ ನಾವು ಹೊಟ್ಟೆಗೆ ಸರಿಯಾದ ಸಮಯಕ್ಕೆ ಸೇರಬೇಕಾದ ಆಹಾರವನ್ನೇ ತ್ಯಜಿಸುತ್ತೇವೆ.

ಅನೇಕ ಜನರು ಬೆಳಗ್ಗಿನ ಉಪಾಹಾರವನ್ನು ಸ್ಕಿಪ್‌ ಮಾಡುತ್ತಾರೆ. ತೂಕ ಇಳಿಸುವ ಉದ್ದೇಶದಿಂದಲೂ ಅನೇಕ ಜನರು ಹೀಗೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಕಡಿಮೆ ಕ್ಯಾಲರಿಗಳು ದೇಹಕ್ಕೆ ಹೋಗುತ್ತವೆ ಎಂದು ಅವರು ಭಾವಿಸುತ್ತಾರೆ. ಆದರೆ, ಹೀಗೆ ಮಾಡುವುದು ತಪ್ಪು. ಇದು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ.

ಅನೇಕ ಸಂಶೋಧನೆಗಳ ಪ್ರಕಾರ, ಉಪಾಹಾರವು ದಿನದ ಮೊದಲ ಅತ್ಯಗತ್ಯ ಊಟವಾಗಿದೆ. ರಾತ್ರಿಯ ಆಹಾರ ಸೇವನೆಯ ಬಳಿಕ ನಮ್ಮ ದೇಹ ನಿದ್ರೆಯ ಮೂಲಕ ವಿಶ್ರಾಂತಿ ಪಡೆಯುತ್ತದೆ. ಈ ಸುದೀರ್ಘ ಅವಧಿಯು ಒಂದು ರೀತಿಯ ಉಪವಾಸದಂತೆ. ಹೀಗಾಗಿ ಸುದೀರ್ಘ ಸಮಯದ ಉಪವಾಸವನ್ನು ಮುರಿಯುವುದೇ, ಅರ್ಥಾತ್‌ ಬೆಳಗ್ಗೆ ಆಹಾರ ಸೇವಿಸುವುದೇ ಬ್ರೇಕ್‌ಫಾಸ್ಟ್‌. ಇದೇ ಕಾರಣದಿಂದ ಬೆಳಗ್ಗಿನ ಉಪಾಹಾರಕ್ಕೆ ಬ್ರೇಕ್‌ಫಾಸ್ಟ್‌ ಎಂದು ಹೇಳುವುದು. ಅಂದರೆ, ಫಾಸ್ಟ್‌(ಉಪವಾಸ ಅಥವಾ ಫಾಸ್ಟಿಂಗ್‌) ಅನ್ನು ಬ್ರೇಕ್‌(ಮುರಿಯುವುದು ಅಥವಾ ಬಿಡುವುದು) ಮಾಡುವುದು ಎಂದರ್ಥ.

ಹೀಗಾಗಿ, ಬೆಳಗ್ಗಿನ ಉಪಾಹಾರವನ್ನು ಪ್ರತಿನಿತ್ಯವೂ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆರಂಭದಲ್ಲಿ ಇದರ ಪರಿಣಾಮ ಗೊತ್ತಾಗದಿದ್ದರೂ, ಕಾಲಾಂತರದಲ್ಲಿ ಇದರ ಹಾನಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ನಂತರ ಹೃದಯದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು.

ಪ್ರತಿನಿತ್ಯ ಉಪಹಾರವನ್ನು ತ್ಯಜಿಸಿದರೆ ಏನಾಗುತ್ತದೆ?

ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದ ಹೃದಯವು ದುರ್ಬಲಗೊಳ್ಳುತ್ತದೆ.

ಆರೋಗ್ಯ ತಜ್ಞರ ಪ್ರಕಾರ, ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು.

ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದ ಹೃದ್ರೋಗದ ಅಪಾಯ ಶೇಕಡಾ 27ರಷ್ಟು ಹೆಚ್ಚಾಗುತ್ತದೆ.

ಅಧಿಕ ರಕ್ತದೊತ್ತಡ ಸಮಸ್ಯೆಗಳು ಉಂಟಾಗಬಹುದು.

ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದ ಹೃದಯಾಘಾತದ ಸಾಧ್ಯತೆ ಹೆಚ್ಚಬಹುದು.

ಉಪಹಾರವನ್ನು ಬಿಟ್ಟುಬಿಡುವ ಇತರ ಅನಾನುಕೂಲಗಳು

ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದ ಟೈಪ್ 2 ಮಧುಮೇಹದ ಅಪಾಯ ಹೆಚ್ಚಾಗಬಹುದು.

ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದ ಬೊಜ್ಜು ಉಂಟಾಗುತ್ತದೆ.

ಮುಂಜಾನೆಯ ಉಪಾಹಾರ ತ್ಯಜಿಸುವುದರಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮೈಗ್ರೇನ್ ಸಮಸ್ಯೆ ಹೆಚ್ಚಬಹುದು.

ಕೂದಲು ಉದುರುವುದರ ಜೊತೆಗೆ ಜೀರ್ಣಕ್ರಿಯೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಅಸಿಡಿಟಿ ಸಮಸ್ಯೆ ಹೆಚ್ಚಾಗಬಹುದು. ಆ ಬಳಿಕ ಹಸಿವು ಕಡಿಮೆಯಾಗುವ ಸಂಭವವಿರುತ್ತದೆ.

ಬೆಳಗಿನ ಉಪಾಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಎಲ್ಲಾ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಬಹುದು. ಅಲ್ಲದೆ ನಿಮ್ಮ ಹೃದಯ ದುರ್ಬಲವಾಗುವುದಿಲ್ಲ. ಯವ್ವನದಲ್ಲಿ ಇಂತಹ ಯಾವುದೇ ಸಮಸ್ಯೆಗಳು ಗೊತ್ತಾಗದಿದ್ದರೂ, ಕ್ರಮೇಣ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ವಿಭಾಗ