Sooji Dahivade Recipe: ಉದ್ದಿನ ಬೇಳೆ ರುಬ್ಬಿ ವಡೆ ಮಾಡುವುದು ಕಷ್ಟವಾದ್ರೆ, ಸೂಜಿ ದಹಿ ವಡೆ ರೆಸಿಪಿ ಟ್ರೈ ಮಾಡಿ.. ಮಾಡುವ ವಿಧಾನ ಹೀಗಿದೆ..
ಕನ್ನಡ ಸುದ್ದಿ  /  ಜೀವನಶೈಲಿ  /  Sooji Dahivade Recipe: ಉದ್ದಿನ ಬೇಳೆ ರುಬ್ಬಿ ವಡೆ ಮಾಡುವುದು ಕಷ್ಟವಾದ್ರೆ, ಸೂಜಿ ದಹಿ ವಡೆ ರೆಸಿಪಿ ಟ್ರೈ ಮಾಡಿ.. ಮಾಡುವ ವಿಧಾನ ಹೀಗಿದೆ..

Sooji Dahivade Recipe: ಉದ್ದಿನ ಬೇಳೆ ರುಬ್ಬಿ ವಡೆ ಮಾಡುವುದು ಕಷ್ಟವಾದ್ರೆ, ಸೂಜಿ ದಹಿ ವಡೆ ರೆಸಿಪಿ ಟ್ರೈ ಮಾಡಿ.. ಮಾಡುವ ವಿಧಾನ ಹೀಗಿದೆ..

ಉದ್ದಿನ ಬೇಳೆಯನ್ನು ರುಬ್ಬಿ ವಡೆ ಮಾಡುವುದು ಕಷ್ಟ ಅನಿಸಿದರೆ, ಕೇವಲ ಈ ರವೆಯನ್ನಷ್ಟೇ ಬಳಸಿ ವಡೆ ಮಾಡಬಹುದು. ಆ ಫಟಾಫಟ್‌ ರೆಸಿಪಿ ಮಾಡುವ ವಿಧಾನ ಇಲ್ಲಿದೆ ನೋಡಿ..

<p>ಉದ್ದಿನ ಬೇಳೆ ರುಬ್ಬಿ ವಡೆ ಮಾಡುವುದು ಕಷ್ಟವಾದ್ರೆ, ಸೂಜಿ ದಹಿ ವಡೆ ರೆಸಿಪಿ ಟ್ರೈ ಮಾಡಿ.. ಮಾಡುವ ವಿಧಾನ ಹೀಗಿದೆ..</p>
ಉದ್ದಿನ ಬೇಳೆ ರುಬ್ಬಿ ವಡೆ ಮಾಡುವುದು ಕಷ್ಟವಾದ್ರೆ, ಸೂಜಿ ದಹಿ ವಡೆ ರೆಸಿಪಿ ಟ್ರೈ ಮಾಡಿ.. ಮಾಡುವ ವಿಧಾನ ಹೀಗಿದೆ..

ವಡೆ ಎಲ್ಲರ ಅಚ್ಚುಮೆಚ್ಚಿನ ಖಾದ್ಯ. ಅದರಲ್ಲೂ ದಹಿ ವಡೆ ಅಂದ್ರೆ ಕೇಳಬೇಕೆ? ಇದೀಗ ಹಬ್ಬದ ಸೀಸನ್‌ ಬೇರೆ. ಮನೆಗೆ ನೆಂಟರಿಷ್ಟರ ಆಗಮನವಾಗಿರುತ್ತದೆ. ನಿತ್ಯ ಸಂಜೆ ಏನಾದರೊಂದರು ತಿನಿಸು ಮಾಡಲೇಬೇಕು. ಅದರಲ್ಲೂ ಮಕ್ಕಳಿದ್ದರೆ ಅವರಿಗೂ ಇಷ್ಟವಾಗುವ ಖಾದ್ಯ ಮಾಡಬೇಕು. ಹೀಗಿರುವಾಗ ನೀವು ದಹಿ ವಡೆಯನ್ನೇಕೆ ಟ್ರೈ ಮಾಡಬಾರದು. ವಡೆ ಅಂದ ತಕ್ಷಣ ಅದಕ್ಕೆ ಮುಂಚಿತವಾಗಿಯೇ ತಯಾರಿ ಬೇಕು ಎಂಬುದು ನಿಮ್ಮ ಮನದಲ್ಲಿದೆ. ಆದರೆ, ಉದ್ದಿನ ಬೇಳೆಯನ್ನು ರುಬ್ಬಿ ದಹಿ ವಡೆ ಮಾಡುವುದು ಕಷ್ಟ ಅನಿಸಿದರೆ, ಕೇವಲ ರವೆಯನ್ನಷ್ಟೇ ಬಳಸಿ ವಡೆ ಮಾಡಬಹುದು. ಆ ಫಟಾಫಟ್‌ ರೆಸಿಪಿ ಮಾಡುವ ವಿಧಾನ ಇಲ್ಲಿದೆ ನೋಡಿ..

ಬೇಕಾಗುವ ಸಾಮಾಗ್ರಿಗಳು..

ಬಾಂಬೆ ರವೆ (ಸೂಜಿ ರವೆ) - ಒಂದು ಕಪ್

ಮೊಸರು - ಒಂದು ಕಪ್

ಹಸಿರು ಮೆಣಸಿನಕಾಯಿ - ಸಣ್ಣದಾಗಿ ಹೆಚ್ಚಿದ

ಅಡಿಗೆ ಸೋಡಾ

ಎಣ್ಣೆ

ಶುಂಠಿ

ಉಪ್ಪು

ಹುರಿದ ಜೀರಿಗೆ

ಕೆಂಪು ಮೆಣಸಿನಕಾಯಿ

ಹಸಿರು ಮೆಣಸಿನಕಾಯಿ ಪೇಸ್ಟ್

ಕೆಂಪು ಸಾಸ್

ಶೇವ್‌

ದಾಳಿಂಬೆ (ನಿಮಗೆ ಬೇಕಾದಲ್ಲಿ)

ಮಾಡುವ ವಿಧಾನ..

ಮೊದಲು ರವೆ ಮತ್ತು ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಉಪ್ಪು, ಹಸಿಮೆಣಸಿನಕಾಯಿ ಮತ್ತು ತುರಿದ ಶುಂಠಿಯನ್ನು ಸೇರಿಸಿ. ಹಿಟ್ಟನ್ನು ಚನ್ನಾಗಿ ಮಿಶ್ರಣ ಮಾಡಿ ಮತ್ತು ಸ್ವಲ್ಪ ಸಮಯದವರೆಗೆ ಮುಚ್ಚಿಡಿ.

ಹಿಟ್ಟು ತುಂಬಾ ತೆಳುವಾಗದಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ಆಮೇಲೆ ಅದನ್ನು ವಡೆಯನ್ನಾಗಿ ಮಾಡಲು ಕಷ್ಟವಾಗುತ್ತದೆ. ಈಗ ಹಿಟ್ಟಿಗೆ ಅಡುಗೆ ಸೋಡಾ ಸೇರಿಸಿ ಮತ್ತು ಬೆರೆಸಿ ಮಿಶ್ರಣ ಮಾಡಿ.

ಆ ಹಿಟ್ಟನ್ನು ಒಂದು ಬೌಲ್‌ನಲ್ಲಿ ಹಾಕಿ, ಬಳಿಕ ಒದ್ದೆ ಬಟ್ಟೆಯನ್ನು ಹೋಳಿಗೆ ಮಣೆ ಮೇಲೆ ಹಾಸಿ, ಅದಕ್ಕೆ ಚೂರು ನೀರು ಚಿಮುಕಿಸಿ ನಿಮಗೆ ಬೇಕಾದ ಸೈಜ್‌ಗಳಲ್ಲಿ ವಡೆ ಸಿದ್ಧಮಾಡಿಕೊಳ್ಳಿ.

ಮತ್ತೊಂದೆಡೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಸಿದ್ಧಪಡಿಸಿದ ವಡೆಯನ್ನು ಮಧ್ಯಮ ಉರಿಯಲ್ಲಿ ಕರೆಯಿರಿ. ಬಳಿಕ ಮತ್ತೊಂದು ಬೌಲ್‌ಗೆ ಕರಿದ ವಡೆಯನ್ನು ತೆಗೆಯಿರಿ.

ಸಿದ್ಧವಾದ ವಡೆಗಳನ್ನು ಈ ರೀತಿ ಅಲಂಕರಿಸಿ

ಒಂದು ತಟ್ಟೆಯಲ್ಲಿ ವಡೆಗಳನ್ನು ಹೊಂದಿಸಿ. ಅವುಗಳ ಮೇಲೆ ಗಟ್ಟಿ ಮೊಸರನ್ನು ಹಾಕಿ. ಮೊದರಿನ ಜತೆಗೆ ಗ್ರೀನ್‌ ಚಟ್ನಿ, ಹುಣಸೆಣ್ಣು, ಬೆಲ್ಲದಿಂದ ಮಾಡಿದ ಸಾಸ್‌, ಹುರಿದ ಜೀರಿಗೆಯನ್ನು ಹಾಕಿ ಅಲಂಕರಿಸಿರಿ. ಶೇವ್‌ ಮತ್ತು ದಾಳಿಂಬೆ ಬೀಜಗಳನ್ನೂ ನೀವು ಇದಕ್ಕೆ ಮಿಶ್ರಣಮಾಡಿ ಸವಿಯಬಹುದು.

Whats_app_banner