ಕನ್ನಡ ಸುದ್ದಿ  /  Lifestyle  /  Know How Your Diabetes Drug Can Help You Lose Weight

Diabetes Drug: ತೂಕ ಕಡಿಮೆ ಮಾಡಲು ಸಹಾಯ ಮಾಡುವುದೇ ಮಧುಮೇಹ ಔಷಧ?: ಇಲ್ಲಿದೆ ಮಾಹಿತಿ

ಇತರ ದೀರ್ಘಕಾಲದ ಕಾಯಿಲೆಗಳಂತೆ ಹೆಚ್ಚು ಚರ್ಚಗೆ ಒಳಪಡದಿದ್ದರೂ, ಬೊಜ್ಜು ವಾಸ್ತವವಾಗಿ ಎಲ್ಲಾ ರೋಗಗಳ ತಾಯಿ ಎಂದು ಹೇಳಬಹುದು. ಬೊಜ್ಜು ಮಧುಮೇಹಕ್ಕೆ ನೇರವಾಗಿ ಆಹ್ವಾನ ನೀಡುತ್ತಿದ್ದು, ಮಧುಮೇಹಿಗಳು ಬೊಜ್ಜು ಕರಗಿಸಲು ಸಾಕಷ್ಟು ಕಷ್ಟ ಪಡುತ್ತಾರೆ. ಆದರೆ ಕೆಲವು ಮಧುಮೇಹ ಔಷಧಗಳು ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತವೆ. ಈ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಇತರ ದೀರ್ಘಕಾಲದ ಕಾಯಿಲೆಗಳಂತೆ ಹೆಚ್ಚು ಚರ್ಚಗೆ ಒಳಪಡದಿದ್ದರೂ, ಬೊಜ್ಜು ವಾಸ್ತವವಾಗಿ ಎಲ್ಲಾ ರೋಗಗಳ ತಾಯಿ ಎಂದು ಹೇಳಬಹುದು. ವ್ಯಕ್ತಿಯೋರ್ವನ ಬಾಡಿ ಮಾಸ್ ಇಂಡೆಕ್ಸ್ (BMI) ನಿರ್ದಿಷ್ಟ ಕಟ್-ಆಫ್‌ಗಿಂತ ಹೆಚ್ಚಿದ್ದರೆ, ಅದನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ.

ಭಾರತೀಯರಿಗಾಗಿ, ಕೆಜಿ/ಮೀ2 ನಲ್ಲಿನ ಕಟ್-ಆಫ್‌ಗಳು 23 ರಿಂದ 24.9ಕ್ಕೆ ಅಧಿಕ ತೂಕ ಮತ್ತು 25ಕ್ಕೆ ಬೊಜ್ಜು ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಮಹಿಳೆಯರಲ್ಲಿ 80 ಸೆ.ಮೀ. ಮತ್ತು ಪುರುಷರಲ್ಲಿ 90 ಸೆ.ಮೀ ಸೊಂಟದ ಸುತ್ತಳತೆಯನ್ನು ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಬೊಜ್ಜು ವಿಶ್ವಾದ್ಯಂತ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. 1975ರಿಂದ ಜಾಗತಿಕ ಬೊಜ್ಜು ಪ್ರಮಾಣ ಒಟ್ಟಾರೆ ಮೂರು ಪಟ್ಟು ಹೆಚ್ಚಾಗಿದೆ ಎಂಬುದು ನಿಜಕ್ಕೂ ಆಘಾತಕಾರಿ ಸಂಗತಿ.

ಬೊಜ್ಜು ಮಧುಮೇಹಕ್ಕೆ ಹೇಗೆ ಆಹ್ವಾನ ನೀಡುತ್ತದೆ?

ಹೆಚ್ಚುತ್ತಿರುವ ಸ್ಥೂಲಕಾಯತೆಯು ಮತ್ತು ಟೈಪ್ 2 ಮಧುಮೇಹದ ನಡುವೆ ಬಲವಾದ ಸಂಬಂಧ ಇದೆ. ಇದು ಅನೇಕ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದಾಗಿ, ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ಮಧುಮೇಹವನ್ನು ಆಹ್ವಾನಿಸುವ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೆಚ್ಚಿನ ದೇಹದ ತೂಕ ಹೊಂದಿರುವವರಲ್ಲಿ,ಮಧುಮೇಹದ ಅಪಾಯವು ಆರು ಪಟ್ಟು ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ.

ನೀವು ಮಧುಮೇಹವನ್ನು ತಡೆಗಟ್ಟಲು ಬಯಸಿದರೆ, ನಿಮ್ಮ ಸೊಂಟದ ಭಾಗದ ಬೊಜ್ಜನ್ನು ಕಡಿಮೆ ಮಾಡುವುದು ಅನಿವಾರ್ಯ. ನೀವು ಮಧುಮೇಹ ಹೊಂದಿದ್ದರೆ, ಸ್ಥೂಲಕಾಯತೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಪರದಾಡುತ್ತದೆ. ಇದರಿಂದ ನೀವು ಮಧುಮೇಹಕ್ಕಾಗಿ ತೆಗೆದುಕೊಳ್ಳುವ ಔಷಧಿಗಳ ಅಗತ್ಯವು ಕೂಡ ಕ್ರಮೇಣ ಹೆಚ್ಚಾಗುತ್ತದೆ. ಬೊಜ್ಜು ಮಧುಮೇಹದ ತೊಡಕುಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಉದಾಹರಣೆಗೆ ನಿಮ್ಮ ಹೃದಯಾಘಾತದ ಸಂಭವನೀಯತೆಯ ಅಪಾಯವು ಹೆಚ್ಚಾಗುತ್ತದೆ.

ತೂಕ ಕಡಿತವು ಮೇಲೆ ಪಟ್ಟಿ ಮಾಡಲಾದ ಎಲ್ಲಾ ಪರಿಸ್ಥಿತಿಗಳ ಮೇಲೆ ಅನುಕೂಲಕರವಾಗಿ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ದೇಹದ ಕಡಿಮೆ ತೂಕ ನಿಮ್ಮ ಮಧುಮೇಹ ನಿರ್ವಹಣೆಯನ್ನು ಸರಳಗೊಳಿಸಬಹುದು ಮತ್ತು ತೊಡಕುಗಳ ಅಪಾಯವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಮಧುಮೇಹದ ಆರಂಭದ ಅವಧಿಯಲ್ಲಿ ತೂಕ ಕಡಿಮೆ ಮಾಡಿಕೊಳ್ಳುವುದರಿಂದ, ನೀವು ಔಷಧಿ ಸೇವೆನೆಗಳಿಂದ ಮುಕ್ತರಾಗುವ ಸಾಧ್ಯತೆ ಹೆಚ್ಚು.

ತೂಕ ನಷ್ಟಕ್ಕೆ ನಿಮ್ಮ ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಅತ್ಯಂತ ಅವಶ್ಯ. ಇದು ಮೂಲಭೂತವಾಗಿ ಆಹಾರ ಪದ್ದತಿ ಮತ್ತು ವ್ಯಾಯಾಮದಿಂದ ಬದಲಾಗುತ್ತದೆ. ಆದರೆ ಇವುಗಳನ್ನು ಕಾರ್ಯಗತಗೊಳಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಮಧುಮೇಹ ಹೊಂದಿರುವ ಜನರಿಗೆ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಒಂದು ಆಯ್ಕೆಯಾಗಿದೆ. ‌ಇದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

ದುರದೃಷ್ಟವಶಾತ್ ಮಧುಮೇಹಕ್ಕಾಗಿ ನೀಡುವ ಕೆಲವು ಔಷಧಿಗಳು ಉದಾಹರಣೆಗೆ, ಸಲ್ಫೋನಿಲ್ಯೂರಿಯಾಸ್, ಥಿಯಾಜೊಲಿಡಿನಿಯೋನ್ಸ್ ಮತ್ತು ಇನ್ಸುಲಿನ್‌ಗಳು ತೂಕ ನಷ್ಟಕ್ಕಿಂತ ಹೆಚ್ಚಾಗಿ ತೂಕ ಹೆಚ್ಚಾಗುವುದಕ್ಕೆ ಕಾರಣವಾಗುತ್ತವೆ. ಈ ಪೈಕಿ ಮೆಟ್ಫಾರ್ಮಿನ್ ಔಷಧಿ ಮಾತ್ರ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಹಾಗಾದರೆ ಒಳ್ಳೆಯ ಸುದ್ದಿ ಏನು?

ಕಳೆದ 10 ವರ್ಷಗಳಲ್ಲಿ ಮಧುಮೇಹದ ಚಿಕಿತ್ಸೆಯಲ್ಲಿ ಒಂದು ಮಾದರಿ ಬದಲಾವಣೆಯಾಗಿದೆ. SGLT2 ಇನ್ಹಿಬಿಟರ್‌ಗಳು ಮತ್ತು GLP1 ರಿಸೆಪ್ಟರ್ ಅಗೊನಿಸ್ಟ್‌ಗಳಂತಹ ಹೊಸ ಪ್ರತಿರೋಧಕ ಔಷಧಿಗಳ ಆವಿಷ್ಕಾರ ಮಧುಮೇಹಿಗಳ ಪಾಲಿಗೆ ವರದಾನವಾಗಿದೆ. ಇವು ಮಧುಮೇಹಿಗಳ ತೂಕ ಕನಿಷ್ಠ 2 ರಿಂದ 3 ಕೆಜಿ ವರೆಗೆ ಕರಗಲು ಸಹಾಯ ಮಾಡುತ್ತವೆ.

ಈ ಔಷಧಿಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವುದಷ್ಟೇ ಅಲ್ಲದೇ, ಈ ರೋಗದ ಇತರ ಸಂಭವನೀಯ ತೊಡಕುಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ. ಈ ಔಷಧಿಗಳು ಹೃದಯಾಘಾತ ಮತ್ತು ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುತ್ತವೆ. ಈ ಕಾರಣಕ್ಕೆ ಈ ಔಷಧಿಗಳ ಬಳಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

GLP1 RA ಔಷಧವು ಪ್ರಾಥಮಿಕವಾಗಿ ಹಸಿವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ GLT2 ಪ್ರತಿರೋಧಕ ಔಷಧಿಗಳಿಗಿಂತ ಹೆಚ್ಚಾಗಿ GLP1 RA ಔಷಧವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದರೆ ಎರಡೂ ಗುಂಪುಗಳ ಔಷಧಿಗಳನ್ನು ಒಟ್ಟುಗೂಡಿಸುವುದರಿಂದ ಸರಾಸರಿ 5 ಕೆಜಿಯಷ್ಟು ತೂಕ ಕಡಿಮೆ ಮಾಡಬಹುದಾಗಿದೆ.

ವಿಭಾಗ