Korean Beauty Tips: ಈ 5 ಕೊರಿಯನ್ ಸೌಂದರ್ಯ ರಹಸ್ಯಗಳನ್ನು ನೀವೂ ಪ್ರಯತ್ನಿಸಿ ನೋಡಿ; ಕೆಲವೇ ದಿನಗಳಲ್ಲಿ ವ್ಯತ್ಯಾಸ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Korean Beauty Tips: ಈ 5 ಕೊರಿಯನ್ ಸೌಂದರ್ಯ ರಹಸ್ಯಗಳನ್ನು ನೀವೂ ಪ್ರಯತ್ನಿಸಿ ನೋಡಿ; ಕೆಲವೇ ದಿನಗಳಲ್ಲಿ ವ್ಯತ್ಯಾಸ ಗಮನಿಸಿ

Korean Beauty Tips: ಈ 5 ಕೊರಿಯನ್ ಸೌಂದರ್ಯ ರಹಸ್ಯಗಳನ್ನು ನೀವೂ ಪ್ರಯತ್ನಿಸಿ ನೋಡಿ; ಕೆಲವೇ ದಿನಗಳಲ್ಲಿ ವ್ಯತ್ಯಾಸ ಗಮನಿಸಿ

Skin Care Tips: ಸುಂದರವಾದ, ಕಲೆ ರಹಿತ, ಹೊಳೆಯುವ ತ್ವಚೆ ಪಡೆಯುವುದು ಸುಲಭದ ಮಾತಲ್ಲ. ಆದರೆ ನೀವು ನಿಮ್ಮ ಚರ್ಮದ ಆರೈಕೆ ಮಾಡಿದರೆ ಖಂಡಿತ ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ. ಅದರಲ್ಲೂ ನೀವು ಕೊರಿಯನ್‌ ಬ್ಯೂಟಿ ಟಿಪ್ಸ್‌ ಫಾಲೋ ಮಾಡಬೇಕೆಂದುಕೊಂಡಲ್ಲಿ ಇಲ್ಲಿ ಕೆಲವೊಂದು ಟಿಪ್ಸ್‌ ಇವೆ ಅನುಸರಿಸಿ.

ಕೊರಿಯನ್‌ ಬ್ಯೂಟಿ ಟಿಪ್ಸ್
ಕೊರಿಯನ್‌ ಬ್ಯೂಟಿ ಟಿಪ್ಸ್ (‌PC: Pixabay)

ಕೊರಿಯನ್‌ ಸೌಂದರ್ಯ ಸಲಹೆ: ಕಲೆ ರಹಿತ, ಹೊಳೆಯುವ ಚರ್ಮ ಪಡೆಯಲು ಯುವತಿಯರು ಮಾತ್ರವಲ್ಲದೆ ಯುವಕರು ಕೂಡಾ ಬಹಳ ಶ್ರಮ ಪಡುತ್ತಾರೆ. ಉತ್ತಮ ಆಹಾರ ಕ್ರಮ ಅನುಸರಿಸುತ್ತಾರೆ. ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಬ್ಯೂಟಿ ಪಾರ್ಲರ್‌ಗಳಿಗೆ ಹೋಗುತ್ತಾರೆ. ಕಾಸ್ಮೆಟಿಕ್‌ ಸರ್ಜರಿ ಮಾಡಿಕೊಳ್ಳುತ್ತಾರೆ.

ನೀವು ಕೊರಿಯನ್ನರನ್ನು ನೋಡಿದರೆ ಅವರ ಚರ್ಮ ಫಳ ಫಳ ಹೊಳೆಯುವುದನ್ನು ಗುರುತಿಸಬಹುದು. ಈಗಂತೂ ಇದನ್ನೇ ಮುಂದಿಟ್ಟುಕೊಂಡು ಅನೇಕ ಕಂಪನಿಗಳು ಕೊರಿಯನ್‌ ಬ್ಯೂಟಿ ಪ್ರಾಡಕ್ಟ್‌ಗಳನ್ನು ಮಾರುತ್ತಿದ್ದಾರೆ. ಆದರೆ ಕೆಲವರಿಗೆ ಹೆಚ್ಚಿನ ಬೆಲೆಯಿಂದಾಗಿ ಅದನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ನೀವು ಮನೆಯಲ್ಲೇ ಸುಲಭವಾಗಿ ಕೊರಿಯನ್‌ ಬ್ಯೂಟಿ ಟಿಪ್ಸ್‌ ಫಾಲೋ ಮಾಡಬಹುದು. ಹಂತ ಹಂತವಾದ ಮಾಹಿತಿ ಇಲ್ಲಿದೆ.

ಡಬಲ್ ಕ್ಲೆನ್ಸಿಂಗ್ ಮತ್ತು ಸೌಮ್ಯ ಎಕ್ಸ್ಫೋಲಿಯೇಶನ್

ಕೊರಿಯನ್ನರು ಚರ್ಮವನ್ನು ಮೊದಲು ಎರಡು ಬಾರಿ ಕ್ಲೆನ್ಸಿಂಗ್‌ ಹಾಗೂ ಎಕ್ಸ್ಫೋಲಿಯೇಶನ್‌ ಮಾಡುತ್ತಾರೆ. ಇದು ಅವರ ಸೌಂದರ್ಯದ ಮೊದಲ ಗುಟ್ಟು. ಡಬಲ್ ಕ್ಲೆನ್ಸಿಂಗ್ ಎಂದರೆ ಮೊದಲು ತೈಲ-ಆಧಾರಿತ ಕ್ಲೆನ್ಸರ್ ಬಳಸುವುದು, ನಂತರ ನೀರು ಆಧಾರಿತ ಕ್ಲೆನ್ಸರ್ ಅನ್ನು ಬಳಸಲಾಗುತ್ತದೆ. ನಿಮ್ಮ ಚರ್ಮವನ್ನು ಒಣಗಿಸದೆಯೇ ಕಲ್ಮಶಗಳು, ಮೇಕ್ಅಪ್ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆರವುಗೊಳಿಸಲು ಇದು ಅನುಕೂಲಕರವಾಗಿದೆ. ಸಾಮಾನ್ಯವಾಗಿ ಮಾಲಿನ್ಯಕ್ಕೆ ಒಳಗಾಗುವ ಮತ್ತು ಎಣ್ಣೆ ಅಂಶದಿಂದ ಕೂಡಿರುವ ಭಾರತೀಯ ತ್ವಚೆಗಾಗಿ, ಎರಡು ಬಾರಿ ಕ್ಲೆನ್ಸಿಂಗ್‌ ಮಾಡುವುದು ಬಹಳ ಅಗತ್ಯವಾಗಿದೆ. ಹೀಗೆ ಮಾಡುವುದರಿಂದ ಚರ್ಮದ ಸತ್ತ ಜೀವಕೋಶಗಳು ಕಡಿಮೆ ಆಗುತ್ತದೆ. ಜೊತೆಗೆ ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ. ಚರ್ಮಕ್ಕೆ ಹೊಳಪು ನೀಡುತ್ತದೆ.

ಚರ್ಮದ ಹೈಡ್ರೇಶನ್‌

ಚರ್ಮದ ಆರೈಕೆ ಮಾಡುವಾಗ, ಮಾಡಿದ ನಂತರ ಕೂಡಾ ಚರ್ಮ ತೇವಾಂಶದಿಂದ ಕೂಡಿರಬೇಕು. ಎಸೆನ್ಸ್‌, ಸೀರಮ್‌, ಆಂಪೂಲ್‌ಗಳು, ಸೋಯಬೀನ್‌ ಎಕ್ಸ್ಟ್ರಾಕ್ಟ್‌, ರೈಸ್‌ ವಾಟರ್‌, ಗ್ಯಾಲಕ್ಟೋಮೈಸಸ್‌ಗಳನ್ನು ಒಳಗೊಂಡಿರುವ ಪದಾರ್ಥಗಳನ್ನು ಬಳಸಿ ಚರ್ಮವನ್ನು ಹೈಡ್ರೇಟ್‌ ಮಾಡುವುದು ಕೊರಿಯನ್‌ ಸೌಂದರ್ಯ ಸಲಹೆಯ ಮತ್ತೊಂದು ಹಂತವಾಗಿದೆ. ಈ ಹಂತವು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮದ ಒಳಗೆ ಅಂಟಿಕೊಂಡಿರುವ ಜಿಡ್ಡನ್ನು ತೆಗೆಯುತ್ತದೆ.

ಉತ್ಕರ್ಷಣ ನಿರೋಧಕಗಳು

ಪರಿಸರದಿಂದ ಉಂಟಾಗುವ ಹಾನಿ ಮತ್ತು ಅಕಾಲಿಕ ವಯಸ್ಸಾಗುವಿಕೆಯಿಂದ ಚರ್ಮವನ್ನು ರಕ್ಷಿಸುವಲ್ಲಿ ಉತ್ಕರ್ಷಣ ನಿರೋಧಕಗಳು ಪ್ರಮುಖ ಪಾತ್ರವಹಿಸುತ್ತವೆ. ಕೊರಿಯನ್ ತ್ವಚೆ ಉತ್ಪನ್ನಗಳು ಸಾಮಾನ್ಯವಾಗಿ ವಿಟಮಿನ್ ಸಿ, ಗ್ರೀನ್ ಟೀ ಎಕ್ಸ್ಟ್ರಾಕ್ಟ್‌ ಮತ್ತು ನಿಯಾಸಿನಾಮೈಡ್‌ನಂತಹ ಪ್ರಬಲವಾದ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಈ ಪದಾರ್ಥಗಳು ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಚರ್ಮಕ್ಕೆ ಹೊಳಪು ನೀಡುವುದದರಲ್ಲಿ ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ದಿನಚರಿಯಲ್ಲಿ ಉತ್ಕರ್ಷಣಾ ನಿರೋಧಕ-ಭರಿತ ಉತ್ಪನ್ನಗಳನ್ನು ಸೇರಿಸುವುದರಿಂದ ಚರ್ಮವು ಅದರ ಯೌವನದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಜೊತೆಗೆ SPF 30 ಅಥವಾ ಅದಕ್ಕಿಂತ ಹೆಚ್ಚಿನ ಬ್ರಾಡ್-ಸ್ಪೆಕ್ಟ್ರಮ್ ಸನ್‌ಸ್ಕ್ರೀನ್ ಕೂಡಾ ಬಳಸಲು ಮರೆಯದಿರಿ.

ಫೇಸ್‌ ಮಾಸ್ಕ್‌ಗಳು

ಶೀಟ್ ಮಾಸ್ಕ್‌ಗಳು ಕೂಡಾ ಕೊರಿಯನ್ ತ್ವಚೆಯ ಒಂದು ಸೀಕ್ರೇಟ್‌ ಆಗಿದೆ. ಹೈಲುರಾನಿಕ್ ಆಮ್ಲ, ಕಾಲಜನ್ ಮತ್ತು ನೈಸರ್ಗಿಕ ಎಕ್ಸ್ಟ್ರಾಕ್ಟ್‌ಗಳಾದ ಗ್ರೀನ್‌ ಟೀ ಸೌತೆಕಾಯಿ, ರಾಯಲ್‌ ಜೆಲ್ಲಿ, ಚಾರ್‌ಕೋಲ್‌, ಪರ್ಲ್‌ನಂತಹ ವಿವಿಧ ಪ್ರಯೋಜನಕಾರಿ ಅಂಶಗಳಿಂದ ತುಂಬಿದ ಶೀಟ್ ಮಾಸ್ಕ್‌ಗಳು ನಿಮಗೆ ದಿಢೀರ್‌ ಹೊಳಪು ನೀಡುತ್ತದೆ. ಚರ್ಮವನ್ನು ಮೃದುವಾಗಿ ಕಾಣುವಂತೆ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಈ ಶೀಟ್‌ಗಳನ್ನು ರಾತ್ರಿ ವೇಳೆ ಬಳಸಿದರೆ ಉತ್ತಮ. ಒಟ್ಟಿನಲ್ಲಿ ನಿಮ್ಮ ಚರ್ಮಕ್ಕೆ ಸರಿ ಹೊಂದುವ ಶೀಟ್‌ ಮಾಸ್ಕ್‌ ಬಳಸಿ.

ಲೇಯರಿಂಗ್ ಟೆಕ್ನಿಕ್‌

ಚರ್ಮಕ್ಕೆ ನೀವು ಅನೇಕ ರೀತಿಯ ಪ್ರಾಡಕ್ಟ್‌ಗಳನ್ನು ಬಳಸುವುದರಿಂದ ಮೊದಲು ಯಾವುದನ್ನು ಬಳಸಬೇಕು, ನಂತರ ಯಾವುದನ್ನು ಹಚ್ಚಬೇಕು ಎನ್ನುವುದರನ್ನು ತಿಳಿದುಕೊಳ್ಳಿ. ಈ ರೀತಿ ಲೇಯರಿಂಗ್‌ ಟೆಕ್ಕಿಕ್‌ ನಿಮ್ಮ ಚರ್ಮಕ್ಕೆ ಹೆಚ್ಚಿನ ಸೌಂದರ್ಯ ನೀಡಲು ಸಹಾಯ ಮಾಡುತ್ತದೆ. ಮೊದಲು ತೆಳುವಾದ ಪ್ರಾಡಕ್ಟ್‌ಗಳನ್ನು ಹಚ್ಚಿ ನಂತರ ಕ್ರೀಮ್‌ಗಳಂತ ಪ್ರಾಡಕ್ಟ್‌ ಬಳಸಿ. ಒಂದು ಪ್ರಾಡಕ್ಟ್‌ ಹಚ್ಚಿ ಸ್ವಲ್ಪ ಸಮಯದ ನಂತರ ಮತ್ತೊಂದು ಪ್ರಾಡಕ್ಟ್‌ ಬಳಸಿ.

ಗಮನಿಸಿ: ಎಲ್ಲಾ ಪ್ರಾಡಕ್ಟ್‌ಗಳು ಎಲ್ಲಾ ಚರ್ಮದವರಿಗೂ ಹೊಂದಿಕೊಳ್ಳುವುದಿಲ್ಲ. ನಿಮ್ಮ ಚರ್ಮಕ್ಕೆ ಯಾವ ರೀತಿ ಆರೈಕೆ ಮುಖ್ಯ ಎಂಬುದನ್ನು ಚರ್ಮತಜ್ಞರಿಂದ ತಿಳಿದುಕೊಂಡು ನಂತರ ಮುಂದುವರೆಯಿರಿ.

Whats_app_banner