Beauty Tips: ನಾಲ್ಕೈದು ಹನಿ ತುಪ್ಪ ಇದ್ರೆ ಸಾಕು, ಕೊರಿಯನ್ನರಂತೆ ನಿಮ್ಮ ಚರ್ಮದ ಕಾಂತಿ ಅರಳುತ್ತೆ, ಬಳಸೋದು ಹೇಗೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Beauty Tips: ನಾಲ್ಕೈದು ಹನಿ ತುಪ್ಪ ಇದ್ರೆ ಸಾಕು, ಕೊರಿಯನ್ನರಂತೆ ನಿಮ್ಮ ಚರ್ಮದ ಕಾಂತಿ ಅರಳುತ್ತೆ, ಬಳಸೋದು ಹೇಗೆ ನೋಡಿ

Beauty Tips: ನಾಲ್ಕೈದು ಹನಿ ತುಪ್ಪ ಇದ್ರೆ ಸಾಕು, ಕೊರಿಯನ್ನರಂತೆ ನಿಮ್ಮ ಚರ್ಮದ ಕಾಂತಿ ಅರಳುತ್ತೆ, ಬಳಸೋದು ಹೇಗೆ ನೋಡಿ

  • Skin Care With Ghee: ಆಹಾರ ಖಾದ್ಯಗಳ ಘಮ, ರುಚಿ ಹೆಚ್ಚಿಸುವ ತುಪ್ಪ ನಮ್ಮ ತ್ವಚೆಯ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇದು ಮುಖ ಸೇರಿದಂತೆ ಚರ್ಮ ಕಾಂತಿ ಹೆಚ್ಚಿಸುವ ಗುಣ ಹೊಂದಿದೆ. ನಾಲ್ಕೈದು ಹನಿ ತುಪ್ಪ ಇದ್ರೆ ನಿಮ್ಮ ಅಂದ ಅರಳೋದು ಪಕ್ಕಾ. ಚರ್ಮದ ಆರೈಕೆಗೆ ತುಪ್ಪವನ್ನು ಹೇಗೆ ಬಳಸಬಹುದು ನೋಡಿ.

ಕೊರಿಯನ್‌ ಸುಂದರಿಯರ ತ್ವಚೆಯಂತೆ ತಮ್ಮ ಚರ್ಮವೂ ಹೊಳೆಯುತ್ತಿರಬೇಕು ಎಂದು ಹಲವು ಹೆಣ್ಣುಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಕೊರಿಯನ್‌ ಸ್ಕಿನ್‌ಕೇರ್‌ ನಿಯಮಗಳನ್ನು ಹೆಚ್ಚು ಪಾಲಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೊರಿಯನ್‌ ಸ್ಕಿನ್‌ಕೇರ್‌ ಟ್ರೆಂಡ್‌ಗಳು ಭಾರತದಲ್ಲಿ ಸದ್ದು ಮಾಡುತ್ತಿದೆ. 
icon

(1 / 10)

ಕೊರಿಯನ್ನರ ಕನ್ನಡಿಯಂತೆ ಹೊಳೆಯುವ ತ್ವಚೆ ನಿಮ್ಮದಾಗಬೇಕು ಎಂದರೆ ದುಬಾರಿ ಉತ್ಪನ್ನಗಳಿಗಾಗಿ ಹಣ ಖರ್ಚು ಮಾಡಬೇಕು ಎಂದೇನಿಲ್ಲ. ಅಡುಗೆಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಅಂದ ಹೆಚ್ಚಿಸಿಕೊಳ್ಳಬಹುದು. ಅಂತಹ ವಸ್ತುಗಳಲ್ಲಿ ತುಪ್ಪ ಕೂಡ ಒಂದು. ತುಪ್ಪವು ಚರ್ಮವನ್ನು ಹೈಡ್ರೇಟ್‌ ಮಾಡಲು ಸಹಾಯ ಮಾಡುತ್ತದೆ. ತುಪ್ಪದಿಂದ ತ್ವಚೆಗಾಗುವ ಪ್ರಯೋಜನಗಳು ಹಲವು. ಹಾಗಾದರೆ ಅಂದ ಹೆಚ್ಚಿಸಿಕೊಳ್ಳಲು ತುಪ್ಪವನ್ನು ಹೇಗೆ ಬಳಸಬಹುದು ನೋಡಿ.  
icon

(2 / 10)

ಮುಖದ ಕಾಂತಿ ಹೆಚ್ಚುತ್ತದೆ ಎಂದುಕೊಂಡು ತುಪ್ಪವನ್ನು ಎಂದಿಗೂ ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಬಾರದು. ತುಪ್ಪ ಅಥವಾ ಬೆಣ್ಣೆಯನ್ನು ನೇರವಾಗಿ ಚರ್ಮಕ್ಕೆ ಅನ್ವಯಿಸುವುದರಿಂದ ಹೆಚ್ಚು ಆಹ್ಲಾದಕರ ಫಲಿತಾಂಶಗಳು ಸಿಗುವುದಿಲ್ಲ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. 
icon

(3 / 10)

ಮುಖದ ಕಾಂತಿ ಹೆಚ್ಚುತ್ತದೆ ಎಂದುಕೊಂಡು ತುಪ್ಪವನ್ನು ಎಂದಿಗೂ ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಬಾರದು. ತುಪ್ಪ ಅಥವಾ ಬೆಣ್ಣೆಯನ್ನು ನೇರವಾಗಿ ಚರ್ಮಕ್ಕೆ ಅನ್ವಯಿಸುವುದರಿಂದ ಹೆಚ್ಚು ಆಹ್ಲಾದಕರ ಫಲಿತಾಂಶಗಳು ಸಿಗುವುದಿಲ್ಲ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. (Freepik)

ಎಣ್ಣೆ ಚರ್ಮ ಅಥವಾ ಮೊಡವೆ ಸಮಸ್ಯೆಗಳಿದ್ದರೆ ತುಪ್ಪದ ಬಳಕೆ ಬೇಡ, ಇದರಿಂದ ಇನ್ನಷ್ಟು ಸಮಸ್ಯೆಯಾಗಬಹುದು. ಆದರೆ ಒಣ ಚರ್ಮ ಹೊಂದಿರುವವರಿಗೆ ಇದು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್ ಎ, ಡಿ, ಇ, ಕೆ ಅಂಶಗಳುವ ಚರ್ಮಕ್ಕೆ ತುಂಬಾ ಉಪಯುಕ್ತ. ತುಪ್ಪವನ್ನು ಫೇಸ್‌ಪ್ಯಾಕ್‌ ರೀತಿಯಲ್ಲಿ ಮುಖಕ್ಕೆ ಬಳಸಬಹುದು.  
icon

(4 / 10)

ಎಣ್ಣೆ ಚರ್ಮ ಅಥವಾ ಮೊಡವೆ ಸಮಸ್ಯೆಗಳಿದ್ದರೆ ತುಪ್ಪದ ಬಳಕೆ ಬೇಡ, ಇದರಿಂದ ಇನ್ನಷ್ಟು ಸಮಸ್ಯೆಯಾಗಬಹುದು. ಆದರೆ ಒಣ ಚರ್ಮ ಹೊಂದಿರುವವರಿಗೆ ಇದು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್ ಎ, ಡಿ, ಇ, ಕೆ ಅಂಶಗಳುವ ಚರ್ಮಕ್ಕೆ ತುಂಬಾ ಉಪಯುಕ್ತ. ತುಪ್ಪವನ್ನು ಫೇಸ್‌ಪ್ಯಾಕ್‌ ರೀತಿಯಲ್ಲಿ ಮುಖಕ್ಕೆ ಬಳಸಬಹುದು.  (Instagram )

ತುಟಿಗಳು ಬಿರುಕಾಗಿ ಒಣಗಿದಂತಿದ್ದರೆ ತುಪ್ಪದ ಬಳಕೆಯಿಂದ ತುಟಿಯು ತೇವಾಂಶದಿಂದ ಕೂಡಿರುವಂತೆ ಮಾಡಬಹುದು. ತೆಂಗಿನೆಣ್ಣೆ ಜೊತೆ ತುಪ್ಪವನ್ನು ಬೆರೆಸಿ ತುಟಿಗೆ ಹಚ್ಚಿಕೊಳ್ಳಬಹುದು. 
icon

(5 / 10)

ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮಾಡುವುದರಿಂದ ಕೈಗಳ ಚರ್ಮ ರಫ್‌ ಆಗಿ, ಸಿಪ್ಪೆ ಏಳುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಇದನ್ನು ತಪ್ಪಿಸಿ ಕೈಗಳ ಅಂದ ಹೆಚ್ಚಲು 2 ಚಮಚ ತುಪ್ಪ ಮತ್ತು 2 ಚಮಚ ತೆಂಗಿನೆಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ತುಟಿ, ಅಂಗೈ, ಕೈಗಳ ವಿವಿಧ ಭಾಗಗಳಿಗೆ ಹಚ್ಚಿಕೊಳ್ಳಿ, ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೈಗಳ ಅಂದ ಹೆಚ್ಚುವುದು ಖಂಡಿತ. 
icon

(6 / 10)

ಮುಖದ ಸೌಂದರ್ಯಕ್ಕಾಗಿ 1 ಚಮಚ ತುಪ್ಪ, 2 ಚಮಚ ಕಡಲೆಹಿಟ್ಟು, 2 ಚಮಚ ಹಾಲಿನ ಮಿಶ್ರಣವನ್ನು ತಯಾರಿಸಿಕೊಳ್ಳಿ. ಸ್ನಾನ ಮಾಡುವ ಮೊದಲು 8 ರಿಂದ 10 ನಿಮಿಷಗಳ ಕಾಲ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ನಂತರ ತೊಳೆಯಿರಿ. ವಾರದಲ್ಲಿ 2 ದಿನ ಹೀಗೆ ಮಾಡಿದರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
icon

(7 / 10)

ಸ್ನಾನಕ್ಕೂ ಮೊದಲು ಕಣ್ಣಿನ ಕೆಳಗೆ ತುಪ್ಪ ಅಥವಾ ತೆಂಗಿನೆಣ್ಣೆ ಹಚ್ಚಿ ನಂತರ ಸ್ನಾನ ಮಾಡಿ. ಇದರಿಂದ ಡಾರ್ಕ್‌ ಸರ್ಕಲ್‌ಗಳನ್ನು ನಿವಾರಿಸಬಹುದು. ಒಂದಿಷ್ಟು ದಿನಗಳು ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯ ಮೊದಲಿನಂತೆ ಕಾಣುವುದು ಖಂಡಿತ. 
icon

(8 / 10)

ಕಾಲ್ಬೆರಳುಗಳು ಸುಂದರವಾಗಲು ತುಪ್ಪ ಮತ್ತು ಅಲೋವೆರಾ ಜೆಲ್ ಮಿಶ್ರಣವನ್ನು ಸೇರಿಸಿ ಬೆರಳುಗಳಿಗೆ ಹಚ್ಚಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. (ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ, ವಿವರಗಳಿಗಾಗಿ ತಜ್ಞರನ್ನು ಸಂಪರ್ಕಿಸಿ. ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸದೆ ಬಳಸಬೇಡಿ.)
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(10 / 10)

ಇತರ ಗ್ಯಾಲರಿಗಳು