ಕನ್ನಡ ಸುದ್ದಿ  /  Lifestyle  /  Vegetable Peels And Beauty Tips: Throwing Away The Vegetable Peeler? Don't Throw Away Anymore, Enhance Instead!

vegetable peels and beauty tips: ತರಕಾರಿ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ಇನ್ನು ಮುಂದೆ ಎಸೆಯಬೇಡಿ, ಬದಲು ಅಂದ ಹೆಚ್ಚಿಸಿಕೊಳ್ಳಿ!

vegetable peels and beauty tips: ಬೇಸಿಗೆಯಲ್ಲಿ ತ್ವಚೆಯ ಅಂದ ಕಾಪಾಡಿಕೊಳ್ಳುವ ಬಗೆ ಹೇಗೆ ಎಂಬ ಬಗ್ಗೆ ಹಲವರು ತಲೆ ಕೆಡಿಸಿಕೊಳ್ಳುತ್ತಾರೆ. ಬದಲಾದ ಋತುಮಾನದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲೇ ಸರಿ. ಆದರೆ ತರಕಾರಿ ಸಿಪ್ಪೆಯಿಂದ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಮಾತ್ರವಲ್ಲ, ಅಂದವನ್ನೂ ಹೆಚ್ಚಿಸಿಕೊಳ್ಳಬಹುದು.

ಸೌಂದರ್ಯ
ಸೌಂದರ್ಯ

ಬೇಸಿಗೆಯಲ್ಲಿ ಬಿರು ಬಿಸಿಲಿಗೆ ಮೈಯೊಡ್ಡುವುದು ಒಂದು ಸವಾಲಾದರೆ, ತ್ವಚೆಯ ಅಂದ ಕಾಪಾಡಿಕೊಳ್ಳುವುದು ಇನ್ನೊಂದು ಸವಾಲು. ಅತಿಯಾದ ಬಿಸಿಲು, ಧೂಳು, ವಾಹನಗಳ ಹೊಗೆ, ಕಲುಷಿತ ವಾತಾವರಣ ಈ ಎಲ್ಲಾ ಕಾರಣಗಳಿಂದ ತ್ವಚೆಯ ಅಂದ ಕೆಡುವುದರಲ್ಲಿ ಸಂಶಯವಿಲ್ಲ.

ಆದರೆ ಪ್ರತಿಯೊಬ್ಬರು ಉಣ್ಣೆಯಂತೆ ನಯವಾದ, ಹೊಳಪಿನ ತ್ವಚೆ ತಮ್ಮದಾಗಬೇಕು ಎಂದು ಬಯಸುವುದು ಸುಳ್ಳಲ್ಲ. ಆದರೆ ಇದನ್ನು ಯಾವಾಗಲೂ ಕಾಪಾಡಿಕೊಳ್ಳುವುದು ಅಸಾಧ್ಯ. ಹವಾಮಾನ ಬದಲಾದಂತೆ ಚರ್ಮದ ಗುಣವೂ ಬದಲಾಗುತ್ತದೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುವುದು, ಬ್ಯೂಟಿಪಾರ್ಲರ್‌ನಲ್ಲಿ ಮುಖ ತೀಡಿಕೊಳ್ಳುವುದು ಮಾಡಬೇಕೆಂದೇನಿಲ್ಲ. ಮನೆಯಲ್ಲಿ ಇರುವ ಎಸೆಯುವ ತರಕಾರಿ ಸಿಪ್ಪೆಗಳಿಂದ ಅಂದ ಹೆಚ್ಚಿಸಿಕೊಳ್ಳಬಹುದು. ಹಾಗಾದರೆ ಕಸದ ಬುಟ್ಟಿಗೆ ಎಸೆಯುವ ತರಕಾರಿ ಸಿಪ್ಪೆಯಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ?

ಆಲೂಗೆಡ್ಡೆ ಸಿಪ್ಪೆ

ಆಲೂಗೆಡ್ಡೆ ತಿರುಳು, ಆಲೂಗೆಡ್ಡೆ ರಸದಲ್ಲಿ ಚರ್ಮದ ಅಂದವನ್ನು ಹೆಚ್ಚಿಸುವ ಅಂಶವಿದೆ ಎನ್ನುವ ವಿಷಯ ಬಹುತೇಕರಿಗೆ ಗೊತ್ತು. ಆದರೆ ಆಲೂಗೆಡ್ಡೆ ಸಿಪ್ಪೆಯಲ್ಲೂ ಉಂಟು ಸೌಂದರ್ಯವರ್ಧಕ ಗುಣ. ಇದರಲ್ಲಿ ವಿಟಮಿನ್‌ ಸಿ ಹಾಗೂ ಬಿ ಅಂಶ ಅಧಿಕವಾಗಿದ್ದು, ಇದು ಚರ್ಮದ ಹೊಳಪು ಹೆಚ್ಚಿಸುತ್ತದೆ. ಅಲ್ಲದೆ ಕಣ್ಣಿನ ಸುತ್ತಲಿನ ಕಪ್ಪು ಕಲೆಗಳ ನಿವಾರಣೆಗೂ ಸಹಕಾರಿ. ಇದರಲ್ಲಿ ಪೊಟ್ಯಾಶಿಯಂ ಪ್ರಮಾಣವೂ ಅಧಿಕವಾಗಿದ್ದು, ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ.

ಸೌತೆಕಾಯಿ ಸಿಪ್ಪೆ

ಇದು ಚರ್ಮಕ್ಕೆ ಹಿತವಾದ ಅನುಭವ ನೀಡುತ್ತದೆ, ಮಾತ್ರವಲ್ಲ ಚೈತನ್ಯ ನೀಡುತ್ತದೆ. ಇದರಿಂದ ದೇಹಕ್ಕೆ ಮಾತ್ರವಲ್ಲ ಚರ್ಮಕ್ಕೂ ಹಲವು ರೀತಿಯಲ್ಲಿ ಉಪಯೋಗವಿದೆ. ಇದು ಚರ್ಮದ ಉರಿಯೂತ ಹಾಗೂ ಕೆಂಪಾಗುವುದನ್ನು ತಡೆದು ತಕ್ಷಣಕ್ಕೆ ಪರಿಹಾರ ನೀಡುತ್ತದೆ. ಇದರಲ್ಲಿ ಮೆಗ್ನಿಶಿಯಂ, ಪೊಟ್ಯಾಶಿಯಂ ಅಂಶವಿದ್ದು, ಆರೋಗ್ಯಕರ ಚರ್ಮಕ್ಕೆ ಇದು ಉತ್ತಮ. ಇದನ್ನು ಟೋನರ್‌, ಫೇಸ್‌ಮಾಸ್ಕ್‌ ರೀತಿ ಬಳಸಬಹುದು. ಕಣ್ಣಿನ ಉರಿ ನಿವಾರಣೆಗೂ ಇದು ಸಹಕಾರಿ.

ಕ್ಯಾರೆಟ್‌ ಸಿಪ್ಪೆ

ಇದರಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಅಧಿಕವಾಗಿದೆ. ಇದರಲ್ಲಿ ವಿಟಮಿನ್‌ ಎ ಅಂಶ ಅಧಿಕವಾಗಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ ಅಂಶಗಳಿಂದ ವಾತಾವರಣದಲ್ಲಿನ ಕಲುಷಿತಗಳಿಂದ ಉಂಟಾಗುವ ಸಮಸ್ಯೆಗಳ ವಿರುದ್ಧ ಹೋರಾಡಿ ಚರ್ಮಕ್ಕೆ ರಕ್ಷಣೆ ನೀಡುತ್ತದೆ. ಇದು ಯುವಿ ಕಿರಣಗಳ ವಿರುದ್ಧ ಹೋರಾಡಲು ಚರ್ಮಕ್ಕೆ ಸಹಾಯ ಮಾಡುತ್ತದೆ.

ಕುಂಬಳಕಾಯಿ ಸಿಪ್ಪೆ

ಕುಂಬಳಕಾಯಿ ಚರ್ಮಕ್ಕೆ ಉತ್ತಮ ಏಕ್ಸಪೋಲಿಯೇಟರ್‌ನಂತೆ ಕೆಲಸ ಮಾಡುತ್ತದೆ. ಇದರಿಂದ ಚರ್ಮಕ್ಕೆ ಹಲವು ರೀತಿಯ ಉಪಯೋಗಗಳಿವೆ. ಇದು ನೈಸರ್ಗಿಕ ಕಿಣ್ವಗಳನ್ನು ಹೊಂದಿದ್ದು, ಚರ್ಮದ ನಿರ್ಜೀವ ಅಂಶವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ ಚರ್ಮದ ಹೊಳಪು ಹೆಚ್ಚಿಸುವುದು ಮಾತ್ರವಲ್ಲ, ಚರ್ಮವನ್ನು ಮೃದುವಾಗಿಸುತ್ತದೆ. ಇದರಲ್ಲಿ ಸತು, ವಿಟಮಿನ್‌ ಎ ಮತ್ತು ಸಿ ಅಂಶವಿದ್ದು, ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ಟೊಮೆಟೊ ಸಿಪ್ಪೆ

ಟೊಮೆಟೊ ಹಣ್ಣಿನ ತಿರುಳನ್ನು ಚರ್ಮದ ಅಂದ ಹೆಚ್ಚಿಸಿಕೊಳ್ಳುವ ಸಲುವಾಗಿ ಹಲವರು ಬಳಸುತ್ತಾರೆ. ಆದರೆ ಇದರ ಸಿಪ್ಪೆ ಚರ್ಮದ ಆರೋಗ್ಯ ಕಾಪಾಡಲು ಸಹಕಾರಿ. ಇದದರಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಅಧಿಕವಿದ್ದು, ಚರ್ಮ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಕಲೆ, ದುದ್ದಿನಂತಹ ಸಮಸ್ಯೆಯನ್ನು ನಿವಾರಿಸಿ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

ಹಾಗಲಕಾಯಿ ಸಿಪ್ಪೆ

ಹಾಗಲಕಾಯಿ ಕಹಿ ಎಂಬ ಕಾರಣಕ್ಕೆ ಹಲವರಿಗೆ ಇದು ಹಿಡಿಸುವುದಿಲ್ಲ. ಆದರೆ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದರ ಸಿಪ್ಪೆ ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಚರ್ಮದ ಸೋಂಕಿನ ನಿವಾರಣೆಗೂ ಇದು ಸಹಕಾರಿ. ಅಲರ್ಜಿ ಸಮಸ್ಯೆಯನ್ನೂ ಇದು ನಿವಾರಿಸುತ್ತದೆ.

ವಿಭಾಗ