ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  President Speech: ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ಸಿಗಲಿ: ಸ್ವಾತಂತ್ರೋತ್ಸವ ಮುನ್ನಾ ದಿನ ಭಾಷಣದಲ್ಲಿ ರಾಷ್ಟ್ರಪತಿ ಪ್ರತಿಪಾದನೆ

president speech: ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ಸಿಗಲಿ: ಸ್ವಾತಂತ್ರೋತ್ಸವ ಮುನ್ನಾ ದಿನ ಭಾಷಣದಲ್ಲಿ ರಾಷ್ಟ್ರಪತಿ ಪ್ರತಿಪಾದನೆ

president of India independence eve day speech ರಾಷ್ಟ್ರಪತಿ ದ್ರೌಪದಿ ಮುರ್ಮು( Droupadi Murmu) ಅವರು ಸೋಮವಾರ ಸ್ವಾತಂತ್ರೋತ್ಸವ ಮುನ್ನಾ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಸ್ವಾತಂತ್ರ ಪಡೆಯಲು ಹಲವರ ಬಲಿದಾನ, ಆನಂತರ ದೇಶದ ಪ್ರಗತಿ, ಮಹಿಳೆಯರ ಸಬಲೀಕರಣಕ್ಕೆ ನೀಡಬೇಕಾದ ಒತ್ತು ಸಹಿತ ಹಲವು ವಿಷಯಗಳ ಕುರಿತು ಅವರು ಪ್ರಸ್ತಾಪಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಸ್ವಾತಂತ್ರೋತ್ಸವ ಮುನ್ನಾ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಸ್ವಾತಂತ್ರೋತ್ಸವ ಮುನ್ನಾ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.

ದೆಹಲಿ: ಭಾರತದಲ್ಲಿ ಮಹಿಳೆಯ ಸಬಲೀಕರಣಕ್ಕೆ ಒತ್ತು ಸಿಗುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಮಹಿಳೆಯರ ಸಮಗ್ರ ಪ್ರಗತಿಗೆ ಭಾರತ ದಿಕ್ಸೂಚಿಯಾಗಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಪಾದಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾರತದ 76ನೇ ಸ್ವಾತಂತ್ರೋತ್ಸವದ ಮುನ್ನಾ ದಿನವಾದ ಸೋಮವಾರ ದೇಶವನ್ನು ಉದ್ದೇಶಿಸಿ ಮುರ್ಮು ಭಾಷಣ ಮಾಡಿದರು. ರಾಷ್ಟ್ರಪತಿ ಆದ ನಂತರ ಇದು ಅವರ ಎರಡನೇ ಸ್ವಾತಂತ್ರೋತ್ಸವ ಭಾಷಣ.

ಭಾರತದ ಇತಿಹಾಸ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಸ್ವರೂಪ., ದೇಶ ಪ್ರೇಮದ ಕೆಚ್ಚಿನ ಆಗಿನ ನಾಯಕರ ಗುಣಗಳನ್ನು ನೆನಪಿಸಿಕೊಳ್ಳುತ್ತಲೇ ನಾವು ಮುಂದೆ ಹೋಗಬೇಕಾಗಿದೆ. ಎಲ್ಲಾ ವರ್ಗದವರ ಪ್ರಗತಿಗೆ ಭಾರತ ಮುಂದಡಿ ಬರೆದಿದೆ. ಮಹಿಳೆಯರ ಪ್ರಗತಿಗೂ ಅವಕಾಶಗಳೂ ದೊರೆತಿದೆ. ಇದನ್ನು ಇನ್ನಷ್ಟು ಹೆಚ್ಚಿಸುವ ಕೆಲಸ ಆಗಬೇಕಾಗಿದೆ ಎಂದು ಸಲಹೆ ನೀಡಿದರು.

ಈಗಂತೂ ಮಹಿಳೆಯರು ಭಾರತದ ಅಭಿವೃದ್ಧಿಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ಸಮರ್ಥವಾಗಿ ತೊಡಿಗಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಹಿಂದೆ ನಾವು ಯೋಚಿಸದ ದೊಡ್ಡ ಜವಾಬ್ದಾರಿಗಳನ್ನು ತೆಗೆದುಕೊಂಡು ನಿಭಾಯಿಸಿದ್ದಾರೆ ಕೂಡ. ದೇಶದ ಹೆಣ್ಣುಮಕ್ಕಳು ಇನ್ನೂ ಮುಂದೆ ಸಾಗಬೇಕೆಂಬುದು ನನ್ನ ಬಯಕೆ ಎಂದು ನುಡಿದರು.

ಅಸಂಖ್ಯಾತ ಭಾರತೀಯರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಮಹಾತ್ಮ ಗಾಂಧಿಯವರ ತ್ಯಾಗ ಬಲಿದಾನವನ್ನು ನಾವು ಮರೆಯುವಂತಿಲ್ಲ. ಕಸ್ತೂರಬಾ ಗಾಂಧಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ಹೆಗಲಾಗಿ ನಿಂತರು. ನಿರಂತರ, ಛಲದ ಹೋರಾಟದಿಂದ 1947ರ ಆಗಸ್ಟ್​ 15ರಂದು ಭಾರತದ ಹೊಸ ಸೂರ್ಯ ಉದಯವಾಯಿತು ಎಂದು ಹೆಮ್ಮೆಯಿಂದ ನಾವು ನೆನಪಿಸಿಕೊಳ್ಳಬಹುದು ಎಂದರು.

ಭಾರತದಲ್ಲಿ ಅನೇಕ ಮಹಿಳೆಯರು ಹೋರಾಟದ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಾಧನೆಗಳ ಮೂಲಕವೇ ಇತರಿಗೆ ಪ್ರೇರಣೆ, ಮಾದರಿಯೂ ಆಗಿದ್ದಾರೆ. ಅಂತವರ ಪಟ್ಟಿಯಲ್ಲಿ ಸರೋಜಿನಿ ನಾಯ್ಡು, ಸುಚೇತಾ ಕೃಪಲಾನಿ, ಅರುಣಾ ಅಸಫ್ ಅಲಿ, ರಮಾದೇವಿ, ಅಮ್ಮು ಸ್ವಾಮಿನಾಥನ್ ಸಹಿತ ಹಲವರನ್ನು ಉಲ್ಲೇಖಿಸಬಹುದು. ಅವರು ಹಿಂದಿನ ತಲೆಮಾರುಗಳು ಮಾತ್ರವಲ್ಲದೇ ಮುಂದಿನ ಇನ್ನೂ ಅನೇಕ ತಲೆಮಾರುಗಳಿಗೆ ಆತ್ಮಸ್ಥೈರ್ಯದಿಂದ ದೇಶ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸಲು ಸ್ಫೂರ್ತಿದಾಯಕ ಆದರ್ಶಗಳನ್ನು ನಮಗಾಗಿ ನೀಡಿದ್ದಾರೆ ಎಂದು ಮುರ್ಮು ನೆನಪಿಸಿಕೊಂಡರು.

ಈಗಂತೂ ಭಾರತದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಮತ್ತು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಾಷ್ಟ್ರದ ಹೆಮ್ಮೆ, ಕೀರ್ತಿಯನ್ನು ವಿಶ್ವದಾದ್ಯಂತ ವಿಸ್ತರಿಸಿದ್ದಾರೆ. ಶತಮಾನಗಳ ಹಿಂದೆ ಮಹಿಳೆಯರ ಭಾಗವಹಿಸುವಿಕೆಯನ್ನು ನಮ್ಮಲ್ಲಿ ಹಿಂದೆ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಇಂದು ನಮ್ಮ ಮಹಿಳೆಯರು ಅಂತಹ ಅನೇಕ ಕ್ಷೇತ್ರಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಿ ಮಾದರಿಯಾಗಿದ್ದಾರೆ ಎಂದು ಮುರ್ಮು ಮೆಚ್ಚುಗೆ ಸೂಚಿಸಿದರು.

ಜಾತಿ, ಧರ್ಮ, ಭಾಷೆ ಮತ್ತು ಪ್ರದೇಶಗಳ ಹೊರತಾಗಿ, ನಮ್ಮ ಕುಟುಂಬ ಮತ್ತು ಕೆಲಸದ ಪ್ರದೇಶಕ್ಕೆ ಸಂಬಂಧಿಸಿದ ಗುರುತು ನಮ್ಮೊಂದಿಗೆ ಸದಾ ಇರುತ್ತದೆ. ಅದೆಲ್ಲಕ್ಕಿಂತಲೂ ಮಿಗಿಲಾಗಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನುವ ಹೆಗ್ಗುರುತನ್ನು ನಾವು ಹೊಂದಿದ್ದೇವೆ. ಭಾರತವು ವಿಶ್ವದಲ್ಲೇ ಹೆಮ್ಮೆಪಡುವಂತಹ ಪ್ರಜಾಪ್ರಭುತ್ವ ರಾಷ್ಟವಾಗಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.

ಭಾರತ ಈಗ ಜಿ20 ಶೃಂಗಸಭೆಯನ್ನು ಆಯೋಜಿಸುವ ಮಹತ್ವ ಕಾಲಘಟ್ಟದಲ್ಲಿದೆ. ಅಂದರೆ ವಿಶ್ವದ ಆದ್ಯತೆಗಳನ್ನು ಸರಿಯಾದ ದಿಕ್ಕಿನಲ್ಲಿ ಪಡೆಯುವ ಜತೆಗೆ ನಮ್ಮನ್ನು ನಾವು ಬಿಂಬಿಸಿಕೊಳ್ಳಲು ಇದೊಂದು ಅನನ್ಯ ಅವಕಾಶ. ಹತ್ತಾರು ಸವಾಲುಗಳ ನಡುವೆಯೂ ಭಾರತವು ಪ್ರಭಾವಶಾಲಿ ಜಿಡಿಪಿ ಬೆಳವಣಿಗೆಯ ಹಾದಿ ಕಂಡಿರುವುದು ಸಂತಸದಾಯಕ.ದೇಶವು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳುತ್ತಿರುವುದೇ ಈ ಸಾಧನೆ ಹಿಂದೆ ಇರುವ ಹಿರಿಮೆ ಎಂದು ಹೇಳಬಹುದು. ಈಗಂತೂ ಚಂದ್ರಯಾನ ಮಿಷನ್‌ನಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ. ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಚಂದ್ರನ ಮಿಷನ್ ಖಂಡಿತವಾಗಿಯೂ ಮೆಟ್ಟಿಲಾಗಲಿದೆ. ನಾವು ಸಾಗಬೇಕಾದ ದಾರಿ ಇನ್ನೂ ಬಹಳ ದೂರವಿದ್ದು, ಎಲ್ಲರೂ ಕೈಜೋಡಿಸಿದರೆ ಕಷ್ಟವಲ್ಲ ಎಂದು ಕಿವಿಹೇಳಿದರು.

IPL_Entry_Point

ವಿಭಾಗ