ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ 2024 ಲೀಗ್ ಹಂತ ಅಂತ್ಯ; ಆರೆಂಜ್‌, ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಯಾರಿದ್ದಾರೆ? ವಿರಾಟ್‌ ಹಿಂದಿಕ್ಕೋದು ಕಷ್ಟ ಕಷ್ಟ

ಐಪಿಎಲ್ 2024 ಲೀಗ್ ಹಂತ ಅಂತ್ಯ; ಆರೆಂಜ್‌, ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಯಾರಿದ್ದಾರೆ? ವಿರಾಟ್‌ ಹಿಂದಿಕ್ಕೋದು ಕಷ್ಟ ಕಷ್ಟ

  • ಐಪಿಎಲ್ 2024ರ ಲೀಗ್ ಹಂತದ ಒಟ್ಟು 70 ಪಂದ್ಯಗಳು ಮುಗಿದಿದೆ. ಪ್ರತಿ ತಂಡವೂ ತಲಾ 14 ಪಂದ್ಯಗಳನ್ನು ಆಡಿದೆ. ಮುಂದೆ ಪ್ಲೇಆಫ್ ಪಂದ್ಯಗಳು ಆರಂಭವಾಗಲಿವೆ. ಹಾಗಿದ್ದರೆ ಲೀಗ್‌ ಹಂತದ ಮುಕ್ತಾಯದ ಬಳಿಕ ಅತಿ ಹೆಚ್ಚು ರನ್‌ ಹಾಗೂ ವಿಕೆಟ್‌ ಕಬಳಿಸುವ ಮೂಲಕ ಆರೆಂಜ್‌ ಹಾಗೂ ಪರ್ಪಲ್‌ ಕ್ಯಾಪ್‌ ಯಾರು ಉಳಿಸಿಕೊಂಡಿದ್ದಾರೆ ಎಂಬುದನ್ನು ನೋಡೋಣ.

ರಾಜಸ್ಥಾನ್‌ ರಾಯಲ್ಸ್‌ ಹಾಗೂ ಕೆಕೆಆರ್‌ ತಂಡಗಳ ನಡುವಿನ ಲೀಗ್‌ ಹಂತದ ಕೊನೆಯ ಪಂದ್ಯವು ಮಳೆಯಿಂದಾಗಿ ರದ್ದಾಯ್ತು. ಆ ಬಳಿಕ ಪರ್ಪಲ್ ಹಾಗೂ ಆರೆಂಜ್‌ ಕ್ಯಾಪ್‌ ಪಟ್ಟಿಯಲ್ಲಿ ಯಾರು ಮುಂದಿದ್ದಾರೆ ಎಂಬುದನ್ನು ನೋಡೋಣ.
icon

(1 / 9)

ರಾಜಸ್ಥಾನ್‌ ರಾಯಲ್ಸ್‌ ಹಾಗೂ ಕೆಕೆಆರ್‌ ತಂಡಗಳ ನಡುವಿನ ಲೀಗ್‌ ಹಂತದ ಕೊನೆಯ ಪಂದ್ಯವು ಮಳೆಯಿಂದಾಗಿ ರದ್ದಾಯ್ತು. ಆ ಬಳಿಕ ಪರ್ಪಲ್ ಹಾಗೂ ಆರೆಂಜ್‌ ಕ್ಯಾಪ್‌ ಪಟ್ಟಿಯಲ್ಲಿ ಯಾರು ಮುಂದಿದ್ದಾರೆ ಎಂಬುದನ್ನು ನೋಡೋಣ.(PBKS-X)

ಐಪಿಎಲ್‌ ಲೀಗ್ ಪಂದ್ಯದ ಕೊನೆಯಲ್ಲಿ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 14 ಪಂದ್ಯಗಳಲ್ಲಿ ಅವರು 24 ವಿಕೆಟ್ ಪಡೆದಿದ್ದಾರೆ. ಆದರೆ, ಪಂಜಾಬ್‌ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಹೀಗಾಗಿ ಅಗ್ರಸ್ಥಾನಕ್ಕೆ ಬೇರೆ ಯಾರಾದರೂ ಬಂದರೂ ಅಚ್ಚರಿಯಿಲ್ಲ.
icon

(2 / 9)

ಐಪಿಎಲ್‌ ಲೀಗ್ ಪಂದ್ಯದ ಕೊನೆಯಲ್ಲಿ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 14 ಪಂದ್ಯಗಳಲ್ಲಿ ಅವರು 24 ವಿಕೆಟ್ ಪಡೆದಿದ್ದಾರೆ. ಆದರೆ, ಪಂಜಾಬ್‌ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಹೀಗಾಗಿ ಅಗ್ರಸ್ಥಾನಕ್ಕೆ ಬೇರೆ ಯಾರಾದರೂ ಬಂದರೂ ಅಚ್ಚರಿಯಿಲ್ಲ.(AFP)

ಜಸ್ಪ್ರೀತ್ ಬುಮ್ರಾ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಬೌಲರ್ 13 ಪಂದ್ಯಗಳಲ್ಲಿ 20 ವಿಕೆಟ್‌ ಪಡೆದಿದ್ದಾರೆ.
icon

(3 / 9)

ಜಸ್ಪ್ರೀತ್ ಬುಮ್ರಾ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಬೌಲರ್ 13 ಪಂದ್ಯಗಳಲ್ಲಿ 20 ವಿಕೆಟ್‌ ಪಡೆದಿದ್ದಾರೆ.(PTI)

ಪಂಜಾಬ್ ಕಿಂಗ್ಸ್‌ ವೇಗಿ ಅರ್ಷದೀಪ್‌ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 14 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದಾರೆ. ಕೆಕೆಆರ್‌ ತಂಡದ ವರುಣ್ ಚಕ್ರವರ್ತಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಹಂತ ತಲುಪಿದ್ದು, ಮುಂದೆ ಕನಿಷ್ಠ 2 ಪಂದ್ಯ ಆಡಲಿದೆ. ಹೀಗಾಗಿ ಅವರು ಇನ್ನೂ ಹೆಚ್ಚು ವಿಕೆಟ್‌ ಪಡೆದು ಪರ್ಪಲ್ ಕ್ಯಾಪ್ ಗೆಲ್ಲುವ ಅವಕಾಶವಿದೆ.
icon

(4 / 9)

ಪಂಜಾಬ್ ಕಿಂಗ್ಸ್‌ ವೇಗಿ ಅರ್ಷದೀಪ್‌ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 14 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದಾರೆ. ಕೆಕೆಆರ್‌ ತಂಡದ ವರುಣ್ ಚಕ್ರವರ್ತಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಹಂತ ತಲುಪಿದ್ದು, ಮುಂದೆ ಕನಿಷ್ಠ 2 ಪಂದ್ಯ ಆಡಲಿದೆ. ಹೀಗಾಗಿ ಅವರು ಇನ್ನೂ ಹೆಚ್ಚು ವಿಕೆಟ್‌ ಪಡೆದು ಪರ್ಪಲ್ ಕ್ಯಾಪ್ ಗೆಲ್ಲುವ ಅವಕಾಶವಿದೆ.(AFP)

ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಸಿಎಸ್‌ಕೆ ತಂಡದ ತುಷಾರ್ ದೇಶಪಾಂಡೆ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಆರು ಮತ್ತು ಏಳನೇ ಸ್ಥಾನದಲ್ಲಿರುವ ಟಿ ನಟರಾಜನ್ ಮತ್ತು ಯಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ಗೆಲ್ಲುವ ಅವಕಾಶವಿದೆ. ನಟರಾಜನ್ ಕೇವಲ 11 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದರೆ, ಚಹಲ್ 13 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ.
icon

(5 / 9)

ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಸಿಎಸ್‌ಕೆ ತಂಡದ ತುಷಾರ್ ದೇಶಪಾಂಡೆ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಆರು ಮತ್ತು ಏಳನೇ ಸ್ಥಾನದಲ್ಲಿರುವ ಟಿ ನಟರಾಜನ್ ಮತ್ತು ಯಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ಗೆಲ್ಲುವ ಅವಕಾಶವಿದೆ. ನಟರಾಜನ್ ಕೇವಲ 11 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದರೆ, ಚಹಲ್ 13 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ.(ANI)

ಈ ಬಾರಿ ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿಯೇ ಗೆಲ್ಲುವುದು ಬಹುತೇಕ ಖಚಿತ. ಗ್ರೂಪ್ ಲೀಗ್ ಪಂದ್ಯದ ಕೊನೆಯಲ್ಲಿ ವಿರಾಟ್ ಕೊಹ್ಲಿ 14 ಪಂದ್ಯಗಳಲ್ಲಿ 708 ರನ್ ಗಳಿಸಿದ್ದಾರೆ. ಅವನನ್ನು ಹಿಂದಿಕ್ಕುವುದು ತುಂಬಾ ಕಷ್ಟ.
icon

(6 / 9)

ಈ ಬಾರಿ ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿಯೇ ಗೆಲ್ಲುವುದು ಬಹುತೇಕ ಖಚಿತ. ಗ್ರೂಪ್ ಲೀಗ್ ಪಂದ್ಯದ ಕೊನೆಯಲ್ಲಿ ವಿರಾಟ್ ಕೊಹ್ಲಿ 14 ಪಂದ್ಯಗಳಲ್ಲಿ 708 ರನ್ ಗಳಿಸಿದ್ದಾರೆ. ಅವನನ್ನು ಹಿಂದಿಕ್ಕುವುದು ತುಂಬಾ ಕಷ್ಟ.(ANI )

ಆರೆಂಜ್ ಕ್ಯಾಪ್ ಹೋರಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 14 ಪಂದ್ಯಗಳಲ್ಲಿ 583 ರನ್ ಗಳಿಸಿದ್ದಾರೆ. ಆದರೆ, ಸಿಎಸ್‌ಕೆ ತಂಡ ಪ್ಲೇಆಫ್‌ನಿಂದ ಹೊರಗುಳಿದಿರುವುದರಿಂದ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುವುದು ಅಸಾಧ್ಯ.
icon

(7 / 9)

ಆರೆಂಜ್ ಕ್ಯಾಪ್ ಹೋರಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 14 ಪಂದ್ಯಗಳಲ್ಲಿ 583 ರನ್ ಗಳಿಸಿದ್ದಾರೆ. ಆದರೆ, ಸಿಎಸ್‌ಕೆ ತಂಡ ಪ್ಲೇಆಫ್‌ನಿಂದ ಹೊರಗುಳಿದಿರುವುದರಿಂದ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುವುದು ಅಸಾಧ್ಯ.(AFP)

ವಿರಾಟ್‌ ಕೊಹಲಿಗೆ ಸವಾಲೊಡ್ಡಬಹುದಾದ ಅವಕಾಶ ಇರುವುದು ಟ್ರಾವಿಸ್ ಹೆಡ್‌ಗೆ ಮಾತ್ರ. ಏಕೆಂದರೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ 12 ಪಂದ್ಯಗಳಲ್ಲಿ 533 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಟ್ರಾವಿಸ್ ಹೆಡ್ ಈ ಬಾರಿ ಪ್ಲೇಆಫ್‌ನಲ್ಲಿ ಉತ್ತಮ ಮೊತ್ತ ಗಳಿಸಿದರೆ ಮಾತ್ರ ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶವಿದೆ. ಅತ್ತ ವಿರಾಟ್‌ ಮುಂದೆಯೂ ಕನಿಷ್ಠ 2 ಪಂದ್ಯಗಳಿರುವುದರಿಂದ ಕೊಹ್ಲಿ ಅವಕಾಶ ಕೈಚೆಲ್ಲುವ ಸಾಧ್ಯತೆ ತುಂಬಾ ಕಡಿಮೆ.
icon

(8 / 9)

ವಿರಾಟ್‌ ಕೊಹಲಿಗೆ ಸವಾಲೊಡ್ಡಬಹುದಾದ ಅವಕಾಶ ಇರುವುದು ಟ್ರಾವಿಸ್ ಹೆಡ್‌ಗೆ ಮಾತ್ರ. ಏಕೆಂದರೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ 12 ಪಂದ್ಯಗಳಲ್ಲಿ 533 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಟ್ರಾವಿಸ್ ಹೆಡ್ ಈ ಬಾರಿ ಪ್ಲೇಆಫ್‌ನಲ್ಲಿ ಉತ್ತಮ ಮೊತ್ತ ಗಳಿಸಿದರೆ ಮಾತ್ರ ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶವಿದೆ. ಅತ್ತ ವಿರಾಟ್‌ ಮುಂದೆಯೂ ಕನಿಷ್ಠ 2 ಪಂದ್ಯಗಳಿರುವುದರಿಂದ ಕೊಹ್ಲಿ ಅವಕಾಶ ಕೈಚೆಲ್ಲುವ ಸಾಧ್ಯತೆ ತುಂಬಾ ಕಡಿಮೆ.(LSG- X)

ರಿಯಾನ್ ಪರಾಗ್ ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು 14 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 531 ರನ್‌ ಗಳಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಿಯಾನ್ ಪರಾಗ್ ಕೂಡ ಪ್ಲೇಆಫ್ನಲ್ಲಿ ಉತ್ತಮ ರನ್ ಗಳಿಸಿದರೆ, ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುನ್ನುಗ್ಗಲಿದ್ದಾರೆ.
icon

(9 / 9)

ರಿಯಾನ್ ಪರಾಗ್ ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು 14 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 531 ರನ್‌ ಗಳಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಿಯಾನ್ ಪರಾಗ್ ಕೂಡ ಪ್ಲೇಆಫ್ನಲ್ಲಿ ಉತ್ತಮ ರನ್ ಗಳಿಸಿದರೆ, ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುನ್ನುಗ್ಗಲಿದ್ದಾರೆ.(AFP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು