ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Isi Spy Arrested: ಕರ್ತಾರ್‌ಪುರ ಕಾರಿಡಾರ್‌ ಮೂಲಕ ಪಾಕ್‌ಗೆ ಹೊರಟಿದ್ದ ʻಐಎಸ್‌ಐ ಗೂಢಚರʼ ಪಂಜಾಬ್‌ ಪೊಲೀಸರ ಬಲೆಗೆ; ಪಗ್ರತಿಯಲ್ಲಿದೆ ತನಿಖೆ

ISI spy arrested: ಕರ್ತಾರ್‌ಪುರ ಕಾರಿಡಾರ್‌ ಮೂಲಕ ಪಾಕ್‌ಗೆ ಹೊರಟಿದ್ದ ʻಐಎಸ್‌ಐ ಗೂಢಚರʼ ಪಂಜಾಬ್‌ ಪೊಲೀಸರ ಬಲೆಗೆ; ಪಗ್ರತಿಯಲ್ಲಿದೆ ತನಿಖೆ

ISI spy arrested: ಪಾಕಿಸ್ತಾನದ ಇಂಟರ್‌ ಸರ್ವೀಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಶಂಕೆಯ ಮೇರೆಗೆ ತಾಪಿಂದರ್‌ ಸಿಂಗ್‌ನನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಗುರುವಾರ ಬಂಧಿಸಿದ್ದಾರೆ.

ಆರೋಪಿ ತಪಿಂದರ್ ಸಿಂಗ್ ನನ್ನು ಮೊಹಾಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಆರೋಪಿ ತಪಿಂದರ್ ಸಿಂಗ್ ನನ್ನು ಮೊಹಾಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. (HT Photo)

ಪಾಕಿಸ್ತಾನಕ್ಕೆ ಹೊರಟ ʻಐಎಸ್‌ಐ ಗೂಢಚರʼನೊಬ್ಬನನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತಾಪಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ಪಾಕಿಸ್ತಾನದ ಇಂಟರ್‌ ಸರ್ವೀಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಶಂಕೆಯ ಮೇರೆಗೆ ತಾಪಿಂದರ್‌ ಸಿಂಗ್‌ನನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಗುರುವಾರ ಬಂಧಿಸಿದ್ದಾರೆ. ಆತ ಚಂಡೀಗಢದ ಸೆಕ್ಟರ್‌ 40ರಲ್ಲಿ ನಿವಾಸದಲ್ಲಿದ್ದಾಗ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.

ಪಂಜಾಬ್‌ ಪೊಲೀಸರು ಮಾಧ್ಯಮಕ್ಕೆ ನೀಡಿದ ಮಾಹಿತಿ ಪ್ರಕಾರ, "ಪಾಕಿಸ್ತಾನದಲ್ಲಿರುವ ಆತನ ಪ್ರಾಯೋಜಕ ನಿರ್ದೇಶಕರ ನಿರ್ದೇಶನಾನುಸಾರ ಆತ ಪಾಕಿಸ್ತಾನಕ್ಕೆ ಹೊರಟಿದ್ದ. ವಾಟ್ಸ್‌ಆಪ್‌ ಚಾಟ್‌ನಲ್ಲಿ ಇತ್ತೀಚೆಗೆ ಆತನಿಗೆ ಈ ಕುರಿತು ಆದೇಶ ಸಿಕ್ಕಿತ್ತು. ಕರ್ತಾರ್‌ಪುರ ಕಾರಿಡಾರ್‌ಗೆ ತಾಪಿಂದರ್‌ ನಿಯೋಜನೆ ಆಗಿದ್ದು, ಅಲ್ಲಿ ಭೇಟಿಗೆ ವ್ಯವಸ್ಥೆ ಆಗಿದೆ ಎಂಬುದು ಸಂದೇಶದ ಸಾರವಾಗಿತ್ತು ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕುರಿತ ತನಿಖೆ ಪ್ರಗತಿಯಲ್ಲಿದೆ.

ಏತನ್ಮಧ್ಯೆ, ದೆಹಲಿ ಮೂಲದ ವ್ಯಕ್ತಿ ಮತ್ತು ಚಂಡೀಗಢ ನಿವಾಸಿ ಸೇರಿ ತಾಪಿಂದರ್‌ನ ಇಬ್ಬರು ಸಹಚರರನ್ನು ಪೊಲೀಸರು ಗುರುತಿಸಿದ್ದಾರೆ. “ನಾವು ಆತನ ಸಹಚರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿದ್ದೇವೆ. ನಮ್ಮ ತಂಡ ಶೀಘ್ರದಲ್ಲೇ ಅವರನ್ನು ಬಂಧಿಸಲಿದೆ. ತಾಪಿಂದರ್‌ನನ್ನು ಸೋಮವಾರ ಮೊಹಾಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನ ಸ್ಥಳೀಯ ಮತ್ತು ವಿದೇಶಿ ಸಂಪರ್ಕವನ್ನು ಸ್ಥಾಪಿಸಲು ಡಿಸೆಂಬರ್ 21 ರವರೆಗೆ ಅವರ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಲಾಗಿದೆ”ಎಂದು ಪೊಲೀಸ್‌ ಅಧಿಕಾರಿ ಹೇಳಿದ್ಧಾರೆ.

ಸೂಕ್ಷ್ಮ ದಾಖಲೆಗಳು, ಸ್ಥಳಗಳು ಮತ್ತು ಭಾರತದ ಪೊಲೀಸ್ ಠಾಣೆಗಳು ಮತ್ತು ಸೇನಾ ನೆಲೆಗಳ ಬಗ್ಗೆ ಇತರ ಮಾಹಿತಿಯನ್ನು ಐಎಸ್‌ಐಗೆ ಒದಗಿಸಿದ ಆರೋಪದ ಮೇಲೆ ಗುರುವಾರ ತಾಪಿಂದರ್‌ನನ್ನು ಬಂಧಿಸಲಾಯಿತು. ತಾಪಿಂದರ್‌ ಸಿಂಗ್‌ ಕೃತ್ಯವು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ.

ಎಸ್‌ಎಸ್‌ಒಸಿ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ (ಎಐಜಿ) ಅಶ್ವನಿ ಕಪೂರ್ ಪ್ರಕಾರ, ತಾಪಿಂದರ್ ಅವರ ಬೇಹುಗಾರಿಕೆ ಚಟುವಟಿಕೆಗಳ ಬಗ್ಗೆ ರಹಸ್ಯ ಮಾಹಿತಿ ಸಿಕ್ಕ ನಂತರ ಬಂಧಿಸಲಾಯಿತು. ಐಎಸ್‌ಐ ಏಜೆಂಟ್‌ಗಳ ಜತೆಗೆ ತಾಪಿಂದರ್‌ ನಡೆಸಿ ವಾಟ್ಸಾಪ್ ಚಾಟ್ಸ್, ಐಎಸ್‌ಐ ಏಜೆಂಟ್‌ಗಳಿಗೆ ಕಳುಹಿಸಿದ ವಿವಿಧ ಪೊಲೀಸ್ ಠಾಣೆಗಳ ಛಾಯಾಚಿತ್ರಗಳು ಮತ್ತು ಸ್ಥಳಗಳು ಮತ್ತು ಎಸ್‌ಎಸ್‌ಒಸಿ ಕಟ್ಟಡದ ವಿಡಿಯೊಗಳನ್ನು ಒಳಗೊಂಡಿರುವ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ.

ಆದಾಗ್ಯೂ, ಮೂಲಗಳ ಪ್ರಕಾರ ತಾಪಿಂದರ್‌ ಕೃತ್ಯಗಳ ಬಗ್ಗೆ ಅವರ ಕುಟುಂಬಕ್ಕೆ ಅರಿವು ಇರಲಿಲ್ಲ. ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ವಿಜ್ಞಾನ ಮತ್ತು ಪಂಜಾಬಿಯಲ್ಲಿ ಡಬಲ್ ಸ್ನಾತಕೋತ್ತರ ಪದವೀಧರರಾಗಿರುವ ಅವರು ಈಗ ಬೇಹುಗಾರಿಕೆ ಸಂಬಂಧಿತ ಪ್ರಕರಣ ಎದುರಿಸುತ್ತಿದ್ದಾರೆ.

ಗಮನಿಸಬಹುದಾದ ಇತರ ಸುದ್ದಿಗಳು

Pakistan toffee with beef: ಉದಯಪುರದಲ್ಲಿ ತಲ್ಲಣ ಸೃಷ್ಟಿಸಿದ ಪಾಕಿಸ್ತಾನಿ ಟೋಫಿ; ವಶಪಡಿಸಿಕೊಂಡು ಪರಿಶೀಲನೆಗೆ ಕಳುಹಿಸಿದ ಆಹಾರ ಇಲಾಖೆ

Beef in toffees: ಉದಯಪುರದಲ್ಲಿ ಪಾಕಿಸ್ತಾನ್‌ ಉತ್ಪಾದಿತ ಟೋಫಿಗಳು ಮಾರಾಟ ಆಗುತ್ತಿವೆ. ಅದರಲ್ಲಿ ಬೀಫ್‌ ಇದೆ. ನೋಡದೇ ತಿನ್ನಬೇಡಿ. ಕೆಂಪು ಚುಕ್ಕೆ ಇರುವುದನ್ನು ಗಮನಿಸಿ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ಈ ವಿದ್ಯಮಾನದ ವಿವರ ಇಲ್ಲಿದೆ. ಕ್ಲಿಕ್‌ ಮಾಡಿ.

Mercedes car robbed: ಮೂತ್ರ ವಿಸರ್ಜನೆಗೆ ಇಳಿದ ಮರ್ಸಿಡೆಸ್‌ ಮಾಲೀಕ; ಕತ್ತಿಗೆ ಚೂರಿ ಇಟ್ಟು ಕಾರು ಹೊತ್ತೊಯ್ದ ದರೋಡೆಕೋರರು!

Mercedes car robbed: ಇದು ಗುರುಗ್ರಾಮದಲ್ಲಿ ನಡೆದ ಘಟನೆ. ಮೂತ್ರ ವಿಸರ್ಜನೆಗೆ ಎಂದು ಮರ್ಸಿಡೆಸ್‌ ನಿಲ್ಲಿಸಿ ಕೆಳಗಿಳಿದ ಮಾಲೀಕನ ಕತ್ತಿಗೆ ಚೂರಿ ಇಟ್ಟು ಬೆದರಿಸಿ ಕಾರನ್ನು ದರೋಡೆಕೋರರು ಹೊತ್ತೊಯ್ದ ಘಟನೆ ವರದಿಯಾಗಿದೆ. ಇದರ ವಿವರ ಇಲ್ಲಿದೆ. ಕ್ಲಿಕ್‌ ಮಾಡಿ.

IPL_Entry_Point