ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mercedes Car Robbed: ಮೂತ್ರ ವಿಸರ್ಜನೆಗೆ ಇಳಿದ ಮರ್ಸಿಡೆಸ್‌ ಮಾಲೀಕ; ಕತ್ತಿಗೆ ಚೂರಿ ಇಟ್ಟು ಕಾರು ಹೊತ್ತೊಯ್ದ ದರೋಡೆಕೋರರು!

Mercedes car robbed: ಮೂತ್ರ ವಿಸರ್ಜನೆಗೆ ಇಳಿದ ಮರ್ಸಿಡೆಸ್‌ ಮಾಲೀಕ; ಕತ್ತಿಗೆ ಚೂರಿ ಇಟ್ಟು ಕಾರು ಹೊತ್ತೊಯ್ದ ದರೋಡೆಕೋರರು!

Mercedes car robbed: ಇದು ಗುರುಗ್ರಾಮದಲ್ಲಿ ನಡೆದ ಘಟನೆ. ಮೂತ್ರ ವಿಸರ್ಜನೆಗೆ ಎಂದು ಮರ್ಸಿಡೆಸ್‌ ನಿಲ್ಲಿಸಿ ಕೆಳಗಿಳಿದ ಮಾಲೀಕನ ಕತ್ತಿಗೆ ಚೂರಿ ಇಟ್ಟು ಬೆದರಿಸಿ ಕಾರನ್ನು ದರೋಡೆಕೋರರು ಹೊತ್ತೊಯ್ದ ಘಟನೆ ವರದಿಯಾಗಿದೆ. ಇದರ ವಿವರ ಇಲ್ಲಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (HT)

ಹರಿಯಾಣದ ಗುರುಗ್ರಾಮದಲ್ಲಿ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿ ಕೆಳಗಿಳಿದ ಮರ್ಸಿಡೆಸ್‌ ಮಾಲೀಕರ ಕತ್ತಿಗೆ ಚೂರಿ ಇಟ್ಟು ಬೆದರಿಸಿದ ದರೋಡೆಕೋರರು ಕಾರನ್ನು ಹೊತ್ತೊಯ್ದ ಘಟನೆ ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಗುರುಗ್ರಾಮದ ಸೆಕ್ಟರ್‌ 29 ಏರಿಯಾದಲ್ಲಿ ಮೂವರು ದರೋಡೆಕೋರರು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದ್ದಾರೆ.

ದರೋಡೆಗೊಳಗಾದವರು ವಕೀಲ ಅಂಜು ಬೇಡಿ. ಅವರು ಸೆಕ್ಟರ್‌ 66ರ ನಿವಾಸಿ. ಗುರುವಾರ ರಾತ್ರಿ 8.50ಕ್ಕೆ ಸೆಕ್ಟರ್‌ 29 ಏರಿಯಾದ ಅಗ್ನಿಶಾಮಕ ಕೇಂದ್ರ ಮತ್ತು ಆಡಿ ಷೋರೂಂ ನಡುವೆ ಈ ದರೋಡೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಕೀಲ ಅಂಜು ಬೇಡಿ ಅವರ ದೂರಿನಲ್ಲಿ ಏನಿದೆ?

"ನಾನು ಸೆಕ್ಟರ್‌ 29ರ ಮದ್ಯದಂಗಡಿಯಿಂದ ಮನೆಗೆ ನನ್ನ ಬಿಳಿ ಮರ್ಸಿಡೆಸ್‌-ಸಿ220(2014 ಮಾಡೆಲ್‌) ಕಾರಿನಲ್ಲಿ ಹೋಗುತ್ತಿದ್ದೆ. ಆಡಿ ಷೋ ರೂಂ ದಾಟಿದ ಕೂಡಲೇ ರಸ್ತೆ ಬದಿಗೆ ಕಾರು ನಿಲ್ಲಿಸಿದೆ. ಮೂತ್ರ ಮಾಡುವುದಕ್ಕೆಂದು ಕಾರಿನಿಂದ ಕೆಳಗಿಳಿದು ರಸ್ತೆ ಬದಿಗೆ ಹೋದೆ. ಮೂತ್ರ ವಿಸರ್ಜನೆ ಮಾಡಿ ವಾಪಸ್‌ ಕಾರಿನ ಬಳಿ ಹೋಗಿದ್ದೆ.

ಅಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ಹ್ಯುಂಡೈ ಕಾರು ನನ್ನ ಕಾರಿನ ಎದುರು ನಿಂತುಬಿಟ್ಟಿತು. ಅದರಿಂದ ಕೆಳಕ್ಕೆ ಇಳಿದ ಮೂವರು ನನ್ನ ಬಳಿ ಬಂದರು. ಅವರಲ್ಲೊಬ್ಬ ನನ್ನನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡ. ಕತ್ತಿಗೆ ಚೂರಿ ತಾಗಿಸಿ ಬೆದರಿಸಿದ. ಬಳಿಕ ನನ್ನ ಕಾರು ತಗೊಂಡು ಓಡಿ ಅಲ್ಲಿಂದ ಪರಾರಿಯಾದರು" ಎಂದು ವಕೀಲ ಅಂಜು ಬೇಡಿ ದೂರಿನಲ್ಲಿ ತಿಳಿಸಿದ್ದಾರೆ.

ಎಫ್‌ಐಆರ್‌ ದಾಖಲಿಸಿರುವ ಪೊಲೀಸರು

ವಕೀಲ ಅಂಜು ಬೇಡಿ ದೂರಿನ ಪ್ರಕಾರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇದರ ತನಿಖೆ ನಡೆಸುತ್ತಿರುವ ಎಎಸ್‌ಐ ಸಂದೀಪ್‌ ಕುಮಾರ್‌, "ಈ ಕೃತ್ಯ ನಡೆದ ಸ್ಥಳದ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳನ್ನು ಗುರುತಿಸುವುದಕ್ಕೆ ಇದರಲ್ಲಿ ಸುಳಿವು ಸಿಗಬಹುದು. ಆರೋಪಿಗಳ ಪತ್ತೆಗೆ ಈಗಾಗಲೇ ಶೋಧ ಮುಂದುವರಿಸಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಗಮನಿಸಬಹುದಾದ ಇತರ ವಿಚಾರಗಳು

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ; ಶನಿದೇವರ ಅನುಗ್ರಹ ಪಡೆಯವುದು ಹೇಗೆ?

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ. ಈ ರಾಶಿಯವರು ಈ ದಿನ ಶನಿದೇವರ ಅನುಗ್ರಹಕ್ಕಾಗಿ ಶನಿದೇವರನ್ನು ಪೂಜಿಸಬೇಕು. ಸಾಡೇಸಾತಿ ಶನಿಯಿಂದಲೂ ಪರಿಹಾರಕ್ಕೆ ಇದು ಉತ್ತಮ ಪರಿಹಾರ ಒದಗಿಸಬಹುದು. ಶನಿದೇವರಿಗೆ ಸಂಬಂಧಿಸಿದ ಯಾವ ಸ್ತೋತ್ರ ಇಂದು ಪಠಿಸಬೇಕು? ಇಲ್ಲಿದೆ ಮಾಹಿತಿ.

Sugar for skin care: ಸಕ್ಕರೆ ಬಾಯಿಗಷ್ಟೇ ಅಲ್ಲ ಚರ್ಮಕ್ಕೂ ʻಸಿಹಿʼ!; ಕೇವಲ 1 ಚಮಚ ಸಕ್ಕರೆ, ಚರ್ಮದ ಅನೇಕ ಸಮಸ್ಯೆಗಳಿಗೆ ಔಷಧ!

Sugar for skin care: ಸಕ್ಕರೆ ಕೇವಲ ಬಾಯಿ ರುಚಿಗೆ ಮಾತ್ರ ಸೀಮಿತವಲ್ಲ. ಸೌಂದರ್ಯಕ್ಕೂ ಅದಕ್ಕೂ ಲಿಂಕ್‌ ಇದೆ. ಏನದು ಎಂಬ ಕುತೂಹಲವೇ? ಇಲ್ಲಿದೆ ಆ ವಿವರ

IPL_Entry_Point