ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pakistan Toffee With Beef: ಉದಯಪುರದಲ್ಲಿ ತಲ್ಲಣ ಸೃಷ್ಟಿಸಿದ ಪಾಕಿಸ್ತಾನಿ ಟೋಫಿ; ವಶಪಡಿಸಿಕೊಂಡು ಪರಿಶೀಲನೆಗೆ ಕಳುಹಿಸಿದ ಆಹಾರ ಇಲಾಖೆ

Pakistan toffee with beef: ಉದಯಪುರದಲ್ಲಿ ತಲ್ಲಣ ಸೃಷ್ಟಿಸಿದ ಪಾಕಿಸ್ತಾನಿ ಟೋಫಿ; ವಶಪಡಿಸಿಕೊಂಡು ಪರಿಶೀಲನೆಗೆ ಕಳುಹಿಸಿದ ಆಹಾರ ಇಲಾಖೆ

Beef in toffees: ಉದಯಪುರದಲ್ಲಿ ಪಾಕಿಸ್ತಾನ್‌ ಉತ್ಪಾದಿತ ಟೋಫಿಗಳು ಮಾರಾಟ ಆಗುತ್ತಿವೆ. ಅದರಲ್ಲಿ ಬೀಫ್‌ ಇದೆ. ನೋಡದೇ ತಿನ್ನಬೇಡಿ. ಕೆಂಪು ಚುಕ್ಕೆ ಇರುವುದನ್ನು ಗಮನಿಸಿ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ಮಾಂಸಾಹಾರಿ ಉತ್ಪನ್ನ ಎಂಬುದನ್ನು ಬಿಂಬಿಸುವ ಕೆಂಪುಚುಕ್ಕೆ ಮತ್ತು ಮೇಡ್‌ ಇನ್‌ ಪಾಕಿಸ್ತಾನ ಎಂಬ ಬರೆಹ ಲೇಬಲ್‌ನಲ್ಲಿರುವುದನ್ನು ಆಹಾರ ಇಲಾಖೆ ಅಧಿಕಾರಿಗಳು ದೃಢೀಕರಿಸಿದ್ದಾರೆ.
ಮಾಂಸಾಹಾರಿ ಉತ್ಪನ್ನ ಎಂಬುದನ್ನು ಬಿಂಬಿಸುವ ಕೆಂಪುಚುಕ್ಕೆ ಮತ್ತು ಮೇಡ್‌ ಇನ್‌ ಪಾಕಿಸ್ತಾನ ಎಂಬ ಬರೆಹ ಲೇಬಲ್‌ನಲ್ಲಿರುವುದನ್ನು ಆಹಾರ ಇಲಾಖೆ ಅಧಿಕಾರಿಗಳು ದೃಢೀಕರಿಸಿದ್ದಾರೆ.

ಪಾಕಿಸ್ತಾನ ಉತ್ಪಾದಿತ ಟೋಫಿ ಮಾರಾಟವಾಗುತ್ತಿದೆ. ಅದರಲ್ಲಿ ಬೀಫ್‌ ಸೇರಿಕೊಂಡಿದೆ ಎಂಬ ಸುದ್ದಿ ರಾಜಸ್ಥಾನದ ಉದಯಪುರದಲ್ಲಿ ತಲ್ಲಣ ಸೃಷ್ಟಿಸಿತ್ತು. ಇದೇ ಕಾರಣಕ್ಕೆ ರಾಜಸ್ಥಾನದ ಆರೋಗ್ಯ ಇಲಾಖೆ ಅಧಿಕಾರಿಗಳು ಉದಯಪುರದಲ್ಲಿ ಅಂಗಡಿ ತಪಾಸಣೆ ನಡೆಸಿದ್ದರು.

ಟ್ರೆಂಡಿಂಗ್​ ಸುದ್ದಿ

ತಪಾಸಣೆ ವೇಳೆ ಕಂಡುಬಂದ ಟೋಫಿ ಇದು. ಚಿಲಿಮಿಲಿ ಎಂಬ ಬಣ್ಣಬಣ್ಣದ ಪೊಟ್ಟಣದಲ್ಲಿದ್ದ ಈ ಟೋಫಿ ಗಮನಸೆಳೆದಿದೆ. ಅದರಲ್ಲಿ ಮೇಡ್‌ ಇನ್‌ ಪಾಕಿಸ್ತಾನ ಎಂಬ ಬರೆಹವೂ ಇತ್ತು. ಕೆಂಪು ಚುಕ್ಕೆ ಹೊಂದಿದ್ದ ಈ ಟೋಫಿ ನಾನ್‌-ವೆಜ್‌ ಎಂಬುದು ದೃಢಪಟ್ಟಿದೆ. ಆಹಾರ ಇಲಾಖೆ ಅಧಿಕಾರಿಗಳ ತಂಡ ಈ ಟೋಫಿಗಳನ್ನು ವಶಪಡಿಸಿಕೊಂಡು ತಪಾಸಣೆಗಾಗಿ ಲ್ಯಾಬ್‌ಗೆ ರವಾನಿಸಿದೆ.

ಎಎನ್‌ಐ ವರದಿ ಪ್ರಕಾರ, ಆಹಾರ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಇದು - “ಮಾಧ್ಯಮ ವರದಿಗಳನ್ನು ಆಧರಿಸಿ ನಾವು ಒಂದು ಚಾಕೊಲೇಟ್‌ ಅಂಗಡಿಗೆ ದಾಳಿ ನಡೆಸಿದೆವು. ಅಲ್ಲಿ ಕೆಲವು ಚಾಕೊಲೇಟ್‌ ಪೊಟ್ಟಣಗಳು ಸಿಕ್ಕಿವೆ. ಅದರಲ್ಲಿ ಮೇಡ್‌ ಇನ್‌ ಪಾಕಿಸ್ತಾನ್‌ ಎಂಬ ಬರೆಹ ಇತ್ತು. ಕೆಲವು ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು”.

ಸದ್ಯ ಮೂರು ದೊಡ್ಡ ಪೊಟ್ಟಣಗಳು ಸಿಕ್ಕಿವೆ. ಅದರಲ್ಲಿ ಒಂದನ್ನು ಓಪನ್‌ ಮಾಡಿ ನೋಡಿದಾಗ 24 ಟೋಫಿಗಳ ಎರಡು ಕಟ್ಟು ಕಂಡುಬಂದಿವೆ. ಇದೇ ರೀತಿ ಟೋಫಿಗಳು ಇತರೆ ಅಂಗಡಿಗಳಿಗೂ ವಿತರಣೆ ಆಗಿರುವುದು ಕಂಡುಬಂದಿದೆ. ಈ ಪೊಟ್ಟಣ ಬಲೂಚಿಸ್ತಾನ್‌ ವಿಳಾಸದಿಂದ ರಾಜಸ್ಥಾನಕ್ಕೆ ಬಂದಿರುವುದು ದೃಢಪಟ್ಟಿದೆ. ಟೋಫಿಯ ರ್ಯಾಪರ್‌ನಲ್ಲಿ ಮೇಡ್‌ ಇನ್‌ ಪಾಕಿಸ್ತಾನ ಎಂಬ ಬರೆಹ ಮತ್ತು ಕೆಂಪು ಚುಕ್ಕೆ (ನಾನ್‌-ವೆಜ್‌ ಸಂಕೇತ) ಇದೆ.

ಉದಯಪುರದಲ್ಲಿ ಪಾಕಿಸ್ತಾನ್‌ ಉತ್ಪಾದಿತ ಟೋಫಿಗಳು ಮಾರಾಟ ಆಗುತ್ತಿವೆ. ಅದರಲ್ಲಿ ಬೀಫ್‌ ಇದೆ. ನೋಡದೇ ತಿನ್ನಬೇಡಿ. ಕೆಂಪು ಚುಕ್ಕೆ ಇರುವುದನ್ನು ಗಮನಿಸಿ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಇದು ಸಾರ್ವಜನಿಕರ ಗಮನಸೆಳೆದಿತ್ತು. ಅಲ್ಲದೆ ಈ ಕುರಿತು ದೂರು ಬಂದ ಕಾರಣ ಆಹಾರ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ತಪಾಸಣೆ ನಡೆಸಿದ ವೇಳೆ ಪಾಕ್‌ ಉತ್ಪಾದಿತ ಟೋಫಿ ಮಾರಾಟ ದೃಢಪಟ್ಟಿದೆ. ಈ ಟೋಫಿ ಮಾರಾಟ ಮಾಡುತ್ತಿದ್ದ ಅಂಗಡಿ ಒಂದು ಪೊಲೀಸ್‌ ಠಾಣೆಗೆ ಸಮೀಪದಲ್ಲೆ ಇದೆ ಎಂಬುದು ವಿಶೇಷ. ಲ್ಯಾಬ್‌ನಿಂದ ವರದಿ ಬಂದ ಬಳಿಕ ಉಳಿದ ವಿಚಾರಗಳು ಬಹಿರಂಗವಾಗಲಿದೆ ಎಂದು ವರದಿ ಹೇಳಿದೆ.

ಗಮನಿಸಬಹುದಾದ ಇತರ ವಿಚಾರಗಳು

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ; ಶನಿದೇವರ ಅನುಗ್ರಹ ಪಡೆಯವುದು ಹೇಗೆ?

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ. ಈ ರಾಶಿಯವರು ಈ ದಿನ ಶನಿದೇವರ ಅನುಗ್ರಹಕ್ಕಾಗಿ ಶನಿದೇವರನ್ನು ಪೂಜಿಸಬೇಕು. ಸಾಡೇಸಾತಿ ಶನಿಯಿಂದಲೂ ಪರಿಹಾರಕ್ಕೆ ಇದು ಉತ್ತಮ ಪರಿಹಾರ ಒದಗಿಸಬಹುದು. ಶನಿದೇವರಿಗೆ ಸಂಬಂಧಿಸಿದ ಯಾವ ಸ್ತೋತ್ರ ಇಂದು ಪಠಿಸಬೇಕು? ಇಲ್ಲಿದೆ ಮಾಹಿತಿ.

Sugar for skin care: ಸಕ್ಕರೆ ಬಾಯಿಗಷ್ಟೇ ಅಲ್ಲ ಚರ್ಮಕ್ಕೂ ʻಸಿಹಿʼ!; ಕೇವಲ 1 ಚಮಚ ಸಕ್ಕರೆ, ಚರ್ಮದ ಅನೇಕ ಸಮಸ್ಯೆಗಳಿಗೆ ಔಷಧ!

Sugar for skin care: ಸಕ್ಕರೆ ಕೇವಲ ಬಾಯಿ ರುಚಿಗೆ ಮಾತ್ರ ಸೀಮಿತವಲ್ಲ. ಸೌಂದರ್ಯಕ್ಕೂ ಅದಕ್ಕೂ ಲಿಂಕ್‌ ಇದೆ. ಏನದು ಎಂಬ ಕುತೂಹಲವೇ? ಇಲ್ಲಿದೆ ಆ ವಿವರ

IPL_Entry_Point