ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಜಸ್ಥಾನದ ಹಳ್ಳಿಯಿಂದ ಉಪ ರಾಷ್ಟ್ರಪತಿ ಭವನದ ವರೆಗೆ ಜಗದೀಪ್ ಧನಕರ್ ಪ್ರಯಾಣ ಹೀಗಿದೆ...

ರಾಜಸ್ಥಾನದ ಹಳ್ಳಿಯಿಂದ ಉಪ ರಾಷ್ಟ್ರಪತಿ ಭವನದ ವರೆಗೆ ಜಗದೀಪ್ ಧನಕರ್ ಪ್ರಯಾಣ ಹೀಗಿದೆ...

ಪಶ್ಚಿಮ ಬಂಗಾಳದ ಗವರ್ನರ್ ಆಗಿ 2019 ರಲ್ಲಿ ರಾಜಕೀಯ ರಂಗದಲ್ಲಿ ಜಗದೀಪ್ ಧನಕರ್ ಅವರ ನಡೆ-ನುಡಿ, ಧೈರ್ಯ ಭಾರಿ ಮೆಚ್ಚುಗೆಗೆ ಕಾರಣವಾಗಿತ್ತು. ಆದ್ದರಿಂದಲೇ ಅವರ ಮುಂದಿನ ಭಾರತದ ಉಪ ರಾಷ್ಟ್ರಪತಿ ಹುದ್ದೆಗೆ ಏರಿದ್ದಾರೆ. ರಾಜಸ್ಥಾನದ ಹಳ್ಳಿಯಿಂದ ಉಪ ರಾಷ್ಟ್ರಪತಿ ಭವನದ ವರೆಗೆ ಜಗದೀಪ್ ಧನಕರ್ ಪ್ರಯಾಣ ಹೀಗಿದೆ

ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ಜಗದೀಪ್ ಧನಕರ್ (ಫೋಟೋ-HT File)
ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ಜಗದೀಪ್ ಧನಕರ್ (ಫೋಟೋ-HT File)

ನವದೆಹಲಿ: ಇಂದು (ಆಗಸ್ಟ್ 6, 2022) ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ (Jagdeep Dhankhar) ವಿರೋಧ ಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಅಳ್ವ ಅವರನ್ನು 346 ಮತಗಳ ಅಂತಗದಿಂದ ಮಣಿಸುವ ಮೂಲಕ ದೇಶದ 14ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆ ಆಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರು 182 ಮತ ಪಡೆದರೆ, 71 ವರ್ಷದ ಧನಕರ್ 528 ಮತಗಳನ್ನು ಪಡೆದ ದೇಶದ ಮುಂದಿನ ಉಪ ರಾಷ್ಟ್ರಪತಿ ಹುದ್ದೆಗೇರುತ್ತಿದ್ದಾರೆ. ಜಗದೀಪ್ ಧನಕರ್ ಅವರ ರಾಜಸ್ಥಾನದ ಹಳ್ಳಿಯಿಂದ ಉಪ ರಾಷ್ಟ್ರಪತಿ ಭವನದ ವರೆಗೆ ಅವರ ಪಯಣದ ಮಾಹಿತಿ ಇಲ್ಲಿದೆ.

ಮೂಲತಃ ವಕೀಲರಾಗಿರುವ ಧನಕರ್ ಅವರು ರಾಜಸ್ಥಾನ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘ ಕಾನೂನು ವೃತ್ತಿಜೀವನ ನಡೆಸಿದರು. ಆ ಬಳಿಕ ರಾಜಕೀಯ ಪ್ರವೇಶಿಸಿ ಕೇಂದ್ರದಲ್ಲಿ ಕಿರಿಯ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಜನತಾ ದಳ ಮತ್ತು ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ಧನಕರ್ ಅವರು, ಸುಮಾರು ಒಂದು ದಶಕದ ಬಳಿಕ ಅಂದರೆ 2008 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ರಾಜಸ್ಥಾನದಲ್ಲಿ ಜಾಟ್ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡುವುದು ಸೇರಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಧ್ವನಿ ಎತ್ತಿದ್ದ ಇವರು, 2019 ರಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಆಗಿ ಅನಿರೀಕ್ಷಿತವಾಗಿ ನೇಮಕವಾಗಿದ್ದರು. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಅನ್ನು ಆಗಾಗ್ಗೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಇವರು ಸುದ್ದಿಯಾಗಿದ್ದರು.

2019 ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಳ್ಳುವ ಮೊದಲು, ಜಗದೀಪ್ ಧನಕರ್ ಅವರು ಹೆಸರು ರಾಜಕೀಯ ವಲಯದಲ್ಲಿ ಅಪರಿಚಿತ. 1993-98 ರಲ್ಲಿ ರಾಜಸ್ಥಾನದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು. ಆ ಬಳಿಕ ಅವರು ರಾಜಕೀಯದಿಂದ ದೂರವಾಗಿ ತಮ್ಮ ವಕೀಲ ವೃತ್ತಿಯಲ್ಲಿ ತೊಡಗಿದ್ದರು.

ತಮ್ಮ ಶಾಲಾ ದಿನಗಳಲ್ಲಿ ಕ್ರಿಕೆಟ್‌ ಬಗ್ಗೆ ಹೆಚ್ಚು ಒಲವು ಹೊಂದಿದ್ದರು, ಆಧ್ಯಾತ್ಮಿಕತೆ ಮತ್ತು ಧ್ಯಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳಸಿಕೊಂಡಿದ್ದರು. ಧನಕರ್ ಜನತಾ ದಳದೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ್ದರು. 1989 ರಲ್ಲಿ ರಾಜಸ್ಥಾನದ ಜುಂಜುನುದಿಂದ ಬೋಫೋರ್ಸ್ ಹಗರಣ ಸದ್ದು ಮಾಡಿದ್ದ ಸಂದರ್ಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ಅಂದಿನ ಪ್ರಧಾನಮಂತ್ರಿ ಚಂದ್ರಶೇಖರ್ ಅವರ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಅಲ್ಪಾವಧಿಯ ಕಾಲ ಸೇವೆ ಸಲ್ಲಿಸಿದ್ದರು.

ಜಗದೀಪ್ ಧನಕರ್ ಅವರು ದೇವಿ ಲಾಲ್ ಅವರಿಂದ ಪ್ರಭಾವಿತರಾದವರು. ನಂತರ ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಅವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಪ್ಯಾರಿಸ್‌ನ ಇಂಟರ್‌ನ್ಯಾಶನಲ್ ಕೋರ್ಟ್ ಆಫ್ ಆರ್ಬಿಟ್ರೇಶನ್‌ನ ಸದಸ್ಯರಾಗಿ ಮೂರು ವರ್ಷಗಳ ಅವಧಿಯಲ್ಲಿ ಕೆಲಸ ಮಾಡಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಧನಕರ್ ಅವರನ್ನು ಮೊದಲ ತಲೆಮಾರಿನ ವಕೀಲರು "ಆಡಳಿತಾತ್ಮಕ ಸಾಮರ್ಥ್ಯದಲ್ಲಿ ಸಂಪೂರ್ಣವಾಗಿ ಸಜ್ಜುಗೊಳಿಸಿದ್ದಾರೆ" ಎಂದು ಬಣ್ಣಿಸಿದ್ದರು. ಇವರು ರಾಜಕೀಯ ನಾಯಕರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆಂದು ತಿಳಿದುಬಂದಿದೆ. ಈ ಗುಣವು ರಾಜ್ಯಸಭೆಯ ಅಧ್ಯಕ್ಷತೆಯನ್ನು ಸೂಕ್ತವಾಗಿ ನಿರ್ವಹಿಸುತ್ತಾರೆ ಎಂದು ಹೇಳಲಾಗಿದೆ.

ಧನಕರ್ ಅವರಿಗೆ ಸಂವಿಧಾನದ ಬಗ್ಗೆ ಉತ್ತಮ ಜ್ಞಾನವಿದೆ. ಶಾಸಕಾಂಗ ವ್ಯವಹಾರಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಹೇಳಿದ್ದರು. ಅವರು ರಾಜ್ಯಸಭೆ ಸಭಾಪತಿಗಳಾಗುತ್ತಾರೆ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಸದನದ ಕಲಾಪಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಜುಲೈ 16 ರಂದು ಪ್ರಧಾನಿ ಮೋದಿ ತಿಳಿಸಿದ್ದರು.

ಧನಕರ್ ಅವರು 1951ರ ಮೇ 18 ರಂದು ರಾಜಸ್ಥಾನದ ಜುಂಜುನು ಜಿಲ್ಲೆಯ ಕಿತಾನ ಗ್ರಾಮದಲ್ಲಿ ಜನಿಸಿದ್ದರು. ಇವರು ತಮ್ಮ ಪ್ರಾಥಮಿಕ ಶಾಲೆಯನ್ನು ಕಿತಾನ ಹಳ್ಳಿಯಲ್ಲಿ ಮಾಡಿದರು. ಆ ನಂತರ ಪೂರ್ಣ ವಿದ್ಯಾರ್ಥಿವೇತನದಲ್ಲಿ ಚಿತ್ತೋರಗಢದ ಸೈನಿಕ ಶಾಲೆಗೆ ಸೇರಿದರು. ಸೈನಿಕ ಶಾಲೆಯಲ್ಲಿ ಪದವಿ ಪಡೆದ ನಂತರ, ಅವರು ಜೈಪುರದ ಮಹಾರಾಜ ಕಾಲೇಜಿನಲ್ಲಿ ಬಿ.ಎಸ್ಸಿ (ಆನರ್ಸ್) ಭೌತಶಾಸ್ತ್ರ ಮುಗಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ರಾಜಭವನ ವೆಬ್‌ಸೈಟ್‌ನಲ್ಲಿ ಅವರ ಜೀವನಚರಿತ್ರೆ ತಿಳಿಸಿದೆ.

ಇವರು ಅತ್ಯಾಸಕ್ತಿಯ ಓದುಗ ಮತ್ತು ಕ್ರೀಡಾ ಅಭಿಮಾನಿ ಎಂದು ಕೂಡ ಎಂದು ಹೇಳುತ್ತಾರೆ. ರಾಜಸ್ಥಾನ ಒಲಿಂಪಿಕ್ ಅಸೋಸಿಯೇಷನ್ ​​ಮತ್ತು ರಾಜಸ್ಥಾನ ಟೆನಿಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಯೂ ಕೆಲಸ ಮಾಡಿದ್ದಾರೆ. ಸುದೇಶ್ ಎಂಬುವವರನ್ನು ವಿವಾಹವಾಗಿದ್ದು, ಇವರಿಗೆ ಒಂದು ಹೆಣ್ಣು ಮಗುವಿದೆ.

IPL_Entry_Point