Kannada News  /  Nation And-world  /  Lpg Price 1 Oct 2022: Lpg Price Updated Lpg Cylinder Is Cheaper; Which City And How Cheap? Here Is The Detail
ಎಲ್‌ಪಿಜಿ ಸಿಲಿಂಡರ್‌ನ ಹೊಸ ದರ (LPG Price) ಪ್ರಕಟವಾಗಿದೆ
ಎಲ್‌ಪಿಜಿ ಸಿಲಿಂಡರ್‌ನ ಹೊಸ ದರ (LPG Price) ಪ್ರಕಟವಾಗಿದೆ (Live hindustan)

LPG Price 1 Oct 2022: ಎಲ್‌ಪಿಜಿ ಸಿಲಿಂಡರ್‌ ಅಗ್ಗ; ಯಾವೂರಲ್ಲಿ ಎಷ್ಟು ಅಗ್ಗ? ಇಲ್ಲಿದೆ ವಿವರ

01 October 2022, 6:59 ISTHT Kannada Desk
01 October 2022, 6:59 IST

LPG Price Updated: ಎಲ್‌ಪಿಜಿ ಸಿಲಿಂಡರ್‌ನ ಹೊಸ ದರ (LPG Price) ದ ಪ್ರಕಾರ ಇಂದಿನಿಂದ ದೆಹಲಿಯಲ್ಲಿ 25.50 ರೂ., ಕೋಲ್ಕತ್ತಾದಲ್ಲಿ 36.50 ರೂ. ಮತ್ತು ಮುಂಬೈನಲ್ಲಿ 35.50 ರೂ. ಇಳಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ 100 ರೂ. ಇಳಿದಿತ್ತು.

LPG Price 1 Oct 2022: ಪೆಟ್ರೋಲಿಯಂ ಕಂಪನಿಗಳು ಇಂದು ಗೃಹ ಬಳಕೆಯ LPG ನಿಂದ ವಾಣಿಜ್ಯ ಸಿಲಿಂಡರ್‌ಗಳ ತನಕದ ಸಿಲಿಂಡರ್‌ಗಳ ದರ ಪರಿಷ್ಕರಣೆ ಮಾಡಿವೆ. ಹೊಸ ದರ ವಿವರಗಳನ್ನ ಬಿಡುಗಡೆ ಕಂಪನಿಗಳು ಬಿಡುಗಡೆ ಮಾಡಿವೆ.

ಟ್ರೆಂಡಿಂಗ್​ ಸುದ್ದಿ

ಹೊಸ ದರದ ಪ್ರಕಾರ, ಎಲ್‌ಪಿಜಿ ಸಿಲಿಂಡರ್ ಇಂದಿನಿಂದ ದೆಹಲಿಯಲ್ಲಿ 25.50 ರೂ, ಕೋಲ್ಕತ್ತಾದಲ್ಲಿ 36.50 ಮತ್ತು ಮುಂಬೈನಲ್ಲಿ 35.50 ರೂ. ಇಳಿಕೆ ಆಗಿದೆ.

ವಾಸ್ತವವಾಗಿ ಈ ದರ ಪರಿಷ್ಕರಣೆಯು 19 ಕೆಜಿ ವಾಣಿಜ್ಯ ಸಿಲಿಂಡರ್‌ಗೆ ಆಗಿದೆ. ದೆಹಲಿಯಿಂದ ಪಟನಾ, ಜೈಪುರದಿಂದ ದಿಸ್ಪುರ್, ಲಡಾಕ್‌ನಿಂದ ಕನ್ಯಾಕುಮಾರಿವರೆಗೆ ಈ ದರ ಕಡಿತ ಸಂಭವಿಸಿದೆ. ಸೆಪ್ಟೆಂಬರ್‌ನಲ್ಲಿ 100 ರೂ. ತನಕ ಇಳಿಕೆಯಾಗಿತ್ತು.

ಇಂಡಿಯನ್ ಆಯಿಲ್ ಪ್ರಕಾರ, 19 ಕೆಜಿ ಗ್ಯಾಸ್ ಹೊಂದಿರುವ ಇಂಡೇನ್ ಎಲ್‌ಪಿಜಿ ಸಿಲಿಂಡರ್ ಅಕ್ಟೋಬರ್ 1 ರಿಂದ ಅಂದರೆ ಇಂದಿನಿಂದ ದೆಹಲಿಯಲ್ಲಿ 1859.50 ರೂಪಾಯಿ, ಕೋಲ್ಕತ್ತಾದಲ್ಲಿ 1959 ರೂಪಾಯಿ, ಮುಂಬೈನಲ್ಲಿ 1811.50 ರೂಪಾಯಿ ಮತ್ತು ಚೆನ್ನೈನಲ್ಲಿ 2009.50 ರೂಪಾಯಿಗೆ ಲಭ್ಯವಿರುತ್ತದೆ. ಆದರೆ, 14.2 ಕೆಜಿಯ ಗೃಹಬಳಕೆಯ LPG ಸಿಲಿಂಡರ್ ಜುಲೈ 6 ರ ದರದಲ್ಲೇ ಲಭ್ಯವಿದೆ. ಜುಲೈ 6 ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 50 ರೂಪಾಯಿ ಏರಿಕೆಯಾಗಿತ್ತು.

14.2 ಕೆಜಿ ಸಿಲಿಂಡರ್ ದರ ರೂಪಾಯಿಗಳಲ್ಲಿ

ಸ್ಥಳ* ದರ (ರೂಪಾಯಿ)

ಬೆಂಗಳೂರು -1055.5

ಲೇಹ್ -1299

ಐಜ್ವಾಲ್ - 1205

ಶ್ರೀನಗರ - 1169

ಪಟನಾ - 1142.5

ಕನ್ಯಾಕುಮಾರಿ - 1137

ಅಂಡಮಾನ್ - 1129

ರಾಂಚಿ - 1110.5

ಶಿಮ್ಲಾ - 1097.5

ದಿಬ್ರುಗಢ - 1095

ಲಖನೌ- 1090.5

ಉದಯಪುರ - 1084.5

ಇಂದೋರ್ - 1081

ಕೋಲ್ಕತ್ತಾ - 1079

ಡೆಹ್ರಾಡೂನ್ - 1072

ಚೆನ್ನೈ - 1068.5

ಆಗ್ರಾ - 1065.5

ಚಂಡೀಗಢ - 1062.5

ವಿಶಾಖಪಟ್ಟಣಂ - 1061

ಅಹಮದಾಬಾದ್ 1060

ಭೋಪಾಲ್ - 1058.5

ಜೈಪುರ- 1056.5

ದೆಹಲಿ -1053

ಮುಂಬೈ - 1052.5

ಮೂಲ: IOC

ಬೆಂಗಳೂರಲ್ಲಿ ಎಲ್‌ಪಿಜಿ ದರ (LPG Price in Bengaluru)

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ ದರ ಸ್ಥಿರವಾಗಿ ಇದ್ದು, 1055.5 ರೂಪಾಯಿಯಲ್ಲೇ 19 ಕಿಲೋ ಸಿಲಿಂಡರ್‌ ಲಭ್ಯವಿದೆ.

ನಾಲ್ಕು ಮಹಾನಗರಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಹೊಸ ದರ

ದೆಹಲಿಯಲ್ಲಿ ಇಂಡೇನ್ ನ 19 ಕೆಜಿ ಸಿಲಿಂಡರ್ 1885 ರೂ.ಗೆ ಬದಲಾಗಿ 1859.5 ರೂ.ಗೆ ಲಭ್ಯವಾಗಲಿದೆ.

ವಾಣಿಜ್ಯ ಸಿಲಿಂಡರ್ ಕೋಲ್ಕತ್ತಾದಲ್ಲಿ ರೂ 1995.50 ಕ್ಕೆ ಲಭ್ಯವಿರುತ್ತದೆ. ಮೊದಲು ಇದು 1959 ರಲ್ಲಿ ರೂ.ಗೆ ಲಭ್ಯವಿತ್ತು.

ಅದೇ ವೇಳೆ, ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ 1844 ರೂ.ಗೆ ಬದಲಾಗಿ 1811.5 ರೂ.ಗೆ ಲಭ್ಯವಿರುತ್ತದೆ.

ಚೆನ್ನೈನಲ್ಲಿ LPG ಸಿಲಿಂಡರ್ 2009.50 ರೂ.ಗೆ ಲಭ್ಯವಿರುತ್ತದೆ. ಈ ಹಿಂದೆ 2045 ರೂ.ಗೆ ಲಭ್ಯವಿತ್ತು.