ಕನ್ನಡ ಸುದ್ದಿ  /  Nation And-world  /  Mobile Ban In Tn Temples: Madras Hc Bans Mobile Phones In Temples Across Tamil Nadu

Mobile Ban in TN Temples: ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ ಆದೇಶ

ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡುವ ಉದ್ದೇಶದೊಂದಿಗೆ ತಮಿಳುನಾಡಿನ ಎಲ್ಲಾ ಮಂದಿರಗಳ ಒಳಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿ ಹೈಕೋರ್ಟ್‌ನ ಮದುರೈ ಪೀಠವು ಆದೇಶ ಹೊರಡಿಸಿದೆ.

Mobile Ban in TN Temples: ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ ಆದೇಶ
Mobile Ban in TN Temples: ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ ಆದೇಶ

ಚೆನ್ನೈ: ದೇವಾಲಯದೊಳಗೆ ಭಕ್ತಿಯಿಂದ ಪ್ರಾರ್ಥನೆ ಮಾಡುವ ಸಮಯ. ಏಕಾಗ್ರತೆಗೆ ಭಂಗ ತರುವಂತೆ ಯಾರದ್ದೋ ಮೊಬೈಲ್‌ ರಿಂಗಣಿಸುತ್ತದೆ. ನೆಮ್ಮದಿಯನ್ನು ಅರಸಿ, ಅಧ್ಯಾತ್ಮಿಕತೆಯಲ್ಲಿ ಮುಳುಗಿದ್ದವರಿಗೆ ಒಮ್ಮೆಗೆ ಭ್ರಮನಿರಶನ. ಸಾಕಷ್ಟು ಜನರು ದೇವಾಲಯದೊಳಗೆ ಮೊಬೈಲ್‌ ಬಳಸುತ್ತಿದ್ದು, ದೇವಾಲಯದೊಳಗಿನ ಶಾಂತಿಗೆ ಭಂಗವಾಗುತ್ತದೆ. ಇದೀಗ ಇಂತಹ ಸಮಸ್ಯೆಗೆ ಕೇರಳದಲ್ಲಿ ಮುಕ್ತಿ ದೊರಕಿದೆ.

madras hc, tamil nadu, tamil nadu temples phone ban, mobile ban in tamil nadu temples, tamil nadu temples mobile phone ban, madras hc on temple phone ban, mobile phone ban in temples, chennai news, chennai latest news, madras hc news, tamil nadu newsದೈವಿಕತೆ ಮತ್ತು ಆಧ್ಯಾತ್ಮಿಕತೆಯ ಅನುಭವ ನೀಡುವ ಶ್ರದ್ಧಾ ಕೇಂದ್ರವೆನಿಸಿರುವ ದೇವಾಲಯದ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.

ನ್ಯಾಯಮೂರ್ತಿಗಳಾದ ಆರ್‌. ಮಹಾದೇವನ್‌ ಮತ್ತು ಜೆ. ಸತ್ಯನಾರಾಯಣ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದೆ.

ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ತಿರುಚೆಂದೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದೊಳಗೆ ಮೊಬೈಲ್‌ ಫೋನ್‌ ನಿಷೇಧಿಸುವಂತೆ ಕೋರಿ ಎಂ. ಸೀತಾರಾಮಣ್‌ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮಧುರೈ ಪೀಠವು ಈ ಆದೇಶ ನೀಡಿದೆ.

ಭಕ್ತರು ದೇವರ ದರ್ಶನ ಮಾಡುವ ಸಮಯದಲ್ಲಿ ಮೊಬೈಲ್‌ನಲ್ಲಿ ವಿಗ್ರಹಗಳ ಮತ್ತು ಪೂಜಾ ವಿಧಿವಿಧಾನಗಳ ಫೋಟೊ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗಿರುತ್ತಾರೆ. ಇದರಿಂದ ದೇಗುಲದ ಪಾವಿತ್ರ್ಯತೆಗೆ ಧಕ್ಕೆಯಾಯಗತ್ತದೆ. ಹೀಗಾಗಿ, ದೇವಾಲಯದೊಳಗೆ ಮೊಬೈಲ್‌ ನಿಷೇಧಿಸಬೇಕು ಎಂದು ಅವರು ಕೋರಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು ತಮಿಳುನಾಡಿನ ಎಲ್ಲಾ ಮಂದಿರಗಳ ಒಳಗೆ ಮೊಬೈಲ್‌ ಫೋನ್‌ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

"ದೇವಾಲಯಗಳು, ಮಂದಿರಗಳು ಕೇವಲ ಪೂಜಾ ಸ್ಥಳವಲ್ಲ. ಅದು ಜನರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಜೀವನದ ಅವಿಭಾಜ್ಯ ಭಾಗಗಳಾಗಿವೆ. ದೇವಾಲಯಗಳು ದೈವಿಕತೆ, ಆಧ್ಯಾತ್ಮಿಕತೆಯ ಅನುಭವ ನೀಡುವಂತಹ ಶ್ರದ್ಧಾ ಕೇಂದ್ರಗಳು. ಅಲ್ಲಿನ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆʼʼ ಎಂದು ನ್ಯಾಯಪೀಠ ತಿಳಿಸಿದೆ.

"ಸಂವಿಧಾನದ 25ನೇ ಪರಿಚ್ಛೇಧದ ಅಡಿಯಲ್ಲಿ ಎಲ್ಲರಿಗೂ ಅವರ ಧರ್ಮದ ಆಚರಣೆಗೆ ಅವಕಾಶವಿದೆ. ಆದರೆ, ದೇವಾಲಯ ಮತ್ತು ಇತರೆ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ನಿಯಮಗಳಿಗೆ ಈ ಸ್ವಾತಂತ್ರ್ಯವು ಒಳಪಟ್ಟಿರುತ್ತದೆ ಎನ್ನುವುದನ್ನು ಗಮನಿಸಬೇಕುʼʼ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

IPL_Entry_Point

ವಿಭಾಗ