ಕನ್ನಡ ಸುದ್ದಿ  /  Nation And-world  /  Petrol Bomb Hurled At Bjp Office Coimbatore: Nia Raid On Pfi And Tension Prevailed In Coimbatore Yesterday

Petrol bomb hurled at BJP office Coimbatore: PFI ಮೇಲೆ NIA ದಾಳಿ ಬೆನ್ನಿಗೆ ಕೊಯಮತ್ತೂರು ಬಿಜೆಪಿ ಕಚೇರಿಗೆ ಪೆಟ್ರೋಲ್‌ ಬಾಂಬ್‌ ಎಸೆತ!

Petrol bomb hurled at BJP office Coimbatore: ಪಿಎಫ್‌ಐ, ಎಸ್‌ಡಿಪಿಐ ಕಚೇರಿಗಳ ಮೇಲಿನ ಎನ್‌ಐಎ ದಾಳಿ ವಿರುದ್ಧ ಎರಡೂ ಸಂಘಟನೆಗಳ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಿಜೆಪಿ ಕಚೇರಿ ಮೇಲೆ ಎರಡು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೊಯಮತ್ತೂರು ಬಿಜೆಪಿ ಕಚೇರಿ ಸಮೀಪ ನಿನ್ನೆ ರಾತ್ರಿ ಪೆಟ್ರೋಲ್‌ ಬಾಂಬ್‌ ಪತ್ತೆಯಾದ ಬಳಿಕ ಉಂಟಾಗಿದ್ದ ಉದ್ವಿಗ್ನತೆ ಮತ್ತು ಪೆಟ್ರೋಲ್‌ ಬಾಂಬ್‌
ಕೊಯಮತ್ತೂರು ಬಿಜೆಪಿ ಕಚೇರಿ ಸಮೀಪ ನಿನ್ನೆ ರಾತ್ರಿ ಪೆಟ್ರೋಲ್‌ ಬಾಂಬ್‌ ಪತ್ತೆಯಾದ ಬಳಿಕ ಉಂಟಾಗಿದ್ದ ಉದ್ವಿಗ್ನತೆ ಮತ್ತು ಪೆಟ್ರೋಲ್‌ ಬಾಂಬ್‌ (Twitter)

ಕೊಯಮತ್ತೂರು: ಉಗ್ರ ಕೃತ್ಯ ವಿಚಾರಗಳಿಗೆ ಸಂಬಂಧಿಸಿ ದೇಶಾದ್ಯಂತ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಚೇರಿಗಳು, ನಾಯಕರ ಮನೆ ಮೇಲೆ ನಿನ್ನೆ ಎನ್‌ಐಎ ದಿಢೀರ್‌ ದಾಳಿ ನಡೆಸಿತ್ತು. ಇದನ್ನು ಖಂಡಿಸಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖಂಡರನ್ನು ಬಂಧಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ಎರಡು ಪೆಟ್ರೋಲ್ ಬಾಂಬ್ ದಾಳಿ ಉಂಟಾಗಿತ್ತು. ಕೊಯಮತ್ತೂರಿನ ಬಿಜೆಪಿ ಕಚೇರಿ ಮೇಲೆ ಈ ದಾಳಿ ಆಗಿದ್ದು, ಹೊರಗೆ ಪೆಟ್ರೋಲ್‌ ಬಾಂಬ್‌ ಪತ್ತೆಯಾಗಿದ್ದವು. ನಿನ್ನೆ ರಾತ್ರಿ ಈ ಘಟನೆ ಉಂಟಾಗಿದ್ದು ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಇದಲ್ಲದೆ, ಕೊಯಮತ್ತೂರಿನ ಎರಡು ಕಡೆ ಕಲ್ಲು ತೂರಾಟ ನಡೆದ ಘಟನೆಗಳೂ ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಹೇಳಿದೆ.

ಬಿಜೆಪಿ ಕಾರ್ಯಕರ್ತರಿಂದ ತಡರಾತ್ರಿ ಪ್ರತಿಭಟನೆ

ಕೊಯಮತ್ತೂರಿನ ಚಿತ್ತಪುತ್ತೂರಿನ ವಿಕೆಕೆ ಮೆನನ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಗೆ ನಿನ್ನೆ ಕೆಲ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದು ಕಳವಳ ಮೂಡಿಸಿದ್ದರು. ಅದೃಷ್ಟವಶಾತ್ ಪೆಟ್ರೋಲ್ ಬಾಂಬ್ ಸ್ಫೋಟಗೊಳ್ಳದ ಕಾರಣ ಭಾರೀ ಅನಾಹುತ ತಪ್ಪಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪರಿಶೀಲನೆ ನಡೆಸಿದರು ಎಂದು ಸ್ಥಳೀಯ ಮಾಧ್ಯಮ ನ್ಯೂಸ್‌7ತಮಿಳ್‌ ವರದಿ ಮಾಡಿದೆ.

ಕೊಯಮತ್ತೂರಿನ ಗಾಂಧಿಪುರಂ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ಪೆಟ್ರೋಲ್ ಬಾಂಬ್ ಎಸೆದಿರುವುದನ್ನು ವಿರೋಧಿಸಿ ನೂರಕ್ಕೂ ಹೆಚ್ಚು ಬಿಜೆಪಿ ಸದಸ್ಯರು ತಡರಾತ್ರಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ನಡೆಸಿದ ಅವರನ್ನು ಪೊಲೀಸರು ತಡೆದು, ಮಾತುಕತೆ ಮಾಡಿ ಪ್ರತಿಭಟನಾ ಮೆರವಣಿಗೆ ಮಾಡದಂತೆ ಸಂಧಾನ ನಡೆಸಿ ಚದುರಿಸಿದ್ದಾರೆ.

ತನಿಖೆಗೆ 5 ವಿಶೇಷ ಪಡೆ ರಚನೆ

ಎರಡು ಪೆಟ್ರೋಲ್ ಬಾಂಬ್ ಘಟನೆಗೆ ಸಂಬಂಧಿಸಿ 5 ವಿಶೇಷ ಪಡೆಗಳನ್ನು ರಚಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇಡೀ ಕೊಯಮತ್ತೂರು ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಯಲ್ಲಿ ಸುಮಾರು 2000 ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವು ಲಾಡ್ಜ್‌ಗಳಲ್ಲಿ ದಿನಗಟ್ಟಲೆ ತಂಗಿರುವ ಕೆಲವರ ವಿಚಾರ ಗಮನಕ್ಕೆ ಬಂದಿದ್ದು, ಪೊಲೀಸರು ಈ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ, ಕೊಯಮತ್ತೂರಿನಾದ್ಯಂತ ಹಿಂದೂ ಮತ್ತು ಮುಸ್ಲಿಂ ಪೂಜಾ ಸ್ಥಳಗಳಿಗೆ ಹೆಚ್ಚುವರಿ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಕಮಿಷನರ್ ಬಾಲಕೃಷ್ಣನ್ ಹೇಳಿದ್ದಾರೆ.

ಅಂಗಡಿ ಮೇಲೆ ಸೀಮೆ ಎಣ್ಣೆ ಬಾಂಬ್‌

ಅದೇ ರೀತಿ ನಿನ್ನೆ, ಕೊಯಂಬತ್ತೂರಿನ ಒಪ್ಪಣಕರ್ ರಸ್ತೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರುತಿ ಟೆಕ್ಸ್‌ಟೈಲ್ಸ್ ಬಟ್ಟೆ ಅಂಗಡಿಯ ಮೇಲೆ ದುಷ್ಕರ್ಮಿಗಳು ಸೀಮೆಎಣ್ಣೆ ಬಾಂಬ್ ಅನ್ನು ದಾರದಿಂದ ಎಸೆದಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು 3 ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಪಿಎಫ್‌ಐ ಮೇಲಿನ ದಾಳಿ ಕುರಿತ ಆಯ್ದ ಸುದ್ದಿಗಳು

  1. ದೇಶದ ಬೃಹತ್‌ ಭಯೋತ್ಪಾದನಾ ನಿಗ್ರಹ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಪೊಲೀಸ್‌ ಪಡೆಯು ಇಂದು ಹದಿನೈದು ರಾಜ್ಯಗಳಲ್ಲಿ 45 ಜನರನ್ನು ಬಂಧಿಸಿದೆ. ಈ ಕುರಿತು ಎನ್‌ಐಎಯು ಅಧಿಕೃತ ಮಾಹಿತಿ ನೀಡಿದೆ. ಆದರೆ, ನೂರಕ್ಕೂ ಹೆಚ್ಚು ಜನರ ಬಂಧನವಾಗಿದ್ದು, ಇತರರ ಮಾಹಿತಿಯನ್ನೂ ಇನ್ನೂ ನೀಡಿಲ್ಲ ಎನ್ನಲಾಗುತ್ತಿದೆ. NIA Arrests 45 PFI Leaders: ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ 45 ಪಿಎಫ್‌ಐ ನಾಯಕರ ಬಂಧನ, ನಾಳೆ ಕೇರಳ ಬಂದ್‌ಗೆ ಕರೆ
  2. ಮುಂದಿನ 25 ವರ್ಷದಲ್ಲಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ನ ಕುತಂತ್ರ ಬಹಿರಂಗವಾಗಿದೆ. ಬಿಹಾರ ಪೊಲೀಸರ ಕಾರ್ಯಾಚರಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. PFI Mission 2047: ಭಾರತ ಇಸ್ಲಾಮಿಕ್‌ ರಾಷ್ಟ್ರ, ಟಾರ್ಗೆಟ್‌ ಮೋದಿ, ಪಿಎಫ್‌ಐ ಪಿತೂರಿ ಬಹಿರಂಗ

IPL_Entry_Point