ಕನ್ನಡ ಸುದ್ದಿ  /  Nation And-world  /  Nia Arrests 45 Pfi Leaders After Raids Across 15 States

NIA Arrests 45 PFI Leaders: ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ 45 ಪಿಎಫ್‌ಐ ನಾಯಕರ ಬಂಧನ, ನಾಳೆ ಕೇರಳ ಬಂದ್‌ಗೆ ಕರೆ

ದೇಶದ ಬೃಹತ್‌ ಭಯೋತ್ಪಾದನಾ ನಿಗ್ರಹ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಪೊಲೀಸ್‌ ಪಡೆಯು ಇಂದು ಹದಿನೈದು ರಾಜ್ಯಗಳಲ್ಲಿ 45 ಜನರನ್ನು ಬಂಧಿಸಿದೆ. ಈ ಕುರಿತು ಎನ್‌ಐಎಯು ಅಧಿಕೃತ ಮಾಹಿತಿ ನೀಡಿದೆ. ಆದರೆ, ನೂರಕ್ಕೂ ಹೆಚ್ಚು ಜನರ ಬಂಧನವಾಗಿದ್ದು, ಇತರರ ಮಾಹಿತಿಯನ್ನೂ ಇನ್ನೂ ನೀಡಿಲ್ಲ ಎನ್ನಲಾಗುತ್ತಿದೆ.

NIA Arrests 45 PFI Leaders: 15 ರಾಜ್ಯಗಳಲ್ಲಿ 45 ಪಿಎಫ್‌ಐ ನಾಯಕರ ಬಂಧನ (PTI Photo)
NIA Arrests 45 PFI Leaders: 15 ರಾಜ್ಯಗಳಲ್ಲಿ 45 ಪಿಎಫ್‌ಐ ನಾಯಕರ ಬಂಧನ (PTI Photo) (PTI)

ಬೆಂಗಳೂರು: ದೇಶದ ಬೃಹತ್‌ ಭಯೋತ್ಪಾದನಾ ನಿಗ್ರಹ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಪೊಲೀಸ್‌ ಪಡೆಯು ಇಂದು ಹದಿನೈದು ರಾಜ್ಯಗಳಲ್ಲಿ 45 ಜನರನ್ನು ಬಂಧಿಸಿದೆ. ಈ ಕುರಿತು ಎನ್‌ಐಎಯು ಅಧಿಕೃತ ಮಾಹಿತಿ ನೀಡಿದೆ. ಆದರೆ, ನೂರಕ್ಕೂ ಹೆಚ್ಚು ಜನರ ಬಂಧನವಾಗಿದ್ದು, ಇತರರ ಮಾಹಿತಿಯನ್ನೂ ಇನ್ನೂ ನೀಡಿಲ್ಲ ಎನ್ನಲಾಗುತ್ತಿದೆ.

"ಇಡಿ, ಎನ್‌ಐಎ, ರಾಜ್ಯ ಪೊಲೀಸ್‌ ಪಡೆಗಳು ಹದಿನೈದು ರಾಜ್ಯಗಳಲ್ಲಿ 93 ಸ್ಥಳಗಳ ಮೇಲೆ ದಾಳಿ ಡನೆಸಿವೆ. ಅವುಗಳಲ್ಲಿ ಪ್ರಮುಖ ಪಿಎಫ್‌ಐ ನಾಯಕರು ಮತ್ತು ಸದಸ್ಯರನ್ನು ಬಂಧಿಸಲಾಗಿದೆ. ಉಗ್ರವಾದ, ಉಗ್ರವಾದ ಚಟುವಟಿಕೆಗಳಿಗೆ ಫಂಡ್‌ ಸಂಗ್ರಹ ಇತ್ಯಾದಿ ವಿಷಯಗಳಿಗಾಗಿ ಬಂಧಿಸಲಾಗಿದೆʼʼ ಎಂದು ಎನ್‌ಐಎ ತಿಳಿಸಿದೆ.

ಕರ್ನಾಟಕದಲ್ಲಿ ಏಳು ಜನರ ಬಂಧನ

ಕರ್ನಾಟಕದ ಅನ್ನಿಸ್‌ ಅಹ್ಮದ್‌, ಅಪ್ಸರ್‌ ಪಾಷಾ, ಅಬ್ದುಲ್‌ ವಹಿದ್‌ ಸೇಠ್‌, ಯಾಸರ್‌ ಆರ್ಫತ್‌ ಹಸನ್‌, ಮಹಮ್ಮದ್‌ ಶಖೀಬ್‌, ಮೊಹಮ್ಮದ್‌ ಫಾರೂಕ್‌ ಉರ್‌ ರಹೆಮನ್‌, ಶಾಹಿದ್‌ ನಾಸೀರ್‌ ಅವರನ್ನು ಬಂಧಿಸಲಾಗಿದೆ.

ಉಗ್ರ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದ ಮೇಲೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ, ಎಸ್‌ಡಿಪಿಐ ಪಕ್ಷದ ನಾಯಕರ ಮನೆ, ಕಚೇರಿಗಳ ಮೇಲೆ ಇಂದು ದಾಳಿ ನಡೆಸಲಾಗಿತ್ತು. ಗುರುವಾರ ಮುಂಜಾನೆ ಸ್ಥಳೀಯ ಠಾಣೆಯ ಪೊಲೀಸರ ಸಹಯೋಗದೊಂದಿಗೆ ಎನ್‌ಐಎ ಅಧಿಕಾರಿಗಳು ಬೆಂಗಳೂರು, ಮಂಗಳೂರು, ದಾವಣಗೆತೆ, ಮೈಸೂರು, ಕಲಬುರಗಿ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದರು.

ಹಲವೆಡೆ ಪ್ರತಿಭಟನೆ

ಎಸ್‌ಡಿಪಿಐ ಮತ್ತು ಪಿಎಫ್‌ಐ ಮುಖಂಡರ ಮನೆ ಮೇಲೆ ಎನ್‌ಐಎ ದಾಳಿ ನಡೆಸಿರುಉವದನ್ನು ಖಂಡಿಸಿ ಮಂಗಳೂರು, ಹುಬ್ಬಳ್ಳಿ, ಮೈಸೂರು, ಕೊಪ್ಪಳ ಸೇರಿದಂತೆ ವಿವಿಧೆಡೆ ರಸ್ತೆ ತಡೆ, ಪ್ರತಿಭಟನೆಗಳೂ ನಡೆದಿವೆ.

ಕೇರಳ ಬಂದ್‌ಗೆ ಕರೆ

ದೇಶಾದ್ಯಂತ ಇಡಿ, ಎನ್‌ಐಎ ದಾಳಿ ನಡೆಸಿ ಪಿಎಫ್‌ಐಯನ್ನು ಬಂಧಿಸಿರುವುದನ್ನು ವಿರೋಧಿಸಿ ನಾಳೆ ಕೇರಳ ಬಂದ್‌ಗೂ ಪಿಎಫ್‌ಐ ಕರೆ ನೀಡಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಕೇರಳ ಬಂದ್‌ಗೆ ಕರೆ ನೀಡಲಾಗಿದೆ.

ಎನ್‌ಐ ದಾಳಿ ಪ್ರಕರಣ ಸಂಬಂಧ ಒಟ್ಟು 45 ಮಂದಿಯನ್ನು ಬಂಧಿಸಲಾಗಿದೆ. ಕೇರಳದಿಂದ 19, ತಮಿಳುನಾಡಿನಿಂದ 11, ಕರ್ನಾಟಕದಿಂದ ಏಳು, ಆಂಧ್ರಪ್ರದೇಶದಿಂದ ನಾಲ್ಕು, ರಾಜಸ್ಥಾನದಿಂದ ಎರಡು, ಉತ್ತರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ತಲಾ ಒಬ್ಬರು ಸೇರಿದಂತೆ ಒಟ್ಟು 45 ಜನರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಅಧಿಕೃತವಾಗಿ ತಿಳಿಸಿದೆ.

ಪಿಎಫ್‌ಐ ನಿಷೇಧಕ್ಕೆ ಮನವಿ

ಹಿಂದೂ ಜನಜಾಗೃತಿ ಸಮಿತಿಯ ನಿಯೋಗ ಇಂದು ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಪಿಎಫ್‌ಐ ಅನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದೆ.‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (PFI) ಹೆಸರಿನ ಸಂಘಟನೆಯ ಜಾಲವು ಈಗ ಕರ್ನಾಟಕ ಸೇರಿ ದೇಶದಾದ್ಯಂತ ಹರಡಿದೆ. ಈ ಸಂಘಟನೆಯು ಅತ್ಯಂತ ಕ್ರೂರವಾಗಿದ್ದು, ಅನೇಕ ದೇಶದ್ರೋಹ ಮತ್ತು ಸಮಾಜದ್ರೋಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಪ್ರವೀಣ ನೆಟ್ಟಾರು, ಹರ್ಷ, ರುದ್ರೇಶ್, ಶರತ್ ಮಡಿವಾಳ ಸೇರಿ 15 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯಾ ಪ್ರಕರಣದ ಆರೋಪ ಪಟ್ಟಿಯಲ್ಲಿ ಪಿಎಫ್‌ಐ ಭಾಗಿಯಾಗಿದೆ. ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ನಿಯೋಗ ಮನವಿ ಮಾಡಿದೆ. ಈ ಸುದ್ದಿ ಓದಲು ಲಿಂಕ್‌

ಏನಿದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ?

2007ರಲ್ಲಿ ಕೇರಳದ ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ (ಎನ್‌ಡಿಎಫ್‌), ತಮಿಳುನಾಡಿನ ಮನಿತಾ ನೀತಿ ಪಸರೈ ಮತ್ತು ಕರ್ನಾಟಕದ ಫೋರಂ ಫಾರ್‌ ಡಿಗ್ನಿಟಿ ಎಂಬ ಮೂರು ಇಸ್ಲಾಮಿಕ್‌ ಸಂಘಟನೆಗಳು ವಿಲೀನವಾಗಿ ಪಿಎಫ್‌ಐ ಎಂಬ ಸಂಘಟನೆಯನ್ನು ರಚಿಸಿದವು. ವಿಶೇಷವೆಂದರೆ, ಈ ಸಂಘಟನೆಗಳು ಒಟ್ಟಾಗಿ ಪಿಎಫ್‌ಐ ರಾಲಿಯನ್ನು ಬೆಂಗಳೂರಿನಲ್ಲಿ ಅದೇ ವರ್ಷ ಆಯೋಜಿಸಿತ್ತು. ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಕುರಿತು ಸಂಪೂರ್ಣ ಮಾಹಿತಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point