ಕನ್ನಡ ಸುದ್ದಿ  /  Nation And-world  /  Renault India To Increase Its Car Prices From January Next Year

Renault Car Price Hike: ಕಾರುಗಳ ಬೆಲೆ ಹೆಚ್ಚಿಸಲಿದೆ ರೆನೊ: ಜನವರಿ 1ರೊಳಗಾಗಿ ಖರೀದಿಸಿದರೆ ಉತ್ತಮ

ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆ ರೆನೊ ಇಂಡಿಯಾ, ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವ ನಿರ್ಣಯ ಪ್ರಕಟಿಸಿದೆ. ರೆನೊ ಇಂಡಿಯಾದ ಎಲ್ಲಾ ಕಾರುಗಳ ಬೆಲೆ ಹೆಚ್ಚಳವಾಗಲಿದ್ದು, ಹೊಸ ಪರಿಷ್ಕರಣೆಯು ಜನವರಿ 1, 2023 ರಿಂದ ಜಾರಿಗೆ ಬರಲಿದೆ. ಇನ್‌ಪುಟ್ ವೆಚ್ಚದಲ್ಲಿ ನಿರಂತರ ಹೆಚ್ಚಳದ ಪರಿಣಾಮ ಬೆಲೆ ಏರಿಕೆ ಅನಿವಾರ್ಯವೆಂದು ರೆನೊ ಇಂಡಿಯಾ ಸ್ಪಷ್ಟಪಡಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (AFP)

ನವದೆಹಲಿ: ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆ ರೆನೊ ಇಂಡಿಯಾ, ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವ ನಿರ್ಣಯ ಪ್ರಕಟಿಸಿದೆ. ರೆನೊ ಇಂಡಿಯಾದ ಎಲ್ಲಾ ಕಾರುಗಳ ಬೆಲೆ ಹೆಚ್ಚಳವಾಗಲಿದ್ದು, ಹೊಸ ಪರಿಷ್ಕರಣೆಯು ಜನವರಿ 1, 2023 ರಿಂದ ಜಾರಿಗೆ ಬರಲಿದೆ.

ಬೆಲೆ ಏರಿಕೆಗೆ ವಿದೇಶಿ ವಿನಿಮಯ ದರಗಳಲ್ಲಿನ ಏರಿಳಿತಗಳು, ಹಣದುಬ್ಬರ ಮತ್ತು ನಿಯಂತ್ರಕ ಬಾಧ್ಯತೆಗಳ ಕಾರಣದಿಂದಾಗಿ ಇನ್‌ಪುಟ್ ವೆಚ್ಚದಲ್ಲಿ ನಿರಂತರ ಹೆಚ್ಚಳದ ಪರಿಣಾಮಗಳೇ ಕಾರಣ ಎಂದು ರೆನೊ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಸಣ್ಣ ಕಾರಾದಕ್ವಿಡ್, ಮಲ್ಟಿ-ಯುಟಿಲಿಟಿ ವೆಹಿಕಲ್ ಟ್ರೈಬರ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿ ಕಿಗರ್‌ಗಳನ್ನು, ರೆನೊ ಇಂಡಿಯಾ 4.64 ಲಕ್ಷ ರೂ.ದಿಂದ 10.62 ಲಕ್ಷ ರೂ.ವರೆಗೆ ಮಾರಾಟ ಮಾಡುತ್ತದೆ. ಆದಾಗ್ಯೂ ಮುಂಬರುವ ಜನವರಿಯಿಂದ ಈ ಕಾರುಗಳ ಬೆಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಲಾಗುವುದು ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.

ರೆನೊ ಕಂಪನಿಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದ್ದು, ವೈವಿಧ್ಯಮಯ ಭಾರತೀಯ ಗ್ರಾಹಕರಿಗೆ ಹೊಸ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಹಲವಾರು ಹೊಸ ಆವಿಷ್ಕಾರಗಳನ್ನು ತರುವ ಯೋಜನೆ ಇದೆ ಎಂದು ರೆನೊ ಹೇಳಿಕೊಂಡಿದೆ. ಅಲ್ಲದೇ ಭಾರತದ್ಲಿ ಕಂಪನಿಯ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಲು, ದೀರ್ಘಾವಧಿಯ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದೂ ಕಂಪನಿಯು ಪ್ರತಿಪಾದಿಸಿದೆ.

ಜಾಗತಿಕ ಖ್ಯಾತಿಯ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರೊಂದಿಗೆ, ರೆನೊ ತನ್ನ ಪ್ರಸ್ತುತ ಮತ್ತು ಭವಿಷ್ಯದ ಶ್ರೇಣಿಯ ಉತ್ಪನ್ನಗಳಲ್ಲಿ ಸ್ಥಳೀಕರಣಕ್ಕೆ ಹೆಚ್ಚಿನ ಒತ್ತು ನೀಡಲಿದೆ.

ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ನಿಯಂತ್ರಿಸುವ ಸಲುವಾಗಿ ಹಲವಾರು ವಾಹನ ತಯಾರಕರು ಮುಂದಿನ ತಿಂಗಳಿನಿಂದ ತಮ್ಮ ವಾಹನಗಳ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL), ಜನವರಿ 2023 ರಿಂದ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಈಗಾಗಲೇ ಘೋಷಿಸಿದೆ.

ಇದಲ್ಲದೆ, ಐಷಾರಾಮಿ ಕಾರು ತಯಾರಕ ಆಡಿ ಕೂಡ, ತನ್ನ ಮಾಡೆಲ್ ಶ್ರೇಣಿಯ ಬೆಲೆಗಳನ್ನು ಶೇಕಡಾ 1.7 ರಷ್ಟು ಹೆಚ್ಚಿಸುವುದಾಗಿ ಹೇಳಿದೆ, ಇದು ಜನವರಿ 1, 2023 ರಿಂದ ಜಾರಿಗೆ ಬರಲಿದೆ.

ಕಂಪನಿಯ ವ್ಯಾಪಾರ ತಂತ್ರದ ಪ್ರಾಥಮಿಕ ಉದ್ದೇಶವು ಲಾಭದಾಯಕತೆ ಮತ್ತು ಸುಸ್ಥಿರತೆಯನ್ನು ಹುಟ್ಟುಹಾಕುವ ಮಾದರಿಯ ಮೇಲೆ ಕೇಂದ್ರೀಕರಿಸುತ್ತದೆ. ಹೆಚ್ಚುತ್ತಿರುವ ಇನ್‌ಪುಟ್‌ ವೆಚ್ಚ ಮತ್ತು ಕಾರ್ಯಾಚರಣೆಯ ವೆಚ್ಚಗಳ ಪರಿಣಾಮವಾಗಿ, ಬೆಲೆ ತಿದ್ದುಪಡಿಯು ಅನಿವಾರ್ಯವಾಗಿದೆ ಎಂದು ಆಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಒಟ್ಟಾರೆ ಹಣದುಬ್ಬರದಿಂದ ಹೆಚ್ಚಿದ ವೆಚ್ಚದ ಒತ್ತಡವೇ ಪ್ರತಿಷ್ಠಿತ ಕಂಪನಿಗಳೆಲ್ಲಾ ತಮ್ಮ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತಿವೆ.

ಇಂದಿನ ಪ್ರಮುಖ ಸುದ್ದಿಗಳು

Himachal Election 2022 vote counting: ಹಿಮಾಚಲದ ಚುನಾವಣಾ ಫಲಿತಾಂಶ ಇಂದು; ಇಸಿಐ ವೆಬ್‌ನಲ್ಲಿ ಮತ ಎಣಿಕೆ ಟ್ರ್ಯಾಕ್‌ ಮಾಡುವುದು ಹೇಗೆ?

ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್‌ನಲ್ಲಿ ಹಿಮಾಚಲ ಪ್ರದೇಶ ಚುನಾವಣೆ 2022ರ ಫಲಿತಾಂಶ ಮತ್ತು ನಿಖರ ಮತ ಎಣಿಕೆಯ ಅಪ್ಡೇಟ್ಸ್‌ ಲಭ್ಯವಿದೆ. ಇದನ್ನು ಟ್ರ್ಯಾಕ್‌ ಮಾಡುವುದು ಹೇಗೆ ಎಂಬುದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

Gujarat Assembly election 2022 results: ಗುಜರಾತ್‌ ಚುನಾವಣಾ ಫಲಿತಾಂಶವನ್ನು ಇಸಿಐ ವೆಬ್‌ನಲ್ಲಿ ನಿಖರವಾಗಿ ಗಮನಿಸುವುದು ಹೇಗೆ?

ಈ ದಿನವೇ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ. ಸಂಜೆಯೊಳಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಆಯೋಗದ ವೆಬ್‌ನಲ್ಲಿ ಮತ ಎಣಿಕೆಯನ್ನು ನಿಖರವಾಗಿ ಟ್ರ್ಯಾಕ್‌ ಮಾಡುವುದು ಹೇಗೆ (How to track accurate Gujarat Election 2022 cote counting updates) ಎಂಬುದರ ವಿವರ ಇಲ್ಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ