ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ukraine War: ಉಕ್ರೇನ್ ರಾಜಧಾನಿ ಕೀವ್ ಮೇಲೆ ಮುಂದುವರಿದ ರಷ್ಯಾ ವಾಯು ದಾಳಿ; ಮನೆಗಳಿಂದ ಹೊರಬಾರದಂತೆ ಜನರಿಗೆ ಝೆಲೆನ್‌ಸ್ಕಿ ಸರ್ಕಾರ ತಾಕೀತು

Ukraine war: ಉಕ್ರೇನ್ ರಾಜಧಾನಿ ಕೀವ್ ಮೇಲೆ ಮುಂದುವರಿದ ರಷ್ಯಾ ವಾಯು ದಾಳಿ; ಮನೆಗಳಿಂದ ಹೊರಬಾರದಂತೆ ಜನರಿಗೆ ಝೆಲೆನ್‌ಸ್ಕಿ ಸರ್ಕಾರ ತಾಕೀತು

ಉಕ್ರೇನ್ ಮೇಲೆ ತನ್ನ ಯುದ್ಧವನ್ನು ಮುಂದುವರೆಸಿರುವ ರಷ್ಯಾ ಸೇನೆ ಕೀವ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಹಲವು ಕಟ್ಟಡಗಳಿಗೆ ಹಾನಿಯಾಗಿದೆ.

ಉಕ್ರೇನ್ ಮೇಲೆ ರಷ್ಯಾ ವಾಯು ದಾಳಿ ನಡೆಸಿದೆ (REUTERS)
ಉಕ್ರೇನ್ ಮೇಲೆ ರಷ್ಯಾ ವಾಯು ದಾಳಿ ನಡೆಸಿದೆ (REUTERS)

ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಸೇನೆ ಉಕ್ರೇನ್ (Ukraine) ಮೇಲಿನ ತನ್ನ ಯುದ್ಧವನ್ನು ಮುಂದುವರೆಸಿದ್ದು, ಮಂಗಳವಾರ (ಮೇ 30) ಹೊಸದಾಗಿ ವೈಮಾನಿಕ ದಾಳಿ (Air Strikes) ನಡೆಸಿದೆ.

ಉಕ್ರೇನ್ ರಾಜಧಾನಿ ಕೀವ್‌ (Kyiv) ವೈಮಾನಿಕ ದಾಳಿ ನಡೆಸಿದ್ದು, ಭಾರಿ ಪ್ರಮಾಣದ ಹಾನಿಯಾಗಿದೆ. ಬಹುಮಹಡಿಗಳ ಕಟ್ಟಡವೇ ಹೊತ್ತಿ ಉರಿದಿದೆ. ಹಲವಾರು ಪ್ರದೇಶಗಳಲ್ಲಿ ದಾಳಿಯ ಸೈರನ್‌ಗಳು ಮೊಳಗಿದ್ದವು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಉಕ್ರೇನ್‌ನ ವಾಯು ಪಡೆಗಳು ಕೂಡ ತಮ್ಮಲ್ಲಿರುವ ರಕ್ಷಣಾ ವ್ಯವಸ್ಥೆಯನ್ನು ಬಳಸಿಕೊಂಡು ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಐತಿಹಾಸಿಕ ಪೊಡಿಲ್, ಪೆಚೆರ್ಸ್ಕಿ ಪ್ರದೇಶಗಳು ಒಳಗೊಂಡಂತೆ ಹಲವೆಡೆ ಹಾನಿಯಾಗಿದೆ. ನೈಋತ್ಯ ಹೋಲೊಸಿವಿಸ್ಕಿ ಜಿಲ್ಲೆಯಲ್ಲಿ 27 ವರ್ಷದ ಮಹಿಳೆ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೀವ್‌ ಸೇನಾ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಈ ತಿಂಗಳಲ್ಲಿ (ಮೇ 2023) ರಷ್ಯಾ ಸೇನಾ ಪಡೆಗಳು ಡ್ರೋನ್ ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಉಕ್ರೇನ್ ರಾಜಧಾನಿ. ಮೇಲೆ ದಾಳಿ ಆರಂಭಿಸಿದ್ದವು. ಹೆಚ್ಚಾಗಿ ರಾತ್ರಿಯ ವೇಳೆಯಲ್ಲೇ ಕಟ್ಟಡಗಳನ್ನು ಗುರಿಯಾಗಿ ಯುದ್ಧವನ್ನು ಮಾಡುತ್ತಿದೆ. ಇದರಿಂದ ಜನರಿಗೆ ಮಾನಸಿಕ ತೊಂದರೆ ಆಗುತ್ತಿದ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಮಂಗಳವಾರ ರಷ್ಯಾ ಸೇನೆ ನಡೆಸಿರುವ ವೈಮಾನಿಕ ದಾಳಿ ಈ ತಿಂಗಳ ನಡೆಸಿರುವ 17ನೇ ದಾಳಿಯಾಗಿದೆ. ಕಳೆದ ಸೋಮವಾರ ಅಪರೂಪಕ್ಕೆ ಎಂಬಂತೆ ನಗರವನ್ನು ಗುರಿಯಾಗಿಸಿ ಹಗಲಿನಲ್ಲಿ ಸೇರಿ ಎರಡು ಬಾರಿ ಕ್ಷಿಪಣಿಗಳನ್ನು ಹಾರಿಸಿತ್ತು.

ಉಕ್ರೇನ್‌ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಇತ್ತೀಚೆಗಷ್ಟೇ ಹೆಲಿಕಾಪ್ಟರ್‌ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಈ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು 18 ಜನರು ಮೃತಪಟ್ಟಿದ್ದಾರೆ ಎಂದು ಮೂಲಗಳು ಖಚಿತಪಡಿಸಿದ್ದವು.

ಯುದ್ಧಪೀಡಿತ ಉಕ್ರೇನ್‌ ರಾಜಧಾನಿ ಕೀವ್ ಹೊರಭಾಗದಲ್ಲಿರುವ ಶಿಶುವಿಹಾರದ ಮೇಲೆ ಈ ನತದೃಷ್ಟ ಹೆಲಿಕಾಪ್ಟರ್‌ ಅಪ್ಪಳಿಸಿದ್ದು, ಉಕ್ರೇನ್‌ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಉಪ ಸಚಿವ ಯೆವ್ಗೆನಿ ಯೆನಿನ್ ಸೇರಿದಂತೆ ಒಟ್ಟು 18 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

"ರಾಜ್ಯ ತುರ್ತು ಸೇವೆಯ ಹೆಲಿಕಾಪ್ಟರ್ ಬ್ರೋವರಿಯಲ್ಲಿ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಉಪ ಸಚಿವ ಯೆವ್ಗೆನಿ ಯೆನಿನ್ ಸಾವಿಗೀಡಾಗಿದ್ದಾರೆ.." ಎಂದು ಉಕ್ರೇನ್‌ನ ಪೊಲೀಸ್ ಸೇವೆಯ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷದ ಫೆಬ್ರವರಿ 23 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನೆ ಉಕ್ರೇನ್ ಮೇಲೆ ಆಕ್ರಮಣ ಮಾಡಲು ಆದೇಶ ನೀಡಿತ್ತು. ಅಂದಿನಿಂದ ಯುದ್ಧ ಮುಂದುವರೆದಿದ್ದು, ಉಕ್ರೇನ್ ಸೇನೆ ಕೂಡ ರಷ್ಯಾ ಪಡೆಗಳಿಗೆ ಪ್ರತಿರೋಧ ನೀಡುತ್ತಿದೆ.

ಉಕ್ರೇನ್ ಯುದ್ಧದಲ್ಲಿ ರಷ್ಯಾ ಮಿಲಿಟರಿಯು ಸರಣಿ ಹಿನ್ನಡೆಗಳನ್ನು ಅನುಭವಿಸಿವೆ. ಇದು ಸೇನೆಯ ನಾಯಕತ್ವವನ್ನು ಪ್ರಶ್ನಿಸುವಂತಾಗಿದ್ದು, ಕಳೆದ ಅಕ್ಟೋಬರ್‌ನಲ್ಲಿ ರಷ್ಯಾದ ಆಕ್ರಮಣವನ್ನು ಮುನ್ನಡೆಸಲು ಹೊಸ ಜನರಲ್ ನೇಮಕ ಮಾಡಲಾಗಿದೆ. ಆದಾಗ್ಯೂ ರಷ್ಯನ್‌ ಸೇನೆ ಅನೇಕ ಕಡೆ ಭಾರೀ ಪೆಟ್ಟು ತಿಂದಿದೆ. ಇದೀಗ ವೈಮಾನಿಕ ದಾಳಿಗಳನ್ನು ಮಾಡುತ್ತಿದೆ.

IPL_Entry_Point