ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi Meets Zelensky: ಉಕ್ರೇನ್ ಅಧ್ಯಕ್ಷರೊಂದಿಗೆ ಮೋದಿ ಮಾತುಕತೆ; ಜಪಾನ್‌ನಲ್ಲಿ ಜಿ7 ಶೃಂಗದಲ್ಲಿ ಪ್ರಧಾನಿ ಭಾಗಿ

Modi meets Zelensky: ಉಕ್ರೇನ್ ಅಧ್ಯಕ್ಷರೊಂದಿಗೆ ಮೋದಿ ಮಾತುಕತೆ; ಜಪಾನ್‌ನಲ್ಲಿ ಜಿ7 ಶೃಂಗದಲ್ಲಿ ಪ್ರಧಾನಿ ಭಾಗಿ

ಉಕ್ರೇನ್ ಮೇಲೆ ರಷ್ಯಾ ಯುದ್ದ ಸಾರಿದ ನಂತರ ಇಬ್ಬರು ನಾಯಕರ ಮೊದಲ ಭೇಟಿ ಇದು. ಈ ವೇಳೆ ಮೋದಿ ಅವರು ಯುದ್ದದ ಸ್ಥಿತಿಗತಿ, ಉಕ್ರೇನ್ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತು ಚರ್ಚೆ ನಡೆಸಿದರು.

ವೊಲೊಡಿಮಿರ್ ಝೆಲೆನ್‌ಸ್ಕೀ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದರು
ವೊಲೊಡಿಮಿರ್ ಝೆಲೆನ್‌ಸ್ಕೀ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದರು (Twitter / @PMOIndia)

ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕೀ(Volodymyr Zelensky) ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದರು. ಜಪಾನ್‌ನ ಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ7 ಸಮಾವೇಶದಲ್ಲಿ ಪಾಲ್ಗೊಂಡಿರುವ ಇಬ್ಬರು ನಾಯಕರು ಶನಿವಾರ ಕೆಲ ಹೊತ್ತು ಅನೌಪಚಾರಿಕ ಚರ್ಚೆಯಲ್ಲಿ ಭಾಗಿಯಾದರು.

ಟ್ರೆಂಡಿಂಗ್​ ಸುದ್ದಿ

ಉಕ್ರೇನ್ ಮೇಲೆ ರಷ್ಯಾ ಯುದ್ದ ಸಾರಿದ ನಂತರ ಇಬ್ಬರು ನಾಯಕರ ಮೊದಲ ಭೇಟಿ ಇದು. ಈ ವೇಳೆ ಮೋದಿ ಅವರು ಯುದ್ದದ ಸ್ಥಿತಿಗತಿ, ಉಕ್ರೇನ್ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಭಾರತದ ಭದ್ರತಾ ಸಲಹೆಗಾರರೂ ಹಾಜರಿದ್ದರು ಎಂದು ಪ್ರಧಾನಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಮಾವೇಶದಲ್ಲಿ ಭಾಗಿಯಾಗಿರುವ ವಿವಿಧ ದೇಶಗಳ ಮುಖ್ಯಸ್ಥರು ಹಾಗೂ ಪ್ರಮುಖರ ಜತೆಯಲ್ಲೂ ನರೇಂದ್ರ ಮೋದಿ ಚರ್ಚಿಸಿದರು. ಇದೇ ವೇಳೆ ಜಪಾನ್ ದೇಶದ ಪ್ರಧಾನಿ ಫುಮಿಯೋ ಕಿಷಿಡಾ ಅವರ ಆಹ್ವಾನದ ಮೇರೆಗೆ ಸಮಾವೇಶದಲ್ಲಿ ಭಾಗಿಯಾಗಿರುವ ನರೇಂದ್ರ ಮೋದಿ ಅವರು ಮೂರು ಅಧಿವೇಶಗಳಲ್ಲಿ ಭಾಗಿಯಾಗಿದ್ದರು. ಜಪಾನ್ ಪ್ರಧಾನಿ ಜತೆಗೂ 50ಕ್ಕೂ ಹೆಚ್ಚು ನಿಮಿಷಗಳ ಕಾಲ ವಿಚಾರ ವಿನಿಮಯ ಮಾಡಿಕೊಂಡರು.

ಈ ವೇಳೆ ಭಾರತ ಹಾಗೂ ಜಪಾನ್ ನಡುವೆ ಉನ್ನತ ತಂತ್ರಜ್ಞಾನ, ಸೆಮಿಕಂಡಕ್ಟರ್, ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದ ಕುರಿತು ಮಾತುಕತೆಗಳು ನಡೆದವು. ಇದಲ್ಲದೇ ಹಸಿರು ಜಲಜನಕ, ಹಣಕಾಸು, ಆಹಾರ ಭದ್ರತೆ, ಹವಾಮಾನ ವೈಪರಿತ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಪ್ರಧಾನಮಂತ್ರಿಯವರ ಕಾರ್ಯಾಲಯ ತಿಳಿಸಿದೆ.

ಜಾಗತಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ರೂಪುಗೊಂಡಿರುವ ಜಿ-20 ಒಕ್ಕೂಟ ಹಾಗೂ ಜಪಾನ್ ನೇತೃತ್ವದ ಜಿ-7 ಒಕ್ಕೂಟಗಳು ಸಮರ್ಥವಾಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಹಿರೋಷಿಮಾದಲ್ಲಿ ನಿರ್ಮಿಸಲಾಗಿರುವ ಮಹಾತ್ಮಗಾಂಧಿ ಪುತ್ಥಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.

ಜಪಾನ್‌ನ ಆಹ್ವಾನದ ಮೇರೆಗೆ ಮೋದಿ ಮತ್ತು ಝೆಲೆನ್‌ಸ್ಕೀ ಇಬ್ಬರೂ, ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಭೆಯಲ್ಲಿ ಮಾತನಾಡಿದ ಭಾರತದ ಪ್ರಧಾನಿ ಮೋದಿ, ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧವು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಯಾಗಿದೆ ಎಂದು ಒತ್ತಿ ಹೇಳಿದರು.

“ನಾನು ಇದನ್ನು ರಾಜಕೀಯ ಅಥವಾ ಆರ್ಥಿಕ ಸಮಸ್ಯೆಯಾಗಿ ನೋಡುವುದಿಲ್ಲ. ನನಗೆ ಇದು ಮಾನವೀಯತೆಯ ಸಮಸ್ಯೆಯಾಗಿದೆ, ಮಾನವೀಯ ಮೌಲ್ಯಗಳ ಸಮಸ್ಯೆಯಾಗಿದೆ” ಎಂದು ಮೋದಿ ಅವರು ಝೆಲೆನ್‌ಸ್ಕೀ ಅವರಿಗೆ ತಿಳಿಸಿದರು.

“ಯುದ್ಧದ ನಿಜವಾದ ಸಂಕಟ ಏನೆಂಬುದು ನಮಗಿಂತ ಹೆಚ್ಚು ನಿಮಗೆ ತಿಳಿದಿದೆ. ಆದರೆ, ಕಳೆದ ವರ್ಷ ನಮ್ಮ ದೇಶದ ವಿದ್ಯಾರ್ಥಿಗಳು ಉಕ್ರೇನ್‌ನಿಂದ ಹಿಂತಿರುಗಿದಾಗ, ಅವರು ನೀಡಿದ ವಿವರಣೆ, ನೀವು ಮತ್ತು ಉಕ್ರೇನ್ ನಾಗರಿಕರು ಅನುಭವಿಸಿದ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ” ಎಂದು ಮೋದಿ ಹೇಳಿದ್ದಾರೆ.

IPL_Entry_Point