ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದಲ್ಲಿ 5g ಸೇವೆ ನೀಡಲಿರುವ ವೊಡಾಫೋನ್ ಐಡಿಯಾ; ಏರ್‌ಟೆಲ್, ಜಿಯೋ 5ಜಿ ಪ್ಲಾನ್​​ನಲ್ಲಾಗಲಿದೆ ಬದಲಾವಣೆ

ಭಾರತದಲ್ಲಿ 5G ಸೇವೆ ನೀಡಲಿರುವ ವೊಡಾಫೋನ್ ಐಡಿಯಾ; ಏರ್‌ಟೆಲ್, ಜಿಯೋ 5ಜಿ ಪ್ಲಾನ್​​ನಲ್ಲಾಗಲಿದೆ ಬದಲಾವಣೆ

Vodafone Idea: ವೊಡಾಫೋನ್ ಐಡಿಯಾ (Vodafone Idea-Vi) ಭಾರತದಲ್ಲಿ ತನ್ನ 5G ಸೇವೆಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ವೊಡಾಫೋನ್ ಐಡಿಯಾ ಪ್ರತಿಸ್ಪರ್ಧಿಗಳು ಈಗಾಗಲೇ ದೇಶದಾದ್ಯಂತ 5ಜಿ ಸೇವೆಗಳನ್ನು ಒದಗಿಸಿವೆ.

ಭಾರತದಲ್ಲಿ 5G ಸೇವೆ ನೀಡಲಿರುವ ವೊಡಾಫೋನ್ ಐಡಿಯಾ.. ಪ್ಲಾನ್​ ಬದಲಿಸಲಿರುವ ಏರ್‌ಟೆಲ್, ಜಿಯೋ
ಭಾರತದಲ್ಲಿ 5G ಸೇವೆ ನೀಡಲಿರುವ ವೊಡಾಫೋನ್ ಐಡಿಯಾ.. ಪ್ಲಾನ್​ ಬದಲಿಸಲಿರುವ ಏರ್‌ಟೆಲ್, ಜಿಯೋ

ಮುಂದಿನ 6-7 ತಿಂಗಳೊಳಗೆ ವೊಡಾಫೋನ್ ಐಡಿಯಾ (Vodafone Idea-Vi) ಭಾರತದಲ್ಲಿ ತನ್ನ 5G ಸೇವೆಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ವೊಡಾಫೋನ್ ಐಡಿಯಾ ಪ್ರತಿಸ್ಪರ್ಧಿಗಳು ಈಗಾಗಲೇ ದೇಶದಾದ್ಯಂತ 5ಜಿ ಸೇವೆಗಳನ್ನು ಒದಗಿಸಿದ್ದು, ಎಷ್ಟರ ಮಟ್ಟಿಗೆ ವೊಡಾಫೋನ್ ಐಡಿಯಾಗೆ ಯಶಸ್ಸು ಸಿಗುತ್ತದೆ ಎಂದು ನೋಡಬೇಕಾಗಿದೆ.

ಟ್ರೆಂಡಿಂಗ್​ ಸುದ್ದಿ

ಕಂಪನಿಯ ಮೂರನೇ ತ್ರೈಮಾಸಿಕ ಗಳಿಕೆಯ ವರದಿ ನೀಡುವ ವೇಳೆ ವೊಡಾಫೋನ್ ಐಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಕ್ಷಯ ಮೂಂದ್ರಾ ಅವರು 5G ಸೇವೆ ಘೋಷಣೆಯನ್ನು ಮಾಡಿದ್ದಾರೆ. ವೊಡಾಫೋನ್ ಐಡಿಯಾ ಕಂಪನಿಯ ಘೋಷಣೆ ಬೆನ್ನಲ್ಲೇ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳು ಶೀಘ್ರದಲ್ಲೇ ತಮ್ಮ 5ಜಿ ಪ್ಲಾನ್​​ನ ಬೆಲೆಯಲ್ಲಿ ಬದಲಾವಣೆ ಮಾಡಲು ಮುಂದಾಗಿವೆ ಎಂದು ವರದಿಯಾಗುತ್ತಿದೆ. ಆದರೆ ಈ ಬೆಳವಣಿಗೆಗಳನ್ನು ಜಿಯೋ ಅಥವಾ ಏರ್​ಟೆಲ್​ ಕಂಪನಿಯು ಅಧಿಕೃತವಾಗಿ ದೃಢಪಡಿಸಿಲ್ಲ.

ದೇಶದಲ್ಲಿ 5G ರೋಲ್‌ಔಟ್‌ಗಾಗಿ ತನ್ನ ಕಾರ್ಯತಂತ್ರವನ್ನು ಅಂತಿಮಗೊಳಿಸಲು ವೊಡಾಫೋನ್ ಐಡಿಯಾ ಕಂಪನಿಯು ತಂತ್ರಜ್ಞಾನ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ನಾವು 6 ರಿಂದ 7 ತಿಂಗಳುಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ ಎಂದು ಅಕ್ಷಯ ಮೂಂದ್ರಾ ತಿಳಿಸಿದ್ದಾರೆ.

ಜಿಯೋ ಈಗಾಗಲೇ ರಾಷ್ಟ್ರವ್ಯಾಪಿ ತನ್ನ 5G ರೋಲ್‌ಔಟ್ ಅನ್ನು ಪೂರ್ಣಗೊಳಿಸಿದೆ. ಆದರೆ ಏರ್‌ಟೆಲ್ ಕೆಲ ಪ್ರದೇಶಗಳಲ್ಲಿ ಇನ್ನೂ 5ಜಿ ಸೇವೆ ಪ್ರಾರಂಭಿಸಿಲ್ಲ. ಮಾರ್ಚ್ 2024 ರ ವೇಳೆಗೆ ಭಾರತಾದಾದ್ಯಂತ 5ಜಿ ಸೇವೆ ಸಾಧಿಸುವ ಗುರಿಯನ್ನು ಏರ್​ಟೆಲ್​ ಹೊಂದಿದೆ.

ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಮುಂಬೈ ಮತ್ತು ಕೋಲ್ಕತ್ತಾದಂತಹ ಪ್ರಮುಖ ಪ್ರದೇಶಗಳಲ್ಲಿ 3G ಸೇವೆಗಳನ್ನು ಸ್ಥಗಿತಗೊಳಿಸಲು ವೊಡಾಫೋನ್ ಐಡಿಯಾ ಯೋಜಿಸುತ್ತಿದ್ದು, 2025 ರ ಆರ್ಥಿಕ ವರ್ಷದಲ್ಲಿ ಉಳಿದ ಎಲ್ಲೆಡೆ 3ಜಿ ನೆಟ್‌ವರ್ಕ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ.

ರಿಲಯನ್ಸ್ ಜಿಯೋ ಹೊಸ ಹೊಸ ಪ್ಲಾನ್‌

ಮಾರುಕಟ್ಟೆಯಲ್ಲಿ ಪ್ರತಿ ಸ್ಪರ್ಧೆಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ರಿಲಯನ್ಸ್ ಜಿಯೋ ಹೊಸ ಹೊಸ ಪ್ಲಾನ್‌ಗಳನ್ನು ಘೋಷಿಸಿದ್ದು, ಇದೀಗ ಏರ್‌ಫೈಬರ್ ಮತ್ತು ಏರ್‌ಫೈಬರ್ ಮ್ಯಾಕ್ಸ್ ಗ್ರಾಹಕರಿಗಾಗಿ 101 ರೂಪಾಯಿ ಹಾಗೂ 255 ರೂಪಾಯಿಗಳ ಎರಡು ಹೊಸ ಬೂಸ್ಟರ್ ಪ್ಲಾನ್‌ಗಳನ್ನು ಪರಿಚಯಿಸಿದೆ.

101 ರೂಪಾಯಿ ಬೂಸ್ಟರ್ ಪ್ಲಾನ್‌ನಲ್ಲಿ ಜಿಯೋ ಏರ್‌ಫೈಬರ್ ಗ್ರಾಹಕರು 100 ಜಿಬಿ ಹೈ ಸ್ಪೀಡ್ ಡೇಟಾವನ್ನು ನೀಡುತ್ತಿದೆ. 251 ರೂಪಾಯಿ ಬೂಸ್ಟರ್ ಪ್ಲಾನ್‌ನಲ್ಲಿ 500 ಜಿಬಿ ಡೇಟಾ ಇರಲಿದೆ. ಇದನ್ನು ಏರ್‌ಫೈಬರ್ ಪ್ಲಸ್ ಗ್ರಾಹಕರು ಸೇರಿದಂತೆ ಎಲ್ಲರೂ ಪಡೆಯಬಹುದಾಗಿದೆ. ಈ ಎರಡೂ ಪ್ಲಾನ್‌ಗಳು Myjio ಅಪ್ಲಿಕೇಶನ್ ಮತ್ತು jio.com ನಲ್ಲಿ ಲಭ್ಯವಿದೆ.

ಜಿಯೋ ಏರ್‌ಫೈಬರ್ ಬಳಕೆದಾರರಿಗೆ 400 ರೂಪಾಯಿಯ ಬೂಸ್ಟರ್ ಯೋಜನೆಯನ್ನು ಸಹ ನೀಡುತ್ತದೆ. ಈ ಪ್ಲಾನ್‌ನಲ್ಲಿ 1ಟಿಬಿ ಡೇಟಾ ಅವಧಿ ಮುಗಿದ ನಂತರ ಅನಿಯಮಿತ ಯೋಜನೆಯಾಗುತ್ತದೆ. ಆದರೆ ಇದರ ವೇಗ 64kbps ಇರುತ್ತದೆ.

IPL_Entry_Point