Want condoms too?: ಸ್ಯಾನಿಟರಿ ಪ್ಯಾಡ್ ಕೇಳಿದ ವಿದ್ಯಾರ್ಥಿನಿಗೆ ಕಾಂಡೋಮ್ ಬೇಡ್ವಾ? ಎಂದ ಐಎಎಸ್ ಅಧಿಕಾರಿ, ಏನ್ರಿ ಇದು ಕರ್ಮ, ವಿಡಿಯೋ
ಪಟಾನಾದಲ್ಲಿ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಸ್ಯಾನಿಟರಿ ಪ್ಯಾಡ್ ಕೇಳಿದ ವಿದ್ಯಾರ್ಥಿನಿಗೆ ಬಿಹಾರ ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿ "ಏಕೆ, ಕಾಂಡೋಮ್ ಬೇಡ್ವ?ʼ ಎಂದು ಪ್ರಶ್ನಿಸಿದ್ದು ವೈರಲ್ ಆಗಿದೆ.
ನವದೆಹಲಿ: ಪಟಾನಾದಲ್ಲಿ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಸ್ಯಾನಿಟರಿ ಪ್ಯಾಡ್ ಕೇಳಿದ ವಿದ್ಯಾರ್ಥಿನಿಗೆ ಬಿಹಾರ ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿ "ಏಕೆ, ಕಾಂಡೋಮ್ ಬೇಡ್ವ?ʼ ಎಂದು ಪ್ರಶ್ನಿಸಿದ್ದು ವೈರಲ್ ಆಗಿದೆ. ಐಎಎಸ್ ಅಧಿಕಾರಿಣಿಯ ಮಾತಿಗೆ ಎಲ್ಲರೂ ಕಿಡಿಕಾರಿದ್ದಾರೆ.
ಮಹಿಳಾ ಅಭಿವೃದ್ಧಿ ನಿಗಮ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯು ಸ್ಯಾನಿಟರಿ ಪ್ಯಾಡ್ ಕೇಳಿದಾಗ ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಭಮ್ರಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿ ಮೇಲೆ ಕಿಡಿ ಕಾರಿ "ಯಾಕಮ್ಮ, ಕಾಂಡೋಮ್ ನೀಡೋದು ಬೇಡ್ವ?ʼʼ ಎಂದಿದ್ದಾರೆ.
"ಸರಕಾರವು ಶಾಲೆಯ ವಿದ್ಯಾರ್ಥಿನಿಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ ಮಾಡಬಹುದೇ?. ಸರಕಾರವು ಸಾಕಷ್ಟು ವಸ್ತುಗಳನ್ನು ಉಚಿತವಾಗಿ ನೀಡುತ್ತಿದೆ. ಆದರೆ, 20-30 ರೂಪಾಯಿಗೆ ರಿಯಾಯಿತಿ ದರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಸರಕಾರ ನೀಡಲು ಸಾಧ್ಯವೇ?ʼʼ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.
ಅದಕ್ಕೆ ಆ ಐಎಎಸ್ ಅಧಿಕಾರಿ ಅಸಹ್ಯವಾಗಿ ಮಾತನಾಡಿದ್ದಾರೆ. "ಈಗ ಸ್ಯಾನಿಟರಿ ಕೇಳುವಿರಿ. ನಾಳೆ ಜೀನ್ಸ್ ಪ್ಯಾಂಟ್ ಕೇಳುವಿರಿ. ಮತ್ತೆ ಸರಕಾರದಲ್ಲಿ ಪ್ಯಾಮಿಲಿ ಪ್ಲಾನಿಂಗ್ ವಿಧಾನಗಳನ್ನು ಕೇಳುವಿರಿ, ಬಳಿಕ ಉಚಿತ ಕಾಂಡೋಮ್ ಕೂಡ ಕೇಳುವಿರಿʼʼ ಎಂದು ಹರ್ಜೋತ್ ಕೌರ್ ಭಮ್ರಾ ಹೇಳಿದ್ದಾರೆ.
ಇವರ ಅಸಹ್ಯದ ಮಾತು ಇಷ್ಟಕ್ಕೆ ಕೊನೆಗೊಳ್ಳಲಿಲ್ಲ. " ಸರಕಾರವು ನಮಗೆ ಸೇವೆ ನೀಡಲಿ ಎಂದು ನಾವು ಮತನೀಡುವುದಲ್ಲವೇ" ಎಂದು ವಿದ್ಯಾರ್ಥಿನಿ ಸಂವಾದ ಮುಂದುವರೆಸಿದಾಗ, "ಓಟ್ ಹಾಕಬೇಡಿ, ಪಾಕಿಸ್ತಾನವಾಗಲಿʼʼ ಎಂದು ಈಕೆ ಮಾರುತ್ತರ ನೀಡಿದ್ದರು.
ಐಎಎಸ್ ಅಧಿಕಾರಿಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿ "ಏಕೆ ಪಾಕಿಸ್ತಾನವಾಗಬೇಕು, ಇದು ಭಾರತ, ನಾನು ಭಾರತೀಯಳುʼʼ ಎಂದು ವಿದ್ಯಾರ್ಥಿನಿ ಮಾರುತ್ತರ ನೀಡಿದ್ದಾಳೆ.
ಶಾಲಾ ಬಾಲಕಿಯೊಬ್ಬಳು ಕೇಳಿದ ಪ್ರಶ್ನೆಗೆ ಸಂವೇದನಾರಹಿತವಾಗಿ ಮಾತನಾಡಿದ ಐಎಎಸ್ ಅಧಿಕಾರಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. "ನಾಗರಿಕ ಸೇವಾ ಅಧಿಕಾರಿಯೊಬ್ಬರ ಬಾಯಿಯಿಂದ ಇಂತಹ ಮಾತೇ?ʼʼ ಎಂದಿದ್ದಾರೆ.
"ಹರ್ಜೋತ್ ಕೌರ್ ಅತ್ಯಂತ ಹಿರಿಯ ಐಎಎಸ್ ಅಧಿಕಾರಿ. ತನ್ನ ವೃತ್ತಿಜೀವನದ ಆರಂಭದಿಂದಲೂ ಹೀಗೆಯೇ ಇದ್ದರು. ನನಗೆ ಇದು ಗೊತ್ತು. ಆಕೆ ಈ ರೀತಿ ವರ್ತಿಸುವುದರ ಕುರಿತು ಆಶ್ಚರ್ಯಪಡಬೇಕಾಗಿಲ್ಲʼʼ ಎಂದು ಟ್ವಿಟ್ಟರ್‌ನಲ್ಲಿ ಆರ್ಯಾವರ್ತ್ ಎನ್ನುವವರು ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ, ನಾನು ಈ ರೀತಿ ಹೇಳಿಯೇ ಇಲ್ಲ ಎಂದು ಐಎಎಸ್ ಅಧಿಕಾರಿಣಿ ಹರ್ಜೋತ್ ಕೌರ್ ಭಮ್ರಾ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋ ಈ ಕೆಳಗಿದೆ ನೋಡಿ