Tanuja Special Screening: ವಿದ್ಯಾರ್ಥಿಗಳ ಜತೆ ‘ತನುಜಾ’ ಚಿತ್ರ ವೀಕ್ಷಿಸಿ ‘ಬೆಳದಿಂಗಳ ಬಾಲೆ’ ಬಗ್ಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತು
- Tanuja Special Screening: ಹರೀಶ್ ಎಂ.ಡಿ ಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿದ್ದ ತನುಜಾ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿತ್ತು. ನೈಜ ಘಟನೆ ಆಧರಿತ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು. ಈಗ ಈ ಚಿತ್ರವನ್ನು ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ವೀಕ್ಷಣೆ ಮಾಡಿದ್ದಾರೆ. ಅದೂ ಸಾವಿರಾರು ಮಕ್ಕಳ ಜತೆಗೆ ಎಂಬುದು ವಿಶೇಷ. ಇದೇ ವೇಳೆ ತಾವು ಕೊನೆಯದಾಗಿ ವೀಕ್ಷಿಸಿದ ಸಿನಿಮಾ ಯಾವುದೆಂದೂ ಹೇಳಿದ್ದಾರೆ ಸ್ವಾಮೀಜಿ.

(1 / 5)
ಕೋವಿಡ್ ಸಮಯದಲ್ಲಿ ನೀಟ್ ಪರೀಕ್ಷೆ ಬರೆದು ಪಾಸಾಗಿ ಎಲ್ಲರ ಗಮನ ಸೆಳೆದ ತನುಜಾಳ ಆ ಸಾಹಸದ ಕಥೆಯೇ ಈ ಸಿನಿಮಾ. ಮಾಜಿ ಸಿಎಂ ಬಿಎಸ್‌ವೈ, ಆರೋಗ್ಯ ಸಚಿವ ಸುಧಾಕರ್ ಮತ್ತು ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್ ಈ ಚಿತ್ರದಲ್ಲಿ ನಟಿಸಿದ್ದಾರೆ.
(2 / 5)
ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಈ ಚಿತ್ರವನ್ನು ಮಕ್ಕಳಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿತ್ತು. ಅದರಂತೆ ಆದಿಚುಂಚನಗಿರಿ ಮಠದ ಮಕ್ಕಳು ಈ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಹ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(3 / 5)
ಸಿನಿಮಾ ನೋಡಿದ ಬಳಿಕ ಮಾತನಾಡಿದ ನಿರ್ಮಲಾನಂದ ಸ್ವಾಮೀಜಿ, ತಾವು ವೀಕ್ಷಿಸಿದ ಕೊನೆಯ ಚಿತ್ರ ಬೆಳದಿಂಗಳ ಬಾಲೆ ಬಗ್ಗೆ ಮಾತನಾಡಿದರು. ಆ ಚಿತ್ರದ ಮೂಲ ಕಾದಂಬರಿಯನ್ನು ಸಾಧ್ಯವಾದರೆ ಎಲ್ಲ ಮಕ್ಕಳೂ ಓದಿ ಎಂದರು.
(4 / 5)
ಹರೀಶ್ ಎಂ.ಡಿ ಹಳ್ಳಿ ಈ ಚಿತ್ರ ನಿರ್ದೇಶಿಸಿದರೆ, ಚಂದ್ರಶೇಖರ್ ಗೌಡ, ಮನೋಜ್ ಬಿ.ಜಿ ನಿರ್ಮಾಪಕರು. ಪ್ರಕಾಶ್ ಮದ್ದೂರು, ಅನಿಲ್ ಶಡಕ್ಷರಿ, ಗಿರೀಶ ಗೋವರ್ಧನ ಬಿ, ಅವಿನಾಶ್ ಗೌಡ ಸಹ ನಿರ್ಮಾಪರಾಗಿ ಸಾಥ್ ನೀಡಿದ್ದಾರೆ.
ಇತರ ಗ್ಯಾಲರಿಗಳು