5 ರೂ ಸಂಭಾವನೆಯಿಂದ ಪದ್ಮಶ್ರೀ ಪುರಸ್ಕಾರದವರೆಗೆ; ಜಾಕೀರ್ ಹುಸೇನ್ ಕುಟುಂಬ, ವೃತ್ತಿಜೀವನ ಹಾಗೂ ಆಸ್ತಿ ಮೌಲ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  5 ರೂ ಸಂಭಾವನೆಯಿಂದ ಪದ್ಮಶ್ರೀ ಪುರಸ್ಕಾರದವರೆಗೆ; ಜಾಕೀರ್ ಹುಸೇನ್ ಕುಟುಂಬ, ವೃತ್ತಿಜೀವನ ಹಾಗೂ ಆಸ್ತಿ ಮೌಲ್ಯ

5 ರೂ ಸಂಭಾವನೆಯಿಂದ ಪದ್ಮಶ್ರೀ ಪುರಸ್ಕಾರದವರೆಗೆ; ಜಾಕೀರ್ ಹುಸೇನ್ ಕುಟುಂಬ, ವೃತ್ತಿಜೀವನ ಹಾಗೂ ಆಸ್ತಿ ಮೌಲ್ಯ

  • ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರು ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ. ಯುಎಸ್ ಆಸ್ಪತ್ರೆಯಲ್ಲಿ ನಿಧನರಾಗಿರುವ ಬಗ್ಗೆ ಅವರ ಕುಟುಂಬ ಮೂಲ ತಿಳಿಸಿದೆ. ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸಂಗೀತ ಕ್ಷೇತ್ರಕ್ಕೆ ಭಾರತೀಯನ ಕೊಡುಗೆ ಅಪಾರ. ತಬಲದ ಮೇಲೆ ಪಾದರಸದಂತೆ ಹರಿದಾಡುತ್ತಿದ್ದ ಅವರ ಕೈಚಳಕ ಸಂಗೀತಪ್ರಿಯರಿಗೆ ಇನ್ನು ನೆನಪು ಮಾತ್ರ.

ಸಂಗೀತ ಕ್ಷೇತ್ರಕ್ಕೆ ಜಾಕೀರ್ ಹುಸೇನ್ ಅವರ ಪ್ರವೇಶವು, ಒಂದೆರಡು ದಿನದ ಪ್ರಯತ್ನವಲ್ಲ. ತಮ್ಮ ಮೊದಲ ಸಾಗರೋತ್ತರ ಸಂಗೀತ ಕಚೇರಿಗೆ ಕೇವಲ 5 ರೂಗಳನ್ನು ಗಳಿಸಿದ್ದ ಉಸ್ತಾದ್ ಜಾಕಿರ್ ಹುಸೇನ್, ಅಗ್ರ ಸಂಭಾವನೆ ಪಡೆವ ಸಂಗೀತ ವಿದ್ವಾಂಶನಾಗಿ ಬೆಳೆದರು. ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿರುವ ಅವರು, 12 ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ವೈಯಕ್ತಿಕ ಹಾಗೂ ವೃತ್ತಿಬದುಕನ್ನು ಒಮ್ಮೆ ಮೆಲುಕು ಹಾಕೋಣ. 
icon

(1 / 7)

ಜಾಕಿರ್ ಹುಸೇನ್ 1951ರ ಮಾರ್ಚ್ 9ರಂದು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಜನಿಸಿದರು. ಅವರು ಉಸ್ತಾದ್ ಅಲ್ಲಾ ರಖಾ ಖಾನ್ ಅವರ ಪುತ್ರ. ತಮ್ಮ ತಂದೆಯ ಸಂಗೀತ ಪರಂಪರೆಯನ್ನು ಬಳುವಳಿಯಾಗಿ ಪಡೆದ ಹುಸೇನ್, ಭಾರತೀಯ ಶಾಸ್ತ್ರೀಯ ಸಂಗೀತದ ಜಾಗತಿಕ ರಾಯಭಾರಿಯಾದರು. ಅವರ ರಕ್ತದಲ್ಲೇ ಸಂಗೀತದೆಡೆಗೆ ಬಲವಾದ ಆಕರ್ಷಕ ಇತ್ತು.
icon

(2 / 7)

ತಮ್ಮ ಏಳನೇ ವಯಸ್ಸಿಗೆ ತಬಲಾ ವಾದನ ಕಲಿತ ಜಾಕಿರ್ ಹುಸೇನ್, 12ನೇ ವಯಸ್ಸಿಗೆ ಬರುವಷ್ಟರಲ್ಲಿ ವೇದಿಕೆ ಕಾರ್ಯಕ್ರಮ ನೀಡುತ್ತಾ ಭಾರತದಾದ್ಯಂತ ಪ್ರದರ್ಶನ ನೀಡಿದರು. ಮಾಹಿಮ್‌ನ ಸೇಂಟ್ ಮೈಕೆಲ್ಸ್ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು.
icon

(3 / 7)

ಖ್ಯಾತ ಕಥಕ್ ನೃತ್ಯ ಕಲಾವಿದೆ ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾದ ಜಾಕಿರ್ ಹುಸೇನ್ ಅವರಿಗೆ ಇಬ್ಬರು ಮಕ್ಕಳು. ಅನಿಸಾ ಮತ್ತು ಇಸಾಬೆಲ್ಲಾ ಇವರ ಹೆಣ್ಣುಮಕ್ಕಳ ಹೆಸರು. ತಬಲಾ ವಾದನ ಸಂಗೀತ ಸಂಯೋಜನೆ ಹೊರತಾಗಿ ಸಾಜ್ ಮತ್ತು ಮಂಕಿ ಮ್ಯಾನ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
icon

(4 / 7)

ತಮ್ಮ ಅದ್ಧೂರಿ ವೃತ್ತಿಜೀವನದಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. 12 ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕ್ಯಾ ತುಮ್ನೆ ಹೇ ಕೆಹ್‌ ದಿಯಾ, ರಾತ್‌ ಧಲ್ನೇ ಲಗಿ, ಆಜ್‌ ಇಕ್‌ ಹಾರ್ಫ್‌ ಕೊ ಮೊದಲಾದ ಜನಪ್ರಿಯ ಗೀತೆಗಳನ್ನು ಸಂಯೋಜಿಸಿದ್ದಾರೆ. ತಾಜ್‌ ಮಹಲ್‌ ಚಹಾ ಜಾಹಿರಾತಿನಲ್ಲಿ ಜಾಕಿರ್‌ ತಬಲ ವಾದನ ಸದಾ ಹಸಿರು ನೆನಪು.  
icon

(5 / 7)

1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಜಾಕಿರ್‌ ಹುಸೇನ್ ಅವರನ್ನು ಅರಸಿ ಬಂದಿವೆ. 1990ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ಅವರನ್ನು ಭಾರತದ ಅತ್ಯಂತ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರಾಗಿ ಮಾಡಿತು. 1999ರಲ್ಲಿ ಆರ್ಟ್ಸ್ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಕೂಡ ಸಿಕ್ಕಿತ್ತು.
icon

(6 / 7)

ಜಾಕಿರ್‌ ಅವರು ತಮ್ಮ ಸಂಗೀತ ಕಚೇರಿಗೆ 5ರಿಂದ 10 ಲಕ್ಷ ರೂ. ಪಡೆಯುತ್ತಿದ್ದರು. ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಜಾಕಿರ್‌ ಅವರ ಸಂಗೀತ ಕಚೇರಿಗೆ ಭಾರಿ ಬೇಡಿಕೆ ಇತ್ತು. ಇವರ ನಿವ್ವಳ ಮೌಲ್ಯ 1 ಮಿಲಿಯನ್ ಯುಎಸ್‌ ಡಾಲರ್.‌ ಅಂದರೆ ಸರಿಸುಮಾರು 8,48,00,000 ರೂಪಾಯಿ.
icon

(7 / 7)

ಜಾಕಿರ್‌ ಅವರು ತಮ್ಮ ಸಂಗೀತ ಕಚೇರಿಗೆ 5ರಿಂದ 10 ಲಕ್ಷ ರೂ. ಪಡೆಯುತ್ತಿದ್ದರು. ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಜಾಕಿರ್‌ ಅವರ ಸಂಗೀತ ಕಚೇರಿಗೆ ಭಾರಿ ಬೇಡಿಕೆ ಇತ್ತು. ಇವರ ನಿವ್ವಳ ಮೌಲ್ಯ 1 ಮಿಲಿಯನ್ ಯುಎಸ್‌ ಡಾಲರ್.‌ ಅಂದರೆ ಸರಿಸುಮಾರು 8,48,00,000 ರೂಪಾಯಿ.(All Photo: Instagram)

ಇತರ ಗ್ಯಾಲರಿಗಳು