ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅನಕೊಂಡ ತಂದು ಸಿಕ್ಕಿಬಿದ್ದ, ಇಲ್ಲಿವೆ 10 ಹಳದಿ ಅನಕೊಂಡಗಳ Photos

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅನಕೊಂಡ ತಂದು ಸಿಕ್ಕಿಬಿದ್ದ, ಇಲ್ಲಿವೆ 10 ಹಳದಿ ಅನಕೊಂಡಗಳ Photos

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ (ಏಪ್ರಿಲ್ 22) ಮಹತ್ವದ ಕಾರ್ಯಾಚರಣೆಯಲ್ಲಿ 10 ಜೀವಂತ ಹಳದಿ ಅನಕೊಂಡ ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿದೆ ಸಚಿತ್ರ ವರದಿ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸೂಟ್‌ಕೇಸ್‌ನಲ್ಲಿ ಮರೆಮಾಚಿ 10 ಜೀವಂತ ಹಳದಿ ಅನಕೊಂಡ ಹಾವುಗಳನ್ನು ಸಾಗಿಸಿದ್ದನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೋಮವಾರ (ಏಪ್ರಿಲ್ 22) ನಡೆದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಆ ಸೂಟ್‌ಕೇಸ್ ಹೊಂದಿದ್ದ ಪ್ರಯಾಣಿಕರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ. 
icon

(1 / 5)

ಥಾಯ್ಲೆಂಡ್, ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕ ಸೂಟ್‌ಕೇಸ್‌ನಲ್ಲಿ ಈ 10 ಹಾವುಗಳಿದ್ದವು. ವನ್ಯಜೀವಿ ಕಳ್ಳಸಾಗಣೆ ಅವಕಾಶ ಇಲ್ಲ. ಅಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ಕಸ್ಟಮ್ಸ್ ಟ್ವೀಟ್ ಮಾಡಿದೆ. ಬಂಧಿತ ಪ್ರಯಾಣಿಕರ ವಿವರವನ್ನು ಅದು ಬಹಿರಂಗಪಡಿಸಿಲ್ಲ. 
icon

(2 / 5)

ಭಾರತದ ಕಸ್ಟಮ್ಸ್ ಕಾರ್ಯಸಾಧನೆ.  ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳ ತಂಡ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರ ಚೆಕ್-ಇನ್ ಬ್ಯಾಗ್‌ನಲ್ಲಿ 10 ಹಳದಿ ಅನಕೊಂಡಗಳನ್ನು ಮರೆಮಾಚಿ ಸಾಗಿಸುವ ಯತ್ನವನ್ನು ತಡೆದಿದೆ. ಪ್ರಯಾಣಿಕರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಕಸ್ಟಮ್ಸ್ ಟ್ವೀಟ್‌ನಲ್ಲಿ ತಿಳಿಸಿದೆ. 
icon

(3 / 5)

ವನ್ಯಜೀವಿ ಕಳ್ಳಸಾಗಣೆಯನ್ನು ತಡೆಯಲು 1962ರ ಕಸ್ಟಮ್ಸ್ ಕಾಯಿದೆ ಜಾರಿಯಲ್ಲಿದ್ದು, ಅದರಲ್ಲಿ ಬಹಳ ಕಠಿಣ ನಿಬಂಧನೆಗಳಿವೆ. ಇದೇ ಕಾಯ್ದೆ ಪ್ರಕಾರ ಕೇಸ್ ದಾಖಲಾಗಿದ್ದು, ತನಿಖೆಯನ್ನು ಕಸ್ಟಮ್ಸ್ ಅಧಿಕಾರಿಗಳು ಕೈಗೊಂಡಿದ್ದಾರೆ. 
icon

(4 / 5)

ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ಈ ಹಿಂದೆಯೂ ಬ್ಯಾಂಕಾಕ್ ವಿಮಾನದಲ್ಲಿ ಬಂದವರಿಂದ 72 ಹಾವುಗಳು ಮತ್ತು ಆರು ಕೋತಿಗಳನ್ನು ಬ್ಯಾಗೇಜ್‌ನಿಂದ ಜಪ್ತಿ ಮಾಡಿದ್ದರು. ಹಾವುಗಳಲ್ಲಿ 55 ಬಾಲ್ ಹೆಬ್ಬಾವುಗಳು ಮತ್ತು 17 ರಾಜ ನಾಗರಹಾವುಗಳು ಸೇರಿದ್ದವು. ಇವೆಲ್ಲವೂ ಸಾಮಾನು ಸರಂಜಾಮುಗಳಲ್ಲಿ ಜೀವಂತವಾಗಿದ್ದವು. ಅದರೆ, ಆರು ಕ್ಯಾಪುಚಿನ್ ಕೋತಿಗಳು ಮೃತಪಟ್ಟಿದ್ದವು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿತ್ತು.
icon

(5 / 5)

IPL_Entry_Point

ಇತರ ಗ್ಯಾಲರಿಗಳು