ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲು ಇನ್ನೂ ಏನು ಮಾಡಬೇಕು?

ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲು ಇನ್ನೂ ಏನು ಮಾಡಬೇಕು?

  • RCB playoffs qualification scenario: ಪಂಜಾಬ್ ಕಿಂಗ್ಸ್​ ವಿರುದ್ಧ 60 ರನ್​ಗಳಿಂದ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪ್ಲೇಆಫ್​ ಹಾದಿ ಜೀವಂತವಾಗಿಟ್ಟುಕೊಂಡಿದೆ. ಅದಕ್ಕಾಗಿ ಆರ್​​ಸಿಬಿ ಮುಂದೆ ಏನು ಮಾಡಬೇಕು ಎಂಬುದರ ವಿವರ ಇಲ್ಲಿದೆ.

ಪಂಜಾಬ್​ ಕಿಂಗ್ಸ್​ ಐಪಿಎಲ್ 2024ರ ಪ್ಲೇಆಫ್​ಗೆ ಪ್ರವೇಶಿಸಲು ವಿಫಲವಾದ 2ನೇ ತಂಡ. ಮೇ 9ರ ಗುರುವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ ಪಂಜಾಬ್ ಲೀಗ್ ಹಂತದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಈ ಗೆಲುವಿನಿಂದಾಗಿ ಪ್ಲೇಆಫ್​ಗೆ ಹೋಗುವ ಆರ್​​ಸಿಬಿ ಭರವಸೆ ಇನ್ನೂ ಜೀವಂತವಾಗಿದೆ. ಫಾಫ್ ಪಡೆಯ ಪ್ಲೇಆಫ್ ಲೆಕ್ಕಾಚಾರ ಹೀಗಿದೆ.
icon

(1 / 6)

ಪಂಜಾಬ್​ ಕಿಂಗ್ಸ್​ ಐಪಿಎಲ್ 2024ರ ಪ್ಲೇಆಫ್​ಗೆ ಪ್ರವೇಶಿಸಲು ವಿಫಲವಾದ 2ನೇ ತಂಡ. ಮೇ 9ರ ಗುರುವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ ಪಂಜಾಬ್ ಲೀಗ್ ಹಂತದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಈ ಗೆಲುವಿನಿಂದಾಗಿ ಪ್ಲೇಆಫ್​ಗೆ ಹೋಗುವ ಆರ್​​ಸಿಬಿ ಭರವಸೆ ಇನ್ನೂ ಜೀವಂತವಾಗಿದೆ. ಫಾಫ್ ಪಡೆಯ ಪ್ಲೇಆಫ್ ಲೆಕ್ಕಾಚಾರ ಹೀಗಿದೆ.

ಮೊದಲಾರ್ಧದ ಐಪಿಎಲ್ ಮುಕ್ತಾಯಗೊಳ್ಳುತ್ತಿದ್ದಂತೆ ಆರ್​​ಸಿಬಿ ಪ್ಲೇ ಆಫ್​​ನಿಂದ ಹೊರಬೀಳುವ ಮೊದಲ ತಂಡ ಎಂದು ಹೇಳಲಾಗುತ್ತಿತ್ತು. ಆದರೆ ಕ್ರಿಕೆಟ್ ಭಾಷೆಯಲ್ಲಿ ಯಾವುದೂ ಅಸಾಧ್ಯವಲ್ಲ. ಈ ತಂಡಕ್ಕೂ ಮೊದಲೇ ಎರಡು ತಂಡಗಳು ಹೊರಬಿದ್ದಿವೆ. ಆದರೆ ಆರ್​ಸಿಬಿ ಮಾತ್ರ ಇನ್ನೂ ಪ್ಲೇಆಫ್​ನಲ್ಲೇ ಉಳಿದಿದೆ. ಅದಕ್ಕಾಗಿ, ತಮ್ಮ ಗುಂಪು ಹಂತದ ಉಳಿದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೊಡ್ಡ ಅಂತರದಿಂದ ಗೆಲ್ಲಬೇಕು.
icon

(2 / 6)

ಮೊದಲಾರ್ಧದ ಐಪಿಎಲ್ ಮುಕ್ತಾಯಗೊಳ್ಳುತ್ತಿದ್ದಂತೆ ಆರ್​​ಸಿಬಿ ಪ್ಲೇ ಆಫ್​​ನಿಂದ ಹೊರಬೀಳುವ ಮೊದಲ ತಂಡ ಎಂದು ಹೇಳಲಾಗುತ್ತಿತ್ತು. ಆದರೆ ಕ್ರಿಕೆಟ್ ಭಾಷೆಯಲ್ಲಿ ಯಾವುದೂ ಅಸಾಧ್ಯವಲ್ಲ. ಈ ತಂಡಕ್ಕೂ ಮೊದಲೇ ಎರಡು ತಂಡಗಳು ಹೊರಬಿದ್ದಿವೆ. ಆದರೆ ಆರ್​ಸಿಬಿ ಮಾತ್ರ ಇನ್ನೂ ಪ್ಲೇಆಫ್​ನಲ್ಲೇ ಉಳಿದಿದೆ. ಅದಕ್ಕಾಗಿ, ತಮ್ಮ ಗುಂಪು ಹಂತದ ಉಳಿದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೊಡ್ಡ ಅಂತರದಿಂದ ಗೆಲ್ಲಬೇಕು.(AFP)

ಆರ್​​ಸಿಬಿ ಪ್ಲೇಆಫ್ ಹಾದಿ ಸುಗಮವಾಗಬೇಕೆಂದರೆ ಮುಂಬೈ ಇಂಡಿಯನ್ಸ್ ಸಹಾಯ ಮಾಡಬೇಕು. ಎಂಐ ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸುವುದು ಅಗತ್ಯವಾಗಿದೆ. ಲಕ್ನೋ ಸದ್ಯ 12 ಅಂಕ ಪಡೆದಿದೆ.
icon

(3 / 6)

ಆರ್​​ಸಿಬಿ ಪ್ಲೇಆಫ್ ಹಾದಿ ಸುಗಮವಾಗಬೇಕೆಂದರೆ ಮುಂಬೈ ಇಂಡಿಯನ್ಸ್ ಸಹಾಯ ಮಾಡಬೇಕು. ಎಂಐ ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸುವುದು ಅಗತ್ಯವಾಗಿದೆ. ಲಕ್ನೋ ಸದ್ಯ 12 ಅಂಕ ಪಡೆದಿದೆ.(AFP)

ಅಷ್ಟೆ ಅಲ್ಲದೆ, ಗುಜರಾತ್ ಟೈಟಾನ್ಸ್, ಸಿಎಸ್​ಕೆ ತಂಡವನ್ನು ಮಣಿಸಬೇಕು. ಆಗ ಜಿಟಿ ಪ್ಲೇಆಫ್ ಆಸೆ ಜೀವಂತವಾಗುವುದರ ಜೊತೆಗೆ ಆರ್​ಸಿಬಿಗೂ ಸಹಾಯ ಮಾಡಲಿದೆ. ಚೆನ್ನೈ ಅಂಕಗಳನ್ನು ಕಳೆದುಕೊಂಡರೆ ಮಾತ್ರ ಪ್ಲೇ ಆಫ್ಗೆ ಬಾಗಿಲು ತೆರೆಯುತ್ತದೆ. ಇಲ್ಲದಿದ್ದರೆ, ಕಷ್ಟಕರವಾಗಿರುತ್ತದೆ. ಪ್ರಸ್ತುತ ಚೆನ್ನೈ 12 ಅಂಕ ಪಡೆದಿದ್ದು, 3 ಪಂದ್ಯ ಬಾಕಿ ಇದೆ. ಗುಜರಾತ್ 8 ಅಂಕ ಪಡೆದಿದ್ದು 3 ಪಂದ್ಯ ಬಾಕಿ ಇದೆ.
icon

(4 / 6)

ಅಷ್ಟೆ ಅಲ್ಲದೆ, ಗುಜರಾತ್ ಟೈಟಾನ್ಸ್, ಸಿಎಸ್​ಕೆ ತಂಡವನ್ನು ಮಣಿಸಬೇಕು. ಆಗ ಜಿಟಿ ಪ್ಲೇಆಫ್ ಆಸೆ ಜೀವಂತವಾಗುವುದರ ಜೊತೆಗೆ ಆರ್​ಸಿಬಿಗೂ ಸಹಾಯ ಮಾಡಲಿದೆ. ಚೆನ್ನೈ ಅಂಕಗಳನ್ನು ಕಳೆದುಕೊಂಡರೆ ಮಾತ್ರ ಪ್ಲೇ ಆಫ್ಗೆ ಬಾಗಿಲು ತೆರೆಯುತ್ತದೆ. ಇಲ್ಲದಿದ್ದರೆ, ಕಷ್ಟಕರವಾಗಿರುತ್ತದೆ. ಪ್ರಸ್ತುತ ಚೆನ್ನೈ 12 ಅಂಕ ಪಡೆದಿದ್ದು, 3 ಪಂದ್ಯ ಬಾಕಿ ಇದೆ. ಗುಜರಾತ್ 8 ಅಂಕ ಪಡೆದಿದ್ದು 3 ಪಂದ್ಯ ಬಾಕಿ ಇದೆ.(IPL)

ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಸನ್​ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲನುಭವಿಸಬೇಕಿದೆ. ಇದು ಸಂಭವಿಸಿದರೆ, ಇದರಿಂದ ಆರ್​ಸಿಬಿಗೆ ಪ್ಲೇಆಫ್ ಅವಕಾಶಗಳು ಮತ್ತಷ್ಟು ಹೆಚ್ಚಾಗುತ್ತವೆ.
icon

(5 / 6)

ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಸನ್​ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲನುಭವಿಸಬೇಕಿದೆ. ಇದು ಸಂಭವಿಸಿದರೆ, ಇದರಿಂದ ಆರ್​ಸಿಬಿಗೆ ಪ್ಲೇಆಫ್ ಅವಕಾಶಗಳು ಮತ್ತಷ್ಟು ಹೆಚ್ಚಾಗುತ್ತವೆ.(PTI)

ಕೆಕೆಆರ್ ಸಹ ಗುಜರಾತ್ ತಂಡವನ್ನು ಮಣಿಸಿದರೆ ಆರ್​ಸಿಬಿಗೆ ನೆರವಾಗಲಿದೆ. ಚೆನ್ನೈ, ಲಕ್ನೋ ಮತ್ತು ಡೆಲ್ಲಿ ತಂಡಗಳು ಎಲ್ಲಾ ಪಂದ್ಯಗಳನ್ನು ಸೋಲಬೇಕು. ಆರ್​​ಸಿಬಿ 14 ಅಂಕ ಪಡೆಯಲು ಉತ್ತಮ ಅವಕಾಶ ಇದ್ದು, ಉಳಿದ ತಂಡಗಳಿಗಿಂತ ಉತ್ತಮ ನೆಟ್​ ರನ್ ರೇಟ್ ಕಾಯ್ದುಕೊಳ್ಳಬೇಕು.
icon

(6 / 6)

ಕೆಕೆಆರ್ ಸಹ ಗುಜರಾತ್ ತಂಡವನ್ನು ಮಣಿಸಿದರೆ ಆರ್​ಸಿಬಿಗೆ ನೆರವಾಗಲಿದೆ. ಚೆನ್ನೈ, ಲಕ್ನೋ ಮತ್ತು ಡೆಲ್ಲಿ ತಂಡಗಳು ಎಲ್ಲಾ ಪಂದ್ಯಗಳನ್ನು ಸೋಲಬೇಕು. ಆರ್​​ಸಿಬಿ 14 ಅಂಕ ಪಡೆಯಲು ಉತ್ತಮ ಅವಕಾಶ ಇದ್ದು, ಉಳಿದ ತಂಡಗಳಿಗಿಂತ ಉತ್ತಮ ನೆಟ್​ ರನ್ ರೇಟ್ ಕಾಯ್ದುಕೊಳ್ಳಬೇಕು.(PTI)


IPL_Entry_Point

ಇತರ ಗ್ಯಾಲರಿಗಳು