Netravati River: ನೇತ್ರಾವತಿ ನದಿಯ ಕಲ್ಲುಬಂಡೆಗಳಲ್ಲಿ ಪ್ರಾಚೀನ ಬದುಕಿನ ದರ್ಶನ; ಫೋಟೋಸ್ ನೋಡಿ
ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯಲ್ಲಿ ಹರಿವು ಕಡಿಮೆಯಾಗಿ ಇಪ್ಪತ್ತೈದು ದಿನಗಳೇ ಆದವು. ಕಲ್ಲುಬಂಡೆಗಳ ನಡುವೆ ಸಣ್ಣ ನೀರಿನ ಒರತೆಯಷ್ಟೇ. ಸುಮ್ಮನೆ ಬಂಡೆಯನ್ನು ನಿಂತು ಅವಲೋಕಿಸಿದರೆ, ಪ್ರಾಚೀನ ಇತಿಹಾಸ ದರ್ಶನವೂ ಆಗಬಹುದು. ಬಂಟ್ವಾಳದ ನೇತ್ರಾವತಿ ನದಿಯ ಫೊಟೋಗ್ಯಾಲರಿ ಇಲ್ಲಿದೆ.
(1 / 5)
ಸೀತಾದೇವಿ ಪಾದ ಎಂದು ಸ್ಥಳೀಯರು ಹೇಳುವ ಈ ಆಕೃತಿಯಲ್ಲಿ ಯಾರ ಪಾದವೂ ಸರಿಯಾಗಿ ಹೊಂದಿಕೆಯಾಗುವುದಿಲ್ಲವಂತೆ. ಹಲವರು ಇಲ್ಲಿ ಪರೀಕ್ಷಿಸಿ ಸೋತಿದ್ದಾರೆ ಎನ್ನುತ್ತಾರೆ ಬಂಟ್ವಾಳದ ಸ್ಥಳೀಯರು. ದಕ್ಷಿಣ ಕನ್ನಡ ಜಿಲ್ಲೆಯ ಬತ್ತಿದ ನೇತ್ರಾವತಿ ನದಿಯಲ್ಲಿ ಕಾಣಿಸುವ ಕಲ್ಲುಬಂಡೆಗಳು ಈಗ ಇತಿಹಾಸವನ್ನು ಹೇಳಹೊರಟಿದೆ. ನದಿಯಲ್ಲಿ ನೀರಿಲ್ಲ ಎಂದು ಅಲ್ಲಿರುವ ಬಂಡೆಕಲ್ಲುಗಳನ್ನು ಅವಲೋಕಿಸಿದರೆ, ಪ್ರಾಚೀನ ಬದುಕಿನ ವಿರಾಟ್ ದರ್ಶನ ಆಗಲೂಬಹುದು. ನೋಡಿದವರ ಭಾವಕ್ಕೆ ನಿಲುಕದ ವಿಚಾರಗಳು ಹಲವಾರು. ಶಿವ, ನಂದಿ, ಪಾಣಿಪೀಠ, ಚೆನ್ನೆಮಣೆ, ಊಟದ ಬಟ್ಟಲು, ಜಡೆ, ಸೂರ್ಯಚಂದ್ರ, ತಾವರೆ.. ಹೀಗೆ ಬಂಟ್ವಾಳ ಪೇಟೆಯ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗ ನದಿಯ ಹರಿವು ಕಡಿಮೆ ಇರುವ ಕಾರಣ ಹತ್ತಾರು ಕೆತ್ತನೆಗಳಿರುವ ಕಲ್ಲುಗಳು ಕಾಣಸಿಗುತ್ತಿವೆ.
(2 / 5)
ನೇತ್ರಾವತಿ ಬಂಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಪ್ರಾಚೀನ ಬದುಕಿನ ಜೀವನವೂ ದೊರಕಬಹುದು. ಇತಿಹಾಸಕಾರರು, ಶಿಲಾಶಾಸ್ತ್ರಜ್ಞರು ಇದರ ಅಧ್ಯಯನಕ್ಕೆ ಹೊರಟರೆ, ಬೇರಾವುದೋ ವಿಚಾರ ದೊರಕಬಹುದು. ಸದ್ಯಕ್ಕೆ ಸ್ಥಳೀಯರ ಪಾಲಿಗೆ ಈ ಬಂಡೆಯ ರಚನೆಗಳಲ್ಲಿ ದೇವರ ದರ್ಶನ.
(3 / 5)
ಶಿವಲಿಂಗದ ರೀತಿಯಲ್ಲಿಯೇ ಇರುವ ಈ ಬಂಡೆಯ ರಚನೆಯಲ್ಲಿ ಯಾರೋ ತಪಸ್ವಿಗಳು ಬಂದು ಪೂಜೆ ಮಾಡಿದ್ದಿರಬಹುದು ಎಂಬ ನಂಬಿಕೆ ಇದೆ. ಇಲ್ಲೇ ಪಕ್ಕದಲ್ಲಿ ಊಟದ ತಟ್ಟೆಗಳನ್ನಿಡಲು ಮಾಡಿದ ಕೆತ್ತನೆಗಳು, ದೈವಿಕ ಸಿಂಬಲ್ ಗಳು ಕಾಣಸಿಗುತ್ತವೆ. ಆದರೆ ಮಣ್ಣಿನಿಂದ ಆವೃತವಾದ ಕಾರಣ ಸೂಕ್ಷ್ಮವಾಗಿ ಗಮನಿಸಬೇಕಷ್ಟೇ.
(4 / 5)
ಪಾದಪೂಜೆಗೆಂದು ಈ ರೀತಿಯ ಕೆತ್ತನೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಎದುರಿನಲ್ಲಿ ನಂದಿಯಾಕೃತಿ ಇದೆ. ಪಕ್ಕದಲ್ಲಿ ಪಾದದ ಚಿತ್ರವಿದೆ. ಸೀತಾದೇವಿಪಾದ ಎಂದು ಹೇಳಲಾಗುವ ರಚನೆಯಂತೆಯೇ ಈ ಕಲ್ಲುಬಂಡೆ ಇದೆ.
ಇತರ ಗ್ಯಾಲರಿಗಳು