Siddaramaiah Batting: ತುಮಕೂರಲ್ಲಿ ಸಿಎಂ ಸಿದ್ದರಾಮಯ್ಯ ಆದರು ಕ್ರಿಕೆಟಿಗ, ಭರ್ಜರಿ ಬ್ಯಾಟಿಂಗ್, ಭಾರೀ ಹೊಡೆತ
- Crickerer Siddaramaiah ಸಿಎಂ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ಕ್ರಿಕೆಟಿಗರಾಗಿ ಕಂಡರು. ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕು ಸ್ಥಾಪನೆ ವೇಳೆ ಕ್ರಿಕೆಟ್ ಕೂಡ ಆಡಿದರು. ಹೀಗಿದ್ದವು ಆ ಕ್ಷಣಗಳು.
- Crickerer Siddaramaiah ಸಿಎಂ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ಕ್ರಿಕೆಟಿಗರಾಗಿ ಕಂಡರು. ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕು ಸ್ಥಾಪನೆ ವೇಳೆ ಕ್ರಿಕೆಟ್ ಕೂಡ ಆಡಿದರು. ಹೀಗಿದ್ದವು ಆ ಕ್ಷಣಗಳು.
(1 / 6)
ಮಕೂರಿನಲ್ಲಿ ನೂತನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆಯನ್ನು ನೆರವೇರಿಸಿಲು ಕ್ರಿಕೆಟ್ ಟೋಪಿ ಧರಿಸಿ ಖುಷಿಯಿಂದಲೇ ಆಗಮಿಸಿದರು. ಅವರಿಗೆ ಗೃಹ ಸಚಿವ ಡಾ.ಪರಮೇಶ್ವರ್, ಮಾಜಿ ಕ್ರಿಕೆಟಿಗರಾದ ಎಂಎಲ್ಸಿ ಪ್ರಕಾಶ್ ರಾಠೋಢ್ ಮತ್ತಿತರರು ಸಾಥ್ ನೀಡಿದರು.
(2 / 6)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುತುಮಕೂರಿನಲ್ಲಿ ಬ್ಯಾಟಿಂಗ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಚಿವರಾಡ ಡಾ.ಪರಮೇಶ್ವರ್, ಕೆ.ಎನ್.ರಾಜಣ್ಣ, ತುಮಕೂರು ಡಿಸಿ ಸುಭಾ ಕಲ್ಯಾಣ್ ಮತ್ತಿತರರು ಇದ್ದರು.
(3 / 6)
ತುಮಕೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಜಿಲ್ಲೆಯ ಜನರ ಸುಧೀರ್ಘ ಕನಸು ಈಡೇರಲಿದೆ. ಭೂಮಿ ಮಂಜೂರಾತಿಯ ಆದೇಶ ಪತ್ರವನ್ನು ಕೆಎಸ್‌ಸಿಎ ಅವರಿಗೆ ಹಸ್ತಾಂತರಿಸಲಾಯಿತು. ಎರಡು ವರ್ಷದೊಳಗೆ ಸ್ಟೇಡಿಯಂ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಿದ್ದು ಇದರ ವಿವರವನ್ನು ಸಿಎಂ ಸಿದ್ದರಾಮಯ್ಯ ಪಡೆದುಕೊಂಡರು.
(4 / 6)
ಸಿದ್ದರಾಮಯ್ಯ ಅವರು ಅಪ್ಪಟ ಆಟಗಾರರು ಹೌದು.ಕಬ್ಬಡ್ಡಿ ಅವರ ಇಷ್ಟವಾದ ಆಟ. ಕ್ರಿಕೆಟ್ ಸಹಿತ ಎಲ್ಲಾ ಆಟಗಾರರನ್ನು ಅವರು ಉತ್ತೇಜಿಸುತ್ತಾರೆ.
(5 / 6)
ಕಳೆದ ವರ್ಷ ವಿಶ್ವವಾಣಿ ಪತ್ರಿಕೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಲೀಗ್ ಪಂದ್ಯಾವಳಿಗಳನ್ನು ಸಿದ್ದರಾಮಯ್ಯ ಭರ್ಜರಿ ಬ್ಯಾಟ್ ಮಾಡಿಯೇ ಉದ್ಘಾಟಿಸಿದ್ದರು.
ಇತರ ಗ್ಯಾಲರಿಗಳು