KSRP Recruitment: ಕೆಎಸ್​ಆರ್​ಪಿ 2400 ಹುದ್ದೆಗಳ ನೇಮಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್, ಶೀಘ್ರದಲ್ಲೇ ಅಧಿಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  Ksrp Recruitment: ಕೆಎಸ್​ಆರ್​ಪಿ 2400 ಹುದ್ದೆಗಳ ನೇಮಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್, ಶೀಘ್ರದಲ್ಲೇ ಅಧಿಸೂಚನೆ

KSRP Recruitment: ಕೆಎಸ್​ಆರ್​ಪಿ 2400 ಹುದ್ದೆಗಳ ನೇಮಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್, ಶೀಘ್ರದಲ್ಲೇ ಅಧಿಸೂಚನೆ

KSRP Constables Recruitment: ಕೆಎಸ್‌ಆರ್‌ಪಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಅವರು ಹೊಸ ಬೆಟಾಲಿಯನ್ ಆರಂಭಿಸವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಕೆಎಸ್​ಆರ್​ಪಿ 2400 ಹುದ್ದೆಗಳ ನೇಮಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್, ಶೀಘ್ರದಲ್ಲೇ ಅಧಿಸೂಚನೆ
ಕೆಎಸ್​ಆರ್​ಪಿ 2400 ಹುದ್ದೆಗಳ ನೇಮಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್, ಶೀಘ್ರದಲ್ಲೇ ಅಧಿಸೂಚನೆ

ಬೆಂಗಳೂರು: ಎಸ್ಸೆಸ್ಸೆಲ್ಸಿ ಓದಿರುವ ಮತ್ತು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 2400 ಕೆಎಸ್​ಆರ್​ಪಿ ಕಾನ್​ಸ್ಟೇಬಲ್​ ಹುದ್ದೆಗಳ ನೇಮಕಕ್ಕೆ ಆದೇಶ ಹೊರಡಿಸಿದೆ. ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪಡೆಯ ಎರಡನೇ ಹೊಸ ಬೆಟಾಲಿಯನ್ ಆರಂಭಕ್ಕೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗಾಗಲೇ ದೇವನಹಳ್ಳಿ ಸಮೀಪ 100 ಎಕರೆ, ಕೋಲಾರದ ಕೆಜಿಎಫ್ 50 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಈ ಬಗ್ಗೆ ಎಡಿಜಿಪಿ ಉಮೇಶ್ ಕುಮಾರ್​ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್‌ಪಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಅವರು ಹೊಸ ಬೆಟಾಲಿಯನ್ ಆರಂಭಿಸವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯ ರಾಜ್ಯದಲ್ಲಿ 12 ಕೆಎಸ್‌ಆರ್‌ಪಿ, 2 ಐಆರ್‌ಬಿ ಬೆಟಾಲಿಯನ್​ಗಳಿದ್ದು, ಕರ್ನಾಟಕದಲ್ಲಿ ಭದ್ರತೆ, ಪ್ರಾಕೃತಿಕ ವಿಪತ್ತು ಸೇರಿ ತುರ್ತು ಸಂದರ್ಭಕ್ಕೆ ನಿರ್ವಹಿಸಲು ಇನ್ನಷ್ಟು ಬೆಟಾಲಿಯನ್​​ಗಳ ಅಗತ್ಯ ಇದೆ. ಹೀಗಾಗಿ, ಹೊಸ ಬೆಟಾಲಿಯನ್‌ ತಯಾರಿಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿರುವ ರಾಜ್ಯ ಸರ್ಕಾರ, ಪತ್ರವೊಂದನ್ನು ಬರೆದಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

ಆದೇಶ ಪ್ರಕ್ರಿಯೆ ಯಾವಾಗಿನಿಂದ ಆರಂಭ?

ಬೆಟಾಲಿಯನ್‌ಗಳಿಗೆ ಗುರುತಿಸಿರುವ ಜಾಗಗಳಲ್ಲಿ ತರಬೇತಿ, ವಸತಿ ಸೇರಿ ಎಲ್ಲಾ ಸೌಲಭ್ಯ ಸಿಬ್ಬಂದಿಗೆ ನೀಡಲಾಗುತ್ತದೆ. 2 ಬೆಟಾಲಿಯನ್​ಗೆ ತಲಾ ಓರ್ವ ಕಮಾಂಡೆಂಟ್ ಸೇರಿದಂತೆ 1200ರಂತೆ ಒಟ್ಟು 2400 ಪೊಲೀಸರ ನೇಮಕಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹುದ್ದೆಗಳಿಗೆ ಸಂಬಂಧಿಸಿ ಅಧಿಸೂಚನೆ ಇನ್ನೂ ಸಿದ್ಧಪಡಿಸಿಲ್ಲ. ಈ ಪ್ರಕ್ರಿಯೆಗೆ ಇನ್ನೂ ಒಂದೆರಡು ತಿಂಗಳು ಕಾಲ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಬಂದ್‌, ಚುನಾವಣೆ, ಪ್ರತಿಭಟನೆ ಹಾಗೂ ಗಣ್ಯರ ಕಾರ್ಯಕ್ರಮಗಳಿಗೆ ಈ ಸಿಬ್ಬಂದಿ ಬಂದೋಬಸ್ತ್ ನೀಡುತ್ತಾರೆ.

ಕೆಎಸ್​ಆರ್​ಪಿ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ, ವಯೋಮಿತಿ ವಿವರ

  • ಎಸ್ಸೆಸ್ಸೆಲ್ಸಿ ಪಾಸ್‌ ಮಾಡಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಅರ್ಹರು.
  • ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು.
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಗರಿಷ್ಠ ವಯೋಮಿತಿ.
  • ಎಸ್ಸಿ/ಎಸ್ಟಿ/ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ.
  • ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ.

ಈ ವಿಷಯಗಳ ಕುರಿತು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುತ್ತದೆ

ಸಾಮಾನ್ಯ ಜ್ಞಾನ, ಸಾಮಾನ್ಯ ಅಧ್ಯಯನ, ಮೆಂಟಲ್ ಎಬಿಲಿಟಿ, ವಿಜ್ಞಾನ, ಭೂಗೋಳ, ಇತಿಹಾಸ, ನೀತಿ ಶಿಕ್ಷಣ, ಭಾರತದ ಸಂವಿಧಾನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಮೂಲಭೂತ ಹಕ್ಕುಗಳು ಮತ್ತು ನಿರ್ದೇಶಕ ತತ್ವ ಒಳಗೊಂಡಿರುತ್ತದೆ. ಗಣಿತ ಕೌಶಲ್ಯ ಮತ್ತು ಪ್ರಾದೇಶಿಕ ಮನ್ನಣೆ ಕೌಶಲ್ಯಗಳನ್ನು ಒಳಗೊಂಡಿರುತ್ತದೆ. ಅರ್ಜಿ ಸಲ್ಲಿಸಿದ ವ್ಯಕ್ತಿ ದೇಹದಾರ್ಢ್ಯತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು, ಲಿಖಿತ ಪರೀಕ್ಷೆಗೆ ಅರ್ಹರಾಗುತ್ತಾರೆ. ಲಿಖಿತ ಪರೀಕ್ಷೆ 100 ಅಂಕಗಳಿಗೆ ಕನ್ನಡ ಮತ್ತುಇಂಗ್ಲಿಷ್ 2 ಭಾಷೆಯಲ್ಲಿ ಪ್ರಶ್ನೆಗಳು ಇರುತ್ತವೆ.

  • ಪ್ರತಿ ಸರಿ ಉತ್ತರಕ್ಕೆ 1 ಅಂಕ
  • ಪರೀಕ್ಷೆಯ ಅವಧಿ 2 ಗಂಟೆ.

ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕ ಮತ್ತು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಶೇಕಡಾ ಅಂಕ ಸೇರಿಸಿ ಅದರ ಆಧಾರದ ಮೇಲೆ ಅರ್ಹತಾ ಪಟ್ಟಿ ಸಿದ್ದಪಡಿಸಲಾಗುವುದು.

Whats_app_banner