Ayodhya Deepotsav 2022: ದೀಪೋತ್ಸವಕ್ಕೆ ಅಯೋಧ್ಯೆ ಸಜ್ಜು, ಬೆಳಗಲು ಕಾಯುತ್ತಿವೆ 15 ಲಕ್ಷ ಹಣತೆಗಳು, ಚಿತ್ರಗಳನ್ನು ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ayodhya Deepotsav 2022: ದೀಪೋತ್ಸವಕ್ಕೆ ಅಯೋಧ್ಯೆ ಸಜ್ಜು, ಬೆಳಗಲು ಕಾಯುತ್ತಿವೆ 15 ಲಕ್ಷ ಹಣತೆಗಳು, ಚಿತ್ರಗಳನ್ನು ನೋಡಿ

Ayodhya Deepotsav 2022: ದೀಪೋತ್ಸವಕ್ಕೆ ಅಯೋಧ್ಯೆ ಸಜ್ಜು, ಬೆಳಗಲು ಕಾಯುತ್ತಿವೆ 15 ಲಕ್ಷ ಹಣತೆಗಳು, ಚಿತ್ರಗಳನ್ನು ನೋಡಿ

ಉತ್ತರ ಪ್ರದೇಶದಲ್ಲಿ ಬಹುನಿರೀಕ್ಷಿತ ದೀಪಾವಳಿ ದೀಪೋತ್ಸವ ಆರಂಭವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಹದಿನೈದರಿಂದ ಹದಿನೇಳು ಲಕ್ಷದಷ್ಟು ಹಣತೆಗಳು ಕಾಯುತ್ತಿವೆ. ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯು ಈ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 2017ರಿಂದ ಅಯೋಧ್ಯೆಯಲ್ಲಿ ದೀಪೋತ್ಸವ ನಡೆಯುತ್ತಿದೆ. ಈ ಬಾರಿಯ ದೀಪೋತ್ಸವ ಗಿನ್ನೀಸ್‌ ದಾಖಲೆ ಬರೆಯುವ ನಿರೀಕ್ಷೆಯಿದೆ.

ಎಚ್‌ಟಿ ಕನ್ನಡ ಈ ಹಿಂದೆ ವರದಿ ಮಾಡಿದಂತೆ ಈ ಬಾರಿ ಹದಿನೈದು ಲಕ್ಷದಷ್ಟು ಹಣತೆಗಳನ್ನು ದೀಪೋತ್ಸವದಲ್ಲಿ ಉರಿಸಲಾಗುತ್ತದೆ. ಕೆಲವು ವರದಿಗಳ ಪ್ರಕಾರ ಈ ಬಾರಿ ಹದಿನೇಳು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆಯಂತೆ. ಅಂತಿಮ ಲೆಕ್ಕ ಇಂದು ಸಂಜೆ ದೊರಕಲಿದೆ. ಇದು ದೇಶದ ದೀಪೋತ್ಸವಗಳಲ್ಲಿಯೇ ಹೊಸ ದಾಖಲೆಯಾಗಲಿದೆ.
icon

(1 / 6)

ಎಚ್‌ಟಿ ಕನ್ನಡ ಈ ಹಿಂದೆ ವರದಿ ಮಾಡಿದಂತೆ ಈ ಬಾರಿ ಹದಿನೈದು ಲಕ್ಷದಷ್ಟು ಹಣತೆಗಳನ್ನು ದೀಪೋತ್ಸವದಲ್ಲಿ ಉರಿಸಲಾಗುತ್ತದೆ. ಕೆಲವು ವರದಿಗಳ ಪ್ರಕಾರ ಈ ಬಾರಿ ಹದಿನೇಳು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆಯಂತೆ. ಅಂತಿಮ ಲೆಕ್ಕ ಇಂದು ಸಂಜೆ ದೊರಕಲಿದೆ. ಇದು ದೇಶದ ದೀಪೋತ್ಸವಗಳಲ್ಲಿಯೇ ಹೊಸ ದಾಖಲೆಯಾಗಲಿದೆ. (Sourced)

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದೀಪೋತ್ಸವದ ಜನದಟ್ಟಣೆ ನಿರ್ವಹಣೆಗೆ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ, ವಿದೇಶಿಗರ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇಂದು ಸಂಜೆ ವೈವಿಧ್ಯಮಯವಾದ ಕಾರ್ಯಕ್ರಮಗಳಿಗೆ ಅಯೋಧ್ಯೆ ಸಾಕ್ಷಿಯಾಗಲಿದೆ.
icon

(2 / 6)

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದೀಪೋತ್ಸವದ ಜನದಟ್ಟಣೆ ನಿರ್ವಹಣೆಗೆ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ, ವಿದೇಶಿಗರ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇಂದು ಸಂಜೆ ವೈವಿಧ್ಯಮಯವಾದ ಕಾರ್ಯಕ್ರಮಗಳಿಗೆ ಅಯೋಧ್ಯೆ ಸಾಕ್ಷಿಯಾಗಲಿದೆ. (Sourced)

ಕಳೆದ ವರ್ಷ ದೀಪಾವಳಿಯ ದೀಪೋತ್ಸವದಂದು 9,41,551 ಹಣತೆಗಳನ್ನು ಇಲ್ಲಿ ಬೆಳಗಲಾಗಿತ್ತು.
icon

(3 / 6)

ಕಳೆದ ವರ್ಷ ದೀಪಾವಳಿಯ ದೀಪೋತ್ಸವದಂದು 9,41,551 ಹಣತೆಗಳನ್ನು ಇಲ್ಲಿ ಬೆಳಗಲಾಗಿತ್ತು. (Sourced)

ಅಯೋಧ್ಯೆಯಲ್ಲಿ ಈಗಾಗಲೇ ಹದಿನೈದು (ಅಥವಾ ಅದಕ್ಕಿಂತ ಹೆಚ್ಚು) ಲಕ್ಷ ಹಣತೆಗಳನ್ನು ಸರಾಯು ನದಿಯ ತೀರದ ರಾಮ್‌ ಕಿ ಪೈಡಿಯಲ್ಲಿ  ಮತ್ತು ಇತರೆ 37 ಘಾಟ್‌ಗಳಲ್ಲಿ ಜೋಡಿಸಲಾಗಿದೆ.
icon

(4 / 6)

ಅಯೋಧ್ಯೆಯಲ್ಲಿ ಈಗಾಗಲೇ ಹದಿನೈದು (ಅಥವಾ ಅದಕ್ಕಿಂತ ಹೆಚ್ಚು) ಲಕ್ಷ ಹಣತೆಗಳನ್ನು ಸರಾಯು ನದಿಯ ತೀರದ ರಾಮ್‌ ಕಿ ಪೈಡಿಯಲ್ಲಿ ಮತ್ತು ಇತರೆ 37 ಘಾಟ್‌ಗಳಲ್ಲಿ ಜೋಡಿಸಲಾಗಿದೆ. (Sourced)

ದೀಪೋತ್ಸವದ ಸಮಯದಲ್ಲಿ ಲೇಸರ್‌ ಶೋ ನಡೆಸಲು ಸಿದ್ಧತೆ ಹೀಗಿದೆ.  ಅಯೋಧ್ಯೆ ದೀಪೋತ್ಸವದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ರಾಮಲೀಲಾದಲ್ಲಿ ಇಂದು ಹದಿನೈದು ಲಕ್ಷ ಹಣತೆಗಳು ಬೆಳಗಳಿವೆ. ಜತೆಗೆ, ಲೇಸರ್‌ ಶೋ ಕೂಡ ಇರಲಿದೆ. ಪಟಾಕಿಗಳೂ ಕೂಡ ಆಕಾಶದಲ್ಲಿ ಚಿತ್ತಾರ ಮೂಡಿಸಲಿವೆ.
icon

(5 / 6)

ದೀಪೋತ್ಸವದ ಸಮಯದಲ್ಲಿ ಲೇಸರ್‌ ಶೋ ನಡೆಸಲು ಸಿದ್ಧತೆ ಹೀಗಿದೆ. ಅಯೋಧ್ಯೆ ದೀಪೋತ್ಸವದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ರಾಮಲೀಲಾದಲ್ಲಿ ಇಂದು ಹದಿನೈದು ಲಕ್ಷ ಹಣತೆಗಳು ಬೆಳಗಳಿವೆ. ಜತೆಗೆ, ಲೇಸರ್‌ ಶೋ ಕೂಡ ಇರಲಿದೆ. ಪಟಾಕಿಗಳೂ ಕೂಡ ಆಕಾಶದಲ್ಲಿ ಚಿತ್ತಾರ ಮೂಡಿಸಲಿವೆ. (Sourced)

ಪ್ರಧಾನ ಮಂತ್ರಿಗಳ ಕಾರ್ಯಾಲಯ ನೀಡಿದ ಮಾಹಿತಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ಭಗವನ್‌ ಶ್ರೀ ರಾಮಲಲ್ಲಾ ವಿರಾಜಮಾನ ದೇವರ ದರ್ಶನ ಪಡೆಯಲಿದ್ದಾರೆ ಮತ್ತು ಪೂಜೆ ಸಲ್ಲಿಸಲಿದ್ದಾರೆ. ಇಂದು ಸಂಜೆ 5 ಗಂಟೆಗೆ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಬಳಿಕ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸೈಟ್‌ಗೆ ಭೇಟಿ ನೀಡಲಿದ್ದಾರೆ.
icon

(6 / 6)

ಪ್ರಧಾನ ಮಂತ್ರಿಗಳ ಕಾರ್ಯಾಲಯ ನೀಡಿದ ಮಾಹಿತಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ಭಗವನ್‌ ಶ್ರೀ ರಾಮಲಲ್ಲಾ ವಿರಾಜಮಾನ ದೇವರ ದರ್ಶನ ಪಡೆಯಲಿದ್ದಾರೆ ಮತ್ತು ಪೂಜೆ ಸಲ್ಲಿಸಲಿದ್ದಾರೆ. ಇಂದು ಸಂಜೆ 5 ಗಂಟೆಗೆ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಬಳಿಕ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸೈಟ್‌ಗೆ ಭೇಟಿ ನೀಡಲಿದ್ದಾರೆ.(Sourced)


ಇತರ ಗ್ಯಾಲರಿಗಳು