ಗೆದ್ದಿದ್ದು ಆಸ್ಟ್ರೇಲಿಯಾ, ಸೋತಿದ್ದು ನ್ಯೂಜಿಲೆಂಡ್, ಅಗ್ರಸ್ಥಾನಕ್ಕೇರಿದ್ದು ಮಾತ್ರ ಭಾರತ; ಹೀಗಿದೆ ಡಬ್ಲ್ಯುಟಿಸಿ ಅಂಕಪಟ್ಟಿ
- ICC World Test Championship Points Table : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಮೊದಲ ಸ್ಥಾನಕ್ಕೇರಿದೆ.
- ICC World Test Championship Points Table : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಮೊದಲ ಸ್ಥಾನಕ್ಕೇರಿದೆ.
(1 / 11)
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿತು. 172 ರನ್ಗಳೊಂದಿಗೆಜಯದ ನಗೆ ಬೀರಿ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿತು. ಇದರೊಂದಿಗೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆಯಾಯಿತು. ಹಾಗಾದರೆ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬುದನ್ನು ಈ ಮುಂದೆ ನೋಡೋಣ.
(AFP)(2 / 11)
ನ್ಯೂಜಿಲೆಂಡ್ ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ ಅಗ್ರಸ್ಥಾನಕ್ಕೇರಿದೆ. ಈವರೆಗೂ ಆಡಿದ 8 ಪಂದ್ಯಗಳಲ್ಲಿ 5 ಗೆಲುವು, 2 ಸೋಲು ಮತ್ತು 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡವಾರು 64.58 ಇದೆ.
(AP)(3 / 11)
ಇನ್ನು ಆಸೀಸ್ ವಿರುದ್ಧ ಸೋಲುಂಡ ನ್ಯೂಜಿಲೆಂಡ್ 5ರಲ್ಲಿ 3 ಗೆದ್ದು, 2ರಲ್ಲಿ ಸೋತಿದೆ. ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವುದಕ್ಕೂ ಮುನ್ನ ಅಗ್ರಸ್ಥಾನದಲ್ಲಿದ್ದ ಕಿವೀಸ್, ಇದೀಗ 2ನೇ ಸ್ಥಾನಕ್ಕೆ ಕುಸಿದಿದೆ. ಈಗ ಗೆಲುವಿನ ಶೇಕಡವಾರು 60.00 ಇದೆ.
(4 / 11)
ನ್ಯೂಜಿಲೆಂಡ್ ಎದುರು ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ, 11 ಪಂದ್ಯಗಳ ಪೈಕಿ 7 ಗೆಲುವು ಸಾಧಿಸಿದೆ. 3 ಸೋಲು, 1 ಡ್ರಾನೊಂದಿಗೆ 59.09ರಷ್ಟು ಗೆಲುವಿನ ಶೇಕಡವಾರು ಹೊಂದಿದೆ. ಅಲ್ಲದೆ, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
(AFP)(5 / 11)
ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 2 ಪಂದ್ಯಗಳಲ್ಲಿ ತಲಾ ಒಂದೊಂದು ಸೋಲು, ಗೆಲುವು ಕಂಡಿದೆ. ಗೆಲುವಿನ ಶೇಕಡವಾರು 50.00.
(6 / 11)
ಐದನೇ ಸ್ಥಾನದಲ್ಲಿರುವ ಪಾಕಿಸ್ತಾನ ಈವರೆಗೂ 5 ಪಂದ್ಯಗಳಲ್ಲಿ 2 ಗೆಲುವು ಮತ್ತು 3 ಸೋಲು ಕಂಡಿದೆ. ಗೆಲುವಿನ ಶೇಕಡವಾರು 36.66.
(7 / 11)
ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ 6ನೇ ಸ್ಥಾನದಲ್ಲಿದೆ. 4 ಪಂದ್ಯ, 1 ಗೆಲುವು, 2 ಸೋಲು, 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡವಾರು 33.33 ರಷ್ಟಿದೆ.
(8 / 11)
7ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 4 ಪಂದ್ಯಗಳಲ್ಲಿ 1 ಗೆಲುವು, 3 ಸೋಲಿನೊಂದಿಗೆ 25.00ರಷ್ಟು ಗೆಲುವಿನ ಶೇಕಡವಾರು ಹೊಂದಿದೆ.
(9 / 11)
ಭಾರತದ ವಿರುದ್ಧ ಸತತ ಸೋಲು ಅನುಭವಿಸುತ್ತಿರುವ ಇಂಗ್ಲೆಂಡ್, 8ನೇ ಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳಲ್ಲಿ 3 ಗೆಲುವು, 5 ಸೋಲು ಮತ್ತು 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡವಾರು ಕೇವಲ 19.44ರಷ್ಟಿದೆ.
(10 / 11)
ಟೆಸ್ಟ್ ಚಾಂಪಿಯನ್‌ಶಿಪ್‌ನಡಿಯಲ್ಲಿ ಒಟ್ಟು 2 ಪಂದ್ಯಗಳನ್ನು ಆಡಿದ್ದರೂ, ಶ್ರೀಲಂಕಾ ಇನ್ನೂ ಪಾಯಿಂಟ್ ಪುಸ್ತಕವನ್ನು ತೆರೆದಿಲ್ಲ. 2 ಪಂದ್ಯಗಳಲ್ಲಿ ಸೋತಿದೆ. ಪ್ರಸ್ತುತ, ಶ್ರೀಲಂಕಾ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು