ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Independence Day: ರಾಜಸ್ಥಾನಿ ಬಾಂಧನಿ ಪೇಟದ ಮೂಲಕ ಗಮನ ಸೆಳೆದ ನರೇಂದ್ರ ಮೋದಿ; 2014ರಿಂದ ಸ್ವಾತಂತ್ರ್ಯ ದಿನದಂದು ಮೋದಿ ವೇಷ ಭೂಷಣ ಹೀಗಿತ್ತು

Independence Day: ರಾಜಸ್ಥಾನಿ ಬಾಂಧನಿ ಪೇಟದ ಮೂಲಕ ಗಮನ ಸೆಳೆದ ನರೇಂದ್ರ ಮೋದಿ; 2014ರಿಂದ ಸ್ವಾತಂತ್ರ್ಯ ದಿನದಂದು ಮೋದಿ ವೇಷ ಭೂಷಣ ಹೀಗಿತ್ತು

  • ಪ್ರತಿ ಬಾರಿ ಸ್ವಾತಂತ್ರ್ಯ ದಿನದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರ ವೇಷ ಭೂಷಣ ಗಮನ ಸೆಳೆದಿತ್ತು. ಈ ವರ್ಷದ ಸ್ವಾತಂತ್ರ್ಯೋತ್ಸವದಂದು ಮೋದಿ ರಾಜಸ್ಥಾನಿ ಬಾಂಧನಿ ಶೈಲಿಯ ಪೇಟ ಧರಿಸಿದ್ದರು. 2014ರಿಂದ 2023ರವರೆಗೆ  ಸ್ವಾತಂತ್ರ್ಯ ದಿನದಂದು ಮೋದಿ ಧರಿಸಿದ್ದ ವೇಷಭೂಷಣಗಳು ಫೋಟೊಸ್‌ ಇಲ್ಲಿದೆ. 

77ನೇ ಸ್ವಾತಂತ್ರ್ಯ ದಿನವಾದ ಇಂದು ಪ್ರಧಾನಿ ಮೋದಿ ರಾಜಸ್ಥಾನಿ ಬಾಂಧನಿ ಮುದ್ರಣವಿರುವ ಹಳದಿ ಹಾಗೂ ವಿವಿಧ ಬಣ್ಣಗಳ ಸಮ್ಮಿಶ್ರವಿರುವ ಪೇಟ ಧರಿಸಿದ್ದರು. ಇದರಲ್ಲಿ ಅಶೋಕ ಚಕ್ರವನ್ನು ಗೋಚರಿಸುವಂತೆ ವಿನ್ಯಾಸಗೊಳಿಸಲಾಗಿತ್ತು. ಬಿಳಿ ಬಣ್ಣದ ಶರ್ಟ್‌ ಮೇಲೆ ಕಪ್ಪು ಬಣ್ಣದ ನೆಹರೂ ಕೋಟ್‌ ಧರಿಸುವ ಮೂಲಕ ಗಮನ ಸೆಳೆದರು. 
icon

(1 / 10)

2022ರಲ್ಲಿ ಪ್ರಧಾನಿ ಮೋದಿ ಕಿತ್ತಳೆ ಮತ್ತು ಹಸಿರು ಪಟ್ಟಿಗಳಿಂದ ಅಲಂಕರಿಸಲ್ಪಟ್ಟ ಬಿಳಿ ಬಣ್ಣದ ಪೇಟವನ್ನು ಧರಿಸಿದ್ದರು. ರಾಷ್ಟ್ರಧ್ವಜವನ್ನು ಪ್ರತಿನಿಧಿಸುವ ಬಣ್ಣಗಳ ಈ ಪೇಟದೊಂದಿಗೆ ನೀಲಿ ಬಣ್ಣದ ಕೋಟ್‌ ಧರಿಸಿದ್ದರು.  
icon

(2 / 10)

2021ರಲ್ಲಿ ಮೋದಿ ಕೇಸರಿ ಬಣ್ಣದ ಕೊಲ್ಹಾಪುರಿ ಶೈಲಿಯ ಪೇಟವನ್ನು ಧರಿಸಿದ್ದರು. ಇದು ರಾಜನೀತಿ ಮತ್ತು ಸಾಂಪ್ರದಾಯಿಕ ನೋಟಕ್ಕೆ ಉದಾಹರಣೆಯಂತಿತ್ತು. ಇದರ ಮೇಲೆ ನೀಲಿ ಬಣ್ಣದ ಕೋರ್ಟ್‌ ಹಾಗೂ ಶಾಲ್‌ ಧರಿಸಿದ್ದರು.
icon

(3 / 10)

2020 ಕೋವಿಡ್‌ ಕಾಲಘಟ್ಟವಾಗಿತ್ತು. ಆ ವರ್ಷ ನಡೆದ ಸ್ವಾತಂತ್ರ್ಯ ದಿನದಂದು ಮೋದಿ ಕಿತ್ತಳೆ ಮತ್ತು ಹಳದಿ ಬಣ್ಣದ ಪೇಟ, ಮಸುಕಾದ ಅರ್ಧ ತೋಳಿನ ಕುರ್ತಾ ಮತ್ತು ಬಳಿ ಬಣ್ಣ ಪ್ಯಾಂಟ್‌ ಧರಿಸಿದ್ದರು. ಜೊತೆಗೆ ಬಿಳಿ ಹಾಗೂ ಕೇಸರಿ ಬಣ್ಣದ ಶಾಲ್‌ ಧರಿಸಿದ್ದರು.   
icon

(4 / 10)

2019ರಲ್ಲಿ ಪ್ರಧಾನಿ ಮೋದಿ ಹಳದಿ ಹಾಗೂ ವಿವಿಧ ಬಣ್ಣಗಳಿರುವ ಪೇಟ ಧರಿಸಿದ್ದರು. ಬಳಿ ಬಣ್ಣದ ಅರ್ಧ ತೋಳಿನ ಡ್ರೆಸ್‌ ತೊಟ್ಟಿದ್ದರು. 
icon

(5 / 10)

2018ರಲ್ಲಿ ಪ್ರಧಾನಿ ಮೋದಿ ಧರಿಸಿದ್ದು, ಕೇಸರಿ ಬಣ್ಣದ ಲೆಹರಿಯಾ ಪೇಟ. ಇದು ಕೆಂಪು ಬಣ್ಣದ ಸುಳಿಗಳನ್ನು ಒಳಗೊಂಡಿತ್ತು. ಅಂದು ಸಂಪೂರ್ಣ ಬಿಳಿ ಬಣ್ಣದ ಕುರ್ತಾ ಪ್ಯಾಂಟ್‌ ಧರಿಸಿದ್ದರು ಮೋದಿ.
icon

(6 / 10)

2017ರಲ್ಲಿ ಮೋದಿಯವರ ಗೋಲ್ಡನ್‌ ಅಥವಾ ಚಿನ್ನದ ಬಣ್ಣ ಕುರ್ತಾ ಧರಿಸಿದ್ದರು. ಸಂಕೀರ್ಣವಾದ ಕಸೂತಿ ಕೆಂಪು ಹಾಗೂ ಹಳದಿ ಬಣ್ಣ ಪೇಟದೊಂದಿಗೆ ಕುರ್ತಾ ಗಮನ ಸೆಳೆದಿತ್ತು. 
icon

(7 / 10)

2016ರ ಸ್ವಾತಂತ್ರ್ಯೋತ್ಸವದಂದು ಮೋದಿ ಕಿತ್ತಳೆ, ಕೆಂಪು ಗುಲಾಬಿ ಛಾಯೆಯನ್ನು ಒಳಗೊಂಡ ಬಹುವರ್ಣದ ಪೇಟ ಧರಿಸಿದ್ದರು. ಜೊತೆಗೆ ಸಂಪೂರ್ಣ ಬಿಳಿ ಬಣ್ಣದ ಅರ್ಧ ತೋಳಿನ ಕುರ್ತಾ ಧರಿಸಿದ್ದರು. 
icon

(8 / 10)

2015ರಲ್ಲಿ ಮೋದಿ ಬಹು ಬಣ್ಣದ ಸ್ಟ್ರಿಪ್‌ ಪ್ರಿಂಟ್‌ನ ಪೇಟ ಧರಿಸಿದ್ದರು. ಜೊತೆಗೆ ಕೆನೆ ಬಣ್ಣದ ತುಂಬು ತೋಳಿನ ಕುರ್ತಾ ಧರಿಸಿದ್ದರು. 
icon

(9 / 10)

2014 ರಲ್ಲಿ ಪ್ರಧಾನಿಯಾಗಿ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸಿದ್ದ ಮೋದಿ ಕೇಸರಿ ಬಣ್ಣದ ಪೇಟದೊಂದಿಗೆ ಹಸಿರು-ಹಳದಿ ಬಾಂಧನಿ ಮುದ್ರಣದ ಬೀಜ್‌ ಕುರ್ತಾ ಮತ್ತು ಬಳಿ ಬಣ್ಣದ ಪ್ಯಾಂಟ್‌ ಧರಿಸಿದ್ದರು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು