Kannada Jokes: ನಗ್ತಾ ಇರಿ, ನಗಿಸ್ತಾ ಇರಿ... ಇಲ್ಲಿದೆ ನಿಮಗಾಗಿ ಹೊಟ್ಟೆ ಹುಣ್ಣಾಗಿಸುವ 12 ಜೋಕ್‌ಗಳು; ಓದಿ, ಶೇರ್ ಮಾಡಿ, ಖುಷಿಪಡಿ
- ನಗೋದು ಯಾರಿಗೆ ಇಷ್ಟವಾಗೊಲ್ಲ ಹೇಳಿ, ಅದ್ರಲ್ಲೂ ಜೋಕ್‌ಗಳನ್ನು ಓದಿದ್ರೆ, ಕೇಳಿದ್ರೆ ನಾವು ಬಿದ್ದು ಬಿದ್ದು ನಗ್ತೀವಿ. ನಾವ್ ನಗೋದು ಮಾತ್ರವಲ್ಲ, ಆ ಜೋಕ್ ಅನ್ನು ಬೇರೆಯವರೊಂದಿಗೂ ಹಂಚಿಕೊಂಡು ಅವರನ್ನು ನಗಿಸ್ತೀವಿ. ನೀವು ಜೋಕ್ ಪ್ರೇಮಿಯಾಗಿದ್ದರೆ, ನಿಮಗಾಗಿ ಇಲ್ಲಿದೆ ಹೊಟ್ಟೆ ಹುಣ್ಣಾಗಿಸುವ 12 ಜೋಕ್‌ಗಳು, ಇನ್ಯಾಕೆ ತಡ ಓದಿ, ಶೇರ್ ಮಾಡಿ.
- ನಗೋದು ಯಾರಿಗೆ ಇಷ್ಟವಾಗೊಲ್ಲ ಹೇಳಿ, ಅದ್ರಲ್ಲೂ ಜೋಕ್‌ಗಳನ್ನು ಓದಿದ್ರೆ, ಕೇಳಿದ್ರೆ ನಾವು ಬಿದ್ದು ಬಿದ್ದು ನಗ್ತೀವಿ. ನಾವ್ ನಗೋದು ಮಾತ್ರವಲ್ಲ, ಆ ಜೋಕ್ ಅನ್ನು ಬೇರೆಯವರೊಂದಿಗೂ ಹಂಚಿಕೊಂಡು ಅವರನ್ನು ನಗಿಸ್ತೀವಿ. ನೀವು ಜೋಕ್ ಪ್ರೇಮಿಯಾಗಿದ್ದರೆ, ನಿಮಗಾಗಿ ಇಲ್ಲಿದೆ ಹೊಟ್ಟೆ ಹುಣ್ಣಾಗಿಸುವ 12 ಜೋಕ್‌ಗಳು, ಇನ್ಯಾಕೆ ತಡ ಓದಿ, ಶೇರ್ ಮಾಡಿ.
(1 / 15)
ನಗೋಣು ಬರ್ರೀ…. ಜೋಕ್ ಓದೋದು ಇಷ್ಟ ಅನ್ನೋರು ಇಲ್ ಬರ್ರೀ, ನಿಮಗಾಗಿ ಇಲ್ಲಿದೆ 12 ಮಸ್ತ್ ಜೋಕ್‌ಗಳು. ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ಈ ಜೋಕ್‌ಗಳನ್ನ ನೀವು ಓದೋದು ಮಾತ್ರವಲ್ಲ, ಇದನ್ನ ಬೇರೆಯವರೊಂದಿಗೆ ಹಂಚಿಕೊಂಡು ಖುಷಿ ಪಡ್ತೀರಿ,
(2 / 15)
ಹ್ಯಾಪಿ ಹುಚ್ ಡೇ: ವಾಟ್ಸಾಪ್‌ಗೆ ಈ ಮೆಸೇಜ್ ಬಂತು; ಏನಿದು ಅಂತ ರಿಪ್ಲೈ ಮಾಡ್ಡೆ, ʼನನ್ ಫೋನ್, ನನ್ ಇಷ್ಟ ಏನ್ ಬೇಕಾದ್ರೂ ವಿಶ್ ಮಾಡಬಹುದುʼ ಅಂತ ರಿಪ್ಲೈ ಬಂತು
(3 / 15)
ಉತ್ರ ಕೊಡಬೇಕಾ?ಪರೀಕ್ಷೆಯಲ್ಲಿ ನನಗೆ ಸೊನ್ನೆ ಮಾರ್ಕ್ ಬಂದಿತ್ತು. ‘ಏನು ಬರೆದಿದ್ಯೋ’ ಅಂತ ಅಪ್ಪ ಕೋಲು ತಗೊಂಡ್ರು. “ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋದು ಅಗತ್ಯವೂ ಇಲ್ಲ, ಸಾಧ್ಯವೂ ಇಲ್ಲ”ಹೀಗಂತ ಪರೀಕ್ಷೇಲಿ ಬರೆದು ಬಂದಿದ್ದೆ ನಾನು
(4 / 15)
ಟಾನಿಕ್ ಬಾರ್ಆ ಅಂಗಡಿಯ ಅಡಿಟಿಪ್ಪಣಿ ಹೀಗಿತ್ತು…“ಇದನ್ನು ಔಷಧಿ ಅಂಗಡಿ ಅಂದುಕೊಳ್ಳಬೇಕಿಲ್ಲ. ಆದರೆ ಇಲ್ಲಿ ಸಿಗುವುದನ್ನು ಔಷಧಿ ಅಂದುಕೊಂಡರೂ ತಪ್ಪಿಲ್ಲ”
(5 / 15)
ತಪ್ಪು ಗಂಡ ಇವನುಗಂಡ: ಮದುವೆಯಾಗಿ 20 ವರ್ಷವಾಯ್ತು. ನಾನು ಏನು ಮಾತಾಡಿದ್ರೂ ತಪ್ಪು ಕಂಡು ಹಿಡೀತೀಯಲ್ಲೇ. ಹೆಂಡತಿ: ನೆಟ್ಟಗೆ ಮಾತಾಡೋದು ಈ ಜನ್ಮಕ್ಕೆ ನಿಮಗೆ ಬರಲ್ಲ. ನಮ್ ಮದುವೆಯಾಗಿ ಇಪ್ಪತ್ತಲ್ಲಾ, ಇಪ್ಪತ್ತೊಂದು ವರ್ಷವಾಯ್ತು...
(6 / 15)
ಕುಟುಂಬ ವ್ಯಾಕರಣ-1ಮಗಳು ಹ್ರಸ್ವ, ಮಗ ಧೀರ್ಘಅತ್ತೆ ಮಾವ: ಒಮ್ಮೆ ತತ್ಸಮ, ಮತ್ತೊಮ್ಮೆ ತದ್ಭವಅಜ್ಜ ಅಜ್ಜಿ: ಹಳೆಗನ್ನಡ
(7 / 15)
ಕುಟುಂಬ ವ್ಯಾಕರಣ-2ಅತ್ತೆ ಸೊಸೆ: ವಿರುದ್ದ ಪದಗಳುವಾರಗಿತ್ತಿಯರೋ: ಆಗಾಗ ಜೋಡಿಪದ, ಆಗಾಗ ಆಲಾಪಮಾವನೋ: ಸಂಜ್ಞಾ ಸೂಚಕ
(8 / 15)
ಕುಟುಂಬ ವ್ಯಾಕರಣ-3ಬಂಧುಗಳೋ: ತಕ್ಷಣಕ್ಕೆ ಅರ್ಥವಾಗದ ವ್ಯಾಕರಣಇವೆಲ್ಲದರ ಮಧ್ಯೆ: ನಾನು ಅಲ್ಪಪ್ರಾಣ, ನನ್ನವನು ನನಗೆ ಮಹಾಪ್ರಾಣ
(9 / 15)
ಹೆಂಡತಿ ಮೆಸೇಜು-1ತವರು ಮನೆಗೆ ಹೋದ ಹೆಂಡತಿ ಗಂಡನಿಗೆ ಕಳಿಸಿದ ಮೆಸೇಜ್ ಹೀಗಿತ್ತು. ಗಂಡನಿಗೆ ಸಿಟ್ಟು, ನಗು ಎಲ್ಲವೂ ಒಟ್ಟೊಟ್ಟಿಗೆ ಬಂದಿತ್ತು“ ಕೆಲಸದ ಮೀನಾಗೆ ಸಂಬಳ ಚುಕ್ತಾ ಮಾಡಿದ್ದೇನೆ. ನಾನು ಊರಿಂದ ಬರುವವರೆಗೂ ಅವಳು ಬರಲ್ಲ, ಅವರಮ್ಮ ಬರುತ್ತಾರೆ”
(10 / 15)
ಹೆಂಡತಿ ಮೆಸೇಜು-2ನೀವು ತುಂಬಾ ಹೆಲ್ತಿಯಾಗಿದ್ದೀರಿ ಅಂತ ಗೊತ್ತಿದೆ. ಪದೇಪದೆ ಆ ಲೇಡಿ ಡಾಕ್ಟರ್ ಹತ್ರ ಚೆಕಪ್‌ಗೆ ಹೋಗಬೇಡಿ.
(11 / 15)
ಹೆಂಡತಿ ಮೆಸೇಜು-3ನಿಮ್ಮ ನಾದಿನಿ, ಅಂದ್ರೆ ನನ್ನ ತಂಗಿಯ ಹುಟ್ಟುಹಬ್ಬ ಹೋದ ತಿಂಗಳೇ ಆಗಿದೆ. ನಾವಿಬ್ಬರೂ ಪಾರ್ಟಿಗೆ ಹೋಗಿ ಬಂದಿದ್ದೆವು. ನಡುರಾತ್ರಿ ಅವಳಿಗೆ ಬಿಲೇಟೆಡ್ ಬರ್ತ್ ಡೇ ವಿಶಸ್ ಹೇಳಬೇಕಿಲ್ಲ. ನಮ್ಮ ಭಾಮೈದ ಕರಾಟೆ ಕಲಿಯುತ್ತಿದ್ದಾನಂತೆ. ಹುಷಾರಾಗಿರಿ.
(12 / 15)
ಹೆಂಡತಿ ಮೆಸೇಜು-4ಇನ್ಮುಂದೆ ಜಾಸ್ತಿ ಸ್ಮಾರ್ಟ್ ಆಗಿ ರೆಡಿ ಆಗಿ ಬೈಕ್ ಓಡಿಸುವ ಅಗತ್ಯವಿಲ್ಲ. ನಮ್ಮ ಬೀದಿಯ ಸ್ವಾತಿ, ಜ್ಯೋತಿ, ರಾಧಿಕಾ... ಮೂವರೂ ಊರಿಗೆ ಹೋಗಿದ್ದಾರೆ.
(13 / 15)
ಹೆಂಡತಿ ಮೆಸೇಜು-5ಶಾಸನ ವಿಧಿಸಿದ ಎಚ್ಚರಿಕೆ: ನಾನು ಅಮ್ಮನ ಮನೆಯಿಂದ ಯಾವಾಗ ಬೇಕಿದ್ದರೂ ವಾಪಸ್ ಬರುವ ಸಾಧ್ಯತೆಗಳು ಇದ್ದೇ ಇದೆ. ನಿಮ್ಮ ಎಚ್ಚರದಲ್ಲಿ ನೀವಿರುವುದು ಯಾವುದಕ್ಕೂ ಒಳ್ಳೆಯದು
(14 / 15)
ಆಹಾರ, ಆರೋಗ್ಯ, ಫ್ಯಾಷನ್, ರಿಲೇಷನ್‌ಶಿಪ್ , ಪೇರೆಂಟಿಂಗ್ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಲೈಫ್‌ಸ್ಟೈಲ್ ಪುಟಕ್ಕೆ ಭೇಟಿ ನೀಡಿ
ಇತರ ಗ್ಯಾಲರಿಗಳು