ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pm Narendra Modi: ಬಾಗಲಕೋಟೆ ಬಾಲಕಿಯಿಂದ ಪ್ರಧಾನಿ ಮೋದಿಗೆ ತಾಯಿ ಹೀರಾಬೆನ್ ಜೊತೆಗಿರುವ ಫೋಟೊ ಗಿಫ್ಟ್; ಫೋಟೊಸ್

PM Narendra Modi: ಬಾಗಲಕೋಟೆ ಬಾಲಕಿಯಿಂದ ಪ್ರಧಾನಿ ಮೋದಿಗೆ ತಾಯಿ ಹೀರಾಬೆನ್ ಜೊತೆಗಿರುವ ಫೋಟೊ ಗಿಫ್ಟ್; ಫೋಟೊಸ್

  • Lok Sabha Eleciton 2024: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆಯಲ್ಲಿನ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಬಾಲಕಿಯೊಬ್ಬರು ಪ್ರಧಾನಿಗೆ ನೀಡಿದ ಉಡುಗೊರೆ ಗಮನ ಸೆಳೆಯಿತು. ಅದರ ಫೋಟೊಸ್ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಇಂದು (ಏಪ್ರಿಲ್ 29, ಸೋಮವಾರ) ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಇಲ್ಲಿನ ಬಿಜೆಪಿ ಪಿಸಿ ಗದ್ದಿಗೌಡರ್ ಪರ ಮತಯಾಚನೆ ಮಾಡಿದರು.
icon

(1 / 10)

ಪ್ರಧಾನಿ ನರೇಂದ್ರ ಮೋದಿ ಇಂದು (ಏಪ್ರಿಲ್ 29, ಸೋಮವಾರ) ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಇಲ್ಲಿನ ಬಿಜೆಪಿ ಪಿಸಿ ಗದ್ದಿಗೌಡರ್ ಪರ ಮತಯಾಚನೆ ಮಾಡಿದರು.

ಬೊಕ್ಕಸ ಲೂಟಿ ಮಾಡುವ ವಸೂಲಿ ಗ್ಯಾಂಗ್‌ನಂತೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
icon

(2 / 10)

ಬೊಕ್ಕಸ ಲೂಟಿ ಮಾಡುವ ವಸೂಲಿ ಗ್ಯಾಂಗ್‌ನಂತೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.(PTI)

ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಬೆಳ್ಳಿ ಗದೆಯನ್ನು ನೀಡಿ ಗೌರವಿಸಲಾಯಿತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್, ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಉಪಸ್ಥಿತರಿದ್ದರು.
icon

(3 / 10)

ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಬೆಳ್ಳಿ ಗದೆಯನ್ನು ನೀಡಿ ಗೌರವಿಸಲಾಯಿತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್, ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಉಪಸ್ಥಿತರಿದ್ದರು.(BJP Media)

ಸಮಾವೇಶದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.
icon

(4 / 10)

ಸಮಾವೇಶದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.(BJP Media)

ಬಾಗಲಕೋಟೆಯ ಬಿಜೆಪಿ ಸಮಾವೇಶದಲ್ಲಿ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಮತ್ತವರ ತಾಯಿ ಹೀರಾಬೆನ್ ಇದ್ದ ಭಾವಚಿತ್ರವನ್ನು ಮೇಲಕ್ಕೆ ಎತ್ತಿ ಪ್ರದರ್ಶಿಸಿದರು.
icon

(5 / 10)

ಬಾಗಲಕೋಟೆಯ ಬಿಜೆಪಿ ಸಮಾವೇಶದಲ್ಲಿ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಮತ್ತವರ ತಾಯಿ ಹೀರಾಬೆನ್ ಇದ್ದ ಭಾವಚಿತ್ರವನ್ನು ಮೇಲಕ್ಕೆ ಎತ್ತಿ ಪ್ರದರ್ಶಿಸಿದರು.

ಬಾಲಕಿಯ ಪ್ರದರ್ಶಿಸಿದ ಭಾವಚಿತ್ರವನ್ನು ಗಮನಿಸಿದ ಪ್ರಧಾನಿ ಮೋದಿ ಭಾಷಣದ ನಡುವೆಯೇ ಇದು ನನಗೆ ನೀಡುವುತ್ತಿರುವುದೇ ಎಂಬಂತೆ ಸನ್ನೆ ಮಾಡಿ ಅಂಗರಕ್ಷಕರ ಮೂಲಕ ಫೋಟೊವನ್ನು ತರಿಸಿಕೊಂಡರು.
icon

(6 / 10)

ಬಾಲಕಿಯ ಪ್ರದರ್ಶಿಸಿದ ಭಾವಚಿತ್ರವನ್ನು ಗಮನಿಸಿದ ಪ್ರಧಾನಿ ಮೋದಿ ಭಾಷಣದ ನಡುವೆಯೇ ಇದು ನನಗೆ ನೀಡುವುತ್ತಿರುವುದೇ ಎಂಬಂತೆ ಸನ್ನೆ ಮಾಡಿ ಅಂಗರಕ್ಷಕರ ಮೂಲಕ ಫೋಟೊವನ್ನು ತರಿಸಿಕೊಂಡರು.

ನೀನು ನೀಡಿದ ಗಿಫ್ಟ್ ತಲುಪಿದೆ ಎಂದು ಪ್ರಧಾನಿ ಮೋದಿ ಥಂಬ್ಸ್ ಅಪ್ ಮಾಡಿ ಬಾಲಕಿಗೆ ತಿಳಿಸಿದರು.
icon

(7 / 10)

ನೀನು ನೀಡಿದ ಗಿಫ್ಟ್ ತಲುಪಿದೆ ಎಂದು ಪ್ರಧಾನಿ ಮೋದಿ ಥಂಬ್ಸ್ ಅಪ್ ಮಾಡಿ ಬಾಲಕಿಗೆ ತಿಳಿಸಿದರು.

ಫೋಟೊ ಸ್ವೀಕರಿಸಿದ ಬಳಿಕ ಬಾಲಕಿಗೆ ಪತ್ರ ಬರೆಯುವುದಾಗಿ ಮೋದಿ ಹೇಳಿದ್ದಾರೆ. ಫೋಟೊವನ್ನು ಸ್ವೀಕರಿಸಿದ ಬಳಿಕ ಬಾಲಕಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದರು.
icon

(8 / 10)

ಫೋಟೊ ಸ್ವೀಕರಿಸಿದ ಬಳಿಕ ಬಾಲಕಿಗೆ ಪತ್ರ ಬರೆಯುವುದಾಗಿ ಮೋದಿ ಹೇಳಿದ್ದಾರೆ. ಫೋಟೊವನ್ನು ಸ್ವೀಕರಿಸಿದ ಬಳಿಕ ಬಾಲಕಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದರು.

ಪ್ರಧಾನಿ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಜೊತೆಗಿರುವ ಭಾವಚಿತ್ರವನ್ನು ನಮೋಗೆ ಉಡುಗೊರೆಯಾಗಿ ನೀಡಿದ ಬಾಲಕಿಯ ಹೆಸರು ನಾಗರತ್ನಾ ಮೇಟಿ. ಇವರು ನವನಗರ 42 ನೇ ಸೆಕ್ಟರ್ ನಿವಾಸಿಯಾಗಿದ್ದಾರೆ. ಪ್ರಧಾನಿಗೆ ನೀಡಿದ ಫೋಟೊವನ್ನು ತಾನೇ ಬಿಡಿಸಿದ್ದಾಗಿ ಹೇಳಿದ್ದಾರೆ. 
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(10 / 10)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.

IPL_Entry_Point

ಇತರ ಗ್ಯಾಲರಿಗಳು