ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ 2024ರ ವೇಗದ ಬೌಲಿಂಗ್ ಬಳಿಕ ಮಯಾಂಕ್ ಯಾದವ್ ಏನಂದ್ರು; ಭಾರತೀಯ ವೇಗದೂತನಿಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಆದರ್ಶವಂತೆ

ಐಪಿಎಲ್ 2024ರ ವೇಗದ ಬೌಲಿಂಗ್ ಬಳಿಕ ಮಯಾಂಕ್ ಯಾದವ್ ಏನಂದ್ರು; ಭಾರತೀಯ ವೇಗದೂತನಿಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಆದರ್ಶವಂತೆ

  • Mayank Yadav: ಲಕ್ನೋ ಮತ್ತು ಪಂಜಾಬ್‌ ತಂಡಗಳ ನಡುವಿನ ಐಪಿಎಲ್‌ ಪಂದ್ಯದ ಬಳಿಕ ಮಯಾಂಕ್ ಯಾದವ್‌ ಎಂಬ ಹೆಸರು ಸುದ್ದಿಯಾಗುತ್ತಿದೆ. ಬರೋಬ್ಬರಿ 155.8 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ, ಐಪಿಎಲ್ 2024ರ ವೇಗದ ಎಸೆತ ಎಸೆದು ದಾಖಲೆ ನಿರ್ಮಿಸಿದರು. 

ಪದಾರ್ಪಣೆಯ ಐಪಿಎಲ್‌ ಪಂದ್ಯದಲ್ಲೇ ಎಲ್ಲರನ್ನೂ ಅಚ್ಚರಿಗೊಳಿಸಿದ ಮಯಾಂಕ್ ಯಾದವ್, ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಅತ್ಯಂತ ವೇಗದ ಎಸೆತ ಎಸೆದಿದ್ದಾರೆ. ಪಂಜಾಬ್‌ ತಂಡದ ಮೂರು ವಿಕೆಟ್ ಪಡೆದು, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ,
icon

(1 / 8)

ಪದಾರ್ಪಣೆಯ ಐಪಿಎಲ್‌ ಪಂದ್ಯದಲ್ಲೇ ಎಲ್ಲರನ್ನೂ ಅಚ್ಚರಿಗೊಳಿಸಿದ ಮಯಾಂಕ್ ಯಾದವ್, ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಅತ್ಯಂತ ವೇಗದ ಎಸೆತ ಎಸೆದಿದ್ದಾರೆ. ಪಂಜಾಬ್‌ ತಂಡದ ಮೂರು ವಿಕೆಟ್ ಪಡೆದು, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ,(AP)

147 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ವೃತ್ತಿಜೀವನ ಆರಂಭಿಸಿದ ಮಯಾಂಕ್‌, ಆ ಬಳಿಕ 155.8 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಐದನೇ ಅತಿ ವೇಗದ ಎಸೆತ ಬೌಲ್‌ ಮಾಡಿದ ದಾಖಲೆಯನ್ನು ಮಯಾಂಕ್ ಯಾದವ್ ನಿರ್ಮಿಸಿದ್ದಾರೆ.
icon

(2 / 8)

147 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ವೃತ್ತಿಜೀವನ ಆರಂಭಿಸಿದ ಮಯಾಂಕ್‌, ಆ ಬಳಿಕ 155.8 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಐದನೇ ಅತಿ ವೇಗದ ಎಸೆತ ಬೌಲ್‌ ಮಾಡಿದ ದಾಖಲೆಯನ್ನು ಮಯಾಂಕ್ ಯಾದವ್ ನಿರ್ಮಿಸಿದ್ದಾರೆ.(PTI)

ಮಯಾಂಕ್ ಯಾದವ್ 4 ಓವರ್‌ಗಳಲ್ಲಿ 27 ರನ್ ನೀಡಿ ಜಾನಿ ಬೇರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಿತೇಶ್ ಶರ್ಮಾ ವಿಕೆಟ್ ಪಡೆದರು. ತಮ್ಮ ಅದ್ಭುತ ಬೌಲಿಂಗ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
icon

(3 / 8)

ಮಯಾಂಕ್ ಯಾದವ್ 4 ಓವರ್‌ಗಳಲ್ಲಿ 27 ರನ್ ನೀಡಿ ಜಾನಿ ಬೇರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಿತೇಶ್ ಶರ್ಮಾ ವಿಕೆಟ್ ಪಡೆದರು. ತಮ್ಮ ಅದ್ಭುತ ಬೌಲಿಂಗ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.(ANI)

ಪಂದ್ಯದ ಬಳಿಕ ಮಾತನಾಡಿದ ಮಯಾಂಕ್ ಯಾದವ್, ನಾನು ಇಷ್ಟು ಉತ್ತಮವಾಗಿ ಪದಾರ್ಪಣೆ ಮಾಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಪಂದ್ಯಕ್ಕೂ ಮುನ್ನ ನಾನು ತುಸು ಆತಂಕಕ್ಕೊಳಗಾಗಿದ್ದೆ. ನಾನು ನನ್ನ ವೇಗದಲ್ಲಿ ಸ್ಥಿರತೆ ಕಾಪಾಡಲು ಪ್ರಯತ್ನಿಸಿದೆ. ಸ್ಟಂಪ್‌ಗಳನ್ನು ಗುರಿಯಾಗಿಸಿಕೊಂಡು ಆಡಿದೆ. ಆರಂಭದಲ್ಲಿ ನಾನು ನಿಧಾನವಾಗಿ ಬೌಲಿಂಗ್ ಮಾಡುವ ಬಗ್ಗೆ ಯೋಚಿಸುತ್ತಿದ್ದೆ. ನಂತರ ನನ್ನ ವೇಗವನ್ನು ಮುಂದುವರಿಸಿದೆ, ಎಂದು ಅವರು ಹೇಳಿದ್ದಾರೆ.
icon

(4 / 8)

ಪಂದ್ಯದ ಬಳಿಕ ಮಾತನಾಡಿದ ಮಯಾಂಕ್ ಯಾದವ್, ನಾನು ಇಷ್ಟು ಉತ್ತಮವಾಗಿ ಪದಾರ್ಪಣೆ ಮಾಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಪಂದ್ಯಕ್ಕೂ ಮುನ್ನ ನಾನು ತುಸು ಆತಂಕಕ್ಕೊಳಗಾಗಿದ್ದೆ. ನಾನು ನನ್ನ ವೇಗದಲ್ಲಿ ಸ್ಥಿರತೆ ಕಾಪಾಡಲು ಪ್ರಯತ್ನಿಸಿದೆ. ಸ್ಟಂಪ್‌ಗಳನ್ನು ಗುರಿಯಾಗಿಸಿಕೊಂಡು ಆಡಿದೆ. ಆರಂಭದಲ್ಲಿ ನಾನು ನಿಧಾನವಾಗಿ ಬೌಲಿಂಗ್ ಮಾಡುವ ಬಗ್ಗೆ ಯೋಚಿಸುತ್ತಿದ್ದೆ. ನಂತರ ನನ್ನ ವೇಗವನ್ನು ಮುಂದುವರಿಸಿದೆ, ಎಂದು ಅವರು ಹೇಳಿದ್ದಾರೆ.(AFP)

“ಮೊದಲ ವಿಕೆಟ್ (ಬೈರ್‌ಸ್ಟೋ) ತುಂಬಾ ವಿಶೇಷವಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಪದಾರ್ಪಣೆ ಮಾಡುವುದು ಒಳ್ಳೆಯದೆ. ನನ್ನ ಮುಂದೆ ಸಾಕಷ್ಟು ಗುರಿಗಳಿವೆ, ಆದರೆ ಗಾಯಗಳು ಎದುರಾದರೆ ಕಷ್ಟವಾಗುತ್ತದೆ” ಎಂದು 21 ವರ್ಷದ ಯುವ ವೇಗದ ಬೌಲರ್, ಹೇಳಿದ್ದಾರೆ.
icon

(5 / 8)

“ಮೊದಲ ವಿಕೆಟ್ (ಬೈರ್‌ಸ್ಟೋ) ತುಂಬಾ ವಿಶೇಷವಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಪದಾರ್ಪಣೆ ಮಾಡುವುದು ಒಳ್ಳೆಯದೆ. ನನ್ನ ಮುಂದೆ ಸಾಕಷ್ಟು ಗುರಿಗಳಿವೆ, ಆದರೆ ಗಾಯಗಳು ಎದುರಾದರೆ ಕಷ್ಟವಾಗುತ್ತದೆ” ಎಂದು 21 ವರ್ಷದ ಯುವ ವೇಗದ ಬೌಲರ್, ಹೇಳಿದ್ದಾರೆ.(ANI)

"ವೇಗ ಯಾವತ್ತೂ ನನಗೆ ಸ್ಫೂರ್ತಿ ನೀಡಿದೆ. ಕ್ರಿಕೆಟ್‌ ಮಾತ್ರವಲ್ಲದೆ, ಜೀವನದಲ್ಲೂ ಅಷ್ಟೇ. ರಾಕೆಟ್, ವಿಮಾನ ಅಥವಾ ಬೈಕ್ ಆಗಿರಲಿ. ನಾನು ಚಿಕ್ಕವನಿದ್ದಾಗಿನಿಂದ ವೇಗವು ನನಗೆ ಸ್ಫೂರ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.
icon

(6 / 8)

"ವೇಗ ಯಾವತ್ತೂ ನನಗೆ ಸ್ಫೂರ್ತಿ ನೀಡಿದೆ. ಕ್ರಿಕೆಟ್‌ ಮಾತ್ರವಲ್ಲದೆ, ಜೀವನದಲ್ಲೂ ಅಷ್ಟೇ. ರಾಕೆಟ್, ವಿಮಾನ ಅಥವಾ ಬೈಕ್ ಆಗಿರಲಿ. ನಾನು ಚಿಕ್ಕವನಿದ್ದಾಗಿನಿಂದ ವೇಗವು ನನಗೆ ಸ್ಫೂರ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.(ANI)

"ಕಳೆದ ಎರಡು ವರ್ಷಗಳಿಂದ, ನಾನು ಐಪಿಎಲ್‌ನಲ್ಲಿ ನನ್ನ ಮೊದಲ ಎಸೆತವನ್ನು ಎಸೆದಾಗ ಅದು ಹೇಗಿರುತ್ತದೆ ಎಂಬುದನ್ನೇ ಕಲ್ಪಿಸಿಕೊಳ್ಳುತ್ತಿದ್ದೆ. ದೊಡ್ಡ ಜನಸಮೂಹದ ಮುಂದೆ ಆಡುವಾಗ ಸ್ವಲ್ಪ ಹೆದರುತ್ತೇನೆ ಎಂದು ಎಲ್ಲರೂ ನನಗೆ ಹೇಳಿದರು. ಆದರೆ ನನಗೆ ಆ ಅನುಭವ ಆಗಲಿಲಿಲ್ಲ.
icon

(7 / 8)

"ಕಳೆದ ಎರಡು ವರ್ಷಗಳಿಂದ, ನಾನು ಐಪಿಎಲ್‌ನಲ್ಲಿ ನನ್ನ ಮೊದಲ ಎಸೆತವನ್ನು ಎಸೆದಾಗ ಅದು ಹೇಗಿರುತ್ತದೆ ಎಂಬುದನ್ನೇ ಕಲ್ಪಿಸಿಕೊಳ್ಳುತ್ತಿದ್ದೆ. ದೊಡ್ಡ ಜನಸಮೂಹದ ಮುಂದೆ ಆಡುವಾಗ ಸ್ವಲ್ಪ ಹೆದರುತ್ತೇನೆ ಎಂದು ಎಲ್ಲರೂ ನನಗೆ ಹೇಳಿದರು. ಆದರೆ ನನಗೆ ಆ ಅನುಭವ ಆಗಲಿಲಿಲ್ಲ.(LSG-X)

ಯಾವ ಬೌಲರ್ ನಿಮ್ಮ ಆದರ್ಶ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಯಾಂಕ್ ಯಾದವ್, "ನಾನು ಒಬ್ಬ ವೇಗದ ಬೌಲರ್ ಅನ್ನು ಮಾತ್ರ ನೋಡಿದ್ದೇನೆ. ಅವರೇ ಡೇಲ್ ಸ್ಟೇನ್. ನಾನು ಅವರನ್ನು ನೋಡಿ ಬಹಳಷ್ಟು ಕಲಿಯಲು ಪ್ರಯತ್ನಿಸುತ್ತೇನೆ," ಎಂದು ಅವರು ಹೇಳಿದ್ದಾರೆ.
icon

(8 / 8)

ಯಾವ ಬೌಲರ್ ನಿಮ್ಮ ಆದರ್ಶ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಯಾಂಕ್ ಯಾದವ್, "ನಾನು ಒಬ್ಬ ವೇಗದ ಬೌಲರ್ ಅನ್ನು ಮಾತ್ರ ನೋಡಿದ್ದೇನೆ. ಅವರೇ ಡೇಲ್ ಸ್ಟೇನ್. ನಾನು ಅವರನ್ನು ನೋಡಿ ಬಹಳಷ್ಟು ಕಲಿಯಲು ಪ್ರಯತ್ನಿಸುತ್ತೇನೆ," ಎಂದು ಅವರು ಹೇಳಿದ್ದಾರೆ.(AP)


IPL_Entry_Point

ಇತರ ಗ್ಯಾಲರಿಗಳು