ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Odisha Train Accident: ಒಡಿಶಾ ರೈಲು ಅಪಘಾತದಲ್ಲಿ ಈವರೆಗೆ 50 ಮಂದಿ ಸಾವು; 132 ಮಂದಿಗೆ ಗಾಯ; ಮುಂದುವರೆದ ರಕ್ಷಣಾ ಕಾರ್ಯಾಚರಣೆ Photos

Odisha Train Accident: ಒಡಿಶಾ ರೈಲು ಅಪಘಾತದಲ್ಲಿ ಈವರೆಗೆ 50 ಮಂದಿ ಸಾವು; 132 ಮಂದಿಗೆ ಗಾಯ; ಮುಂದುವರೆದ ರಕ್ಷಣಾ ಕಾರ್ಯಾಚರಣೆ PHOTOS

  • ಒಡಿಶಾ ರೈಲು ಅಪಘಾತದಲ್ಲಿ ಈವರೆಗೆ 50 ಮಂದಿ ಸಾವನ್ನಪ್ಪಿದ್ದು, 132 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆ, ಮೆಡಿಕಲ್​ ಕಾಲೇಜುಗಳಲ್ಲಿ ದಾಖಲಿಸಲಾಗುತ್ತಿದೆ. ಸುಮಾರು 50 ಆ್ಯಂಬುಲೆನ್ಸ್​ಗಳು ಸ್ಥಳಕ್ಕೆ ದೌಡಾಯಿಸಿದೆ. ಗಾಯಾಳುಗಳ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. 

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದೆ. ಗೂಡ್ಸ್​ ರೈಲಿಗೆ 12841 ಯುಪಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಇಂದು (ಜೂನ್​ 2, ಶುಕ್ರವಾರ) ಸಂಜೆ ಡಿಕ್ಕಿಯಾಗಿದೆ. 
icon

(1 / 6)

ರೈಲು ಅಪಘಾತದಲ್ಲಿ ಈವರೆಗೆ  30 ಮಂದಿ ಸಾವನ್ನಪ್ಪಿದ್ದು, 132 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆ, ಮೆಡಿಕಲ್​ ಕಾಲೇಜುಗಳಲ್ಲಿ ದಾಖಲಿಸಲಾಗುತ್ತಿದೆ. 
icon

(2 / 6)

ಗಾಯಾಳುಗಳ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ.  
icon

(3 / 6)

ಮೂರು ಸ್ಲೀಪರ್​ ಕೋಚ್​ಗಳನ್ನು ಬಿಟ್ಟು ಉಳಿದೆಲ್ಲಾ ಬೋಗಿಗಳು ಹಳಿ ತಪ್ಪಿವೆ. ಬಾಲಸೋರ್ ಮತ್ತು ಸುತ್ತಮುತ್ತಲಿನ ವೈದ್ಯಕೀಯ ಕಾಲೇಜುಗಳು ಮತ್ತು ಎಲ್ಲಾ ಆಸ್ಪತ್ರೆಗಳು ಅಲರ್ಟ್ ಆಗಿವೆ.
icon

(4 / 6)

3 ಎನ್​ಡಿಆರ್​ಫ್​ ಘಟಕಗಳು, 4 ಒಡಿಆರ್​ಎಫ್​ ಘಟಕಗಳು ಮತ್ತು ಸುಮಾರು 50 ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.  
icon

(5 / 6)

ಪಶ್ಚಿಮ ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಹೊರಡುವ ಈ ಎಕ್ಸ್​ಪ್ರೆಸ್​ ರೈಲು ಚೆನ್ನೈನ ಪುರಟ್ಚಿ ತಲೈವರ್ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣವನ್ನು ತಲುಪಬೇಕಾಗಿತ್ತು. ಮಧ್ಯಾಹ್ನ 3.30 ಕ್ಕೆ ಹೊರಡುವ ರೈಲು ಸಂಜೆ 6.30 ಕ್ಕೆ ಬಾಲಸೋರ್ ನಿಲ್ದಾಣವನ್ನು ತಲುಪಿತ್ತು. ನಾಳೆ ( ಜೂನ್ 3) ಸಂಜೆ 4.50ಕ್ಕೆ ಚೆನ್ನೈ ತಲುಪಬೇಕಿತ್ತು. ಆದರೆ ಬಾಲಸೋರ್‌ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಬಹನಾಗಾ ರೈಲು ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು