ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಫಾರ್ಮ್​ನಲ್ಲಿದ್ದರೂ ಕನ್ನಡಿಗರನ್ನು ಮರೆತೇ ಹೋಯ್ತಾ ಆರ್​ಸಿಬಿ; 2 ವರ್ಷಗಳಿಂದ ಬೆಂಚ್ ಕಾಯ್ತಿದ್ದಾರೆ ರಾಯಚೂರಿನ ಹುಡುಗ!

ಫಾರ್ಮ್​ನಲ್ಲಿದ್ದರೂ ಕನ್ನಡಿಗರನ್ನು ಮರೆತೇ ಹೋಯ್ತಾ ಆರ್​ಸಿಬಿ; 2 ವರ್ಷಗಳಿಂದ ಬೆಂಚ್ ಕಾಯ್ತಿದ್ದಾರೆ ರಾಯಚೂರಿನ ಹುಡುಗ!

  • RCB Management : ಅದ್ಭುತ ಫಾರ್ಮ್​ನಲ್ಲಿದ್ದರೂ ಕರ್ನಾಟಕದ ವಿಜಯ್ ಕುಮಾರ್​ ವೈಶಾಕ್ ಮತ್ತು ಮನೋಜ್ ಭಾಂಡಗೆ ಅವರಿಗೆ ಅವಕಾಶ ನೀಡದೆ ಆರ್​​ಸಿಬಿ ಮ್ಯಾನೇಜ್​ಮೆಂಟ್ ನಿರ್ಲಕ್ಷಿಸುತ್ತಿದೆ.

2024ರ ಐಪಿಎಲ್​ನಲ್ಲಿ ಆರ್​​ಸಿಬಿ ಸತತ ಸೋಲುಗಳಿಂದ ಕಂಗೆಟ್ಟಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧವೂ ಬೆಂಗಳೂರು 6 ವಿಕೆಟ್​​ಗಳಿಂದ ಶರಣಾಯಿತು. ಮೊದಲು ಬ್ಯಾಟ್​​ ಮಾಡಿದ ಆರ್​​ಸಿಬಿ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಈ ಗುರಿ ಹಿಂಬಾಲಿಸಿದ ರಾಜಸ್ಥಾನ್, 19.1 ಓವರ್​​ಗಳಲ್ಲಿ ಗೆದ್ದು ಬೀಗಿತು.
icon

(1 / 8)

ಆರ್​ಸಿಬಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತಿದೆ, 1 ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರ್​​ಸಿಬಿ ಮ್ಯಾನೇಜ್​ಮೆಂಟ್​ ಕಿಡಿಕಾರಿದ್ದಾರೆ. ಕಳಪೆ ಪ್ರದರ್ಶನ ನೀಡಿದ್ದ ಅಲ್ಜಾರಿ ಜೋಸೆಫ್​​ ಬದಲಿಗೆ ರೀಸ್​​ ಟೋಪ್ಲಿ ಅವಕಾಶ ಪಡೆಯುತ್ತಿದ್ದಾರೆ. ಆದರೆ ಕನ್ನಡಿಗರಿಗೇಕೆ ಅವಕಾಶ ನೀಡುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. 
icon

(2 / 8)

ಕೆಕೆಆರ್​ ವಿರುದ್ಧ ಕರ್ನಾಟಕದ ವೇಗಿ ವಿಜಯ್ ಕುಮಾರ್​ ವೈಶಾಕ್ ಅವಕಾಶ ಪಡೆದು ಮಿಂಚಿದ್ದರು. 4 ಓವರ್​​ನಲ್ಲಿ 23 ರನ್​ ನೀಡಿ 1 ವಿಕೆಟ್ ಪಡೆದಿದ್ದರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.
icon

(3 / 8)

ಆದರೆ ಆ ಬಳಿಕ ಆಡಿದ ಎರಡೂ ಪಂದ್ಯಗಳಲ್ಲಿ ವಿಜಯ್​ ಕುಮಾರ್​ ಅವರನ್ನು ಕಡೆಗಣನೆ ಮಾಡಲಾಯಿತು. ಉತ್ತಮ ಪ್ರದರ್ಶನದ ಹೊರತಾಗಿಯೂ ಕೈಬಿಟ್ಟಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಾದರೂ ಆರ್​ಸಿಬಿ ಬುದ್ಧಿ ಕಲಿಯಲ್ಲ ಎನ್ನುತ್ತಿದ್ದಾರೆ.
icon

(4 / 8)

ಆರ್​​ಆರ್​ ವಿರುದ್ಧ ಸೌರಭ್ ಚೌಹಾಣ್​​ಗೆ ಅವಕಾಶ ನೀಡಲಾಯಿತು. ಇದಕ್ಕೂ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್, ಸಿಕ್ಕ ಸಿಕ್ಕವರಿಗೆಲ್ಲಾ ಚಾನ್ಸ್ ಕೊಡ್ತೀರಾ? ಕನ್ನಡಿಗರನ್ನೇಕೆ ನಿರ್ಲಕ್ಷಿಸುತ್ತಿದ್ದೀರಿ? ರಜತ್ ಪಾಟೀದಾರ್ ಮತ್ತು ಅನುಜ್ ರಾವತ್ ಫ್ಲಾಪ್ ಆಗುತ್ತಿದ್ದರೂ, ರಾಯಚೂರಿನ ಯುವ ಆಟಗಾರ ಮನೋಜ್ ಭಾಂಡಗೆಗೆ ಅವರಿಗೇಕೆ ಅವಕಾಶ ಕೊಡ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
icon

(5 / 8)

ಸಿಂಧನೂರಿನ ಮನೋಜ್ ಭಾಂಡಗೆ ತಂಡದಲ್ಲಿದ್ದರೂ ಪದಾರ್ಪಣೆ ಮಾಡಿಲ್ಲ. ಕಳೆದ ವರ್ಷವೂ ಬೆಂಚ್​ಗೆ ಸೀಮಿತ ಮಾಡಲಾಗಿತ್ತು. ಈ ವರ್ಷ ಕೂಡ ಬೆಂಚ್​​ಗೆ ಸೀಮಿತವಾಗಿದ್ದಾರೆ. ರಾವತ್‌ ಸ್ಥಾನಕ್ಕೆ ಕರ್ನಾಟಕದ ಆಲ್‌ರೌಂಡರ್‌ ಮನೋಜ್‌ ಭಾಂಡಗೆಗೆ ಅವಕಾಶ ಕೊಡಬೇಕಿತ್ತು ಎಂದು ಕಿಡಿಕಾರಿದ್ದಾರೆ.
icon

(6 / 8)

16 ಮತ್ತು 19 ವರ್ಷದೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಮನೋಜ್ ಉತ್ತಮ ಆಲ್‌ರೌಂಡರ್ ಆಗಿದ್ದಾರೆ. ಪದೆಪದೆ ವೈಫಲ್ಯ ಅನುಭವಿಸುವವರಿಗೆ ಅವಕಾಶ ನೀಡುವ ಬದಲಿಗೆ ಈತನಿಗೆ ಕೊಡಿ. ಮುಂದಿನ ಪಂದ್ಯಗಳಲ್ಲಾದರೂ ಮನೋಜ್​ಗೆ ಅವಕಾಶ ಕೊಡಿ. ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತಾರೆ ಎಂದು ಮ್ಯಾನೇಜ್‌ಮೆಂಟ್‌ಗೆ ಕನ್ನಡಿಗರು ಮನವಿ ಮಾಡಿದ್ದಾರೆ.
icon

(7 / 8)

ಮುಂದಿನ ಪಂದ್ಯ ಏಪ್ರಿಲ್ 11ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲು ಆರ್​ಸಿಬಿ ಸಜ್ಜಾಗಿದೆ. ಈ ಪಂದ್ಯದಲ್ಲಾದರೂ ಕನ್ನಡಿಗರಿಗೆ ಅವಕಾಶ ನೀಡಿ, ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.
icon

(8 / 8)

IPL_Entry_Point

ಇತರ ಗ್ಯಾಲರಿಗಳು