Sita Temples: ಭಾರತದಲ್ಲಿರುವ ಸೀತಾ ಮಾತೆಯ ದೇಗುಲಗಳಿವು
- Sita Temples in India: ಕೋಟ್ಯಂತರ ಹಿಂದೂಗಳ ಕನಸಾಗಿದ್ದ ಅಯೋಧ್ಯೆ ರಾಮಮಂದಿರ ಉದ್ಘಾಟನೆ ನೆರವೇರಿದೆ. ಶ್ರೀ ರಾಮನ ಮಡದಿ ಸೀತಾ ಮಾತೆಗಾಗಿ ಭಾರತದಲ್ಲಿ ನಿರ್ಮಿಸಲಾಗಿರುವ ದೇಗುಲಗಳು ಯಾವುವು ಎಂದು ನೋಡೋಣ ಬನ್ನಿ..
- Sita Temples in India: ಕೋಟ್ಯಂತರ ಹಿಂದೂಗಳ ಕನಸಾಗಿದ್ದ ಅಯೋಧ್ಯೆ ರಾಮಮಂದಿರ ಉದ್ಘಾಟನೆ ನೆರವೇರಿದೆ. ಶ್ರೀ ರಾಮನ ಮಡದಿ ಸೀತಾ ಮಾತೆಗಾಗಿ ಭಾರತದಲ್ಲಿ ನಿರ್ಮಿಸಲಾಗಿರುವ ದೇಗುಲಗಳು ಯಾವುವು ಎಂದು ನೋಡೋಣ ಬನ್ನಿ..
(1 / 6)
ಸೀತಾ ಗುಫಾ: ಗುಫಾ ಎಂದರೆ ಗುಹೆ. ಈ ಸ್ಥಳವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿದೆ. ಇದೇ ಸ್ಥಳದಿಂದ ರಾವಣ ಸೀತೆಯನ್ನು ಅಪಹರಿಸಿದ್ದನು ಎಂದು ನಂಬಲಾಗಿದೆ. (twitter/@vselenophile)
(2 / 6)
ಸೀತಾದೇವಿ ದೇವಸ್ಥಾನ: ಇದು ಕೇರಳ ಮೀನಂಗಡಿಯಿಂದ ಸುಮಾರು 20 ಕಿಮೀ ದೂರದಲ್ಲಿ, ಕೋಯಿಕ್ಕೋಡ್-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಇದನ್ನು ಶ್ರೀ ಪುಲ್ಪಲ್ಲಿ ಸೀತಾ ಲವ ಕುಶ ದೇವಾಲಯ ಎಂದೂ ಕರೆಯಲಾಗುತ್ತದೆ. (twitter/@IchBinGorg)
(3 / 6)
ಮಾ ಜಾನಕಿ ಮಂದಿರ: ಈ ದೇಗುಲವು ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿದೆ. ಸೀತಾಮರ್ಹಿಯು ಸೀತಾ ಮಾತೆಯ ಜನ್ಮಸ್ಥಳವೆಂದೂ ಕರೆಯಲಾಗಿದೆ. (ನೇಪಾಳದಲ್ಲಿನ ಜಾನಕಿಪುರವನ್ನು ಕೂಡ ಸೀತಾ ಮಾತೆಯ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ) (Facebook/Sitamarhi)
(4 / 6)
ಸೀತಾ ಸಮಾಹಿತ್ ಸ್ಥಳ: ಈ ದೇಗುಲವು ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿದೆ. ಈ ಸ್ಥಳವನ್ನು ಸೀತಾ ಮಾತೆಯು ಭೂಮಿ ದೇವಿಯ ಬಳಿಗೆ ಮರಳಲು ಈ ಸ್ಥಳವನ್ನು ಆರಿಸಿಕೊಂಡಳು ಎಂದು ನಂಬಲಾಗಿದೆ. (twitter/@Ek_ldaki)
(5 / 6)
ಆದಿಪುರುಷ ಸಿನಿಮಾದಲ್ಲಿ ಸೀತಾ ಮಾತೆ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಕೃತಿ ಸನೊನ್ ಅವರು ಮಹಾರಾಷ್ಟ್ರದ ಸೀತಾ ಗುಫಾ ದೇಗುಲಕ್ಕೆ ಭೇಟಿ ನೀಡಿದ್ದ ಫೋಟೋ. (twitter/@GskMedia_PR)
ಇತರ ಗ್ಯಾಲರಿಗಳು