‘ನಿಮ್ಮ ಧರ್ಮದಲ್ಲಿ ಹತ್ತು ಮದುವೆಯಾಗಿ ಖುಷಿಯಾಗಿರಿ, ನಿಮಗ್ಯಾಕ್ರಯ್ಯ ಹಿಂದೂಗಳ ಸಹವಾಸ?’ ನಟ ಪ್ರಥಮ್ ಗರಂ
- ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಮೇಲೆ ಫಯಾಜ್ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ರಾಜಕೀಯ ಬಣ್ಣವನ್ನೂ ಪಡೆಯುತ್ತಿದೆ. ಈ ನಡುವೆ ನೇಹಾಳ ಮನೆಗೆ ನಟ ಪ್ರಥಮ್ ತೆರಳಿದ್ದಾರೆ. ಜತೆಗೆ ನಿಮ್ಮ ಧರ್ಮದಲ್ಲಿ ಹತ್ತು ಮದುವೆಯಾಗಿ ಖುಷಿಯಾಗಿರಿ, ನಿಮಗ್ಯಾಕ್ರಯ್ಯ ಹಿಂದೂಗಳ ಸಹವಾಸ ಎಂದೂ ಗರಂ ಆಗಿದ್ದಾರೆ.

(1 / 7)
ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಎಲ್ಲೆಡೆ ನೇಹಾಗೆ ನ್ಯಾಯ ಸಿಗಬೇಕು ಎಂದು ಒಕ್ಕೊರಲ ಧ್ವನಿ ಕೇಳಿಬರುತ್ತಿದೆ.
(2 / 7)
ಹುಬ್ಬಳ್ಳಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯ ಮೊರೆ ಹೋದರೆ, ಸೋಷಿಯಲ್ ಮೀಡಿಯಾದಲ್ಲೂ ದೊಡ್ಡ ಅಭಿಮಾನವೇ ಶುರುವಾಗಿದೆ.
(3 / 7)
ಈ ನಡುವೆ ನಟ ಪ್ರಥಮ್, ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಮನೆಗೆ ತೆರಳಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿ ತಮ್ಮದೇ ಧಾಟಿಯಲ್ಲಿ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ.
(4 / 7)
"ನಮಗಂತೂ ನೇಹಾ ಅವರ ಹತ್ಯೆ ತುಂಬ ನೋವು ತರಿಸಿದೆ. ಈ ನಡುವೆ ರಾಜಕೀಯ ಪಕ್ಷಗಳು ಮಾತ್ರ ಬಗೆಬಗೆ ಹೇಳಿಕೆ ನೀಡುತ್ತಿವೆ. ಇವರ ಆ ಹೇಳಿಕೆಯಿಂದ ಕುಟುಂಬ ನೋವು ಅನುಭವಿಸುತ್ತಿದೆ" ಎಂದಿದ್ದಾರೆ.
(5 / 7)
“ಈ ಸಾವಿನಲ್ಲಿ ರಾಜಕಾರಣ ಮಾಡಬೇಡಿ. ಓಲೈಕೆ ರಾಜಕಾರಣ ಕೈಬಿಡಿ. ಆದಷ್ಟು ಬೇಗ ನೇಹಾ ಹಂತಕನಿಗೆ ಶಿಕ್ಷೆ ಆಗಬೇಕು. ಆಗ ನೇಹಾ ಕುಟುಂಬಕ್ಕೆ ನ್ಯಾಯ ಸಿಕ್ಕಂತೆ. ಫಯಾಜ್ ಬರೋಬ್ಬರಿ 9 ಬಾರಿ ನೇಹಾಗೆ ಚಾಕು ಇರಿದಿದ್ದಾನೆ. ಇದು ನಿಜಕ್ಕೂ ಕ್ಷಮಿಸಲಾರ್ಹ ತಪ್ಪು”
(6 / 7)
"ಇಂಥ ಅಯೋಗ್ಯರನ್ನು ಒಂದು ಗತಿ ಕಾಣಿಸುವ ಕೆಲಸವನ್ನು ಮುಸ್ಲಿಂ ಸಮುದಾಯವೇ ಮಾಡಬೇಕು. ಯಾರೂ ಅವನ ಪರವಾಗಿ ವಕಾಲತ್ತು ವಹಿಸಕೂಡದು. ಅದರಲ್ಲೂ ನಿಮಗೆ ಯಾಕ್ರಯ್ಯ ಹಿಂದೂ ಹುಡುಗಿಯರ ಸಹವಾಸ" ಎಂದಿದ್ದಾರೆ.
ಇತರ ಗ್ಯಾಲರಿಗಳು