Bigg Boss Kannada 10: ಈ ಸಲದ ಬಿಗ್‌ಬಾಸ್‌ನಲ್ಲಿ ಡಾ. ಬ್ರೋ, ಅಕ್ಕ ಅನು; ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಬೇಡಿಕೆ
- Bigg Boss Kannada 10: ಬಿಗ್‌ಬಾಸ್ ಕನ್ನಡ ಸೀಸನ್ 10 ಅಕ್ಟೋಬರ್ 8ರಿಂದ ಶುರುವಾಗಲಿದೆ. ಪ್ರೋಮೋಗಳ ಮೂಲಕವೇ ಸಮ್‌ಥಿಂಗ್ ಸ್ಪೆಷಲ್ ಎಂದು ಈ ಸಲದ ಬಿಗ್‌ಬಾಸ್ ಮತ್ತಷ್ಟು ಕುತೂಹಲ ಕೆರಳಿಸುತ್ತಿದೆ. ಈಗಾಗಲೇ ಅಧಿಕೃತವಾಗದಿದ್ದರೂ, ಒಂದಷ್ಟು ಸ್ಪರ್ಧಿಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಅವಕ್ಕೆ ಮತ್ತೊಂದಿಷ್ಟು ಹೆಸರುಗಳು ಸೇರ್ಪಡೆಯಾಗಿವೆ.
- Bigg Boss Kannada 10: ಬಿಗ್‌ಬಾಸ್ ಕನ್ನಡ ಸೀಸನ್ 10 ಅಕ್ಟೋಬರ್ 8ರಿಂದ ಶುರುವಾಗಲಿದೆ. ಪ್ರೋಮೋಗಳ ಮೂಲಕವೇ ಸಮ್‌ಥಿಂಗ್ ಸ್ಪೆಷಲ್ ಎಂದು ಈ ಸಲದ ಬಿಗ್‌ಬಾಸ್ ಮತ್ತಷ್ಟು ಕುತೂಹಲ ಕೆರಳಿಸುತ್ತಿದೆ. ಈಗಾಗಲೇ ಅಧಿಕೃತವಾಗದಿದ್ದರೂ, ಒಂದಷ್ಟು ಸ್ಪರ್ಧಿಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಅವಕ್ಕೆ ಮತ್ತೊಂದಿಷ್ಟು ಹೆಸರುಗಳು ಸೇರ್ಪಡೆಯಾಗಿವೆ.
(1 / 11)
ಈ ಸಲದ ಬಿಗ್‌ಬಾಸ್‌ನಲ್ಲಿ ಯಾರೆಲ್ಲ ಭಾಗವಹಿಸಬಹುದು, ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಸಾಕಷ್ಟು ಹೆಸರುಗಳು ಈಗಾಗಲೇ ಹರಿದಾಡುತ್ತಿವೆ. ಆ ಪೈಕಿ ಖ್ಯಾತ ಯೂಟ್ಯೂಬರ್ ಡಾ.ಬ್ರೋ ಈ ಸಲದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿ ಎಂದಿದ್ದಾರೆ ನೆಟ್ಟಿಗರು. ಅದೇ ರೀತಿ ಸಮಾಜ ಸೇವಕಿ ಅಕ್ಕ ಅನು ಅವರ ಹೆಸರೂ ಪ್ರಸ್ತಾಪವಾಗಿದೆ.
(2 / 11)
ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭೂಮಿಕಾ ಬಸವರಾಜ್ ಸಹ ಈ ಸಲದ ಶೋನಲ್ಲಿ ಇರಲಿದ್ದಾರೆ ಎಂದೇ ಹೇಳಲಾಗುತ್ತಿದೆ.
(3 / 11)
ಎಕ್ಸ್‌ಕ್ಯೂಸ್ ಮಿ ನಟ ಸುನೀಲ್ ಈ ಸಲದ ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿರಲಿದ್ದಾರೆ ಎನ್ನಲಾಗುತ್ತಿದ್ದು, ಇನ್ನೇನು ಇನ್ನೊಂದು ವಾರದಲ್ಲಿ ಅಧಿಕೃತವಾಗಲಿದೆ.
(4 / 11)
ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿರುವ ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ ಸಹ ಈ ಸಲದ ಬಿಗ್ ಮನೆ ಪ್ರವೇಶಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
(5 / 11)
ಕನ್ನಡತಿ ಸೀರಿಯಲ್ ಮೂಲಕ ಕಲರ್ಸ್ ಕನ್ನಡದಲ್ಲಿ ಮೋಡಿ ಮಾಡಿದ್ದ ರಂಜನಿ ರಾಘವನ್ ಹೆಸರೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
(6 / 11)
ಗಟ್ಟಿಮೇಳ ಸೀರಿಯಲ್ ಖ್ಯಾತಿಯ ಅಭಿಷೇಕ್ ದಾಸ್ ಈ ಸಲದ ಬಿಗ್‌ಬಾಸ್ ಸೀಸನ್ 10ರಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
(7 / 11)
ಅದೇ ರೀತಿ ಕನ್ನಡ, ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ದಿಯಾ ಸಿನಿಮಾದ ನಟ ದೀಕ್ಷಿತ್ ಶೆಟ್ಟಿ ಸಹ ಪಟ್ಟಿಯಲ್ಲಿದ್ದಾರೆ.
(8 / 11)
ನಾಗಿಣಿ ಸೀರಿಯಲ್ ಮುಗಿದ ಬಳಿಕ ಬೇರಾವ ಸಿನಿಮಾ, ಸೀರಿಯಲ್ ಒಪ್ಪಿಕೊಳ್ಳದ ನಮ್ರತಾ ಗೌಡ ಅವರು ಈ ಸಲದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
(9 / 11)
ಸೋಷಿಯಲ್ ವರ್ಕ್ ಮೂಲಕವೇ ಜನಮನಗೆದ್ದ ಹಳ್ಳಿ ಹೆಣ್ಣುಮಗಳು ಅಕ್ಕ ಅನು ಈ ಸಲದ ಬಿಗ್‌ಬಾಸ್‌ಗೆ ಬರಲಿ, ಅವರು ಬಂದರೆ ಇಡೀ ಕುಟುಂಬ ಶೋ ನೋಡಲಿದೆ ಎಂದೇ ಹೇಳುತ್ತಿದ್ದಾರೆ.
(10 / 11)
ಇದೆಲ್ಲದರ ನಡುವೆ ಕೆಲವರು ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಬಿಗ್‌ಬಾಸ್ ಮನೆಗೆ ಬರಲಿ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇತರ ಗ್ಯಾಲರಿಗಳು