ಬಲ್ಲಿರೇನಯ್ಯ… ಲೋಕಸಭಾ ಚುನಾವಣೆ; ಮತದಾನ, ಮತದಾರ ಜಾಗೃತಿಗೆ ಯಕ್ಷಗಾನದ ವೇಷ ತೊಟ್ಟ ಉಡುಪಿ ಜಿಪಂ ಸಿಇಒ, ಎಸ್‌ಪಿ ಮತ್ತು ಇತರೆ ಅಧಿಕಾರಿಗಳು
ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ದಿನಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮತದಾನ, ಮತದಾರ ಜಾಗೃತಿಗೆ ಯಕ್ಷಗಾನದ ವೇಷ ತೊಟ್ಟ ಉಡುಪಿ ಜಿಪಂ ಸಿಇಒ, ಎಸ್‌ಪಿ ಮತ್ತು ಇತರೆ ಅಧಿಕಾರಿಗಳು ಗಮನಸೆಳೆದರು. ಇಲ್ಲಿದೆ ಚಿತ್ರನೋಟ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
(1 / 6)
ಮತದಾನ ಜಾಗೃತಿಗಾಗಿ ಪ್ರತಿ ಚುನಾವಣೆಯಲ್ಲೂ ಉಡುಪಿ ಜಿಲ್ಲಾಡಳಿತ ವಿಭಿನ್ನ ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ. ಕಳೆದ ಬಾರಿ ಕಾಂಡ್ಲಾವನದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ಬಾರಿ ಯಕ್ಷಗಾನ ವೇಷ ತೊಟ್ಟ ಅಧಿಕಾರಿಗಳು ಮತದಾನ ಜಾಗೃತಿಯ ಸಂದೇಶ ಸಾರಿದರು.
(2 / 6)
ಯಕ್ಷಗಾನವೆಂಬುದು ಕರಾವಳಿಯಲ್ಲಿ ಅತ್ಯಂತ ಪ್ರಭಾವಶಾಲಿ ಕಲೆ. ಅದರ ವೇಷ ತೊಟ್ಟರೆ ಎಂಥವರೂ ಒಮ್ಮೆ ಅತ್ತ ದೃಷ್ಟಿ ಹಾಯಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಡಗುತಿಟ್ಟಿನ ಶೈಲಿಯ ಯಕ್ಷಗಾನ ವೇಷಭೂಷಣಗಳನ್ನು ಈ ಅಧಿಕಾರಿಗಳು ಧರಿಸಿದರು.
(3 / 6)
ಈ ಕಲೆ ಮೂಲಕ ಮತ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವ ಮೂಲಕ ಮತದಾನವನ್ನು ಹಬ್ಬವನ್ನಾಗಿಸುವ ಪ್ರಯತ್ನವನ್ನು ತೊಟ್ಟರು. ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಮೂಲಕ ಮತದಾನ ಜಾಗೃತಿ ಮಾಡುತ್ತಿರುವುದು ಇದೇನೂ ಹೊಸದಲ್ಲ. ಆದರೆ ಅಧಿಕಾರಿಗಳೇ ವೇಷ ಧರಿಸಿದ್ದು ಇದು ಪ್ರಥಮ.
(4 / 6)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
(5 / 6)
ಸ್ವೀಪ್ ಸಮಿತಿ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಕೈಗೊಂಡ ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲೇ ವಿಶೇಷ ಎಂಬಂತೆ ಉಡುಪಿ ಜಿಲ್ಲೆಯ ಐಎಎಸ್, ಕೆಎಸ್, ಐಪಿಎಸ್ ಅಧಿಕಾರಿಗಳು ಯಕ್ಷಗಾನ ವೇಷ ಧರಿಸಿ ಗಮನ ಸೆಳೆದಿದ್ದಾರೆ.
ಇತರ ಗ್ಯಾಲರಿಗಳು